2022 ನೇ ಸಾಲಿನ ಶಿಕ್ಷಕರ ನೇಮಕಾತಿಗೆ ಸುಪ್ರೀಂ ಕೋರ್ಟ್ ತಡೆ – ತೂಗುಯ್ಯಾಲೆಯಲ್ಲಿ ಶಿಕ್ಷಕರ ಭವಿಷ್ಯ

2022 ನೇ ಸಾಲಿನ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ನಡೆದು ಕರ್ತವ್ಯಕ್ಕೆ ಹಾಜರಾಗಿರುವ ಶಿಕ್ಷಕರ ಭವಿಷ್ಯ ತೂಗು ಉಯ್ಯಾಲೆಯಂತಾಗಿದೆ. ಈ ನೇಮಕಾತಿಗೆ ಸಂಬಂಧಿಸಿದಂತೆ ನಮಗೆ ಅನ್ಯಾಯವಾಗಿದೆ ಎಂದು ಕೆಲವು ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ರಾಜ್ಯ ಉಚ್ಛನ್ಯಾಯಾಲಯ ತನಿಖೆ ನಡೆಸಿ ಆದೇಶ ಮಾಡಿ ನೇಮಕಾತಿ ಸರಿಯಾಗಿದೆ ಎಂದು ಆದೇಶ ನೀಡಿದ್ದರು. ಈ ಆದೇಶದನ್ವಯ...

ಕಂದ್ರಪ್ಪಾಡಿ : ಶಾಲಾ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ – ದಾನಿಗಳಿಗೆ ಸನ್ಮಾನ

ಕಂದ್ರಪ್ಪಾಡಿ ಸ.ಹಿ.ಪ್ರಾ.ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಇಂದು ಅದ್ದೂರಿ ಅದ್ದೂರಿ ಚಾಲನೆ ನೀಡಲಾಯಿತು. ಧ್ವಜಾರೋಹಣ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಮಾಸ್ತರ್ ಹಿರಿಯಡ್ಕ ಧ್ಜಜರೋಹಣ ನೆರವೇರಿಸಿದರು.‌ ಅದ್ದೂರಿಯಾಗಿ ನಡೆದ ಮೆರವಣಿಗೆಗೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಕಂದ್ರಪ್ಪಾಡಿ ಚಾಲನೆ ನೀಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್ ಸಭಾ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು. ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ...
Ad Widget

ಚುನಾವಣೆಯಲ್ಲಿ ಇ.ವಿ.ಎಂ. ಮತಯಂತ್ರದ ಬದಲು ಬ್ಯಾಲೆಟ್ ಪೇಪರ್ ನೀಡಬೇಕು, ಸಂಪಾಜೆಯಿಂದ ಸುಳ್ಯಕ್ಕೆ ಪಾದಯಾತ್ರೆಗೆ ಚಾಲನೆ- ರೈತ ಮುಖಂಡ ದಿವಾಕರ ಪೈ

ಗೂನಡ್ಕ ತಲುಪಿದ ದೃಶ್ಯ ಚುನಾವಣೆಯಲ್ಲಿ ಇ.ವಿ.ಎಂ. ಮತಯಂತ್ರದ ಬದಲು ಬ್ಯಾಲೆಟ್ ಪೇಪರ್ ನೀಡಬೇಕೆಂಬ ಬೇಡಿಕೆಯೊಂದಿಗೆ, ಸಾಮಾಜಿಕ ಕಳಕಳಿಯಿಂದ ರೈತ ಮುಖಂಡ ದಿವಾಕರ ಪೈ ಅವರು ಫೆ.8ರಂದು ಬೆಳಿಗ್ಗೆ ಸಂಪಾಜೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿಯಿಂದ ಸುಳ್ಯದವರೆಗೆ ನಡೆಸುವ ಪಾದಯಾತ್ರೆಗೆ ಚಾಲನೆ ನೀಡಲಾಯಿತು.ಈ ಪಾದಯಾತ್ರೆಗೆ ಸಾರ್ವಜನಿಕರಿಗೆ ಅನುಮತಿ ದೊರೆಯದ ಕಾರಣದಿಂದಾಗಿ ರೈತ ಮುಖಂಡರಾದ ದಿವಾಕರ ಪೈ...

ತೊಡಿಕಾನ : ಯುವಕ ಆತ್ಮಹತ್ಯೆ

ತೊಡಿಕಾನ ಗ್ರಾಮದ ಅವಿವಾಹಿತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.7 ರಂದು ಸಂಜೆ ನಡೆದಿದೆ. ದೇವರಗುಂಡಿ ವೆಂಕಪ್ಪ ನಾಯ್ಕರ ಪುತ್ರ ಲಕ್ಷ್ಮಣ ( 37) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ಯುವಕ ತಂದೆ, ತಾಯಿ, ಇಬ್ಬರು ಸಹೋದರರು ಹಾಗೂ ಸಹೋದರಿಯೊರ್ವಳನ್ನು ಅಗಲಿದ್ದಾರೆ.

ಮಂಡಲ ಅಧ್ಯಕ್ಷರ ಆಯ್ಕೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವಂತಹ ಗೊಂದಲವನ್ನು ವೈಭವೀಕರಿಸುವ ಅಗತ್ಯವಿಲ್ಲ – ಬಿಜೆಪಿ ಮಂಡಲ ಸ್ಪಷ್ಟನೆ

ಸುಳ್ಯ ಬಿಜೆಪಿಯ ಕಾರ್ಯಕರ್ತರು ಯಾವತ್ತಿದ್ದರೂ ನಿಷ್ಠೆ ,ಪ್ರಾಮಾಣಿಕತೆ, ಬದ್ಧತೆ ಸ್ವಯಂಸೇವೆ, ಸ್ವಾವಲಂಬಿತನದಲ್ಲಿ ಮುಂಚೂಣಿಯಲ್ಲಿರುವವರು.ಸುಳ್ಯ ಬಿಜೆಪಿಗೆ ಸುಳ್ಯ ಬಿಜೆಪಿಯೇ ಸಾಟಿ. ಸುಳ್ಯ ಮಂಡಲದ ಮುಂದಿನ ಅವಧಿಯ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆಯಲ್ಲಿ ಆಗಿರುವಂತಹ ವ್ಯತ್ಯಾಸವನ್ನು ಸರಿಪಡಿಸುವಂತಹ ಕೆಲಸ ಕಾರ್ಯಗಳು ಸುಳ್ಯ ಬಿಜೆಪಿಯ ಕಡೆಯಿಂದಲೇ ನಡೆಯುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳು ಯಾವುದೇ ರೆಸಾರ್ಟ್ ಗಳಲ್ಲಿ ಅಥವಾ ನಿಗೂಢ ಪ್ರದೇಶಗಳಲ್ಲಿ ನಡೆಯುತ್ತಿಲ್ಲ....

ಬಾಳುಗೋಡು : ವಿವಿಧ ಕಾಮಗಾರಿಗಳ ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಬಾಳುಗೋಡು ಗ್ರಾಮದಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ರೂ 27 ಲಕ್ಷ ವೆಚ್ಚದ ದ.ಕ. ಜಿಲ್ಲಾ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬಾಳುಗೋಡು ನೂತನ ಕಟ್ಟಡ ಉದ್ಘಾಟನೆ ಮಾಡಲಾಯಿತು, ಬಾಳುಗೋಡು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುವ ಬಿಎಸ್ಎನ್ಎಲ್ ಮೊಬೈಲ್ ಚಾರ್ಜ್ ಕಾಮಾಗಾರಿಗೆ ಚಾಲನೆ ನೀಡಲಾಯಿತು. ನಂತರ ಬಾಳುಗೋಡಿನ ಉಪ್ಪುಕಳ ಹೊಳೆಗೆ ಗ್ರಾಮಸೇತು...

ಪಂಜ ಪಂಚಲಿಂಗೇಶ್ವರ ಬ್ರಹ್ಮ ರಥೋತ್ಸವ ಸಂಪನ್ನ

ಪಂಜ ಸೀಮೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಜಾತ್ರೋತ್ಸವವು ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗುತ್ತಿದ್ದು ಫೆ.6ರಂದು ರಾತ್ರಿ ಶ್ರೀದೇವರ ಬ್ರಹ್ಮ ರಥೋತ್ಸವ ಜರುಗಿತು. ಶ್ರೀ ಕಾಜು ಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ ಶ್ರೀ ಭೂತಬಲಿ , ಶಯನೋತ್ಸವ, ಕವಾಟ ಬಂಧನ ಜರುಗಿತು. ಪೂರ್ವ ಸಂಪ್ರದಾಯದಂತೆ...

ಪಂಜ ಸೀಮೆ ಶ್ರೀ ಪಂಚಲಿಂಗೇಶ್ವರ ದೇವರ ದರ್ಶನ ಪಡೆದ ಶಾಸಕಿ ಭಾಗೀರಥಿ ಮುರುಳ್ಯ

ಫೆ.7 ರಂದು ಪಂಜ ಸೀಮೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಜರುಗಿತ್ತು. ಶಾಸಕಿ ಭಾಗೀರಥಿ ಮುರುಳ್ಯ ರವರು ಆಗಮಿಸಿ ಶ್ರೀ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಉತ್ಸವ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರ್, ಉತ್ಸವ ಸಮಿತಿಯ ಸದಸ್ಯರು, ಸೀಮೆಯ‌ ಭಕ್ತಾದಿಗಳು ಉಪಸ್ಥಿತರಿದ್ದರು.

ಅಜ್ಜಾವರ ಮೇನಾಲ ದರ್ಗಾ ಶರೀಫ್ ಮಖಾಂ ಉರೂಸ್ ಸಂಪನ್ನ

ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ಮಖಾಂ ಉರೂಸ್ ಹಾಗೂ ಐದು ದಿನಗಳ ಧಾರ್ಮಿಕ ಪ್ರಭಾಷಣ 2024 ಫೆಬ್ರವರಿ 02 ರಿಂದ ಫೆಬ್ರವರಿ 06 ರ ತನಕ ಅದ್ಧೂರಿಯಾಗಿ ಜರಗಿತು. ಫೆಬ್ರವರಿ 02 ರಂದು ಶುಕ್ರವಾರ ಅಜ್ಞಾವರ ಮುಹಿಯುದ್ದೀನ್ ಜುಮಾ ಮಸೀದಿ ಅಂಗಣದಲ್ಲಿ ಸಭಾ ಕಾರ್ಯಕ್ರಮವನ್ನು ಬಹು:ಸಯ್ಯದ್ ಮೈನುಲ್ ಅಬಿಧೀನ್ ಜೆಫ್ರಿ ತಂಬಳ್ ಬೆಳ್ತಂಗಡಿ ದುಆ ನೇತೃತ್ವ...

ಎಸ್‌ಡಿಪಿಐ ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಕೊಟ್ಯಾಡಿ ಯಲ್ಲಿ ಸ್ನೇಹ ಸಮ್ಮಿಲನ ಹಾಗೂ ಕ್ರೀಡಾಕೂಟ ಕಾರ್ಯಕ್ರಮ

ಸುಳ್ಯ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಸ್ನೇಹ ಸಮ್ಮಿಲನ ಮತ್ತು ಕ್ರೀಡಾಕೂಟ ಕಾರ್ಯಕ್ರಮವು ಫೆಬ್ರವರಿ 05 ರಂದು ಕೊಟ್ಯಾಡಿಯಲ್ಲಿ ನಡೆಯಿತು. ಎಸ್‌ಡಿಪಿಐ ಸುಳ್ಯ ಬ್ಲಾಕ್ ಸಮಿತಿ ಅಧ್ಯಕ್ಷ ಮೀರಝ್ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಆಗಮಿಸಿ ಸಂದೇಶ ಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ ವಿವಿಧ...
Loading posts...

All posts loaded

No more posts

error: Content is protected !!