- Monday
- August 24th, 2026
ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಣಮ್ಯ ಕಾರ್ ಕೇರ್ ಸಂಸ್ಥೆಯಲ್ಲಿ ಅ.24 ರಂದು ಆಯುಧಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಶಾಂತಮೂರ್ತಿ ಕಿಲಂಗೋಡಿ ಮತ್ತು ರಮೇಶ್ ಮಠತ್ತಡ್ಕ, ಕಟ್ಟಡ ಮಾಲಕರಾದ ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಾಲ್ಕೂರು ಗ್ರಾಮದ ನೇರ್ಪು ದಿ.ಶೇಷಪ್ಪ ಗೌಡರ ಪುತ್ರಿ ಭವ್ಯಳ ವಿವಾಹವು ಏನೆಕಲ್ಲು ಗ್ರಾಮದ ಪರಮಲೆ ಚಿನ್ನಪ್ಪ ಗೌಡರ ಪುತ್ರ ಹರೀಶ್ ರೊಂದಿಗೆ ಅ.21 ರಂದು ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ( ಚಿತ್ರ : ಪ್ರಕೃತಿ ಗುತ್ತಿಗಾರು )
ಸುಳ್ಯ ನ್ಯಾಯಲಯದಲ್ಲಿ ದುರ್ಗಾ ಪೂಜೆ ಹಾಗು ಆಯುಧಪೂಜೆ ಇಂದು ನೆರವೇರಿತು. ಕಂಜರ್ಪಣೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರು ಹಾಗೂ ನ್ಯಾಯವಾದಿ ರಾಮಚಂದ್ರ ಶ್ರೀಪಾದ ಹೆಗಡೆ ಅವರ ನೇತೃತ್ವದಲ್ಲಿ ಪೂಜಾ ವಿಧಿ ನೆರವೇರಿಸಿಲಾಯಿತು. ಈ ಸಂದರ್ಭ ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಎಂ. ಪುರುಷೋತ್ತಮ,ಕಿರಿಯ ನ್ಯಾಯಾಧೀಶರಾದ ಯಶವಂತ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಎಂ ವೆಂಕಪ್ಪ ಗೌಡ...
ಸುಳ್ಯ ತಾಲೂಕು ಕಚೇರಿಯಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಪೂಜಾ ಕಾರ್ಯಕ್ರಮಗಳು ನಡೆಯಿತು. ಅರ್ಚಕರಾದ ಕಾಂತಮಂಗಲ ಸದಾನಂದ ಶಾಸ್ತ್ರಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸುಳ್ಯ ತಹಶೀಲ್ದಾರ್ ಅನಂತ ಶಂಕರ್, ಪಂಜ ವಲಯ ಕಂದಾಯ ನಿರೀಕ್ಷಕ ಶಂಕರ್, ಉಪತಹಶೀಲ್ದಾರ್ ಚಂದ್ರಕುಮಾರ್, ಸುಳ್ಯ ವಿಎ ತಿಪ್ಪೇಶ್, ಹಾಗೂ ತಾಲೂಕು ಕಚೇರಿಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿವರ್ಗಗಳು ಉಪಸ್ಥಿತರಿದ್ದರು....
ಅಧಿಕಾರಿಗಳ ಕಣ್ಮುಂದೆಯೇ ಸುಳ್ಯ ಕಂದಾಯ ಕಚೇರಿಯ ಮುಂಭಾಗದಲ್ಲಿ ಒಳಚರಂಡಿಯ ಕೆಸರು ನೀರು ಕಳೆದ ಮೂರು ನಾಲ್ಕು ತಿಂಗಳುಗಳಿಂದ ಹೊರಬರುತ್ತಿದ್ದು ಪರಿಸರ ದುರ್ನಾತದಿಂದ ಕೂಡಿದೆ. ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಂಪೂರ್ಣ ದುರಸ್ತಿ ಮಾಡಿಲ್ಲ. ಒಂದೆರಡು ಬಾರಿ ಅದನ್ನು ತೇಪೆ ಹಚ್ಚುವ ಕೆಲಸವನ್ನು ಮಾಡಿದ್ದಾರೆ. ಅದೇ ರಸ್ತೆಯಲ್ಲಿ ಮೆಸ್ಕಾಂ ಕಚೇರಿ, ಸುಳ್ಯ ತಾಲೂಕು ಕಚೇರಿ, ಮಹಿಳಾ...
ಮೆಸ್ಕಾಂ ಕಛೇರಿಯಲ್ಲಿ ಆಯುಧ ಪೂಜೆ, ವಾಹನ ಪೂಜೆ ಕಾರ್ಯಕ್ರಮ ಇಂದು ನಡೆಯಿತು. ಈ ಸಂದರ್ಭದಲ್ಲಿ ಎಇಇ ಹರೀಶ್ ನಾಯ್ಕ್, ಜೆಇ ಸುರೇಶ್ ಭಟ್, ಜೆಇ ಬೋರಯ್ಯ, ಜೆಇ ಅಭಿಷೇಕ್, ಪ್ರಭಾರ ಜೆಇ ಜಯಪ್ರಕಾಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿಂತಿಕಲ್ಲು ಸಮೀಪದ ಎಣ್ಮೂರಿನ ದೇವಿಪ್ರಸಾದ್ ಎಂಬುವವರ ಜೀವನದ ವ್ಯಥೆ ಇದು. ಕಳೆದ ಕೆಲವು ದಿನಗಳಿಂದ ಇವರ ಜೀವನ ಆಸ್ಪತ್ರೆಯಲ್ಲಿ ಕಳೆದಿದೆ. ಒಂದಲ್ಲದಿದ್ದರೆ ಇನ್ನೊಂದು ಕಾಯಿಲೆ ಎಂಬಂತೆ ಇಲಿಜ್ವರ, ಕಿಡ್ನಿ ಸಂಬಂಧಿ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ, ಟಿ.ಬಿ. ಸೇರಿದಂತೆ ಅನೇಕ ಖಾಯಿಲೆಯಿಂದ ಜೀವನ ನರಕಯಾತನೆಯಾಗಿದೆ. ದೇವಿಪ್ರಸಾದ್ ಎಂಬವರು ತನ್ನ ಜೀವನ ನಡೆಸಲು ತಿಂಡಿ ವ್ಯಾಪಾರ ಮಾಡಿಕೊಂಡು...
ಮುಂದಿನ ತಿಂಗಳು ನವಂಬರ್ 4 ರಿಂದ ಮದುವೆಯಾಗಲು ವಧುವಿನ ವಯಸ್ಸು 21 ಕಡ್ಡಾಯವಾಗಿ ಆಗಿರಬೇಕೆಂಬ ಹೊಸ ಕಾಯ್ದೆ ಜಾರಿಗೆ ಬರುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಊಹಾಪೋಹ ವರದಿಗಳಿಂದ ಸಾರ್ವಜನಿಕ ವಲಯದಲ್ಲಿ ಪರಸ್ಪರ ಚರ್ಚೆಗಳು ಕೇಳತೊಡಗಿದೆ. ಕೆಲವು ಕಡೆಗಳಲ್ಲಂತೂ ಈಗಾಗಲೇ 18, 19 ವರ್ಷಗಳ ಹೆಣ್ಣುಮಕ್ಕಳ ನಿಶ್ಚಿತಾರ್ಥ ಮಾಡಿಕೊಂಡವರ ಮದುವೆ ಮಾಡಿಸಿಕೊಡುವ ತರಾತುರಿಯಲ್ಲಿ ಕೆಲವು ಪೋಷಕರು...
ಬೆಳ್ಳಾರೆಯ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡ್ ಹಿಂಭಾಗದಲ್ಲಿ ವಿನೋದ್ ಸುಳ್ಯ ಹಾಗೂ ಧನುಷ್ ನಾವೂರು ಮಾಲಕತ್ವದ ಜಯ ಅಲ್ಯೂಮೀನಿಯಂ ಫ್ಯಾಬ್ರಿಕೇಶನ್ & ಇಂಜಿನಿಯರಿಂಗ್ ವರ್ಕ್ಸ್ ಅ.23 ರಂದು ಶುಭಾರಂಭಗೊಂಡಿತು. ಇಲ್ಲಿ ಎಲ್ಲಾ ತರಹದ ಅಲ್ಯೂಮೀನಿಯಂ ಕಿಟಕಿ, ಕಿಚನ್ ಕ್ಯಾಬಿನೆಟ್, ಗ್ಯಾಸ್ ವರ್ಕ್ಸ್, ಫ್ಲೈವುಡ್ ವರ್ಕ್ಸ್, ವಾರ್ಡ್ ರೂಮ್ ಹಾಗೂ ಗ್ರಿಲ್ಸ್, ಗೇಟ್, ಟ್ರಸ್, ಸ್ಟೀಲ್ ವರ್ಕ್ಸ್ ಕೆಲಸಗಳನ್ನು...
ಪಂಜದ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಹತ್ತಿರ ಇರುವ ಶ್ರೀಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಪುರುಷೋತ್ತಮ ಎರ್ಮಾಯಿಲ್ ಮಾಲಕತ್ವದ ಸ್ಪರ್ಶ ಎಲೆಕ್ಟ್ರಾನಿಕ್ಸ್ & ಹೋಮ್ ಅಪ್ಲಾಯೆನ್ಸಸ್ ಮಾರಾಟ ಮಳಿಗೆಯು ಅ.23 ರಂದು ಶುಭಾರಂಭಗೊಂಡಿತು. ಮಳಿಗೆಯನ್ನು ಹಿರಿಯ ಧಾರ್ಮಿಕ ಮುಂದಾಳು ಹಾಗೂ ಮಧ್ಯಸ್ಥರಾದ ಶ್ರೀ ತಿಮ್ಮಪ್ಪ ಗೌಡ ಪುತ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಂಜ ಗ್ರಾ.ಪಂ.ಮಾಜಿ ಅಧ್ಯಕ್ಷರಾದ...
Loading posts...
All posts loaded
No more posts
