- Tuesday
- August 18th, 2026
ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ:5-09-2024ರಂದು ಡಾ. ಸರ್ವಪಲ್ಲಿರಾಧಾಕೃಷ್ಣನ್‌ಅವರ ಹುಟ್ಟು ಹಬ್ಬದ ಪ್ರಯುಕ್ತ ಆಚರಿಸಲಾಗುವ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್&ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್‌ಯು.ಜೆ.ಯವರುಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ನುಡಿನಮನ ಸಲ್ಲಿಸಿದರು ಹಾಗೂ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿ ಸಂಸ್ಥೆಯ ಎಲ್ಲಾ ಶಿಕ್ಷಕರಿಗೆ...
ವರಮಹಾಲಕ್ಷ್ಮೀ ಪೂಜಾ ಸಮಿತಿ ಮೇನಾಲ ಇದರ ನೂತನ ಸಮಿತಿ ರಚನೆ ಯಾಗಿದ್ದು ಅಧ್ಯಕ್ಷರಾಗಿ ಬೇಬಿ ಸುಕುಮಾರ್ ಕಲ್ಲಗುಡ್ಡೆ ಆಯ್ಕೆಯಾಗಿದ್ದಾರೆ. ಸಮಿತಿಯ ಕಾರ್ಯದರ್ಶಿಯಾಗಿ ಅನೀತಾ ಸತೀಶ್ ಪೂಜಾರಿ ಹಾಗೂ ಖಜಾಂಜಿಯಾಗಿ ದಿವ್ಯ ಚೇತನ್ ಆಮೇಮನೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ರಾಗಿ ನಳಿನಿ ಸತ್ಯನಾರಾಯಣ ಹಾಗು ಶೋಭಾ ರಾಮಚಂದ್ರ ಜತೆ ಕಾರ್ಯದರ್ಶಿಯಾಗಿ ಗೀತಾ ಸೀತಾರಾಮ ಬೀನಡ್ಕ ಹಾಗೂ ದೇವಕಿ ಗುರುವಪ್ಪ...
ಗೂನಡ್ಕದ ಶಾಲಾ ಬಳಿ ಖಾಸಗಿ ಬಸ್ ಹಾಗೂ ಓಮಿನಿ ಮುಖಾಮುಖಿ ಢಿಕ್ಕಿಯಾದ ಘಟನೆ ಕಳೆದ ರಾತ್ರಿ ನಡೆದಿದೆ. ಕಾಸರಗೋಡಿನಿಂದ ಬೆಂಗಳೂರಿಗೆ ಹೊರಟ ಕೊಹಿನೂರ್ ಖಾಸಗಿ ಬಸ್ ಗೆ ಓಮಿನಿ ಢಿಕ್ಕಿಯಾಗಿದೆ. ಓಮಿನಿಯಲ್ಲಿದ್ದ ಬೆಳ್ಳಾರೆಯ ಮೂವರಿಗೆ ಗಾಯಗಳಾಗಿವೆ. ಅಪಘಾತದ ಸ್ಥಳಕ್ಕೆ ಧಾವಿಸಿದ ಆಪತ್ಬಾಂಧವ ತಾಜುದ್ದೀನ್ ಟರ್ಲಿ ಗಾಯಾಳುಗಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
https://youtu.be/S0EXVgHO9cc?si=WlvVNp64ZuBY3our ಸುಳ್ಯ : ವಿಶ್ವಹಿಂದು ಪರಿಷದ್ ಮತ್ತು ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಜೃಂಭಣೆಯ ಮೊಸರು ಕುಡಿಕೆ ಉತ್ಸವ ನಡೆಯಿತು. ಸುಳ್ಯದ ರಸ್ತೆಯುದ್ದಕ್ಕೂ ಶೋಭಾಯಾತ್ರೆ ನಡೆದು ಚೆನ್ನಕೇಶವ ದೇವಾಲಯದ ಬಳಿಯಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಮೊಸರು ಕುಡಿಕೆ ಉತ್ಸವ ಸಂಪನ್ನಗೊಂಡಿತು. ಮೊಸರು ಕುಡಿಕೆ ಉತ್ಸವದಲ್ಲಿ ಹಿಂದು ಯುವಕರಿಂದ ಮಾನವ ಪಿರಮಿಡ್ ನಿರ್ಮಿಸಿ ಸುಳ್ಯದ 17...
ಬರೆಯಲಿ ನಾ ಹೇಗೆ ಬದುಕಿನ ಕಥೆಯ, ನನ್ನ ಬದುಕೇ ಒಂದು ಕಾದಂಬರಿಯಂತೆ ಕಣ್ಮುಂದೆ ನಿಂತಿರುವಾಗ…ವಿವರಿಸಲಿ ನಾ ಹೇಗೆ ಜೀವನದ ಪರೀಕ್ಷೆಗಳ, ಉತ್ತರಗಳೇ ಸಿಗದ ನೂರಾರು ಪ್ರಶ್ನೆಗಳು ನನ್ನ ಮನದೊಳಗೆ ಅತ್ತಿತ್ತ ಓಡಾಡುತ್ತಿರುವಾಗ…ತಿಳಿಸಲಿ ನಾ ಹೇಗೆ ಕನಸಿನ ಅನುಭವಗಳ, ನಾ ಕಂಡ ಕನಸುಗಳೇ ನನಸಾಗದಿರುವಾಗ…ಕಲಿಸಲಿ ನಾ ಹೇಗೆ ಕಷ್ಟ-ನೋವುಗಳಿಂದ ಹೊರಬರುವ ಪಾಠಗಳ, ನನ್ನ ಬದುಕಿನ ತುಂಬಾ ಕಷ್ಟ-ನೋವುಗಳೇ...
ಅವರ ನಿಜ ನಾಮಧೇಯ ಯಸ್. ವೆಂಕಟರಮಣ ಭಟ್. ಅವರನ್ನು ಎಲ್ಲರೂ ಕರೆಯುತ್ತಿದ್ದದ್ದು ಎಸ್.ವಿ. ಮೇಷ್ಟ್ರು ಎಂಬುದಾಗಿ. ನಾನು ಅಂದಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಾರೆ (ಇಂದಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ) ಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ನಮಗೆ ಕನ್ನಡ ಕಲಿಸಿದ ನಮ್ಮ ಪ್ರೀತಿಯ ಎಸ್.ವಿ. ಮೇಷ್ಟ್ರು. ಅವರು ಕನ್ನಡದಲ್ಲಿ ಪಾಠ ಆರಂಭಿಸಿದರೆ ನಾವೆಲ್ಲರೂ...
ಸುಳ್ಯಕ್ಕೆ ಆಗಮಿಸಿದ ಮೈಸೂರು ಲೋಕ ಸಭಾಕ್ಷೇತ್ರದ ಮಾಜಿ ಸಂಸದರಾದ ಪ್ರತಾಪಸಿಂಹರನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಭಾರತಿ ಪುರುಷೋತ್ತಮ...
ಸುಳ್ಯ ಮಂಡಲ ಮಹಿಳಾ ಮೋರ್ಚಾ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಲೀಲಾವತಿ ರಾಘವ ಗೌಡ ಮತ್ತು ಜಾನಕಿ ವೆಂಕಪ್ಪ ಗೌಡ ಇವರುಗಳನ್ನು ಅವರ ನಿವಾಸದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂಧರ್ಭ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ. ಬಿ. ಕೆ. ಮಾಜಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಪುಷ್ಪಾವತಿ ಬಾಳಿಲ,ಮುರುಳ್ಯ ಗ್ರಾಮ...
ಪದ್ಮನಾಭ ಅತ್ಯಾಡಿಯವರು ಪ್ರಸ್ತುತ ಗಾಂಧಿನಗರ ಕೆಪಿಎಸ್‌ನಲ್ಲಿ ಮುಖ್ಯಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು 01-2-1965ರಲ್ಲಿ ಜನಸಿದರು. ಪ್ರಥಮವಾಗಿ ಇವರು ಸ.ಕಿ.ಪ್ರಾ ಶಾಲೆ ಪೈಂಬೆಚ್ಚಾಲಿನಲ್ಲಿ ಕರ್ತವ್ಯ ಆರಂಭಿಸಿದರು. 1993ರಲ್ಲಿ ಸ.ಹಿ.ಪ್ರಾ ಶಾಲೆ ಅಜ್ಜಾವರ, 2002ರಲ್ಲಿ ಸಿ.ಆರ್.ಪಿ ಆಗಿ ಅಜ್ಜಾವರ ಕ್ಲಸ್ಟರ್, 2007ರಲ್ಲಿ ಸಹ ಶಿಕ್ಷಕರಾಗಿ ಕೆ.ಪಿ.ಎಸ್ ಗಾಂಧಿನಗರ, 2011ರಲ್ಲಿ ಸಿ.ಆರ್.ಪಿಯಾಗಿ ಸುಳ್ಯ ಕ್ಲಸ್ಟರ್, 2014ರಲ್ಲಿ ಇಒ ಆಗಿ ಸುಳ್ಯ ಬಿಇಒ,...
ದಿ. ಪುಟ್ಟಯ್ಯ ಪೂಜಾರಿ ಹಾಗೂ ದಿ.ಗಿರಿಜಾ ಪುಟ್ಟಯ್ಯ ದಂಪತಿಗಳ ಪುತ್ರರಾಗಿರುವ ರಘು ಬಿಜೂರುರವರು 20-06-1966ರಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕುಗ್ರಾಮ ಮೊಗೇರಿಯಲ್ಲಿ ಪಡೆದುಕೊಂಡರು. ಪ್ರೌಢ ಶಿಕ್ಷಣವನ್ನು ಕಂಬದಕೋಣೆ, ಕಾಲೇಜು ನಾವುಂದ ಜೂನಿಯರ್ ಕಾಲೇಜು ಮತ್ತು ಜೂನಿಯರ್ ಕಾಲೇಜು ಬೈಂದೂರು, ಪದವಿ ಶಿಕ್ಷಣವನ್ನು ಸರಕಾರಿ ಮಹಾವಿದ್ಯಾಲಯ ಬೈಂದೂರಿನಲ್ಲಿ ಎ.ಎ, ಬಿಎಡ್ ಇನ್ ಸಂಸ್ಕೃತ ಮೈಸೂರು ವಿಶ್ವವಿದ್ಯಾಲಯದಲ್ಲಿ...
Loading posts...
All posts loaded
No more posts
