ಲಕ್ಷ ಹಣತೆ ದೀಪಗಳ ನಡುವೆ ಕುಕ್ಕೆಯಲ್ಲಿ ಭಕ್ತಿ ಸಡಗರದ ಲಕ್ಷದೀಪೋತ್ಸವ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ವೈಭವದ ಲಕ್ಷದೀಪೋತ್ಸವ ನೆರವೇರಿತು. ಸಾಲು ಸಾಲು ಹಣತೆ ದೀಪಗಳ ನಡುವೆ ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಭಕ್ತಿ-ಸಡಗರದಿಂದ ನಡೆಯಿತು. ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು.ಶ್ರೀ ದೇವಳದ ಅರ್ಚಕರು ಉತ್ಸವದ ವಿದಿ ವಿಧಾನ ನೆರವೇರಿಸಿದರು. ರಥಬೀದಿಯಿಂದ...

ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಪ್ರಯೋಗಾಲಯ ವೀಕ್ಷಣೆ,ಮಾಹಿತಿ ಸಂಗ್ರಹಣೆ

ಸುಬ್ರಹ್ಮಣ್ಯ ಡಿ1: ಕುಮಾರಸ್ವಾಮಿ ಪದವಿಪೂರ್ವ ಕಾಲೇಜಿನಲ್ಲಿ ಕಡಬ ಸುಳ್ಯ ಮತ್ತು ಪುತ್ತೂರು ತಾಲೂಕುಗಳ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿ, ತಾವೇ ಸ್ವತಃ ಪ್ರಯೋಗಗಳನ್ನು ಕೈಗೊಳ್ಳಲು ಅನುಕೂಲ ಹೊಂದಿದ್ದು ನೂತನ ಆವಿಷ್ಕಾರಗಳನ್ನು ಮಾಡಲು ಪ್ರೆರೇಪಿಸುವ ವಿಶಿಷ್ಟ ಪ್ರಯೋಗಾಲಯ ದ ವೀಕ್ಷಣೆ ಹಾಗೂ ಮಾಹಿತಿ ಸಂಗ್ರಹಣೆಯನ್ನುಶನಿವಾರ ಏನೆಕಲ್ಲು ಪ್ರೌಢಶಾಲಾ 8ನೇ ತರಗತಿಯ ವಿದ್ಯಾರ್ಥಿಗಳು ಪಡಕೊಂಡರು....
Ad Widget

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಬಾನಡ್ಕ ಶಾಲೆಗೆ ಪ್ರಿಂಟರ್ ಕೊಡುಗೆ

ಸುಬ್ರಹ್ಮಣ್ಯ ಡಿ.1 :ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಏನೆಕಲ್ಲು ಬಾನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಪ್ರಿಂಟರ್ ನ್ನು ಶುಕ್ರವಾರ ಕೊಡುಗೆಯಾಗಿ ನೀಡಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಶಾಲಾ ಮೇಲುಸ್ತುವಾರಿ ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ...

ಪೈಚಾರು ಹೊಟೇಲ್ ನಲ್ಲಿ ಕಳ್ಳತನ : ಆರೋಪಿಯನ್ನು ಶೀಘ್ರ ಪತ್ತೆ ಹಚ್ಚುವಂತೆ ಸ್ಥಳೀಯರಿಂದ ಪೊಲೀಸರಿಗೆ ಮನವಿ

ಪೈಚಾರು ಹೊಟೇಲ್ ಕಳ್ಳತನ ದ ಆರೋಪಿಯನ್ನು ಶೀಘ್ರವಾಗಿ ಕಂಡು ಹಿಡಿದು ಕಾನೂನು ಕ್ರಮ ಕೈ ಗೊಳ್ಳುವಂತೆ ಡಿ. 1 ರಂದು ಸಂಜೆ ಪೈಚಾರ್ ಆರ್ ಬಿ ಬಶೀರ್ ನೇತೃತ್ವ ದಲ್ಲಿ ಸ್ಥಳೀಯ ಸುಮಾರು 15ಕ್ಕೂ ಹೆಚ್ಚು ಮಂದಿ ಸುಳ್ಯ ಠಾಣೆಗೆ ಬಂದು ಮನವಿ ನೀಡಿದರು ಸ್ಥಳೀಯರ ಮನವಿ ಹಾಗೂ ಹೊಟೇಲ್ ಮಾಲಕ ಕರೀಂ ರವರು ನೀಡಿದ...

ಸುಳ್ಯದಲ್ಲಿ ನೆಲೆಸಿದ್ದ ದಾವಣಗೆರೆ ಮೂಲದ ಮಹಿಳೆ ನಾಪತ್ತೆ – ಪತಿಯಿಂದ ದೂರು

ಸುಳ್ಯದಲ್ಲಿ ಕಳೆದ ನಾಲ್ಕು ತಿಂಗಳಿಂದ ಕೆ.ಎಂ. ವಿಕ್ರಮ್ ಎಂಬವರು ನೆಲೆಸಿ, ಕೂಲಿ ಮಾಡಿಕೊಂಡಿದ್ದು, ನ.7 ರಂದು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಮೂಲದ ಮಂಗಳ ಯಾನೆ ಕಾವ್ಯ ಎಂಬಾಕೆಯನ್ನು ವಿವಾಹವಾಗಿದ್ದರು. ನ.20 ರಂದು ಈಕೆ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುತ್ತೇನೆ ಎಂದು ಹೋದವರು ನಾಪತ್ತೆಯಾಗಿದ್ದಾಳೆ ಎಂದು ಸುಳ್ಯ ಪೋಲೀಸರಿಗೆ  ಪತಿ ವಿಕ್ರಮ್ ದೂರಿನಲ್ಲಿ ತಿಳಿಸಿದ್ದಾರೆ. ಈಕೆ...

ಸುಳ್ಯದಲ್ಲಿ ದಿನ ನಿತ್ಯ ಕಳ್ಳತನ , ತರಕಾರಿ ಅಂಗಡಿಗೆ ನುಗ್ಗಿದ ಕಳ್ಳ

ಸುಳ್ಯದ ನಗರ ವ್ಯಾಪ್ತಿಯ ಅಂಗಡಿಗಳಲ್ಲಿ ಪ್ರತಿನಿತ್ಯ ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದ್ದು ಅದೇ ರೀತಿಯಲ್ಲಿ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ತರಕಾರಿ ಅಂಗಡಿಗೆ ಕಳ್ಳ ನುಗಿದ್ದು, ಚಿಲ್ಲರೆ ಹಣವನ್ನು ಎಗರಿಸಿ, ತಾನು ತಂದಿದ್ದ ಮದ್ಯದ ಪ್ಯಾಕೆಟ್ ಅಲ್ಲಿಯೇ ಬಿಟ್ಟು ಹಿಂತಿರುಗಿದ ಘಟನೆ ವರದಿಯಾಗಿದೆ. ಕಳೆದ ಒಂದು ವಾರದಲ್ಲಿ ಸುಳ್ಯ, ಪೈಚಾರು, ಅಡ್ಕಾರ್, ಬೆಳ್ಳಾರೆ ಮುಂತಾದ...

ಕುಕ್ಕೆ ಸುಬ್ರಹ್ಮಣ್ಯ : ಜಾತ್ರೋತ್ಸವದ ಸಂಧರ್ಭದಲ್ಲಿ ಪ್ರತ್ಯಕ್ಷಗೊಂಡ ಕಾಡಾನೆ, ಕಾಡಾನೆ ಕಂಡು ಬಂದಲ್ಲಿ ತಿಳಿಸಿ ; ಎಸಿ ಜುಬಿನ್ ಮೊಹಪಾತ್ರ.

ರವಿವಾರ ಸಂಜೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿ ಕಾಡಾನೆಯೊಂದು ಸಂಚರಿಸಿದ್ದು, ಇದರ ಮಾಹಿತಿ ಬೆನ್ನಲ್ಲೇ ಅರಣ್ಯ ಇಲಾಖೆ ಸ್ಥಳ ಪರಿಶೀಲನೆ ನಡೆಸಿದ್ದು, ಕಾಡಾನೆ ಅರಣ್ಯದೊಳಗೆ ಸೇರಿರುವ ಬಗ್ಗೆ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕಾಡಾನೆ ಮೇಲೆ ನಿಗಾ ಇಡಲು ಅರಣ್ಯ ಇಲಾಖೆ ತಂಡ ರಚಿಸಿದೆ. ಕಾಡಾನೆ ಕಂಡುಬಂದಲ್ಲಿ ಸಾರ್ವಜನಿಕರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಪುತ್ತೂರು ಸಹಾಯಕ ಆಯುಕ್ತ,...

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಈ ಬಾರಿ ಸಮನ್ವಯ ಸಹಕಾರಿ ಬಳಗದ ಸದಸ್ಯರಿಂದ ಸ್ಪರ್ಧೆ : ಕೆ.ಪಿ.ಜಗದೀಶ್

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಈ ಬಾರಿಯ ಚುನಾವಣೆಗೆ ನೂತನವಾಗಿ ರೂಪಿಸಲ್ಪಟ್ಟಿರುವ ಸಮನ್ವಯ ಸಹಕಾರಿ ಬಳಗದ ಸದಸ್ಯರುಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಸಂಪಾಜೆ ಸೊಸೈಟಿ ಮಾಜಿ ಅಧ್ಯಕ್ಷ ಜಗದೀಶ್ ಕೆ.ಪಿ. ತಿಳಿಸಿದ್ದಾರೆ. ನ.30 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು “ಸುಳ್ಯ ತಾಲೂಕಿನ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ...

ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳು ಬಾಳಿಲ- ಸಂಯುಕ್ತ ಕ್ರೀಡೋತ್ಸವ

ವಿದ್ಯಾಬೋಧಿನೀ ವಿದ್ಯಾಸಂಸ್ಥೆ ಬಾಳಿಲದಲ್ಲಿ ನವೆಂಬರ್ 29 ಮತ್ತು 30ರಂದು ಸಂಯುಕ್ತ ಕ್ರೀಡೋತ್ಸವ ನಡೆಯಿತು. ಗತಕಾಲದಲ್ಲಿ ಉತ್ತಮ ಕ್ರೀಡಾ ಪ್ರತಿಭೆ ರೂಪಿಸಿದ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಕ್ರೀಡಾಪಟುಗಳು ರೂಪುಗೊಳ್ಳಲಿ ಎಂದು ಸುಧಾಕರ ರೈ ಬಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ರಾಷ್ಟ್ರೀಯ ಕ್ರೀಡಾಪಟು, ಉದ್ಯಮಿ ಕ್ರೀಡೋತ್ಸವ 2024ನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಧಾಕೃಷ್ಣರಾವ್ ಯು...

ಚೆಂಬು : ಅಧಿಕಾರಿಗಳು ಹಾಗೂ ಕೋರಂ ಇಲ್ಲದೇ ಕಾಟಾಚಾರಕ್ಕೆ ನಡೆದ ಗ್ರಾಮಸಭೆ – ಸಭೆ ಮುಂದೂಡುವಂತೆ ಒತ್ತಾಯ – ಮಾತಿನ ಚಕಮಕಿ – ಗ್ರಾಮಸ್ಥರಿಂದ ಸಭಾತ್ಯಾಗ

https://youtu.be/o2QzORnofws?si=SQ6G5LEE6yrhzjoP ಎಲ್ಲಾ ಇಲಾಖೆಯ ಅಧಿಕಾರಿ ಬಂದಿಲ್ಲ ಹಾಗೂ ಗ್ರಾಮಸ್ಥರು ಕಡಿಮೆ ಸಂಖ್ಯೆಯಲ್ಲಿದ್ದಾರೆಂದು ಕೆಲ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ಕಪ್ಪು ಪಟ್ಟಿ ಪ್ರದರ್ಶಿಸಿ, ಸಭಾತ್ಯಾಗ ಮಾಡಿದ ಘಟನೆ ನ.30 ರಂದು ನಡೆದ ಚೆಂಬು ಗ್ರಾಮಸಭೆಯಲ್ಲಿ ವರದಿಯಾಗಿದೆ. ಗ್ರಾಮಸಭೆ ಆರಂಭವಾಗುತ್ತಿದ್ದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಬಾರದೇ ಇದ್ದರೇ ಗ್ರಾಮ ಸಭೆ ಮಾಡುವುದು ಬೇಡ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಸಮಸ್ಯೆಗಳಿಗೆ...
Loading posts...

All posts loaded

No more posts

error: Content is protected !!