ಮೆಸ್ಕಾಂ ಕಛೇರಿಯಲ್ಲಿ ಗಾಂಧಿಜಯಂತಿ ಆಚರಣೆ

ಸುಳ್ಯ ಮೆಸ್ಕಾಂ ಕಛೇರಿಯಲ್ಲಿ ಗಾಂಧಿಜಯಂತಿ ಆಚರಣೆ ನಡೆಯಿತು.‌ ಜೂನಿಯರ್ ಇಂಜಿನಿಯರ್ ಗಳಾದ ಮಹೇಶ್ ಕೆ. ದಿವ್ಯ, ಉಷಾ, ಮೇಲ್ವಿಚಾರಕರಾದ ಧರ್ಮಪಾಲ, ರಫೀಕ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಾಸ್ತ್ರೀಜಿ ಮತ್ತು ಗಾಂಧೀಜಿಯವರ ಆದರ್ಶಗಳನ್ನು ನಿತ್ಯ ಅಳವಡಿಸಿಕೊಳ್ಳೋಣ: ಡಾ|| ಚೂಂತಾರು

ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಕಛೇರಿ ಮೇರಿಹಿಲ್‍ನಲ್ಲಿ ದಿನಾಂಕ: 02-10-2024ರಂದು ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇವರು ಜಂಟಿಯಾಗಿ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಮತ್ತು ಗಾಂಧೀಜಿಯವರ ತ್ಯಾಗ, ಸೇವೆ ಹಾಗೂ ಬಲಿದಾನವನ್ನು...
Ad Widget

ಅರಂತೋಡು : ಎನ್.ಎಂ.ಪಿ‌.ಯು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾಗಿ  ಸೋಮಶೇಖರ ಪಿಂಡಿಮನೆ

ಪಾಪ್ಯುಲರ್ ಎಜುಕೇಶನ್ ಸೊಸೈಟಿ ( ರಿ )ಅರಂತೋಡು ಇದರ ಆಡಳಿತ ಒಳಪಟ್ಟ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಆರಂತೋಡು ಇದರ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾಗಿ  ಸೋಮಶೇಖರ.ಸರ್ ಪಿಂಡಿಮನೆ ಅಧಿಕಾರ ಸ್ವೀಕರಿಸಿದರು.

ಹರಿಹರ ಪಳ್ಳತ್ತಡ್ಕ : ಸಚಿನ್ ಕ್ರೀಡಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಜಗದೀಶ್ ವಾಡ್ಯಪ್ಪನಮನೆಕಾರ್ಯದರ್ಶಿಯಾಗಿ ದೀಕ್ಷಿತ್ ದೊಡ್ಡಕಜೆಕೋಶಾಧಿಕಾರಿಯಾಗಿ ಚೇತನ್ ಕಾಟೂರುಕ್ರೀಡಾ ಕಾರ್ಯದರ್ಶಿಯಾಗಿ ದಯಾನಂದ ಪರಮಲೆ ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಳ್ಳತ್ತಡ್ಕ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸೆ.29 ರಂದು ನಡೆಯಿತು.ಸಂಘದ ಗೌರವಾಧ್ಯಕ್ಷರಾಗಿ ಪ್ರದೀಪ್ ಕಜ್ಜೋಡಿ, ನೂತನ ಅಧ್ಯಕ್ಷರಾಗಿ ಜಗದೀಶ್ ವಾಡ್ಯಪ್ಪನಮನೆ, ಕಾರ್ಯದರ್ಶಿಯಾಗಿ ದೀಕ್ಷಿತ್ ದೊಡ್ಡಕಜೆ, ಕೋಶಾಧಿಕಾರಿಯಾಗಿ ಚೇತನ್ ಕಾಟೂರು, ಕ್ರೀಡಾ ಕಾರ್ಯದರ್ಶಿಯಾಗಿ...

ಗುತ್ತಿಗಾರು : ಭೂ ಸೇನೆಯ ಯೋಧ ತಿರುಮಲೇಶ್ವರ ಕೆ. ಸೇವಾ ನಿವೃತ್ತಿ

ಭೂ ಸೇನೆಯಲ್ಲಿ ಸೇವೆ ಸಲ್ಲಿಸಿದ ತಿರುಮಲೇಶ್ವರ ಕಡ್ತಲ್‌ಕಜೆ (ಅಬೀರ)ರವರು 24 ವರ್ಷಗಳ ಸೇವೆ ಸಲ್ಲಿಸಿ ಸೆ.30ರಂದು ಸೇವೆಯಿಂದ ನಿವೃತ್ತಿಗೊಂಡಿದ್ದಾರೆ.ಇವರು ತಮ್ಮ ವಿದ್ಯಾಭ್ಯಾಸವನ್ನು 1 ರಿಂದ 7ನೇ ತರಗತಿಯವರೆಗೆ ಪ್ರಾಥಮಿಕ ಶಾಲೆ ವಳಲಂಬೆಯಲ್ಲಿ, 8 ರಿಂದ ಪ್ರಥಮ ಪಿಯುಸಿಯನ್ನು ಗುತ್ತಿಗಾರು ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದರು. ಇವರು ಸೆ.2000ರಲ್ಲಿ ಪಿಯುಸಿ ಓದುತ್ತಿದ್ದಾಗಲೇ ಸೇನೆಗೆ ಆಯ್ಕೆಗೊಂಡರು.‌ ಒಟ್ಟು 24...

ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪುತ್ತೂರಿನ ಕಿಶೋರ್ ಬೊಟ್ಯಾಡಿ

ಕೋಟ ಶ್ರೀನಿವಾಸ ಪೂಜಾರಿಯವರ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದ್ದು ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಕಿಶೋರ್ ಕುಮಾರ್ ಬೊಟ್ಯಾಡಿ ಕಣಕ್ಕಿಳಿಸಲಾಗಿದೆ. ಪುತ್ತೂರಿನವರಾಗಿರುವ ಕಿಶೋರ್ ಕುಮಾ‌ರ್ ಅವರು ಬಿಜೆಪಿಯ ಯುವ ನಾಯಕರಾಗಿದ್ದು, ಈ ಹಿಂದೆ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೂ ಅವರ ಹೆಸರು ಕೇಳಿ ಬಂದಿತ್ತು.

ಕಸ ಎಸೆದ ಅಂಬಟೆಡ್ಕದ ಸ್ಟಿಕ್ಕರ್ ಕಟ್ಟಿಂಗ್ ಶಾಪ್ ನ ಮಾಲಕರಿಗೆ ರೂ. 5000 ದಂಡ

ಸುಳ್ಯ ಅಂಬಟೆಡ್ಕ ಬಳಿ  ಕಂಪ್ಯೂಟರೈಸ್ಡ್ ಸ್ಟಿಕರ್ ಕಟ್ಟಿಂಗ್ ಎಂಬ ಸಂಸ್ಥೆಯವರು ತಮ್ಮಲ್ಲಿಯ ಕಸದ ರಾಶಿಯನ್ನು ಅಂಬಟೆಡ್ಕ ಪ್ರೆಸ್ ಕ್ಲಬ್ ಬಳಿ ಬಿಸಾಕಿರುವುದಕ್ಕೆ ಸುಳ್ಯ ಪಟ್ಟಣ ಪಂಚಾಯತ್ ವತಿಯಿಂದ ಪರಿಶೀಲಿಸಿ 5000 ರೂ ದಂಡನೆ ವಿಧಿಸಲಾಯಿತು

ನಡುಗಲ್ಲು : ಜವಾಹರ್ ಯುವಕ ಮಂಡಲದ ವಾರ್ಷಿಕ ಮಹಾಸಭೆ

ನೂತನ ಅಧ್ಯಕ್ಷರಾಗಿ ಕುಶನ್ ಉತ್ರಂಬೆಕಾರ್ಯದರ್ಶಿಯಾಗಿ ಯನಿತ್ ಕುಮಾರ್ ಪಡ್ರೆ, ಕೋಶಾಧಿಕಾರಿ ಯುವರಾಜ ತಂಟೆಪ್ಪಾಡಿ ನಾಲ್ಕೂರು ಗ್ರಾಮದ ನಡುಗಲ್ಲಿನ ಜವಾಹರ್ ಯುವಕ ಮಂಡಲ(ರಿ.) ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡುಗಲ್ಲು ಶಾಲಾ ವಠಾರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಕುಶನ್ ಉತ್ರಂಬೆ ಹಾಗೂ ಕಾರ್ಯದರ್ಶಿಯಾಗಿ ಯನಿತ್ ಕುಮಾರ್ ಪಡ್ರೆ ಆಯ್ಕೆಯಾದರು.ಜೊತೆಗೆ ವಿವಿಧ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು,...

ಸೂರ್ಯಮನೆ ವಾಸುದೇವ ಗೌಡ ನಿಧನ

ಉಬರಡ್ಕ ಮಿತ್ತೂರು ಗ್ರಾಮದ ಸೂರ್ಯ ಮನೆ ವಾಸುದೇವ ಗೌಡರವರು ಸೆ. 29ರಂದು ಅಸೌಖ್ಯದಿಂದ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಯಮುನಾ, ಪುತ್ರರಾದ ಅಶೋಕ ಜೈಪ್ರಸಾದ್‌, ಸೊಸೆಯಂದಿರು, ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ

ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ಕಮಲಾಕ್ಷ ಆಚಾರ್ಯ ಗೂನಡ್ಕ, ಕಾರ್ಯದರ್ಶಿಯಾಗಿ ತೇಜಸ್ ಆಚಾರ್ಯ ಕಲ್ಕ , ಕೋಶಾಧಿಕಾರಿಯಾಗಿ ಗೋಪಾಲಕೃಷ್ಣ ಆಚಾರ್ಯ ಮರ್ಗಿಲಡ್ಕ

ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘ ಸುಳ್ಯ ತಾಲೂಕು ಇದರ ವಾರ್ಷಿಕ ಮಹಾಸಭೆಯು ತಾಲೂಕು ಸಮಿತಿಯ ಅಧ್ಯಕ್ಷರಾದ ವಾಸುದೇವ ಆಚಾರ್ಯ ಮರ್ಕಂಜ ಇವರ ಅಧ್ಯಕ್ಷತೆಯಲ್ಲಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ( ರಿ) ಬೆಳ್ಳಾರೆಯಲ್ಲಿ ಸೆ. 29 ರಂದು ನಡೆಯಿತು.ನೂತನ ಅಧ್ಯಕ್ಷರಾಗಿ ಕಮಲಾಕ್ಷ ಆಚಾರ್ಯ ಗೂನಡ್ಕ, ಕಾರ್ಯದರ್ಶಿಯಾಗಿ ತೇಜಸ್ ಆಚಾರ್ಯ ಕಲ್ಕ , ಕೋಶಾಧಿಕಾರಿಯಾಗಿ...
Loading posts...

All posts loaded

No more posts

error: Content is protected !!