ದೇರಾಜೆ : ಪಲ್ಸ್ ಪೋಲಿಯೋ ಲಸಿಕೆ ವಿತರಣೆ

ಐವರ್ನಾಡು ಗ್ರಾಮದ ದೇರಾಜೆ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಫೆ.27 ರಂದು ನಡೆಯಿತು.

ಮಾ.01: ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಶತರುದ್ರಾಭಿಷೇಕ, ರಂಗಪೂಜೆ

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಮಾ.01ರಂದು ಮಹಾಶಿವರಾತ್ರಿ ಉತ್ಸವ ನಡೆಯಲಿದ್ದು, ಸಂಜೆ ಗಂಟೆ 6.00ರಿಂದ ಶತರುದ್ರಾಭಿಷೇಕ, ರಂಗಪೂಜೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ನಡೆಯಲಿರುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6.00ರಿಂದ ರಾಮ ಜೋಯಿಸ ಬೆಳ್ಳಾರೆಯವರ ಸಂಯೋಜನೆಯಲ್ಲಿ ಪ್ರಸಿದ್ಧ ಭಾಗವತ ಪುತ್ತಿಗೆ ರಘುರಾಮ ಹೊಳ್ಳರ ಭಾಗವತಿಕೆಯಲ್ಲಿ "ಜಾಂಬವತಿ ಕಲ್ಯಾಣ" ಯಕ್ಷಗಾನ ಬಯಲಾಟ ನಡೆಯಲಿದೆ. ಮುಮ್ಮೇಳದಲ್ಲಿ ತೆಂಕುತಿಟ್ಟಿನ...
Ad Widget

ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಅಂಗಾರ

ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಸಚಿವ ಎಸ್. ಅಂಗಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಸ್ಥಾಪಕರದ ಸವಣೂರು ಸೀತಾರಾಮ ರೈ, ರೋಟರಿ ಕ್ಲಬ್ ನ ಅಧ್ಯಕ್ಷ ಭರತ್ ನಾಯರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ನಂದಕುಮಾರ್ ,ಡಾ. ಕರುಣಾಕರ,...

ಮಾ.01 : ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ

ಕುಲ್ಕುಂದ ಬಸವನ ಮೂಲೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಾ.01 ಮಂಗಳವಾರದಂದು ವರ್ಷಂಪ್ರತಿಯಂತೆ ಮಹಾಶಿವರಾತ್ರಿಯ ಪ್ರಯುಕ್ತ ಮಹಾಮೃತ್ಯುಂಜಯ ಯಾಗ ಮತ್ತು 4 ಆಯಾಮಗಳಲ್ಲಿ ಶ್ರೀ ಬಸವೇಶ್ವರ ದೇವರಿಗೆ ಶತರುದ್ರಾಭಿಷೇಕ, ರಂಗಪೂಜೆ, ಮಹಾಪೂಜೆ ಮತ್ತು ಅಹೋರಾತ್ರಿ ಭಜನಾ ಸೇವೆ ಕಾರ್ಯಕ್ರಮವು ನಡೆಯಲಿದ್ದು, ಬೆಳಗ್ಗೆ 6:00 ಗಂಟೆಯಿಂದ ದೀಪಾರಾಧನೆಯೊಂದಿಗೆ ಅಹೋರಾತ್ರಿ ಭಜನಾ ಸೇವೆ ಪ್ರಾರಂಭ, ಬೆಳಗ್ಗೆ 8:00 ಗಂಟೆಯಿಂದ ಶ್ರೀ...

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ- ಪಕ್ಷೇತರ ಅಭ್ಯರ್ಥಿ ಸೇರಿ 8 ಮಂದಿ ನಾಮಪತ್ರ ಸಲ್ಲಿಕೆ

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯು ಮಾ.7ರಂದು ನಡೆಯಲಿದ್ದು ಇಂದು 8 ಮಂದಿ ನಾಮಪತ್ರ ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ಈ ಹಿಂದೆ ಚುನಾವಣಾ ದಿನಾಂಕ ಘೋಷಣೆಯಾದ ಸಂದರ್ಭದಲ್ಲಿ 13 ಮಂದಿ ‌ನಾಮಪತ್ರ ಸಲ್ಲಿಸಿದ್ದರು. ನಂತರ ಕೊರೊನಾ ಕಾರಣದಿಂದ ಚುನಾವಣೆಯು ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಫೆ.26 ಮತ್ತು ಫೆ.27 ರಂದು ನಾಮಪತ್ರ ಸಲ್ಲಿಸಲು...

ಓಡಬಾಯಿ : ಜನಪ್ರಿಯ ಬೇಕರಿ ಶುಭಾರಂಭ

ಸುಳ್ಯದ ಓಡಬಾಯಿ ಯಲ್ಲಿರುವ ಕಸ್ತೂರಿ ಕಾಂಪ್ಲೆಕ್ಸ್ ನಲ್ಲಿ ಜನಪ್ರಿಯ ಬೇಕರಿ ಮತ್ತು ಹೋಟೆಲ್ ಫೆ.26 ರಂದು ಶುಭಾರಂಭಗೊಂಡಿತು. ಕಾಂಪ್ಲೆಕ್ಸ್ ಮಾಲಕರಾದ ಶ್ರೀಮತಿ ಶಶಿಕಲಾ ಶುಭಕರ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಸುಳ್ಯ : ಸಚಿವ ಅಂಗಾರರಿಂದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಸ್ತ್ರತ ಕಟ್ಟಡಗಳ ಉದ್ಘಾಟನೆ

ಬದುಕಿಗೆ ಶಿಕ್ಷಣ ಒಂದು ಆಧಾರ, ಹಾಗಾಗಿ ಜ್ಞಾನ ಪಡೆಯುವಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದು ಬಹಳ ಮುಖ್ಯವಾದ ಸಂಗಾತಿಯಾಗಿದೆ. ಆದರೆ ಇತ್ತೀಚೆಗೆ ಸ್ಪಷ್ಟ ಶಿಕ್ಷಣ ನೀತಿ ಇಲ್ಲದೆ ಇರುವುದರಿಂದ ಅನೇಕ ಗೊಂದಲಗಳನ್ನು ಕಾಣುತ್ತಿದೆ. ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿ ಹಾಗೂ ಸ್ವ ಉದ್ಯೋಗ ಕಾಣುವ ನಿಟ್ಟಿನಲ್ಲಿ ಅನುದಾನ ಮಂಜೂರು ಮಾಡುತ್ತಿದ್ದು ಅದರಲ್ಲಿ ಶಿಕ್ಷಣ ವ್ಯವಸ್ಥೆಯು ಸೇರಿದೆ ಎಂದು...

ಗುತ್ತಿಗಾರು : ಬೃಹತ್ ರಕ್ತದಾನ ಶಿಬಿರ – ರಕ್ತದಾನಿಗಳ ತಂಡ ರಚನೆ

ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು, ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಹಾಗೂ ಗ್ರಾಮ ಪಂಚಾಯತ್ ಗುತ್ತಿಗಾರು ಇವುಗಳ ಸಹಯೋಗದಲ್ಲಿ ಫೆ.25 ರಂದು ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೃಹತ್ ರಕ್ತದಾನ...

ಆಲೆಟ್ಟಿ : ರೋಟರಿ ಕ್ಲಬ್ ವತಿಯಿಂದ ಅಂಗನವಾಡಿಗೆ ಜಾರುಬಂಡಿ ಕೊಡುಗೆ

ರೋಟರಿ ಕ್ಲಬ್ ಸುಳ್ಯ ವತಿಯಿಂದ ಆಲೆಟ್ಟಿ ಅಂಗನವಾಡಿಗೆ ಜಾರು ಬಂಡಿ ಕೊಡುಗೆರೋಟರಿ ಕ್ಲಬ್ ಸುಳ್ಯ ವತಿಯಿಂದ ಆಲೆಟ್ಟಿ ಅಂಗನವಾಡಿಗೆ ಜಾರು ಬಂಡಿಯನ್ನು ಕೊಡುಗೆಯಾಗಿ ನೀಡಿದರು. ಇದರ ಉದ್ಘಾಟನೆಯನ್ನು ರೋಟರಿ ಜಿಲ್ಲಾ ಗವರ್ನರ್ ಅರ್. ಆರ್. ರವೀಂದ್ರ ಭಟ್ ಉದ್ಘಾಟಿಸಿ ಶುಭ ಹಾರೈಸಿದರು. ರೋಟರಿ ಕ್ಲಬ್ ಅಧ್ಯಕ್ಷ‌ ಪ್ರಭಾಕರನ್ ನಾಯರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂದಿನ ದಿನಗಳಲ್ಲಿ...

ಮಾ.01: ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.01ರಂದು ಮಹಾಶಿವರಾತ್ರಿ ಉತ್ಸವ ನಡೆಯಲಿದ್ದು ಈ ಪ್ರಯುಕ್ತ ದೇವಳದಲ್ಲಿ ಸಂಜೆ ಗಂಟೆ 5.00ರಿಂದ ಶತರುದ್ರಾಭಿಷೇಕ, ರಾತ್ರಿ ಗಂಟೆ 9.30ಕ್ಕೆ ಮಹಾಪೂಜೆ ನಡೆಯಲಿರುವುದು. ನಂತರ ರಾತ್ರಿ ಗಂಟೆ 10.00ರಿಂದ ಅಮ್ಮ ಕಲಾವಿದರು ಕುಡ್ಲ ಅಭಿನಯಿಸುವ ಶಿವಾನಂದ ಶೆಟ್ಟಿ ಸಾರಥ್ಯದ ಕುಸಲ್ದರಸೆ ನವೀನ್.ಡಿ ಪಡೀಲ್ ಇವರ ಸಲಹೆ ಸಹಕಾರದೊಂದಿಗೆ ಸೋಮನಾಥ ಶೆಟ್ಟಿ...
Loading posts...

All posts loaded

No more posts

error: Content is protected !!