- Friday
- August 21st, 2026
1970 ರಲ್ಲಿ ಕ್ಯಾಲಿಫೋರ್ನಿಯಾದ ಮಕ್ಕಳತಜ್ಞ ವೈದ್ಯ ಬೆನ್‌ಫೀನ್‌ಗೋಲ್ಡ್ ಹೇಳಿದ- "ಕೃತಕ ಸುವಾಸನಾದ್ರವ್ಯಗಳು ಮತ್ತು ಕೃತಕಬಣ್ಣಗಳು ಎ.ಡಿ.ಹೆಚ್.ಡಿ. (ಮಕ್ಕಳಲ್ಲಿ ಕಂಡುಬರುವ ಎಟೆನ್ಷನ್ ಡೆಫಿಸಿಟ್ ಹೈಪರಾಕ್ಟಿವಿಟಿ ಡಿಸರ‍್ಡರ್) ಉಂಟುಮಾಡಬಹುದು. 2007ರಲ್ಲಿ ಫೀನ್‌ಗೋಲ್ಡ್ ಮರಣದ 25 ವರ್ಷಗಳ ನಂತರ ಒಂದು ಸಂಶೋಧನಾ ಅಧ್ಯಯನ ವರದಿ ಮಾಡಿತು. ಅದನ್ನು ಅಮೆರಿಕಾದ ಫೂಡ್ ಸ್ಟಾಂರ‍್ಡ್ ಏಜೆನ್ಸಿ ಪ್ರಾಯೋಜಿಸಿತ್ತು. 300 ಮಕ್ಕಳನ್ನು ಇಟ್ಟುಕೊಂಡು ಈ...
ಸುಳ್ಯ: ಸುಳ್ಯ ತಾಲೂಕಿನಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಜೆಜೆಎಂ ಕುಡಿಯುವ ನೀರಿನ ಕುರಿತಾದ ಸಮಸ್ಯೆಗಳು ಗಮನಕ್ಕೆ ಬರುತ್ತಿದ್ದಂತೆ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಅಧಿಕಾರಿಗಳ ಸಭೆ ನಡೆಸಲಾಯಿತು. ಜೆಜೆಎಂ ನಲ್ಲಿ ಸಂಪೂರ್ಣ ಅವ್ಯವಹಾರ ಆಗಿದೆ ಗ್ರಾ.ಪಂ ಅಧ್ಯಕ್ಷರು ಸದಸ್ಯರುಗಳ ಆರೊಪ:ಸಭೆ ಆರಂಭವಾಗುತ್ತಿದ್ದಂತೆ ಎಂಜಿನಿಯರ್...
ಅಜ್ಜಾವರ: ಮೇದಿನಡ್ಕ ಸಿಆರ್ ಸಿ ಕಾಲೋನಿಯಲ್ಲಿ ಮಿನಿ ಸಮುದಾಯ ಭವನ ನಿರ್ಮಾಣ ಮತ್ತುಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಅಭಿವೃದ್ಧಿ, ಮೇದಿನಡ್ಕದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆಶಾಸಕರಿಗೆ ಮನವಿ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ರಮೇಶ್ ಮೇದಿನಡ್ಕ, ದಯಾಳನ್ ಉಪಸ್ಥಿತರಿದ್ದರು.
ಮಂಡೆಕೋಲು: ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯವು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಗಣಪತಿ ಹವನದೊಂದಿಗೆ ಪ್ರಾರಂಭಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಲ ಉದ್ದಂತಡ್ಕ, ಉಪಾಧ್ಯಕ್ಷರು ಪ್ರತಿಮಾ ಹೆಬ್ಬಾರ್, ಸದಸ್ಯರಾದ ಗೀತಾಮಾವಂಜಿ, ಗ್ರಾಮ ಪಂಚಾಯತ್ ಪಿಡಿಓ ರಮೇಶ್ , ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ಪ್ರಾಥಮಿಕ ಕೃಷಿ ಪತ್ತಿನ...
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ ಬೆಳೆ ವಿಮೆ ಪರಿಹಾರಕ್ಕೆ ಸಂಬಂದಿಸಿ ಮುಂದಿನ ವಾರದಿಂದ ವಿಮೆ ಪಾವತಿಸಲು ಅವಕಾಶ ಕಲ್ಪಿಸಲಾಗುತ್ತದೆ ಇದಕ್ಕೆ ಸಂಬಂಧಿಸಿ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿದ್ದು ಮುಂದಿನ ವಾರ ಈ ಪ್ರಕ್ರಿಯೆ ಜಾರಿಗೆ ಬರಲಿದೆ ಪಹಣಿ ಇರುವ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಸಭೆಯಲ್ಲಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ & ಪ್ರೌಢಶಾಲೆಗಳಿಗೆ ಜೂ.27 ಗುರುವಾರದಂದು ರಜೆ ಘೋಷಿಸಲಾಗಿದೆ.ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ನಾಳೆ (ಜೂ.27) ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ.
ಕುಂಬರ್ಚೋಡು ಪರಿಸರದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಸ್ಥಳೀಯ ನಿವಾಸಿಗಳಿಂದ ಸುಳ್ಯ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ರವರನ್ನು ಕಚೇರಿಯಲ್ಲಿ ಭೇಟಿಯಾಗಿ ಮನವಿಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಕೆ ಅಬ್ದುಲ್ ಗಫೂರ್,ಅಬ್ದುಲ್ ಕರೀಂ ಬಿ ಎಂ, ಕುಂಞಾಮು ಕೆ ಎಂ,ಮಹಮ್ಮದ್ ಮುಖದ್ದಸ್,ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರು ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ. ಜಯರಾಮ ಅವರನ್ನು ಅರೆಭಾಷೆ ಅಕಾಡೆಮಿಯ ನೂತನ ಅಧ್ಯಕ್ಷರು ಹಾಗೂ ಸದಸ್ಯರ ತಂಡ ಇಂದು ಅವರ ಸ್ವಗೃಹದಲ್ಲಿ ಭೇಟಿ ನೀಡಿ ಮಾತುಕತೆ ನಡೆಸಿದರು.ಈ ಸಂದರ್ಭದಲ್ಲಿ ಪಿ.ಸಿ. ಜಯರಾಮ ಇವರು ಹೊಸ ತಂಡಕ್ಕೆ ಶುಭ ಹಾರೈಸಿದರು. ಅರೆಭಾಷೆ ಸಂಸ್ಕೃತಿ...
ಜೂ 26 ರಂದು ಎಲಿಮಲೆ ಪ್ರೌಢಶಾಲೆ ಯಲ್ಲಿ 'ಮಾದಕ ವಸ್ತು ವಿರೋಧಿ ದಿನ'ವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾದಕ ವ್ಯಸನೆ ಎಂದರೇನು, ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಹಾಗೂ ವ್ಯಸನ ಮುಕ್ತ ದೇಶವನ್ನಾಗಿಸಲು ವಿದ್ಯಾರ್ಥಿಗಳ ಪಾತ್ರವನ್ನು ಮನವರಿಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಶಿಕ್ಷೇತರ- ಸಿಬ್ಬಂದಿ ವರ್ಗದವರು...
Loading posts...
All posts loaded
No more posts
