- Tuesday
- August 18th, 2026
ಅಚ್ರಪ್ಪಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20 ಮತ್ತು 2020-21ರ ಎರಡು ಅವಧಿಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆಗೆ ಹರೀಶ ಕಡಪಳ ಅವರನ್ನು ಆ. 31 ರಂದು ಸನ್ಮಾನಿಸಲಾಯಿತು. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದಾಗ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸುವಲ್ಲಿ ಮತ್ತು ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ...
ಸುಳ್ಯ ತಾಲೂಕಿನಲ್ಲಿ ಸೆ. 1ರಂದು ಲಸಿಕೆ ವಿತರಣೆಗೆ ಮೆಘಾ ಕ್ಯಾಂಪ್ ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ವಿವಿಧ ಕೇಂದ್ರದಲ್ಲಿ ಒಟ್ಟು 6000 ಲಸಿಕೆ ಲಭ್ಯವಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.
ಕುಕ್ಕುಜಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಶ್ರೀಮತಿ ರಾಜೀವಿ ಎಂ. ಸುದೀರ್ಘ ಸೇವೆ ಸಲ್ಲಿಸಿ ಆ.31 ರಂದು ಸ್ವಯಂ ನಿವೃತ್ತರಾದರು. 1985 ರಿಂದ ಸ.ಹಿ.ಪ್ರಾ ಶಾಲೆ ಕುಕ್ಕುಜಡ್ಕದಲ್ಲಿ ಸೇವೆ ಆರಂಭಿಸಿದ ಇವರು ಒಂದೇ ಶಾಲೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಶಾಲಾ ಜೀವನದಲ್ಲಿ ವಾಲಿಬಾಲ್,ಬ್ಯಾಡ್ಮಿಂಟನ್, ತ್ರೋಬಾಲ್,ಗುಂಡೆಸೆತ,ಚಕ್ರ ಎಸೆತ, ಮುಂತಾದ ಕ್ರೀಡಾ...
ಅರಣ್ಯ ಇಲಾಖೆಯ ಆಕ್ಷೇಪಣೆಯಿಂದ ಅಕ್ರಮ-ಸಕ್ರಮ ಸಮಿತಿಯಿಂದ ಭೂಮಿ ಮಂಜೂರಾಗದೇ ಇರುವ ರೈತರ ಸಮಸ್ಯೆಯ ಬಗ್ಗೆ ಆ.31 ರಂದು ಕಡಬ ಅಂಬೇಡ್ಕರ್ ಭವನದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಕಡಬ ತಾಲೂಕು ಸಮಿತಿಯ ವತಿಯಿಂದ ಸಚಿವ ಅಂಗಾರ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು ಕಂದಾಯ ಇಲಾಖೆಯ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಕಂದಾಯ ಇಲಾಖೆಯ...
ಸರಕಾರ ಮೂಲಭೂತ ಸೌಕರ್ಯವಿಲ್ಲದವರಿಗೆ ಬೇಕಾದ ವ್ಯವಸ್ಥೆ ಯನ್ನು ಮಾಡಲು ಬದ್ದವಾಗಿದೆ. ಆದರೆ ಜನರು ಮಂಜೂರಾದ ನಿವೇಶನವನ್ನು ಮಾರಾಟ ಮಾಡದೇ ಅದರ ಸದುಪಯೋಗ ಪಡೆಯಬೇಕು ಎಂದು ಸಚಿವ ಎಸ್.ಅಂಗಾರ ಅವರು ಹೇಳಿದರು. ಸುಳ್ಯ ತಾ.ಪಂ.ಸಭಾಂಗಣದಲ್ಲಿ ಸಾಗುವಳಿ ಚೀಟಿ ವಿತರಣೆ ಹಾಗೂ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯ ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಹಕ್ಕುಪತ್ರವನ್ನು ವಿತರಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ...
ಬೂಡು ಭಗವತಿ ದೇವಸ್ಥಾನದಲ್ಲಿ ಶ್ರೀ ಭಗವತಿ ಯುವ ಸೇವಾ ಸಂಘ ರಿ. ಬೂಡು-ಕೇರ್ಪಳ- ಕುರುಂಜಿಗುಡ್ಡೆ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಸರಳವಾಗಿ ಜರುಗಿತು. ಸಂಘದ ಅಧ್ಯಕ್ಷರಾದ ವಾಸುದೇವ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜನ್ಮಾಷ್ಟಮಿ ಕಾರ್ಯಕ್ರಮವನ್ನು ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಹರಪ್ರಸಾದ್ ತುದಿಯಡ್ಕ ಉದ್ಘಾಟಿಸಿ “ಕೃಷ್ಣನ ಜೀವನಗಾಥೆಯು ನಮ್ಮ...
ಮಿತ್ರ ಬಳಗ ಎಲಿಮಲೆ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಆಚರಿಸಲಾಯಿತು.ಮಿತ್ರ ಬಳಗದ ಅಧ್ಯಕ್ಷ ಓಂಪ್ರಸಾದ್ ಕಜೆ ದೀಪ ಬೆಳಗಿದರು. ಈ ಸಂದರ್ಭದಲ್ಲಿ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಬಳ್ಪದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಿಯೋ ಟವರ್ ಅನ್ನು ಸಚಿವ ಅಂಗಾರ ಇಂದು ಲೋಕಾರ್ಪಣೆ ಮಾಡಿದರು. ಈ ಭಾಗದ ಜನರ ಬೇಡಿಕೆ ಈಡೇರಿಕೆ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ. ಈ ಸಂದರ್ಭದಲ್ಲಿ ರಾಕೇಶ್ ರೈ ಕೆಡೆಂಜಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾ ರೈ , ರಮಾನಂದ ಎಣ್ಣೆಮಜಲು, ವಿನೋದ್ ಬೊಳ್ಮಲೆ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಕೃಷ್ಣ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ ಇದರ ವತಿಯಿಂದ ನಡೆದ ಒಂಭತ್ತನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಸರಳವಾಗಿ ನಡೆಯಿತು. ಗೋವಿಂದಯ್ಯ ಕೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ದೇವಳದಲ್ಲಿ ವಿಶೇಷ ಪೂಜೆ, ಒಂದರಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ಕೃಷ್ಣನ ವೇಷ ಸ್ಪರ್ಧೆ ಹಾಗು ಬಹುಮಾನ ವಿತರಣಾ ಕಾರ್ಯಕ್ರಮ...
Loading posts...
All posts loaded
No more posts
