ಪ್ರವೀಣ್ ಹತ್ಯೆ ಪ್ರಕರಣ; ಶಂಕಿತರು ಪೊಲೀಸ್ ವಶಕ್ಕೆ

ಬೆಳ್ಳಾರೆ: ಬಿಜೆಪಿ ಯುವ ಮುಖಂಡ‌ ಪ್ರವೀಣ್ ನೆಟ್ಟಾರು ‌ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳ್ಳಾರೆಯಲ್ಲಿ ಏಳು ಜನರನ್ನು ವಶ ಪಡಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ: ಪ್ರಕ್ಷುಬ್ಧ ವಾತಾವರಣ – ಬಂದ್ ಮಾಡಲು ಮನವಿ

https://youtu.be/dbY-mZhj9rk ಹಿಂದೂ ಪರ ಸಂಘಟನೆಗಳಿಂದ ಬಂದ್ ಗೆ ಬೆಂಬಲ ನೀಡಲು ಮನವಿ ಮಾಡುತ್ತಿದೆ. ಪೇಟೆಯಲ್ಲಿ ಹಿಂದೂ ಸಂಘಟನೆಗಳಿಂದ ಮೆರವಣಿಗೆ ನಡೆಯುತ್ತಿದೆ. https://youtu.be/ohVZ0MKeWGU ಗಾಂಧಿನಗರದಲ್ಲಿ ಅಂಗಡಿಗಳು ತೆರೆದಿದ್ದ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ಜೊತೆಗೆ ಮುಸ್ಲಿಂ ವರ್ತಕರು ಪ್ರತಿರೋಧ ತೋರಿದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಖಾಸಗಿ ಬಸ್ ನಿಲ್ದಾಣದ ಟಯರ್ ಬೆಂಕಿ ಹಚ್ಚಲಾಗಿದೆ.
Ad Widget

ಸುಳ್ಯ: ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳು ಬಂದ್ ಗೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಸುಳ್ಯದಲ್ಲಿ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದೆ. ಜತೆಗೆ ಶಾಲಾ ಕಾಲೇಜುಗಳಿಗೆ ಕೂಡ ರಜೆ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.

ಗುತ್ತಿಗಾರು : ಸ್ವಯಂ ಪ್ರೇರಿತ ಬಂದ್ ಗೆ ನಿರ್ಧರಿಸಿದ ವರ್ತಕರು

ಬೆಳ್ಳಾರೆಯಲ್ಲಿ ನಿನ್ನೆ ನಡೆದ ಅಮಾಯಕ ಹತ್ಯೆ ಖಂಡಿಸಿ ಗುತ್ತಿಗಾರಿನಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡಲು ವರ್ತಕರು ತೀರ್ಮಾನಿಸಿದ್ದಾರೆ. ಬಿಜೆಪಿ ಮುಖಂಡ ಪ್ರವೀಣ್ ನೆಟ್ಟರು ಎಂಬ ಯುವಕನ ನಿನ್ನೆ ದುಷ್ಕರ್ಮಿಗಳ ಕುಕೃತ್ಯಕ್ಕೆ ಬಲಿಯಾಗಿದ್ದರು.

ಜು.27 ; ಪ್ರವೀಣ್ ಹತ್ಯೆ ಹಿನ್ನೆಲೆ ಪುತ್ತೂರು, ಸುಳ್ಯ, ಕಡಬ ಸ್ವಯಂ ಪ್ರೇರಿತ ಬಂದ್

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ರವರ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದ ಹಿನ್ನೆಲೆ ನಾಳೆ(ಜು.27) ಪುತ್ತೂರು, ಸುಳ್ಯ, ಕಡಬದಾದ್ಯಂತ ಸ್ವಯಂ ಪ್ರೇರಿತವಾಗಿ ಹಿಂದೂ ಸಂಘಟನೆಗಳು ಕರೆ ನೀಡಿವೆ ಎಂದು ವರದಿಯಾಗಿದೆ.

ಭೀಕರವಾಗಿ ದಾಳಿಗೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಮೃತ್ಯು – ಮೂವರಿಂದ ಕೃತ್ಯ

ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ತಲೆಗೆ ಗಂಭೀರವಾದ ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟರು ಆಗಮಿಸಿದ್ದಾರೆ ಮೇಲೆ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸುತ್ತಿದ್ದಾರೆ.ಈ ವೇಳೆ ಪ್ರವೀಣ್ ಅವರು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆದರೆ ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು ಯದ್ವಾತದ್ವಾ ದಾಳಿ ಸ್ಟಾಕ್. ಬೈಕ್ ಕೇರಳ ರಿಜಿಸ್ಟ್ರೇಷನ್ ಹೊಂದಿತ್ತು ಎಂಬ ವದಂತಿ ಸ್ಥಳೀಯವಾಗಿ ಹಬ್ಬಿದ್ದು...

ಬೆಳ್ಳಾರೆ : ಬಿಜೆಪಿ ಯುವ ನಾಯಕ ಪ್ರವೀಣ್ ದುಷ್ಕರ್ಮಿಗಳ ದಾಳಿಗೆ ಬಲಿ

ಬೆಳ್ಳಾರೆ : ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಬಗ್ಗೆ ವರದಿಯಾಗಿದೆ.ಸಾಮಾಜಿಕ ಕ್ಷೇತ್ರ, ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ಪ್ರವೀಣ್ ನೆಟ್ಟಾರು ಅವರ ಮೇಲೆ ಯಾರು,ಯಾಕೆ ದಾಳಿ ಮಾಡಿದ್ದಾರೆ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.

ಜು.27 ರಿಂದ ಪುತ್ತೂರಿನ ಪ್ರತಿಷ್ಠಿತ ಜವಳಿ ಮಳಿಗೆ ಸಂಜೀವ ಶೆಟ್ಟಿಯಲ್ಲಿ ಬಿಗ್ ಡಿಸ್ಕೌಂಟ್ ಸೇಲ್

ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳಿವೆ. ತುಳು ನಾಡಿನ ಆಟಿ ತಿಂಗಳು ಕಳೆಯಲು ಶುಭ ಸಮಾರಂಭಗಳು ನಿರಂತರವಾಗಿ. ಹಬ್ಬಗಳು , ಶುಭ ಸಮಾರಂಭಗಳು ಬಂತೆಂದರೆ ಕೇಳಬೇಕೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂತಸ. ಅಂದಹಾಗೆ ಈ ಸಂತಸದ ದಿನಗಳ ಸಂಭ್ರಮಕ್ಕೆ ಇನ್ನಷ್ಟು ಮೆರಗು ತುಂಬಲು ಇಲ್ಲೊಂದು ಜವಳಿ ಮಳಿಗೆ ಅತೀ ದೊಡ್ಡ ಡಿಸ್ಕೌಂಟ್ ಸೇಲ್ ಇಟ್ಟಿದೆ. ಪುತ್ತೂರು...

ಹಾಸನಡ್ಕ ಶಾಲಾ ವಿದ್ಯಾರ್ಥಿಗಳಿಗೆ ಕೊಡುಗೆ

ಹಾಸನಡ್ಕ ಶಾಲೆಗೆ ರೋಟರಿ ಕ್ಲಬ್ ಸುಬ್ರಹ್ಮಣ್ಯ ಮತ್ತು ಇನ್ನರ್ ವೀಲ್ ಕ್ಲಬ್ ಸುಬ್ರಹ್ಮಣ್ಯ ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ಲೇಖನ ಸಾಮಗ್ರಿಗಳ ಮತ್ತು ಕೊಡೆ ವಿತರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ ಎಣ್ಣೆಮಜಲು, ಪೂರ್ವಾಧ್ಯಕ್ಷ ಮಾಯಿಲಪ್ಪ ಗೌಡ ಸಂಕೇಶ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸರೋಜ ಮಾಯಿಲಪ್ಪ,ಎಸ್.ಡಿ.ಎಂ.ಸಿ. ಅಧ್ಯಕ್ಷರು, ಶಿಕ್ಷಕಿ...

ಸಚಿವ ಅಂಗಾರರಿಂದ ದೆಹಲಿ ಭೇಟಿ – ಕೇಂದ್ರ ಸಚಿವರ ಜೊತೆ ಚರ್ಚೆ

ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ದೆಹಲಿ ಪ್ರವಾಸದಲ್ಲಿರುವ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಇಂದು ಬಂದರು, ಹಾಗೂ ಜಲಮಾರ್ಗಗಳ ಸಚಿವರಾದ ಸರ್ಬಾನಂದ ಸೋನೊವಾಲ ಹಾಗೂ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರಾದ ಡಾ.ಎಲ್.ಮುರುಗನ್ ರವರನ್ನು ಭೇಟಿ ಮಾಡಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ...
Loading posts...

All posts loaded

No more posts

error: Content is protected !!