ಹರಿಹರ ಪಳ್ಳತ್ತಡ್ಕ : ಆನೆ ದಾಳಿ – ಕೃಷಿ ನಾಶ

ಹರಿಹರ ಪಳ್ಳತ್ತಡ್ಕ ಗ್ರಾಮದ ಕಜ್ಜೋಡಿ ಶರತ್ ಭಾಗವತ್ ಎಂಬುವವರ ತೋಟಕ್ಕೆ ನ.30 ರಂದು ರಾತ್ರಿ ಆನೆ ದಾಳಿ ನಡೆಸಿದ್ದು, ಅಡಿಕೆ, ತೆಂಗು, ಬಾಳೆ, ಸ್ಪ್ರಿಂಕ್ಲರ್ ಹಾಗೂ ತೋಟದ ರಕ್ಷಣೆಗಾಗಿ ಅಳವಡಿಸಿದ್ದ ಬೇಲಿಯನ್ನು ಹಾಳುಗೆಡವಿದೆ ಎಂದು ತಿಳಿದುಬಂದಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

ಸುಳ್ಯ: ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಫುಡ್ ಫೆಸ್ಟ್ ಕಾರ್ಯಕ್ರಮ

ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಬೆಳ್ಳಿ ಹಬ್ಬದ ಕಾರ್ಯಕ್ರಮದ ಪ್ರಯುಕ್ತ ನ.30ರಂದು  ವಿದ್ಯಾರ್ಥಿಗಳಿಗೆ ಆಹಾರ ಮೇಳವನ್ನು ಏರ್ಪಡಿಸಲಾಯಿತು. ಆಹಾರ ಮೇಳದ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ ' ಸೋಜ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶಶಿಧರ ಎಂ .ಜೆ, ಪೂರ್ವ ಪ್ರಾಥಮಿಕ ಶಾಲಾ...
Ad Widget

ಸುಳ್ಯ:ಡಿ.08 ರಂಗಮನೆಯಲ್ಲಿ ಶಾಸ್ತ್ರೀಯ ಸಂಗೀತ ಸಂಭ್ರಮ ಮತ್ತು ಸಾತ್ವಿಕ ವೀಣಾ ವಾದನ ಕಾರ್ಯಕ್ರಮ

ಹಳಗೇಟು ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ದಲ್ಲಿ ಡಿಸೆಂಬರ್ 8 ರಂದು ಭಾನುವಾರ ಸಂಜೆ ಗಂಟೆ 5:45 ರಿಂದ ರಾತ್ರಿ 8:15ರ ವರೆಗೆ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ಸುಳ್ಯ ಮತ್ತು ಮಹಾಬಲ ಲಲಿತಕಲಾ ಸಭಾ ಪುತ್ತೂರು ಇದರ ಸಹಯೋಗದಲ್ಲಿ ಶಾಸ್ತ್ರೀಯ ಸಂಗೀತ ಸಂಭ್ರಮ ನಡೆಯಲಿದೆ ಪ್ರಸಿದ್ಧ ಪದ್ಮಭೂಷಣ ಪಂಡಿತ್ ವಿಶ್ವ ಮೋಹನ್ ಭಟ್ ರವರ ಪುತ್ರ...

ಮಂಡೆಕೋಲು : ಅರೆಭಾಷೆ ಗಡಿನಾಡ ಉತ್ಸವಕ್ಕೆ ಚಾಲನೆ – ಅದ್ದೂರಿ ಮೆರವಣಿಗೆ

ಕರ್ನಾಟಕ ಅರೆಬಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಂಡೆಕೋಲು ಗ್ರಾಮ ಗೌಡ ಸಮಿತಿ ಇವರ ಸಹಕಾರದಲ್ಲಿ ಅರೆಭಾಷೆ ಗಡಿನಾಡ ಉತ್ಸವಕ್ಕೆ ಇಂದು ಮಂಡೆಕೋಲು ಸಾಕ್ಷಿಯಾಗಿದೆ. ಮಂಡೆಕೋಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 'ಅಮೃತ ಸಭಾಭವನದಲ್ಲಿ ಅದ್ದೂರಿ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ಜಾಕೆ ಸದಾನಂದ ಗೌಡ ಕಾರ್ಯಕ್ರಮ ಉದ್ಘಾಟಿಸಿದರು....

ಗುತ್ತಿಗಾರು ಕಂದ್ರಪ್ಪಾಡಿ ಮಡಪ್ಪಾಡಿ ರಸ್ತೆಯಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆ ಉದ್ಘಾಟನೆ

ಗುತ್ತಿಗಾರು - ಕಂದ್ರಪ್ಪಾಡಿ- ಮಡಪ್ಪಾಡಿ ರಸ್ತೆಯ ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಎಂಬಲ್ಲಿ ಮಾಜಿ ಸಚಿವರು ಎಸ್. ಅಂಗಾರ ರವರು ಸಲ್ಲಿಸಿದ ಬೇಡಿಕೆಗೆ ಮಾಜಿ ರಾಜ್ಯಾಧ್ಯಕ್ಷರು,ಮಾಜಿ ಸಂಸದರು ಮಾಡಿದ ಶಿಪಾರಸ್ಸಿನಂತೆ ಮಂಜೂರಾತಿಗೊಂಡು ಟೆಂಡರ್ ಆಗಿ ಅನುಷ್ಠಾನ ಪ್ರಕ್ರಿಯೆ ಸರಕಾರ ಬದಲಾವಣೆಯಿಂದ ತಡೆಹಿಡಿಯಲ್ಪಟ್ಟ ಕಾಮಗಾರಿ ಇದೀಗ ಶಾಸಕಿ ಕು. ಭಾಗೀರಥಿ ಮುರುಳ್ಯ ಹಾಗೂ ಸಂಸದರು ಕ್ಯಾ. ಬ್ರಿಜೇಶ್ ಚೌಟ...

ಮಣಿಪಾಲದ ಕವಿಗೋಷ್ಠಿಗೆ ಅಧ್ಯಕ್ಷರಾಗಿ ಸುಳ್ಯದ ಸಾಹಿತಿ ಭೀಮರಾವ್ ವಾಷ್ಠರ್

ಉಡುಪಿ ಮಣಿಪಾಲದ ನಚಿಕೇತ ಸಭಾಂಗಣದಲ್ಲಿ ಬತ್ತದ ತೊರೆ ಸ್ನೇಹ ಬಳಗದ ವತಿಯಿಂದ ನಡೆದ ಕವಿ ಸಮ್ಮೇಳನ 2024 ಇದರ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸುಳ್ಯದ ಖ್ಯಾತ ಕವಿ ಎಚ್. ಭೀಮರಾವ್ ವಾಷ್ಠರ್ ರವರು ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕವನ ವಾಚನ ಮಾಡಿದ 30 ಜನ ಕವಿಗಳ ಕವನಗಳನ್ನು ವಿಮರ್ಶೆ ಮಾಡಿ ಅಧ್ಯಕ್ಷ ಭಾಷಣವನ್ನು ಮಾಡಿದರು. ನಂತರ ಬತ್ತದ...

ಕುಕ್ಕೆ ಸುಬ್ರಹ್ಮಣ್ಯ ಠಾಣೆ , ಬೆಳ್ಳಾರೆ ವಸತಿ ಸಮುಚ್ಚಯ ಸಹಿತ ಜಿಲ್ಲೆಯ ನೂತನ ಕಟ್ಟಡಗಳ ಉದ್ಘಾಟನೆ

ಮಂಗಳೂರು : ನ.30 ರಂದು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಬಂಟ್ವಾಳ ಸಂಚಾರ ಠಾಣೆ ಮತ್ತು ಸುಬ್ರಮಣ್ಯ ಠಾಣೆಯ ನೂತನ ಕಟ್ಟಡಗಳನ್ನು ಹಾಗೂ ಬೆಳ್ಳಾರೆ ಠಾಣಾ ನೂತನ ವಸತಿ ಸುಮುಚ್ಚಯವನ್ನು ಗೃಹ ಸಚಿವರಾದ ಜಿ ಪರಮೇಶ್ವರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಶ್ಚಿಮ ವಲಯ ಪೊಲೀಸ್ ಉಪಮಹಾನಿರೀಕ್ಷಕರಾದ ಅಮಿತ್ ಸಿಂಗ್, ಐ.ಪಿ.ಎಸ್, ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್...

ಗ್ರಾಮ ಪಂಚಾಯತ್ ಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪಂಚಾಯತ್ ರಾಜ್ ಸಮಾವೇಶ ನಡೆಸಲು ತೀರ್ಮಾನ – ಒಕ್ಕೂಟದ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು

ಗ್ರಾಮ ಪಂಚಾಯಿತಿಗಳು ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳಿಗೆ ಮತ್ತು ಅನುದಾನದ ಕೊರತೆಗಳಿಗಾಗಿ ಪಂಚಾಯಿತಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಂದ ಆಯ್ಕೆಯಾದ ಅವಿಭಜಿತ ದ. ಕ. ಜಿಲ್ಲೆಯ ಎರಡು ಜನ ವಿಧಾನ ಪರಿಷತ್ತಿನ ಸದಸ್ಯರು ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರೊಂದಿಗೆ ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಸದಸ್ಯರೊಳಗೂಡಿ ಮುಖಮುಖಿ ಚರ್ಚೆ...

ಗಾಂಜ ಸೇವನೆ ಹಾಗೂ ಮಾರಾಟಗಾರರ ಬಂಧಿಸಿದ ಸುಳ್ಯ ಪೋಲೀಸರು

ಸುಳ್ಯ : ಸುಳ್ಯ ಜಯನಗರದಲ್ಲಿ ನಿಷೇಧಿತ ಅಮಲು ಪದಾರ್ಥಗಳಾದ ಗಾಂಜ ಸೇವನೆ ಮತ್ತು ಮಾರಾಟ ಮಾಡುತ್ತಿರುವವರ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಕರೆತಂದಿದ್ದು ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಆರೋಪಿತರ ಆರೋಗ್ಯ ತಪಾಸಣೆ ವರದಿ ಬಂದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎಂದು ತಿಳಿದು ಬಂದಿದ್ದು ಈ...

ಡಿ.07 ರಂದು ದೀನದಯಾಳ್‌ ಸಹಕಾರ ಸಂಘದ ನೂತನ ಕಛೇರಿ ಉದ್ಘಾಟನೆ – ನಡೆದು ಬಂದ ಹಾದಿಯನ್ನು ವಿವರಿಸಿದ ಸಂಘದ ಅಧ್ಯಕ್ಷ, ಮಾಜಿ ಸಚಿವ ಎಸ್ ಅಂಗಾರ

ಪರಿಶಿಷ್ಟ ಜಾತಿ ಮುಗೇರ ಜನಾಂಗದ ಕುಲದೈವ ಗಡಿ ಮೊಗೇರ್ಕಳ ದೈವಗಳ ಆರಾಧನೆ ಹಾಗೂ ಭವಿಷ್ಯದಲ್ಲಿ ಸಮಾಜದಲ್ಲಿ, ಜನಾಂಗದ ವಿಶ್ವಾಸವನ್ನು ಉಳಿಸಿಕೊಳ್ಳುವ ಉದ್ದೇಶದಿಂದ 2004-05 ರಲ್ಲಿ ದೀನ ದಯಾಳ್ ಎಜ್ಯುಕೇಶನಲ್ ರೂರಲ್ & ಅರ್ಬನ್ ಡೆವಲಪ್‌ಮೆಂಟ್ ಟ್ರಸ್ಟ್ (ರಿ.) ಅನ್ನು ರಚನೆ ಮಾಡಲಾಯಿತು. ಇದರ ಮೂಲಕ ದಾಸನಕನೆಯಲ್ಲಿ ಮೊಗೇರ್ಕಳ ದೈವದ ಗುಡಿ ನಿರ್ಮಾಣ, ಬ್ರಹ್ಮದೇವರ ಗುಂಡ ನಿರ್ಮಾಣ...
Loading posts...

All posts loaded

No more posts

error: Content is protected !!