- Saturday
- August 15th, 2026
'ಯಕ್ಷಗಾನ,ರಂಗಭೂಮಿ,ನೃತ್ಯ,ಸಂಗೀತ,ಜಾದೂ,ಮಕ್ಕಳ ಶಿಬಿರ,ಚಿತ್ರಕಲೆ ಹೀಗೆ ಪ್ರತಿಯೊಂದು ಕಲೆಗೂ ವೇದಿಕೆ ನೀಡುತ್ತಿರುವ ರಂಗಮನೆಯು ಸಾಂಸ್ಕೃತಿಕವಾಗಿ ಬಹಳ ದೊಡ್ಡ ಕೊಡುಗೆ ನೀಡಿದ ಸಂಸ್ಥೆಯಾಗಿದೆ. ನಮ್ಮೆಲ್ಲರ ಸಹಕಾರ ಈ ಸಂಸ್ಥೆಗೆ ಬಹು ಮುಖ್ಯವಾಗಿದೆ ಎಂದು ಹಿರಿಯ ಕಲಾ ಪೋಷಕಿ ಶ್ರೀಮತಿ ಕಲಾವತಿ ವೆಂಕಟಕೃಷ್ಣಯ್ಯ ಹೇಳಿದರು.ಅವರು ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಿದ ಶಾಸ್ತ್ರೀಯ ಸಂಗೀತೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮಹಾಬಲ-...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಬಳ್ಪ ವಲಯ ಇದರ ವತಿಯಿಂದ ಶ್ರೀ ಧರ್ಮ ಶಾಸ್ತವು ಭಜನಾ ಮಂದಿರಕ್ಕೆ ಕಸದ ತೊಟ್ಟಿಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನೇತ್ರಾವತಿ ಹೊಪ್ಪಾಳೆ ವಿತರಿಸಿದರು.ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷರಾದ ಸುರೇಶ್ ಆಲ್ಕಬೆ,ಕಾರ್ಯದರ್ಶಿ ಮಿಥುನ್ ರಾಜ್ ಜತ್ತಿಲ,ಶ್ರೀ ಕ್ಷೇತ್ರ ಧ.ಗ್ರಾ.ಯೋ.ಶ್ರೀಮತಿ ಭವ್ಯ ಮತ್ತು ಭಜನಾ ಮಂದಿರದ ಪೂರ್ವಾಧ್ಯಕ್ಷರುಗಳು,ಸದಸ್ಯರು...
ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಂಸ್ಥೆಯ ನೂತನ ಅತ್ಯಾಧುನಿಕ ಮಣ್ಣು ಪರೀಕ್ಷಾ ಘಟಕವನ್ನು ಜ.14 ರಂದು ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯರವರು ಪ್ರಸಕ್ತ ನಮ್ಮ ಕೃಷಿಕರು ತಮ್ಮ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮಣ್ಣು ಪರೀಕ್ಷೆ ಮಾಡಿ ಪೂರಕ ಸಾವಯವ ಗೊಬ್ಬರ ಬಳಕೆಯಂತಹ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ...
ಮೊಗ್ರ ಶ್ರೀ ಕನ್ನಡ ದೇವತೆಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಜ.19 ರಿಂದ ಜ.25 ರವರೆಗೆ ನಡೆಯಲಿದೆ. ಆ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮ ಜ.15 ರಂದು ನಡೆಯಿತು. ಈ ಸಂದರ್ಭದಲ್ಲಿ ಮೊಗ್ರ ವೆಂಕಟ್ರಮಣ ಭಟ್, ಕಾರ್ಯಪ್ಪ ಗೌಡ ಚಿಕ್ಮುಳಿ, ಉಮೇಶ್ ಮಕ್ಕಿ ,ಚೆನ್ನಕೇಶವ ಕಮಿಲ, ದೊಡ್ಡಣ್ಣ ಗೌಡ ಚಿಕ್ಮುಳಿ,ಸೀತಾರಾಮ ಗೌಡ ಚಿಕ್ಮುಳಿ, ರಾಮಕೃಷ್ಣ ಗೌಡ...
ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಜ.15 ರಂದು ಪ್ರಾತಃಕಾಲ 4:30 ಕ್ಕೆ ಭಕ್ತರ ಸಮ್ಮುಖದಲ್ಲಿ ಶ್ರೀ ಶಾಸ್ತವೇಶ್ವರ ಸನ್ನಿಧಾನದಲ್ಲಿ ಧನುಪೂಜೆ ಸಂಪನ್ನಗೊಂಡಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ದೇವಸ್ಥಾನದ ಅರ್ಚಕರು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ
ಸುಬ್ರಹ್ಮಣ್ಯದ ಪದವಿ ಕಾಲೇಜಿನ ಎದುರು ಮುಖ್ಯರಸ್ತೆಯಲ್ಲಿ ಒಳಚರಂಡಿಯ ಮ್ಯಾನ್ ಹೋಲ್ ನ ಸ್ಲಾಬ್ ಕುಸಿಯುವ ಹಂತದಲ್ಲಿದ್ದು ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟಂತಿದೆ. ಈ ಬಗ್ಗೆ ಸಂಬಂಧಿಸಿದವರು ಕೂಡಲೇ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಾರ್ವಜನಿಕರ ತುರ್ತು ಉಪಯೋಗಕ್ಕಾಗಿ ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಂದ ದೇಣಿಗೆಯ ಮೂಲಕ ನಿಧಿ ಸಂಗ್ರಹಿಸಿ ಖರೀದಿಸಿದ ಆಂಬ್ಯುಲೆನ್ಸ್ ಯೋಜನೆ ಜ. 14 ರಂದು ಲೋಕಾರ್ಪಣೆ ಗೊಂಡಿತು. ಸುಳ್ಯ ಮೆಸ್ಕಾಂ ಎ ಇ ಇ ಹರೀಶ್ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ...
ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕೊಳ್ಳಿ ಮುಹೂರ್ತ ಕಾರ್ಯಕ್ರಮ ಜ.14 ರಂದು ನಡೆಯಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಹಾಗೂ ಆಡಳಿತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುಳ್ಯ ನಗರ ಪಂಚಾಯತ್ ಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಟೇಬಲ್ ಗಳಲ್ಲಿ ಕಡತಗಳ ರಾಶಿ ಕಂಡು ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜ.14 ರಂದು ನಡೆದಿದೆ. ನಗರ ಪಂಚಾಯತ್ ಕಚೇರಿಯ ಅವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ನಗರ ಪಂಚಾಯತ್ ಮುಖ್ಯಾಧಿಕಾರಿ, ಇಂಜಿನಿಯರ್, ಆರೋಗ್ಯಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿ...
ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಜ.14 ರ ಶುಕ್ರವಾರದಂದು ಬೆಳಿಗ್ಗೆ 9:00 ಗಂಟೆಗೆ ಶ್ರೀ ದೈವದ ಒತ್ತೆಕೋಲ ಮಹೋತ್ಸವದ ಅಂಗವಾಗಿ ಕೊಳ್ಳಿ ಮಹೂರ್ತ ನೆರವೇರಿತು.ಈ ಸಂದರ್ಭದಲ್ಲಿ ಅದ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ ಹಾಗೂ ಪ್ರಮುಖರಾದ ವೆಂಕಟ್ ರಾಜ್, ಹರೀಶ್ ಇಂಜಾಡಿ, ರವಿ ಕಕ್ಕೆಪದವು, ರಾಜೇಶ್.ಎನ್.ಎಸ್, ಸುರೇಶ್, ರಾಜೇಶ್ ಕುಲ್ಕುಂದ, ಅರ್ಚಕರಾದ ರಾಮಚಂದ್ರ ಮಣಿಯಾಣಿ ಹಾಗೂ ಊರ...
Loading posts...
All posts loaded
No more posts
