- Saturday
- August 22nd, 2026
ಮಂಡೆಕೋಲು: ಮಂಡೆಕೋಲು ಗ್ರಾಮದ ಆರಾಧ್ಯ ದೇವ ಮಹಾವಿಷ್ಣು ಮೂರ್ತಿ ದೇವರ ಪುನಃ ಪ್ರತಿಷ್ಠ ಅಷ್ಟಭಂದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎ.29 ರಂದು ರಾತ್ರಿ ಸ್ಥಳೀಯ ಪುಟಾಣಿ ಮಕ್ಕಳ ಯಕ್ಷಗಾನವು ನಡೆಯಿತು. ಈ ಕಾರ್ಯಕ್ರಮಕ್ಕೆ ಊರ ಪರ ಊರ ಯಕ್ಷ ಪ್ರೇಮಿಗಳು ಭಾಗವಹಿಸಿ ಪುಟಾಣಿ ಮಕ್ಕಳಿಗೆ ಪ್ರೋತ್ಸಾಹ ನೀಡಿ ಅಭಿನಂದಿಸಿದರು. ಯಕ್ಷಗಾನ ತರಬೇತಿಯ ಕುರಿತ ಮಾಹಿತಿ. ಈ ಹಿಂದೆ...
ಗುತ್ತಿಗಾರಿನ ಮುತ್ತಪ್ಪ ನಗರ ಶ್ರೀ ಗುರು ಕಾಂಪ್ಲೆಕ್ಸ್ ನಲ್ಲಿ ಮುಕುಂದ ಹಿರಿಯಡ್ಕ ರವರ ಮಾಲಕತ್ವದ ಸತ್ಯದೇವತೆ ಮೋಟಾರ್ ಡ್ರೈವಿಂಗ್ ಸ್ಕೂಲ್ ಮೇ 1 ರಂದು ಶುಭಾರಂಭಗೊಂಡಿತು.ಈ ಸಂದರ್ಭದಲ್ಲಿ ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಾಜೆ, ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ಜಗದೀಶ ಬಾಕಿಲ, ಶ್ರೀ ಗುರು ಕಾಂಪ್ಲೆಕ್ಸ್ ಮಾಲಕ ಪುನೀತ್, ಶ್ರೀಧರ ಪಂಜಿಗಾರು ಮೊದಲಾದವರು...
https://youtu.be/aImq7e_Klr4?si=hFemg4IPKH2gXek8 ಹರಿಹರ ಪಲ್ಲತ್ತಡ್ಕ ಗ್ರಾಮದ ಮಿತ್ತಮಜಲು ಎಂಬಲ್ಲಿ ವಾಸಿಸುತ್ತಿರುವ ಶಿವರಾಮ ಆಚಾರ್ಯ ಹಾಗೂ ಅವರ ಸಹೋದರಿ ರತ್ನಾವತಿ ಅವರಿಗೆ ಹರಿಹರ ಪಲ್ಲತ್ತಡ್ಕದ ಸಚಿನ್ ಕ್ರೀಡಾ ಸಂಘದ ಸದಸ್ಯರು ಮನೆ ನಿರ್ಮಿಸಿದ್ದು, ಇಂದು(ಮೇ.01) ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು. ದಾನಿಗಳ ಸಹಕಾರದಿಂದ ಸಚಿನ್ ಕ್ರೀಡಾ ಸಂಘದ ಸದಸ್ಯರೇ ಹಗಲು-ರಾತ್ರಿ ಶ್ರಮಸೇವೆಯ ಮೂಲಕ ಮನೆಯನ್ನು ನಿರ್ಮಾಣ ಮಾಡಿದ್ದು, ಇಂದು...
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಎಸ್ .ಜೆ ಯೇಸುರಾಜ್ ನೇಮಕಗೊಂಡಿದ್ದಾರೆ.ನೂತನ ಎಇಒ ಅವರಿಗೆ ಪ್ರಭಾರ ಎಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಳ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಅಧಿಕಾರ ಹಸ್ತಾಂತರಿಸಿದರು. ರಾಮನಗರ ಜಿಲ್ಲಾಧಿಕಾರಿ ಕಚೇರಿಯ ಮುಜರಾಯಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರನ್ನು ಕುಕ್ಕೆ ದೇವಳದ ನೂತನ ಎಇಒ ಆಗಿ ಸರಕಾರ ನೇಮಿಸಿತ್ತು. ಎ.30...
ಭಕ್ತಿ ಭಾವದಿಂದ ಪಾಲ್ಗೊಂಡು ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಂಡ ಭಕ್ತಾದಿಗಳುಸುಳ್ಯ: ತಾಲೂಕಿನ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆ ಶೀ ದೇವರ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನೆರವೇರಿತು. ಹಲವು ದಿನಗಳಿಂದ ಕಾತರ, ಕುತೂಹಲ ಹಾಗೂ ಭಕ್ತ ಭಾವದಿಂದ ಕಾಯುತ್ತಿದ್ದ ಕ್ಷಣಗಳಿಗೆ ಕೊನೆಗೂ ಮುಹೂರ್ಯ ಕೂಡಿ ಬಂದಿತು. ಬೆಳಿಗ್ಗೆ 10.18 ರ ಮಿಥುನ ಲಗ್ನ...
ಮುರುಳ್ಯ ಗ್ರಾಮದ ಹುದೇರಿ ದಿ.ಸಂಕಪ್ಪ ಗೌಡರ ಪುತ್ರ ಕೇಶವರವರು ಹೃದಯಾಘಾತದಿಂದ ಎ.29 ರಂದು ಮುಂಬೈಯಲ್ಲಿ ನಿಧನರಾದರು. ಇವರು ಮುಂಬೈಯ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ಮೃತರು ಪತ್ನಿ ತಾರಾ, ಇಬ್ಬರು ಪುತ್ರಿಯರು, ಇಬ್ಬರು ಸಹೋದರರು, ಸಹೋದರಿಯರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.ಮೃತದೇಹವು ಮುಂಬೈಯಿಂದ ಊರಿಗೆ ತಲುಪಿದ್ದು, ಅಂತ್ಯಸಂಸ್ಕಾರ ಮಾಡಲಾಯಿತು.
ಮಂಡೆಕೋಲು: ಮಹಾವಿಷ್ಣು ಮೂರ್ತಿ ಅಷ್ಟಬಂದ ಪುನಃ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಅಂಗವಾಗಿ ನಿರಂತರವಾಗಿ ನಾಲ್ಕು ದಿನಗಳ ಕಾಲ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮವು ಸಂಪನ್ನವಾಯಿತು . ಸಂಪನ್ನ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಅಥಿಗಳಾಗಿ ಆಗಮಿಸಿದ ನಾ ಸೀತರಾಮ ಮಾತನಾಡುತ್ತಾ ಮಂಡೆಕೋಲು ಗ್ರಾಮವೇ ಇಡೀ ರಾಷ್ಟ್ರೀಯತೆಯನ್ನು ಗಟ್ಟಿಯಾಗಿ ನೆಲೆಯೂರಿದ್ದು ಇಲ್ಲಿ ನಾವು ಭೋದನೆ ಭಾಷಣ ಮಾಡಬೇಕಾದ ಅನಿವಾರ್ಯತೆ...
ಸುಳ್ಯ: ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಶುಭವಸರದಲ್ಲಿರುವ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಸದ, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರು ಮಂಗಳವಾರ ಭೇಟಿ ನೀಡಿದರು.ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಸ್ವಯಂಸೇವಕರಾಗಿ ದುಡಿದ ಎಲ್ಲರೊಂದಿಗೂ ಮಾತನಾಡಿ ಖುಷಿಪಡಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಜೀರ್ಣೋದ್ಧಾರ...
ಮಕ್ಕಳ ಮುಗ್ದತೆಯಲ್ಲಿಯೇ ಅವರಿಗೆ ಧರ್ಮ ಸಂಸ್ಕೃತಿಗಳನ್ನು ಕಲಿಸಿದಾಗ ಅದು ಮುಂದೆ ವರವಾಗಿ ಕಾಣಲು ಸಾಧ್ಯವಾಗಿದೆ - ಎಸ್ ಅಂಗಾರ.ಮಂಡೆಕೋಲು ದೇವಸ್ಥಾನ ಬ್ರಹ್ಮಕಲಶ : ಧಾರ್ಮಿಕ ಸಭೆಸಂಸ್ಕಾರ ಕಲಿಸುವ, ಜಾತಿ – ಪಕ್ಷ ಬೇದ ಮರೆತು ಎಲ್ಲರನ್ನೂ ಒಂದಾಗಿಸುವ ಶ್ರದ್ಧಾ ಕೇಂದ್ರ ದೇವಸ್ಥಾನ. ದೇವಸ್ಥಾನದ ಎಲ್ಲ ಕಾರ್ಯದಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡಾಗ ಸಂಸ್ಕಾರ ಸಿಗುತ್ತದೆ ” ಎಂದು...
ಮಾನವೀಯತೆಯನ್ನು ಸಾರಿದ ಸಮಾಜಮುಖಿ ಕಾರ್ಯದ ವರದಿ:ಸಮಾಜದಲ್ಲಿ ಕಷ್ಟದಲ್ಲಿರುವವರ ಕೈ ಹಿಡಿಯಬೇಕು, ಅಶಕ್ತರಿಗೆ ಆಸರೆಯಾಗಬೇಕು ಎನ್ನುವುದು ನಾವು ಹುಟ್ಟಿನಿಂದಲೇ ಕಲಿತುಕೊಂಡು ಬಂದಂತಹ ಪಾಠ. ಆದರೆ ಇಂದಿನ ಈ ಯಾಂತ್ರೀಕೃತ ಬದುಕಿನಲ್ಲಿ ಮಾನವೀಯತೆ ಕಣ್ಮರೆಯಾಗುತ್ತಿದೆ ಎಂದು ನಾವು ಅದೆಷ್ಟೋ ಬಾರಿ ಅಂದುಕೊಳ್ಳುತ್ತೇವೆ. ಆದರೆ ಕೆಲವೊಂದು ನಿಸ್ವಾರ್ಥ ಸಮಾಜಮುಖಿ ಕಾರ್ಯಗಳು ಸಮಾಜಕ್ಕೆ ಮಾನವೀಯತೆಯ ಪಾಠವನ್ನು ಕಲಿಸುವುದರೊಂದಿಗೆ ಮಾನವೀಯ ಮೌಲ್ಯಗಳನ್ನು ಎತ್ತಿ...
Loading posts...
All posts loaded
No more posts
