- Thursday
- August 13th, 2026
ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ಆದಿತ್ಯವಾರ ಬೆಳಿಗ್ಗೆ ಗಂಟೆ 10 ರಿಂದ 11 ರ ತನಕ ಉಚಿತ ಯೋಗ ಶಿಬಿರ ಆಯೋಜಿಸಲಾಗಿದೆ. ಸೊಂಟ ನೋವು, ಬೆನ್ನು ನೋವು, ಕುತ್ತಿಗೆ ನೋವು, ಗಂಟು ನೋವುಗಳನ್ನು ಶಮನಗೊಳಿಸುವ ಯೋಗ ಥೆರಪಿಯನ್ನು ಯೋಗ ಶಿಕ್ಷಕ ಪ್ರಸನ್ನ ಭಟ್ ಉಚಿತವಾಗಿ ನೀಡಲಿದ್ದಾರೆ.
ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದ್ದು ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್ ಕುಮಾರ್ ಚಾರ್ಮತ ಇವರ ನೇತೃತ್ವದಲ್ಲಿ ಶಾಲೆಯನ್ನು ಸ್ವಚ್ಛತೆ ಮಾಡಲಾಯಿತು. ಪಾಸಿಟಿವ್ ಬಂದವರು ಕೋವಿಡ್ ಕೇರ್ ಗೆ ದಾಖಲಾಗುಲು ಹಿಂಜರಿಯುತ್ತಿರುವ ಈ ಸಂದರ್ಭದಲ್ಲಿ ತಾನೇ ಸ್ವತಃ ದಾಖಲಾಗಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಜತೆಗೆ ಇತರ ಜನಪ್ರತಿನಿಧಿಗಳಿಗೆ...
ಸುಳ್ಯ ತಾಲ್ಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ 51 ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 442ಕ್ಕೇರಿದೆ.ಬಾಳುಗೋಡಿನಲ್ಲಿ 1,ಗುತ್ತಿಗಾರಿನಲ್ಲಿ 3, ಪೇರಾಲಿನಲ್ಲಿ 2, ಆಲೆಟ್ಟಿಯಲ್ಲಿ 1 , ಸುಳ್ಯದಲ್ಲಿ 24, ಅಜ್ಜಾವರದಲ್ಲಿ 5, ಕಲ್ಮಕಾರಿನಲ್ಲಿ 1, ಕೊಲ್ಲಮೊಗ್ರದಲ್ಲಿ 2, ಐವರ್ನಾಡಿನಲ್ಲಿ 2, ಅಮರ ಪಡ್ನೂರಿನಲ್ಲಿ 1, ಮಂಡೆಕೋಲಿನಲ್ಲಿ 1,ನೆಲ್ಲೂರು ಕೆಮ್ರಾಜೆಯಲ್ಲಿ 2, ಅರಂತೋಡಿನಲ್ಲಿ...
ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಇದರ ವಾರ್ಷಿಕ ಮಹಾಸಭೆಯು ಆ.3 ರಂದು ಬೆಳ್ಳಾರೆ ದೇವಿ ಹೈಟ್ಸ್ ಸಭಾಭವನದಲ್ಲಿ ಜರುಗಿತು. ಕೆ.ಜೆ.ಯು. ಅಧ್ಯಕ್ಷ ಉಮೇಶ್ ಮಣಿಕ್ಕಾರ್ ರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆ.ಜೆ. ಯು ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್, ಗೌರವಾಧ್ಯಕ್ಷ ಶರೀಫ್ ಜಟ್ಟಿಪಳ್ಳ, ಕಾರ್ಯದರ್ಶಿ ಯಶ್ವಿತ್ ಕಾಳಮ್ಮನೆ, ಖಜಾಂಜಿ ಶ್ರೀಧರ ಕಜೆಗದ್ದೆ ಉಪಸ್ಥಿತರಿದ್ದರು. ಈ ಸಂದರ್ಭ...
ಎಡಮಂಗಲದಲ್ಲಿ ರೈಲಿನಡಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.ಎಡಮಂಗಲ ಗ್ರಾಮದ ಪಟ್ಲದಮೂಲೆ ನಿವಾಸಿ ಭರತ್ (24) ಮೃತಪಟ್ಟ ದುರ್ದೈವಿ.ಎಡಮಂಗಲದ ದಡ್ಡು ಕುಶಾಲಪ್ಪ ಯಾನೆ ಪೂವಪ್ಪ ನಾಯ್ಕರ ಪುತ್ರರಾಗಿರುವ ಭರತ್ ಕೂಲಿ ಕೆಲಸಕ್ಕೆ ಹೋಗುವವರಾಗಿದ್ದು, ಸಂಜೆ ಎಡಮಂಗಲದಲ್ಲಿರುವ ಟೈಲರ್ ಶಾಪ್ ಗೆ ಹೋಗಿ ಹಿಂತಿರುಗುವ ಸಂದರ್ಭದಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲಿನ ಅಡಿಗೆ...
ಬಂದರು ಮತ್ತು ಮೀನುಗಾರಿಕೆ ಸೇರಿದಂತೆ ಒಳನಾಡು ಜಲ ಸಾರಿಗೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಯಾವುದೇ ಖಾತೆ ನೀಡಿದರೂ ಅದನ್ನು ನಿಭಾಯಿಸಲು ಸಿದ್ಧನಿದ್ದೆ. ನನಗೆ ಈ ಹಿಂದೆ ನಿರ್ವಹಿಸಿದ್ದ ಖಾತೆ ದೊರಕಿರುವುದರಿಂದ ಸಂತಸವಾಗಿದೆ. ಈ ಹಿಂದೆ ಇದೇ ಖಾತೆಯನ್ನು ನಿರ್ವಹಣೆ ಮಾಡಿದ್ದುದರಿಂದ ಪ್ರಗತಿ ಕಾರ್ಯಕ್ಕೆ ಅನುಕೂಲಕರವಾಗಿದೆ. ಅಲ್ಲದೆ ಈ ಹಿಂದಿನ ಯೋಜನೆಗಳನ್ನು ಮುಂದುರೆಸಲು ಇದು...
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಮಡಿಲಿಗೆ ಇಂದು ಮೊದಲ ಚಿನ್ನದ ಪದಕ ಬಂದಿದೆ. ಜಾವೆಲಿಂಗ್ ಥ್ರೋನಲ್ಲಿ ನೀರಜ್ ಚೋಪ್ರಾ ಬಂಗಾರದ ಪದಕ ಮುಡಿಗೇರಿಸಿದ್ದಾರೆ. ಈ ಒಲಿಂಪಿಕ್ಸ್ ನಲ್ಲಿ ಭಾರತದ ಮಡಿಲಿಗೆ 7 ಪದಕ ಇದುವರೆಗೆ ಬಂದಿದೆ.
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರಾಗಿದ್ದ ಶ್ರೀಮತಿ ಸ್ವರ್ಣ ಲತಾ ಅವರು ಪತ್ರಾಂಕಿತ ಸಹಾಯಕರಾಗಿ ಪದೋನ್ನತಿ ಹೊಂದಿದ್ದು ಉಪನಿರ್ದೇಶಕರ ಕಛೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರಿಗೆ ವರ್ಗಾವಣೆ ಆಗಿದ್ದಾರೆ.ಸ್ವರ್ಣ ಲತಾ ಅವರು 2014 ರಲ್ಲಿ ಸುಳ್ಯ ಬಿಇಒ ಕಛೇರಿಗೆ ಪತ್ರಾಂಕಿತ ವ್ಯವಸ್ಥಾಪಕರಾಗಿ ಬಂದಿದ್ದರು. ಇವರು ಪುತ್ತೂರು ತಾಲೂಕಿನ ಪರ್ಲಡ್ಕ ನಿವಾಸಿ ಯಕ್ಷಗಾನ ಕಲಾವಿದ ಭಾಸ್ಕರ...
ಸುಳ್ಯ ನಗರ ಪಂಚಾಯತ್ ನಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ವಿಚಾರದಲ್ಲಿ ತೀವ್ರ ಚರ್ಚೆ ನಡೆದು ಕೆಲ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೋಗುವ ಪ್ರಯತ್ನ ಗದ್ದಲ ಗಲಾಟೆ ಆದ ಬಳಿಕ ವಾಪಾಸು ಸಭೆಯಲ್ಲಿ ಭಾಗವಹಿಸಿದ ಹೈಡ್ರಾಮ ನಡೆಯಿತು. ನ.ಪಂ. ನಲ್ಲಿ ಆಗಸ್ಟ್ 7 ರಂದು ವಿಶೇಷ ಸಭೆಯನ್ನು ಕರೆಯಲಾಗಿತ್ತು.ನಗರದಲ್ಲಿನ ಕೊಳೆಗೇರಿ ನಿರ್ವಹಣೆ, ಕುಡಿಯುವ ನೀರು, ಒಳಚರಂಡಿ ನಿರ್ವಹಣೆ...
ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಮತ್ತು ಗಾಂಧಿ ಚಿಂತನ ವೇದಿಕೆಯ ವತಿಯಿಂದ ಡಾ.ಕುರುಂಜಿವೆಂಕಟ್ರಮಣ ಗೌಡ ರವರ 8 ನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಡಾ.ಕುರುಂಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಆಶ್ರುತರ್ಪಣೆ ಅರ್ಪಿಸಲಾಯಿತು. ಕೆ.ಜೆ ಯು. ನ ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್ ರವರು ಮಾಲಾರ್ಪಣೆಗೈದು ನುಡಿನಮನ ಸಲ್ಲಿಸಿದರು.ಸುಳ್ಯ ಕೆ.ಜೆ ಯು....
Loading posts...
All posts loaded
No more posts
