ಬ್ರೇಕ್ ಡೌನ್ ಕಾಮಗಾರಿ ಸ್ಥಗಿತಗೊಳಿಸಲು ನಿರ್ಧರಿಸಿದ ವಿದ್ಯುತ್ ಗುತ್ತಿಗೆದಾರ ಸಂಘ

ಕಾಮಗಾರಿಯ ಬಿಲ್ ನಲ್ಲಿ ಕಡಿತಗೊಳಿಸಿರುವುದನ್ನು ಖಂಡಿಸಿ ಬ್ರೇಕ್ ಡೌನ್ ಕಾಮಗಾರಿಯನ್ನು ಸೋಮವಾರದಿಂದ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸುಳ್ಯ ತಾಲೂಕು  ಅಧ್ಯಕ್ಷರಾದ ಸೋಮಶೇಖರ್ ಪೈಕ ಹೇಳಿದರು.   ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರಾದ ನಾವು ಮೆಸ್ಕಾಂ...

ಕೊಡಿಯಾಲ : ಖಾಯಂ ಲೈನ್ ಮೆನ್ ಗಾಗಿ ಮೆಸ್ಕಾಂ ಜೆ.ಇ.ಗೆ ಗ್ರಾಮಸ್ಥರಿಂದ ಮನವಿ

ಕೊಡಿಯಾಲ ಗ್ರಾಮಕ್ಕೆ ಖಾಯಂ ಲೈನ್ ಮೆನ್ ನಿಯೋಜಿಸಬೇಕೆಂದು ಕೊಡಿಯಾಲ ಗ್ರಾಮಸ್ಥರು ಬೆಳ್ಳಾರೆ ಮೆಸ್ಕಾಂ ಜೆ.ಇ ಯವರಿಗೆ ಜು.19 ರಂದು ಮನವಿ ಸಲ್ಲಿಸಿದರು.ಮನವಿಯಲ್ಲಿ ಕೊಡಿಯಾಲ ಗ್ರಾಮವು ಬಹು ವಿಸ್ತಾರ ಹಾಗೂ ಹೆಚ್ಚು ಜನಸಂಖ್ಯೆ ಇದ್ದು ಇಲ್ಲಿ ಹಲವಾರು ಡಿ.ಸಿ.ಗಳಿಂದ ತುಂಬಾ ಮನೆ ಹಾಗೂ ಪಂಪುಶೆಡ್ ಗಳಿಗೆ ವಿದ್ಯುತ್ ಸಂಪರ್ಕ ಇರುವ ಪ್ರದೇಶವಾಗಿರುತ್ತದೆ. ಆದರೆ ಈ ಗ್ರಾಮದಲ್ಲಿ ಕಾರ್ಯನಿರ್ವಹಿಸಲು...
Ad Widget

ಬಡ್ಡಡ್ಕ: ಚೈತನ್ಯ ಸೇವಾಶ್ರಮದ ಸ್ವಾಮೀಜಿಯವರಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಲೇಖನಿ ವಿತರಣೆ

ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿ.ಪ್ರಾ ಶಾಲೆಯ ವಿದ್ಯಾರ್ಥಿಗಳಿಗೆ ದೇವರಕಳಿಯ ಚೈತನ್ಯ ಸೇವಾಶ್ರಮದ ಯೋಗೇಶ್ವರಾನಂದ ಸರಸ್ವತಿಸ್ವಾಮೀಜಿಯವರು ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳನ್ನು ವಿತರಿಸಲಾಯಿತು.ಈ ಸಂಧರ್ಭದಲ್ಲಿ ಸ್ವಾಮೀಜಿಯವರ 207ನೇ ಕೃತಿಮಾಲೆ – ಆದರ್ಶ ಮಾನವನಾಗು- ಪುಸ್ತಕವನ್ನು ಅರೆಭಾಷೆ ಅಕಾಡೆಮಿ ಸದಸ್ಯೆ ಚಂದ್ರಾವತಿ ಬಡ್ಡಡ್ಕ ಬಿಡುಗಡೆಗೊಳಿಸಿದರು.ವೇದಿಕೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷೆ ಡಾ. ಸಾಯಿಗೀತಾ ಜ್ನಾನೇಶ್,ಸಂಚಾಲಕ...

ಮುಂದುವರಿದ ಭಾರೀ ಮಳೆ ; ದ.ಕ. ಜಿಲ್ಲೆಯಾದ್ಯಂತ ನಾಳೆ(ಜು.20) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಭಾರೀ ಮಳೆ ಮುಂದುವರಿದಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿಪೂರ್ವ ಕಾಲೇಜು(12 ತರಗತಿಯವರೆಗೆ) ಗಳಿಗೆ ನಾಳೆ ಜುಲೈ 20 ರಂದು ರಜೆ ಘೋಷಿಸಿ ದ.ಕ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.

ಜು.22 ರಂದು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಸಭೆ

ಸುಳ್ಯ ತಾಲೂಕಿನ ಎಲ್ಲಾ ಗಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಸಭೆಯು ಜು.22 ರಂದು ಪೂ.10.30 ಕ್ಕೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಗ್ರಾ.ಪಂ.ಗಳ ಒಕ್ಕೂಟದ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಎಲ್ಲಾ ಅಧ್ಯಕ್ಷ,ಉಪಾಧ್ಯಕ್ಷರುಗಳು ಆಗಮಿಸಬೇಕೆಂದು ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟದ ಪ್ರ.ಕಾರ್ಯದರ್ಶಿ ಕೇಶವ ಅಡ್ತಲೆ ಹಾಗೂ ಸಂಚಾಲಕರಾದ...

ಕುಕ್ಕೆ ಸುಬ್ರಹ್ಮಣ್ಯ : ತುಂಬಿ ಹರಿಯುತ್ತಿರುವ ಕುಮಾರಧಾರ ನದಿ ; ಸ್ನಾನಘಟ್ಟ ಮುಳುಗಡೆ

ತೀರ್ಥಸ್ನಾನಕ್ಕಾಗಿ ನದಿ ತಟಕ್ಕೆ ತೆರಳದಂತೆ ಭಕ್ತಾದಿಗಳಿಗೆ ಸೂಚನೆಕುಕ್ಕೆ ಸುಬ್ರಹ್ಮಣ್ಯ-ಪುತ್ತೂರು ರಸ್ತೆಯಲ್ಲಿ ಹರಿದ ನೀರು-ಸಂಚಾರಕ್ಕೆ ತೊಂದರೆ ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಭಾರೀ ಮಳೆಯಾಗುತ್ತಿದ್ದು, ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ನಾಲ್ಕೈದು ದಿನಗಳಿಂದ ನಿರಂತರವಾಗಿ ಸ್ನಾನಘಟ್ಟ ಮುಳುಗಡೆಯಾಗುತ್ತಿದ್ದು, ತೀರ್ಥಸ್ನಾನಕ್ಕಾಗಿ ನದಿ ತಟಕ್ಕೆ ತೆರಳದಂತೆ ಭಕ್ತಾದಿಗಳಿಗೆ ಸೂಚನೆ ನೀಡಲಾಗಿದ್ದು, ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿಗಳನ್ನು ನೇಮಿಸಿ ಎಚ್ಚರಿಕೆ ವಹಿಸಲಾಗಿದೆ ಎಂದು...

ಪಂಜ: ರಸ್ತೆಗುರುಳಿದ ಬೃಹತ್ ಮರ

ಭಾರಿ ಮಳೆಗೆ ಬೃಹತ್ ಮರ ರಸ್ತೆಗೆ ಬಿದ್ದ ಘಟನೆ ಪಂಜದ ಪಲ್ಲೋಡಿ ಪೆಟ್ರೋಲ್ ಪಂಪು ಬಳಿ ನಡೆದಿದೆ. ರಸ್ತೆಯ ಮಧ್ಯಕ್ಕೆ ಮರ ಬಿದ್ದ ಪರಿಣಾಮ ಈಗ ರಸ್ತೆ ಬಂದ್ ಆಗಿದ್ದು ಪಂಜ ಸುಬ್ರಹ್ಮಣ್ಯ ಸಂಪರ್ಕ ಕಡಿತಗೊಂಡಿದೆ.

ಬಾಳುಗೋಡು : ಪದಕ ಸೇತುವೆ ಮುಳುಗಡೆ

ಹರಿಹರ ಬಾಳುಗೋಡು ರಸ್ತೆಯಲ್ಲಿರುವ ಪದಕ ಸೇತುವೆ ಕಳೆದೆರಡು ದಿನಗಳಿಂದ ಮುಳುಗಡೆಯಾಗಿದ್ದು ಸಂಪರ್ಕ ಕಡಿತಗೊಂಡಿದೆ. ಇಂದು ಹೆಚ್ಚು ನೀರು ಹರಿದು ಬರುತ್ತಿದ್ದು ಸೇತುವೆ ಕೊಚ್ಚಿ ಹೋಗುವ ಭೀತಿ ಜನರಲ್ಲಿ ಉಂಟಾಗಿದೆ.

ನಿರಂತರವಾಗಿ ವಿದ್ಯುತ್ ಸಮಸ್ಯೆ ಗ್ರಾ.ಪಂ ಕಛೇರಿ ಕತ್ತಲೆಯಲ್ಲಿ – ಜನರ ಸಮಸ್ಯೆ ಕೇಳುವವರಾರು

ಅಜ್ಜಾವರ: ಅಜ್ಜಾವರ ಗ್ರಾಮ ಪಂಚಾಯತ್ ಕಛೇರಿಯಲ್ಲಿ ನಿರಂತರವಾಗಿ ಐದು ದಿನಗಳಿಂದ ವಿದ್ಯುತ್ ವ್ಯತ್ಯಯವಾಗಿದ್ದು ಇದೀಗ ವಾರ್ಡ್ ಸಭೆಗಳು ಸೇರಿದಂತೆ ಮಳೆಯ ಪರಿಣಾಮ ತುರ್ತು ಕೆಲಸ ಕಾರ್ಯಗಳನ್ನು ಮಾಡಬೇಕಾದ ಕಛೇರಿಯಲ್ಲಿ ಬೆಳಕಿಲ್ಲದೆ ಕತ್ತಲೆಯಲ್ಲಿ ಕಳೆಯುವಂತಾಗಿದೆ. ಅಲ್ಲದೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ಗ್ರಾಮ ವಿಪತ್ತು ತಂಡದ ಮುಖ್ಯಸ್ಥರಾಗಿದ್ದು ವಿದ್ಯುತ್ ಸಮಸ್ಯೆ ಮತ್ತು ಬಿ ಎಸ್ ಎನ್ ಎಲ್...

ಉಬರಡ್ಕ : ಮಂಜಿಕಾನ – ಬದನಕಜೆ ರಸ್ತೆ ಜಲಾವೃತ

ಉಬರಡ್ಕ ಗ್ರಾಮದ ಮಂಜಿಕಾನ ದಿಂದ ಬದನೆಕಜೆಗೆ ಹೋಗುವ ರಸ್ತೆ ಜಲಾವೃತಗೊಂಡು ಬ್ಲಾಕ್ ಆಗಿದೆ. ತೋಡೊಂದು ಹರಿಯುತ್ತಿದ್ದ ನೀರು ವಿಪರೀತವಾಗಿದ್ದರಿಂದ ರಸ್ತೆ ಬ್ಲಾಕ್ ಆಗಿದೆ. ರಸ್ತೆಯ ಇನ್ನೊಂದು ಬದಿಯಲ್ಲಿ ಸಣ್ಣದಾದ ಕಾಲು ಸೇತುವೆ ಮಾಡಲಾಗಿದ್ದು, ಇದನ್ನು ಬಳಸಿ ಈ ಭಾಗದ ಜನರು ಸಂಚರಿಸುತ್ತಿದ್ದಾರೆ.
Loading posts...

All posts loaded

No more posts

error: Content is protected !!