ಲಾಲ್ ಬಹದ್ದೂರ ಶಾಸ್ತ್ರಿ ಕಲಾ ಸಂಘದಿಂದ ರೋಗಿಗಳಿಗೆ ಹಣ್ಣು ವಿತರಣೆ ಕಾರ್ಯಕ್ರಮ

ಸುಳ್ಯದ ಲಾಲ್ ಬಹದ್ದೂರ ಶಾಸ್ತ್ರಿ ಸಾಂಸ್ಕೃತಿಕ ಕಲಾ ಸಂಘದಿಂದ ಸರಕಾರಿ ಆಸ್ಪತ್ರೆಯಲ್ಲಿಯ ರೋಗಿಗಳಿಗೆ ಹಣ್ಣು ವಿತರಣಾ ಕಾರ್ಯಕ್ರಮ ಕಾರ್ಯಕ್ರಮವು ಅಕ್ಟೊಬರ್ 2 ರಂದು ನಡೆಯಿತು . ಅಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮತ್ತು ಮಹಾತ್ಮಾ ಗಾಂಧೀಜಿ ಅವರ ಜಯಂತಿ ಇದ್ದ ಪ್ರಯುಕ್ತ ಸಂಘಟನೆಯು ರೋಗಿಗಳು ಬೇಗ ಗುಣಮುಖರಾಗಿ ಆರೋಗ್ಯ ಏಳಿಗೆ ಕಂಡು ಸುಂದರ ಬಾಳು...

ಬೆಳ್ಳಾರೆ: ಶ್ರೀ ಶಾರದೋತ್ಸವ ಸಮಿತಿ ವತಿಯಿಂದ 35ನೇ ವರ್ಷದ ಶ್ರೀ ಶಾರದೋತ್ಸವ

ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ವತಿಯಿಂದ 35ನೇ ವರ್ಷದ ಶ್ರೀ ಶಾರದೋತ್ಸವವು ಅ.05 ರಂದು ಬೆಳ್ಳಾರೆ ಅಚಲಾಪುರ ಕಟ್ಟೆಯ ಬಳಿ ನಡೆಯಿತು. ಬೆಳಿಗ್ಗೆ ಶಾರದಾ ಪ್ರತಿಷ್ಠೆ ಪೂಜೆ ನಡೆಯಿತು. ನಂತರ ವಿದ್ಯಾರಂಭ (ಅಕ್ಷರಾಭ್ಯಾಸ) ಶಾರದಾ ಸಹಸ್ರ ನಾಮಾರ್ಚನೆ, ಅಷ್ಟೋತ್ತರನಾಮಾರ್ಚನೆ, ಆಯುಧ ಪೂಜೆ, ಇತ್ಯಾದಿ ಸೇವೆಗಳು ನಡೆದವು. ಶಾರದೋತ್ಸವದ ಅಂಗವಾಗಿ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ,...
Ad Widget

ಅಡ್ಕಾರು : ಪೆರಾಜೆ ಚಿಗುರು ಯುವಕ ಮಂಡಲದಿಂದ ಶ್ರಮದಾನ

ಪೆರಾಜೆ ಚಿಗುರು ಕ್ರೀಡಾ ಮತ್ತು ಕಲಾ ಯುವಕ ಮಂಡಲ ಇದರ ಮಾಸಿಕ ಶ್ರಮದಾನವು ಅಡ್ಕಾರ್ ವನವಾಸಿ ಕಲ್ಯಾಣ ಬಾಲಕರ ವಸತಿ ನಿಲಯದಲ್ಲಿ ನಡೆಯಿತು. ಶ್ರಮದಾನದಲ್ಲಿ ಚಿಗುರು ಯುವಕಮಂಡಲದ ಅಧ್ಯಕ್ಷ ಭುವನ್ ಕುಂಬಳಚೇರಿ, ಕಾರ್ಯದರ್ಶಿ ಜೀವನ್ ಮಜಿಕೋಡಿ, ಖಜಾಂಜಿ ಪ್ರವೀಣ್ ಮಜಿಕೋಡಿ, ಮಾಜಿ ಅಧ್ಯಕ್ಷ ಶೀತಲ್ ಕುಂಬಳಚೇರಿ,ಪೆರಾಜೆ ಗ್ರಾಮಪಂಚಾಯತ್ ಸದಸ್ಯ ಉದಯಚಂದ್ರ ಕುಂಬಳಚೇರಿ ಹಾಗೂ ಸಂಘದ ಸದಸ್ಯರು...

ಗುತ್ತಿಗಾರು : ಕೈಕೊಟ್ಟ ಸರಕಾರಿ ಅಂಬ್ಯುಲೆನ್ಸ್ – ಜೀವ ಉಳಿಸಿದ ಅಮರ ಸೇನಾ ಅಂಬ್ಯುಲೆನ್ಸ್

ರೋಗಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ಸಂದರ್ಭದಲ್ಲಿ ಸರಕಾರಿ ಆಂಬುಲೆನ್ಸ್ ನ ಆಕ್ಸಿಜನ್ ಸಿಸ್ಟಮ್ ಕೈಕೊಟ್ಟ ಘಟನೆ ನಡೆದಿದೆ. ವಿಷಯ ತಿಳಿದ ಕೂಡಲೇ ಧಾವಿಸಿ ಬಂದ ಅಮರ ಚಾರಿಟೇಬಲ್ ಟ್ರಸ್ಟ್ ನ ಆಂಬುಲೆನ್ಸ್ ವಾಹನದಿಂದಾಗಿ ವ್ಯಕ್ತಿಯೊಬ್ಬರ ಜೀವ ಉಳಿದಿದೆ. ಅ.1 ರಂದು ಸಂಜೆ ಕೊಲ್ಲಮೊಗ್ರದಿಂದ ಸುಳ್ಯಕ್ಕೆ ಉಸಿರಾಟದ ತೀವ್ರ ತೊಂದರೆಯಿದ್ದು ಅನಾರೋಗ್ಯ ದಿಂದ ಬಳಲುತ್ತಿದ್ದ ಕೆಂಚಪ್ಪ ಎಂಬವರನ್ನು ಸರಕಾರಿ...

ಅಚ್ರಪ್ಪಾಡಿ : ರಂಗಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಅಚ್ರಪ್ಪಾಡಿ ಸ.ಕಿ.ಪ್ರಾ. ಶಾಲಾ ರಂಗಮಂದಿರ ನಿರ್ಮಾಣಕ್ಕೆ ಅ. 2 ರಂದು ಗುದ್ದಲಿಪೂಜೆ ನೆರವೇರಿತು. ಧರ್ಮಪಾಲ ಅಡ್ಡನಪಾರೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರ ಪೋಷಕರಾದ ಎಂ.ಎಸ್.ಕೃಷ್ಣ ಮತ್ತು ಶ್ರೀಮತಿ ಶಶಿಕಲಾ, ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು, ಪ್ರಶಾಂತ ಮೆದು, ಶಾಲಾ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಬಾಬು...

ಕೆವಿಜಿ : ಆಯುರ್ವೇದ ಕಾಲೇಜು, ಆಸ್ಪತ್ರೆ, ಆಯುರ್ವೇದ ಫಾರ್ಮ್ ಮತ್ತು ರಿಸರ್ಚ್ ಸೆಂಟರ್ ನಲ್ಲಿ ಆಯುಧ ಪೂಜೆ

ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹಾಗೂ ಕೆವಿಜಿ ಆಯುರ್ವೇದ ಫಾರ್ಮ್ ಮತ್ತು ರಿಸರ್ಚ್ ಸೆಂಟರ್ ನಲ್ಲಿ ನವರಾತ್ರಿ ಮತ್ತು ವಿಜಯದಶಮಿ ಪ್ರಯುಕ್ತ ಅ.4ರಂದು ಆಯುಧ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ವಾಹನ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ,...

ಸುಳ್ಯ: ಆದಿಲಕ್ಷ್ಮಿ (ಆರ್.ಕೆ) ಟ್ರಾನ್ಸ್ ಪೋರ್ಟ್ ಸಂಸ್ಥೆಯಲ್ಲಿ ಆಯುಧ ಪೂಜೆ

ಸುಳ್ಯದ ಪೈಚಾರಿನಲ್ಲಿರುವ ರಾಜೇಶ್ ಕಿರಿಭಾಗ ರವರ ಮಾಲಕತ್ವದ ಆದಿಲಕ್ಷ್ಮಿ (ಆರ್.ಕೆ) ಟ್ರಾನ್ಸ್ ಪೋರ್ಟ್ ಸಂಸ್ಥೆಯಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಆಯುಧ ಪೂಜಾ ಕಾರ್ಯಕ್ರಮ ಹಾಗೂ ವಾಹನ ಪೂಜೆಯು ಅ.4 ರಂದು ನಡೆಯಿತು. ಪುರೋಹಿತರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರ ಬಂಧು ಮಿತ್ರರು ಮತ್ತು ನೌಕರ ವರ್ಗದವರು ಉಪಸ್ಥಿತರಿದ್ದರು.

ಪೆರಾಜೆ: ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಸಾಮೂಹಿಕ ಆಯುಧ ಪೂಜೆ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ದೇವಳದ ಮೊಕ್ತಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು ಹಾಗೂ ತಕ್ಕಮುಖ್ಯಸ್ಥರು, ಮಾಜಿ ಮುಕ್ತೆಸರ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಸುಳ್ಯ : ಐಡಿಯಲ್ ಅಟೋ ವರ್ಕ್ಸ್ ನಲ್ಲಿ ಆಯುಧ ಪೂಜೆ

ಸುಳ್ಯ ರಥಬೀದಿಯಲ್ಲಿಯ ಭಾಸ್ಕರ ಗೌಡ ರವರ ಮಾಲಕತ್ವದ ಐಡಿಯಲ್ ಅಟೋ ವರ್ಕ್ಸ್ ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಆಯುಧ ಪೂಜೆ ಅ.3 ರಂದು ನಡೆಯಿತು.ಪುರೋಹಿತ್ ಕೃಷ್ಣ ಶಾಸ್ತ್ರಿಯವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ಭಾಸ್ಕರ ಗೌಡ ಗುರುರಾಜ್ ಮತ್ತು ಮನೆಯವರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಉಬರಡ್ಕದ ಡಾ.ಪ್ರಶಾಂತಿ ಶಶಿಕಾಂತ್ ಶೂಪರ್ ಸಾಧಕಿ ಪ್ರಶಸ್ತಿ ಸ್ವೀಕರ

ಸ್ವತಂತ್ರ ಮಾನ್ಯತೆ ಪಡೆದ ಶಾಲಾ ಶಿಕ್ಷಕರ ಒಕ್ಕೂಟದ ಪಸ್ಟ್ ಕರ್ನಾಟಕ ಸಂಸ್ಥೆ (ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರ ವೇದಿಕೆ) ಅ. 1ರಂದು ಡಾ.ಎಸ್. ರಾಧಾಕೃಷ್ಣನ್ ಅವರ ಸ್ಮರಣಾರ್ಥ ಶಿಕ್ಷಕ್ ಸಮ್ಮಾನ್ 2022 ಅನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಶ್ರೀ ಪುಟ್ಟಣ್ಣ ಅವರಿಂದ ಉಬರಡ್ಕದ ಡಾ.ಪ್ರಶಾಂತಿ ಶಶಿಕಾಂತ್ ಶೂಪರ್ ಸಾಧಕಿ ಪ್ರಶಸ್ತಿ ಸ್ವೀಕರಿಸಿದರು. ಈ...
Loading posts...

All posts loaded

No more posts

error: Content is protected !!