ಶ್ರೀ ಗುರು ರಾಘವೇಂದ್ರ ಜ್ಯುವೆಲ್ಲರ್ಸ್ ನಲ್ಲಿ ನೂತನ ಆಭರಣ ಸ್ಕೀಂ ಗೋಲ್ಡ್ ನಿಧಿ ಉದ್ಘಾಟನೆ

ಸುಳ್ಯದ ಪ್ರತಿಷ್ಠಿತ ಸ್ವರ್ಣಾಭರಣ ಸಂಸ್ಥೆ ಶ್ರೀ ಗುರು ರಾಘವೇಂದ್ರ ಜ್ಯುವೆಲ್ಲರ್ಸ್ ನವರ ನೂತನ ಆಭರಣ ಸ್ಕೀಂ ಗೋಲ್ಡ್ ನಿಧಿ ಯ ಉದ್ಘಾಟನೆ ಇಂದು ಸಂಸ್ಥೆಯ ಮಳಿಗೆಯಲ್ಲಿ ನಡೆಯಿತು. ಕೆಎಸ್ಎ ಕಾಮತ್ & ಸನ್ಸ್ ಮಾಲಕರು, ಉದ್ಯಮಿ ಸುಧಾಕರ ಕಾಮತ್ ಮತ್ತು ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎನ್ ಎ ರಾಮಚಂದ್ರ ದೀಪ ಬೆಳಗಿಸುವ ಮೂಲಕ ಉದ್ಘಾಟನೆ...

ಯೋಗೀಶ್ ಹಿರಿಯಡ್ಕ – ಸೌಮ್ಯ

ದೇವಚಳ್ಳ ಗ್ರಾಮದ ದೇವ ಹಿರಿಯಡ್ಕ ಮನೆ ಶ್ರೀಮತಿ ಪುಷ್ಪಾವತಿ ಮತ್ತು ಬಾಲಕೃಷ್ಣ ಗೌಡರ ಪುತ್ರ ಯೋಗೀಶ್ ರವರ ವಿವಾಹವು ಕಡಬ ತಾಲೂಕು ಕೊಯಿಲ ಗ್ರಾಮದ ಬುಡಲ್ಲೂರು ಖಂಡಿಗ ಮನೆ ಶ್ರೀಮತಿ ಸರೋಜಿನಿ ಮತ್ತು ತನಿಯಪ್ಪ ಗೌಡರ ಪುತ್ರಿ ಸೌಮ್ಯ ರೊಂಂದಿಗೆ ಸೆ.05 ರಂದು ಗುತ್ತಿಗಾರಿನ ದೀನ್ ದಯಾಳ್ ರೈತ ಸಭಾಭವನದಲ್ಲಿ ನಡೆಯಿತು.
Ad Widget

ಸುಬ್ರಹ್ಮಣ್ಯ ರೋಟರಿ ಕ್ಲಬ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇವುಗಳ ವತಿಯಿಂದ ಹಿರಿಯ ನಿವೃತ್ತ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ

ಶಿಕ್ಷಕರ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಸುಬ್ರಹ್ಮಣ್ಯ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಇವುಗಳ ವತಿಯಿಂದ ಇಂದು ಐದು ಹಿರಿಯ ನಿವೃತ್ತ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ ನಡೆಯಿತು. ವಿದ್ವಾನ್ ಕೇಶವ ಭಟ್, ರಾಮ ಶರ್ಮಾ, ದೊಡ್ಡಣ್ಣ ಗೌಡ, ಪುಂಗವ ಗೌಡ ಹಾಗೂ ಸುಬ್ರಾಯ ಗೌಡ ಇವರುಗಳನ್ನು ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಲಾಯಿತು. ಈ...

ಕಸಾಪ ವತಿಯಿಂದ ಶಿಕ್ಷಕ ದಿನಾಚರಣೆಯಂದು ಶಿಕ್ಷಕ ಸಾಹಿತಿಗಳಿಗೆ ಸನ್ಮಾನ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶಿಕ್ಷಕ ದಿನಾಚರಣೆಯ ಅಂಗವಾಗಿ ಶಿಕ್ಷಕ ಸಾಹಿತಿಗಳನ್ನು ಇಂದು ಗೌರವಿಸಲಾಯಿತು.ಸಾಹಿತ್ಯ ರಂಗದಲ್ಲಿ ಹೆಸರು ಮಾಡಿರುವ ನಿವೃತ್ತ ಶಿಕ್ಷಕರನ್ನು ಗುರುತಿಸಿ ಅವರನ್ನು ಗೌರವಿಸುವ ಪರಂಪರೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಳೆದ ವರ್ಷದಿಂದ ಆರಂಭಿಸಿದೆ.ಇಂದು ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಶಿಕ್ಷಕರಾದ ಶ್ರೀಮತಿ ಜಯಮ್ಮ ಚೆಟ್ಟಿಮಾಡ ಹಾಗೂ ಶ್ರೀಮತಿ...

ಕಲ್ಲುಗುಂಡಿಯಲ್ಲಿ ಹೋಟೆಲ್ ಸಮುದ್ರ ಶುಭಾರಂಭ

ಕಲ್ಲುಗುಂಡಿಯ ಮೀನು ಮಾರ್ಕೆಟ್ ಸಮೀಪ ಹೋಟೆಲ್ ಸಮುದ್ರ ಸೆ.05 ರಂದು ಶುಭಾರಂಭಗೊಂಡಿತು. ಇಲ್ಲಿ ಬಾಳೆಎಲೆ ಸಸ್ಯಹಾರ ಊಟ, ಮೀನಿನ ಊಟ ಹಾಗೂ ಉಪಹಾರ ಲಭ್ಯವಿದೆ ಎಂದು ಮಾಲಕರಾದ ಜಯಂತ ಹರ್ಲಡ್ಕ ತಿಳಿಸಿದ್ದಾರೆ.

ಗಣೇಶೋತ್ಸವ ಆಚರಣೆಗೆ ಹೊಸ ನಿಯಮ : ಸರ್ಕಾರದ ಹಿಂದೂ ವಿರೋಧಿ ಧೋರಣೆಗೆ ವೆಂಕಟ್ ವಳಲಂಬೆ ಖಂಡನೆ

ಸಾಮಾಜಿಕ ಚಳುವಳಿ,ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯನ್ನು ತುಂಬಿದ್ದ ಗಣೇಶೋತ್ಸವ ಆಚರಣೆಗೆ  ಸರ್ಕಾರ ಹೊಸ ನಿಯಮಗಳನ್ನು ತರುವ ಮೂಲಕ ಬಹುಸಂಖ್ಯಾತ ರ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆಂದು ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ. ದೇವರ ಪ್ರಸಾದ ಗಳಿಗೆ FSSAI ಪರವಾನಗಿ ಪಡೆದಿರುವ ವ್ಯಕ್ತಿ, ಸಂಸ್ಥೆಗಳಿಂದ ತಯಾರಿಸುವಂತೆ ಅಲ್ಲದೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಅತಿಥಿಗಳು, ಚಾಲಕರ ಸಂಪೂರ್ಣ ಮಾಹಿತಿ...

ಬೆಳ್ಳಾರೆಯಲ್ಲಿ ಸುಳ್ಯ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪದನಿಮಿತ್ತ ತಾಲೂಕು ಯೋಜನಾಧಿಕಾರಿ ಕಚೇರಿ ಸುಳ್ಯ ಸುಳ್ಯ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಆಶ್ರಯದಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಬೆಳ್ಳಾರೆಯ ಕೆ.ಪಿ.ಎಸ್‌ನಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದರು. ಪುತ್ತೂರು ಅಂಬಿಕಾ...

ಸುಳ್ಯ ತಹಶೀಲ್ದಾರ್ ಜಿ ಮಂಜುನಾಥ್ ಕನಕಪುರಕ್ಕೆ ವರ್ಗಾವಣೆ

ಸುಳ್ಯ ತಹಶೀಲ್ದಾರ್ ಆಗಿದ್ದ ಜಿ. ಮಂಜುನಾಥ್ ಅವರಿಗೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕು ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿದೆ.

ಬೆಳ್ಳಾರೆ: ಸುಪ್ರಭ ಜ್ಯುವೆಲ್ಲರಿಯಲ್ಲಿ ಶ್ರೀ ಮಹಾಗಣಪತಿಗೆ ಕೊಡಮಾಡಲ್ಪಟ್ಟ ಬೆಳ್ಳಿ ಕಿರೀಟದ ಹಸ್ತಾಂತರ

ವಿರಾಟ್ ಫ್ರೆಂಡ್ಸ್ ಬೆಳ್ಳಾರೆ ವತಿಯಿಂದ ದಾನಿಗಳ ಸಹಕಾರದಿಂದ ಶ್ರೀ ಮಹಾಗಣಪತಿಗೆ ಕೊಡಮಾಡಲ್ಪಟ್ಟ ಬೆಳ್ಳಿ ಕಿರೀಟವನ್ನು ಸುಪ್ರಭ ಜ್ಯುವೆಲ್ಲರ್ಸ್‌ ಮಾಲಕರಾದ ಸತ್ಯನಾರಾಯಣ ಆಚಾರ್ಯ ಮತ್ತು ಪ್ರಸಾದ್‌ ಆಚಾರ್ಯರವರು ವಿರಾಟ್ ಫ್ರೆಂಡ್ಸ್ ನ ಗೌರವಾಧ್ಯಕ್ಷ ಮಿಥುನ್ ಶೆಣೈ ಮತ್ತು ಅಧ್ಯಕ್ಷರಾದ ಸಂತೋಷ್ ಮಣಿಯಾಣಿ ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿರಾಟ್ ಫ್ರೆಂಡ್ಸ್ ನ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು. ಸೆ.07...

ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದ ಒಂದೇ ಕುಟುಂಬದ ಹತ್ತು ಶಿಕ್ಷಕರು

✍️ಉಲ್ಲಾಸ್ ಕಜ್ಜೋಡಿ“ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು” ಎನ್ನುವ ಮಾತಿದೆ. ಗುರಿ ನಮ್ಮನ್ನು ಜೀವನದಲ್ಲಿ ಯಶಸ್ವಿಯಾಗಿಸಿದರೆ ಗುರುಗಳು ಆ ನಮ್ಮ ಯಶಸ್ಸಿಗೆ ದಾರಿದೀಪವಾಗಿರುತ್ತಾರೆ.ಹಾಗೆಯೇ ವಿದ್ಯಾರ್ಥಿಗಳಿಗೆ ಜೀವನದ ಗುರಿ ತೋರುವ ದಾರಿದೀಪವಾಗಿ, ಮಾರ್ಗದರ್ಶಕರಾಗಿ ತಾವು ಕಲಿತದ್ದನ್ನು ತಮ್ಮ ವಿದ್ಯಾರ್ಥಿಗಳಿಗೆ ಧಾರೆಯೆರೆದು ಅವರ ಬದುಕನ್ನು, ಅವರ ಭವಿಷ್ಯವನ್ನು...
Loading posts...

All posts loaded

No more posts

error: Content is protected !!