ಜ.30 : ಸುಳ್ಯದಲ್ಲಿ ಕರೆಂಟಿಲ್ಲ

ಸುಳ್ಯ ಮೆಸ್ಕಾಂ ಉಪವಿಭಾಗ ವ್ಯಾಪ್ತಿಯ 33/11ಕೆವಿ ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್ ಗಳಾದ ಕೇರ್ಪಳ, ಶ್ರೀರಾಂಪೇಟೆ, ಸಂಪಾಜೆ, ಅರಂತೋಡು ಕೋಲ್ಚಾರ್, ಕಾವು, ಅಜ್ಜಾವರ,ಕೇನ್ಯ, ಸುಬ್ರಹ್ಮಣ್ಯ ಫೀಡರ್ ಗಳಲ್ಲಿ ಜ.30 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸುಳ್ಯ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಪೆರುವಾಜೆ : ಸಾರ್ವಜನಿಕ ಆಧಾರ್ ಕಾರ್ಡ್ ಮೇಳ

ಭಾವೈಕ್ಯ ಯುವಕ ಮಂಡಲ (ರಿ)ಪೆರುವಾಜೆ, ಭಾವೈಕ್ಯ ಮಹಿಳಾ ಮಂಡಲ ಪೆರುವಾಜೆ ಮತ್ತು ಗ್ರಾಮ ಪಂಚಾಯತ್ ಪೆರುವಾಜೆ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ಇದರ ಸಹಯೋಗದಲ್ಲಿ ಸಾರ್ವಜನಿಕ ಆಧಾರ್ ಕಾರ್ಡ್ ಮೇಳ ಕಾರ್ಯಕ್ರಮವು ಜ. 28 ರಂದು ಗ್ರಾಮ ಪಂಚಾಯತ್ ಪೆರುವಾಜೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಭಾವೈಕ್ಯ ಯುವಕ ಮಂಡಲ (ರಿ) ಪೆರುವಾಜೆ ಇದರ...
Ad Widget

ಕಡಬ ತಾಲೂಕಿನ ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷತೆಗೆ ಮೀಸಲಾತಿ ನಿಗದಿ

ಕಡಬ ತಾಲೂಕಿನ ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷತೆಗೆ ಇಂದು ಮೀಸಲಾತಿ ನಿಗದಿಪಡಿಸಿ ಘೋಷಣೆ ಮಾಡಲಾಗಿದೆ.

ಅಯ್ಯನಕಟ್ಟೆ ಜಾತ್ರೆ : ಶ್ರೀ ಉಳ್ಳಾಕುಲು ದೈವದ ನೇಮ

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ನೇಮೋತ್ಸವದ ಅಂಗವಾಗಿ ಇಂದು ಬೆಳಗಿನ ಜಾವ ಮೂರುಕಲ್ಲಡ್ಕದಿಂದ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ತೋಟದಮೂಲೆಯಿಂದ ರುದ್ರಚಾಮುಂಡಿ ದೈವಗಳ ಕಿರುವಾಲು ಹೊರಟು, ಕಳಂಜ ಕಲ್ಲಮಾಡದಲ್ಲಿ ಉಳ್ಳಾಕುಲು ದೈವದ ನೇಮ ನಡಾವಳಿ ನಡೆಯಿತು. ಈ ದಿನ ರುದ್ರಚಾಮುಂಡಿ ದೈವದ ನೇಮೋತ್ಸವ, ತದನಂತರ ಗಂಧಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ...

ಡಾ| ಎಂ.ಎನ್. ರಾಜೇಂದ್ರ ಕುಮಾರ್ ರವರಿಗೆ ಜ್ಞಾನಮಂದಾರ ಸಮಾಜರತ್ನ ಪ್ರಶಸ್ತಿ ಪ್ರದಾನ

ಬೆಂಗಳೂರಿನ ಶ್ರೀ ಜ್ಞಾನಮಂದಾರ ಶೈಕ್ಷಣಿಕ ಅಕಾಡೆಮಿ ನೀಡಿದ 'ಜ್ಞಾನಮಂದಾರ ಸಮಾಜರತ್ನ' ರಾಜ್ಯ ಪ್ರಶಸ್ತಿಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ರವರಿಗೆ ಜ. 25 ರಂದು ಮಂಗಳೂರಿನ ಎಸ್ ಸಿ ಡಿ ಸಿ ಸಿ ಬ್ಯಾಂಕಿನಲ್ಲಿ ಪ್ರದಾನಿಸಲಾಯಿತು. ಅಕಾಡೆಮಿಯ ಮಹಾಪೋಷಕ, ಧರ್ಮದರ್ಶಿ ಹರಿಕೃಷ್ಣ ಪುನರೂರುರವರ ಪ್ರಶಸ್ತಿ ಪ್ರದಾನಗೈದು ಮಾತನಾಡಿ ಡಾ|...

ಉಬರಡ್ಕ : ಕಾಂಗ್ರೆಸ್ ಗೆ ಒಲಿದ ಅಧ್ಯಕ್ಷಗಿರಿ – ಅಧ್ಯಕ್ಷ ಗಾಧಿಗೆ ಚಿತ್ರಕುಮಾರಿ

ಉಬರಡ್ಕ ಗ್ರಾ.ಪಂ‌.ಅಧ್ಯಕ್ಷ ಉಪಾಧ್ಯಕ್ಷತೆಗೆ ಮೀಸಲಾತಿ ಜ.27 ರಂದು ಪ್ರಕಟವಾಗಿದೆ. ಅಧ್ಯಕ್ಷತೆಗೆ ಅನುಸೂಚಿತ ಪಂಗಡ ಮಹಿಳೆ ಗೆ ಮೀಸಲಾತಿ ನಿಗದಿಯಾಗಿದ್ದು ಕಾಂಗ್ರೆಸ್ ಬೆಂಬಲಿತರಾಗಿ ಗೆಲುವು ಸಾಧಿಸಿದ್ದ ಚಿತ್ರಕುಮಾರಿ ಪಾಲಡ್ಕ ಮಾತ್ರ ಅರ್ಹತೆ ಪಡೆದಿದ್ದಾರೆ. ಉಪಾಧ್ಯಕ್ಷತೆ ಸಾಮಾನ್ಯ ಸ್ಥಾನ ಮೀಸಲಾತಿ ನಿಗದಿಯಾಗಿದ್ದು ಉಳಿದ ಎಲ್ಲಾ ಸದಸ್ಯರು ಅರ್ಹತೆ ಪಡೆಯುತ್ತಾರೆ‌. ಇಲ್ಲಿ 9 ಸ್ಥಾನಗಳ ಪೈಕಿ ಬಿಜೆಪಿ 6 ರಲ್ಲಿ...

ತಾಲೂಕಿನ 25 ಗ್ರಾಮ ಪಂಚಾಯತ್ ಗಳಿಗೆ ಅಧ್ಯಕ್ಷ ಉಪಾಧ್ಯಕ್ಷತೆಗೆ ಮೀಸಲಾತಿ ಘೋಷಣೆ

ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್ ಗಳಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷತೆಯ ಸ್ಥಾನಗಳಿಗೆ ಜ.27 ರಂದು ಪುತ್ತೂರಿನ ಪುರಭವನದಲ್ಲಿ ನಡೆದ ಮೀಸಲಾತಿ ಪ್ರಕ್ರಿಯೆಯಲ್ಲಿ ಘೋಷಿಸಲಾಗಿದೆ. ಬೆಳ್ಳಾರೆಯಲ್ಲಿ ಅಧ್ಯಕ್ಷತೆ ಹಿಂದುಳಿದ ವರ್ಗ ಎ, ಉಪಾಧ್ಯಕ್ಷತೆ ಎಸ್ ಟಿ, ಪೆರುವಾಜೆಯಲ್ಲಿ ಅಧ್ಯಕ್ಷತೆ ಹಿಂದುಳಿದ ವರ್ಗ ಎ, ಉಪಾಧ್ಯಕ್ಷತೆ ಎಸ್ ಸಿ ಮಹಿಳೆ, ಸಂಪಾಜೆಯಲ್ಲಿ ಹಿಂದುಳಿದ ವರ್ಗ ಎ, ಹಿಂದುಳಿದ...

ಕ್ಯಾಂಪ್ಕೋ ಮಾರುಕಟ್ಟೆ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(27.01.2021 ಬುಧವಾರ) ಅಡಿಕೆ ಧಾರಣೆಹೊಸ ಅಡಿಕೆ 300 - 365ಹಳೆ ಅಡಿಕೆ 360 - 420ಡಬಲ್ ಚೋಲ್ 360 - 425 ಹೊಸ ಫಠೋರ 175 - 320ಹಳೆ ಫಠೋರ 250 - 340 ಹೊಸ ಉಳ್ಳಿಗಡ್ಡೆ 110 - 235ಹಳೆ ಉಳ್ಳಿಗಡ್ಡೆ 150 - 240 ಹೊಸ ಕರಿಗೋಟು...

ನಾ.ಕಾರಂತ ಪೆರಾಜೆಯವರ “ಮುಸ್ಸಂಜೆಯ ಹೊಂಗಿರಣ” ಪುಸ್ತಕ ಬಿಡುಗಡೆ : ಸ್ವಾವಲಂಬಿ ಆರ್ಥಿಕತೆಯೇ ಗಾಂಧಿ ಚಿಂತನೆಯ ಆರ್ಥಿಕತೆ – ಅರವಿಂದ ಚೊಕ್ಕಾಡಿ

ಸಮಾಜದಲ್ಲಿ ಸಂಕಷ್ಟದ ಸಮಯ ಬಂದಾಗ ಗಾಂಧಿಯನ್ ಆರ್ಥಿಕತೆ ಸಮಾಜವನ್ನು ರಕ್ಷಣೆ ಮಾಡುತ್ತದೆ. ಇದಕ್ಕೆ ಉದಾಹರಣೆ ಕೊರೋನಾ. ಕೊರೋನಾದ ಸಂಕಷ್ಟದ ಸಮಯದಲ್ಲಿ ಈ ಗಾಂಧಿಯನ್‌ ಆರ್ಥಿಕತೆ ಸಮುದಾಯಗಳನ್ನು ರಕ್ಷಿಸಿಕೊಳ್ಳುತ್ತಾ ಸಾಗಿದೆ. ಗಾಂಧಿಯನ್ ಆರ್ಥಿಕತೆ ಎನ್ನುವುದು ಸ್ವಾವಲಂಬಿ ಆರ್ಥಿಕತೆ. ಇದುವೇ ಗಾಂಧಿ ಚಿಂತನೆಯ ಆರ್ಥಿಕತೆ ಎಂದು ಸಾಹಿತಿ, ಶಿಕ್ಷಕ ಅರವಿಂದ ಚೊಕ್ಕಾಡಿ ಹೇಳಿದರು. ಅವರು ಸುಳ್ಯ ತಾಲೂಕಿನ ಗುತ್ತಿಗಾರು...

ಒಡಿಯೂರು ಶ್ರೀಗಳ 60 ರ ಷಷ್ಠ್ಯಬ್ದ ಪ್ರಯುಕ್ತ ಸುಳ್ಯದಲ್ಲಿ ಸರಣಿ ಕಾರ್ಯಕ್ರಮಗಳ ಉದ್ಘಾಟನೆ

ಒಡಿಯೂರು ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಗಳವರ 60 ರ ಷಷ್ಠ್ಯಬ್ದ ಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ಸುಳ್ಯ ತಾಲೂಕು ಷಷ್ಠ್ಯಬ್ದ ಸಂಭ್ರಮ ಸಮಿತಿಯ ಆಶ್ರಯದಲ್ಲಿ ನಡೆಯುವ ಸರಣಿ ಕಾರ್ಯಕ್ರಮಗಳ ಉದ್ಘಾಟನೆಯು ಜ.26 ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಒಡಿಯೂರು ಗುರುದೇವಾನಂದ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು. ಒಡಿಯೂರು ಶ್ರೀ ಗುರುದೇವದತ್ತ...
Loading posts...

All posts loaded

No more posts

error: Content is protected !!