ಕುಕ್ಕೆ ಸುಬ್ರಹ್ಮಣ್ಯ ಸಹಿತ ಉದ್ಘಾಟನೆ ಬಾಕಿ ಉಳಿದ ಠಾಣೆ ಮತ್ತು ವಸತಿ ಗೃಹಗಳ ಉದ್ಘಾಟನೆ ಬಹುತೇಕ ದಿನಾಂಕ ಅಂತಿಮ – ಎಸ್ ಪಿ ಯತೀಶ್ ಎನ್

ಕುಕ್ಕೆ ಸುಬ್ರಹ್ಮಣ್ಯ ಸಹಿತ ಉದ್ಘಾಟನೆ ಬಾಕಿ ಉಳಿದ ಠಾಣೆ ಮತ್ತು ವಸತಿ ಗೃಹಗಳ ಉದ್ಘಾಟನೆ ಬಹುತೇಕ ದಿನಾಂಕ ಅಂತಿಮಗೊಂಡಿದ್ದು ನ. ೩೦ ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ನಡೆಸಲಿರುವರು ಎಂದು ತಿಳಿಸಿದರು. ಅವರು ಸುಬ್ರಹ್ಮಣ್ಯ ಠಾಣೆಗೆ ಭೇಟಿ ನೀಡಿ ಮಾತನಾಡುತ್ತಾ ಕುಕ್ಕೆ ಜಾತ್ರೋತ್ಸವ ಕಾರ್ಯಕ್ರಮಗಳಿಗೆ ಬೇಕಾಗುವ ಎಲ್ಲಾ ಮಾದರಿಯ ಭದ್ರತಾ ಪರಿಶೀಲನೆ ಮತ್ತು ಪಾರ್ಕಿಂಗ್...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದಿನಿಂದ ಷಷ್ಠಿ ಮಹೋತ್ಸವ ಆರಂಭ

ರಾಮ ಲಕ್ಷ್ಮಣ ಕೊಪ್ಪರಿಗೆ ಏರುವ ಕಾರ್ಯಕ್ರಮ ಇಂದು ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವನಡೆಯಲಿದೆ. ನ.30- ಲಕ್ಷದೀಪೋತ್ಸವ,ಡಿ.01- ಶೇಷವಾಹನೋತ್ಸವ,ಡಿ.02- ಅಶ್ವವಾಹನೋತ್ಸವ, ಡಿ.03- ಮಯೂರ ವಾಹನೋತ್ಸವ, ಡಿ.04- ಶೇಷವಾಹನೋತ್ಸವ,, ಡಿ.05- ಹೂವಿನ ತೇರಿನ ಉತ್ಸವ, ಡಿ.06- ಪಂಚಮಿ ರಥೋತ್ಸವ,, ಡಿ.07- ಪ್ರಾತಃ ಕಾಲ ಚಂಪಾಷಷ್ಠಿ ಮಹಾರಥೋತ್ಸವ,ಡಿ.08- ರಂದು ಅವಭ್ರತೋತ್ಸವ, ನೌಕಾವಿಹಾರ, ನಡೆದು ಡಿ.12- ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ...
Ad Widget

ಅಕ್ರಮ ಸಕ್ರಮ ಸಮಿತಿ ಮುಂದೆ ಪ್ರಸ್ತಾಪವಿಲ್ಲ ಸ್ಥಳ ಪರಿಶೀಲನೆ ಮಾಡದೆ ಅರ್ಜಿ ತಿರಸ್ಕಾರ

ಅಕ್ರಮ ಸಕ್ರಮ ಷರತ್ತು ಸಡಿಲಿಸಲು : ಮುಳಿಯ ಕೇಶವ ಭಟ್ ಮನವಿ ಸರ್ಕಾರದ ಅಕ್ರಮ-ಸಕ್ರಮ ಯೋಜನೆಯ ಷರತ್ತುಗಳನ್ನು ಸಡಿಲಿಸಿ ಯೋಜನೆಯ ಪ್ರಯೋಜನಗಳಿಂದ ರೈತರು ವಂಚಿತರಾಗದಂತೆ ಮಾಡಬೇಕೆಂದು ಸರ್ಕಾರಕ್ಕೆ ತಾ.ಪಂ ಮಾಜಿ ಅಧ್ಯಕ್ಷ ಹಾಗೂ ಭಾರತೀಯ ಮಂಡಳಿಯ ನಿರ್ದೇಶಕ ಮುಳಿಯ ಮನವಿ ಮಾಡಿದ್ದಾರೆ. ಅರ್ಜಿದಾರರು (ನಮೂನೆ-50.53 ರಡಿ ಅರ್ಜಿ ಸಲ್ಲಿಸಿ ಕೃತಾವಳಿ ಮಾಡಿರುವ ಜಮೀನು ಮಂಜೂರಾಗದೇ ಇದ್ದರೂ)...

ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲೆಂದು ಬಂದಿದ್ದ ಅಡ್ಕಾರಿನ ವ್ಯಕ್ತಿ ಕುಸಿದು ಬಿದ್ದು ಮೃತ್ಯು.‌

ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲೆಂದು ಬಂದಿದ್ದ ಅಡ್ಕಾರಿನ ವ್ಯಕ್ತಿಯೊಬ್ಬರು ಸುಳ್ಯ ತಾಲೂಕು ಕಚೇರಿಯ ಪಡಶಾಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಇದೀಗ ವರದಿಯಗಿದೆ. ಅಡ್ಕಾರಿನ ರಾಘವ ಆಚಾರ್ಯ (65 ವರ್ಷ) ಎಂಬವರು ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲೆಂದು ಇಂದು ಸುಳ್ಯ ತಾಲೂಕು ಕಚೇರಿಯ ಪಡಶಾಲೆಗೆ ಬಂದಿದ್ದರು. ಅರ್ಜಿ ಸ್ವೀಕರಿಸಿದ ಅಲ್ಲಿನ ಸಿಬ್ಬಂದಿ ಒಟಿಪಿ ಬರುವವರೆಗೆ ಕುಳಿತುಕೊಳ್ಳಿ...

ವಿಜಯಲಕ್ಷ್ಮಿ ಕೀಲಾರು ನಿಧನ

ಸಂಪಾಜೆ ಗ್ರಾಮದ ಕಲ್ಲುಗುಂಡಿ ದಿ. ಡಾ. ಕೀಲಾರು ಗೋಪಾಲಕೃಷ್ಣಯ್ಯ ಅವರ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ನ.26ರಂದು ಸಂಜೆ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ರಾಜಾರಾಮ ಕೀಲಾರು, ಪುತ್ರಿ ಸುಮನ, ಅಳಿಯ ಡಾ. ಶ್ಯಾಮ್ ಭಟ್, ಸೊಸೆ ಮಮತ, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.

ಕುಕ್ಕೆ ಜಾತ್ರೋತ್ಸವದ ಅಂಗವಾಗಿ ಮೂಲಮೃತಿಕೆ ಪ್ರಸಾದ ವಿತರಣೆ

ಸುಬ್ರಹ್ಮಣ್ಯ ನ.26: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನ.27ರಿಂದ ಡಿ.12ರವರೆಗೆ ನಡೆಯಲಿದ್ದು, ನ.26 ರಂದು ಶುದ್ಧ ಏಕಾದಶಿ ದಿನದಂದು ಪೂರ್ವಶಿಷ್ಟ ಸಂಪ್ರದಾಯದಂತೆ ಶ್ರೀ ಕ್ಷೇತ್ರದ ಮುಖ್ಯಪುರೋಹಿತರಾದ ಸೀತಾರಾಮ ಎಡಪಡಿತ್ತಾಯ ಅವರು ಶ್ರೀದೇವಳದ ಗರ್ಭಗುಡಿಗೆ ಪ್ರವೇಶಿಸಿ ಗಂಟೆ 11:20ಕ್ಕೆ ಹೊರಬಂದು ಭಕ್ತರಿಗೆ ಮೂಲಮೃತಿಕ ಪ್ರಸಾದವನ್ನು ವಿತರಿಸಿದರು.ಈ ಸಂದರ್ಭದಲ್ಲಿ ಕುಕ್ಕೆ ಶ್ರೀ...

ಅರಂತೋಡು: ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡುನಲ್ಲಿ ಸಂವಿಧಾನ ದಿನಾಚರಣೆ

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು.ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಸಂವಿಧಾನ ದಿನಾಚರಣೆಯ ಮಹತ್ವ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಕೊಡುಗೆಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಎಲ್ಲಾ ವಿದ್ಯಾರ್ಥಿಗಳು ಮತ್ತು ಎಲ್ಲಾ ಭೋದಕ ಮತ್ತು ಬೋಧಕೇತರ ಸಿಬ್ಬಂದಿಗಳು ಸಾಮೂಹಿಕವಾಗಿ ಓದಿದರು.

ನ.27 ರಿಂದ ಡಿ 2 ರ ತನಕ ಶಾಸಕಿ ಭಾಗೀರಥಿ ಮುರುಳ್ಯ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಿಗೆ ಅಧ್ಯಯನ ಪ್ರವಾಸ

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ನ.27 ರಿಂದ ಡಿ.2ರ ತನಕ ವಿಧಾನ ಸಭೆಯ ವಸತಿ ಸೌಕರ್ಯಗಳ ಸಮಿತಿಯ ವತಿಯಿಂದ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ. ಉಪ ಸಭಾಧ್ಯಕ್ಷರು ಹಾಗೂ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ ನೇತೃತ್ವದಲ್ಲಿ ಸಮಿತಿ ಸದಸ್ಯರಾದ ಶಾಸಕಿ ಭಾಗೀರಥಿ ಮುರುಳ್ಯ ಸೇರಿ ಒಟ್ಟು...

ಪಂಬೆತ್ತಾಡಿ : ಚಿಗುರು ಗೆಳೆಯರ ಬಳಗ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ಅಶ್ವಥ್ ಬಾಬ್ಲುಬೆಟ್ಟು, ಕಾರ್ಯದರ್ಶಿಯಾಗಿ ರಮೇಶ್ ಮಡಿವಾಳಮಜಲು, ಖಜಾಂಜಿಯಾಗಿ ತೀರ್ಥೆಶ್ ಮಡಪ್ಪಾಡಿ

ಚಿಗುರು ಗೆಳೆಯರ ಬಳಗ ಪಂಬೆತ್ತಾಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು, ನ.24 ರಂದು ಪದಗ್ರಹಣ ಕಾರ್ಯಕ್ರಮ ನಡೆಯಿತು.ಗೌರವಾಧ್ಯಕ್ಷರಾಗಿ ಶ್ರೀನಿವಾಸ ಬಿ., ನೂತನ ಅಧ್ಯಕ್ಷರಾಗಿ ಅಶ್ವಥ್ ಬಾಬ್ಲುಬೆಟ್ಟು, ಕಾರ್ಯದರ್ಶಿಯಾಗಿ ರಮೇಶ್ ಮಡಿವಾಳಮಜಲು, ಉಪಾಧ್ಯಕ್ಷರಾಗಿ ಶರಣ್ಯಕುಮಾರ್ ಮಡಪ್ಪಾಡಿ, ಜತೆಕಾರ್ಯದರ್ಶಿ ಮೋಹನ್ ದಾಸ್ ಮಡಿವಾಳ ಮಜಲು, ಖಜಾಂಜಿಯಾಗಿ ತೀರ್ಥೆಶ್ ಮಡಪ್ಪಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ರಂಜಿತ್ ಶೆಟ್ಟಿಗದ್ದೆ, ಕ್ರೀಡಾ...

ಅಲಂಕಾರು ಎಸ್.ಎಚ್ ಸ್ಪೋರ್ಟ್ಸ್ ಝೋನ್ ಶುಭಾರಂಭ

ಅಲಂಕಾರು ಸಿ.ಎ ಬ್ಯಾಂಕ್ ಸಮೀಪದ ಲಕ್ಷ್ಮಿ ರಾಮ್ ಕಾಂಪ್ಲೆಕ್ಸ್ ನಲ್ಲಿ ಶರೀಫ್.ಬಿ.ಹೆಚ್ ಮಾಲೀಕತ್ವದ ಎಸ್.ಎಚ್ ಸ್ಪೋರ್ಟ್ಸ್ ಝೋನ್ ಶುಭಾರಂಭಗೊಂಡಿತ್ತು.ಇಲ್ಲಿ ಎಲ್ಲಾ ತರದ ಸ್ಪೋರ್ಟ್ಸ್ ಐಟಂಗಳು ,ವಿನೂತನ ಶೈಲಿಯ ಟ್ರೋಫಿಗಳು ,ನಿಮ್ಮ ಕನಸಿನ ಅತ್ಯಾಕರ್ಷಕ ವಿನ್ಯಾಸದ ಕಸ್ಟಮೈಸ್ ಜರ್ಸಿಗಳು,ಮನಮೋಹಕ ಶೈಲಿಯ ಕಸ್ಟಮೈಸ್ ಮೆಮೆಂಟೋಗಳು,ಸನ್ಮಾನ ಕಾರ್ಯಕ್ರಮದ ವಸ್ತುಗಳು,ಶಾಲಾ ಕಾಲೇಜುಗಳ ಕ್ರೀಡಾ ಸಾಮಾಗ್ರಿಗಳು,ಮಕ್ಕಳ ಕ್ರೀಡಾ ಸಮವಸ್ತ್ರಗಳು,ಫೋಟೋ ಫ್ರೇಮ್ ಗಳು ಮತ್ತು...
Loading posts...

All posts loaded

No more posts

error: Content is protected !!