- Saturday
- August 22nd, 2026
ಗೋವುಗಳ ರಕ್ಷಣೆ ಮತ್ತು ಅಕ್ರಮ ಗೋ ಸಾಗಟಕ್ಕೆ ತಡೆಯುವ ಪ್ರಯತ್ನವಾಗಿ ಈ ಹಿಂದೆಯೇ ಬೇಡಿಕೆ ಇರಿಸಲಾಗಿದ್ದರಿಂದ ಅಜ್ಜಾವರ ಗ್ರಾಮದ ಇರುಂವಬಳ್ಳದಲ್ಲಿ ಸರ್ವೆ ಕಾರ್ಯ ನಡೆಸಲಾಯಿತು. ಅಜ್ಜಾವರ ಗ್ರಾಮದ ಇರುವಂಬಳ್ಳ ಎಂಬಲ್ಲಿ ಸರ್ವೆ ನಂಬ್ರ 84/2AP1ರಲ್ಲಿ ಈ ಹಿಂದೆ ಸಲ್ಲಿಸಲಾದ ಮನವಿಯ ಪ್ರಕಾರ ಕಂದಾಯ ಇಲಾಖೆ ಇಂದು ತಾಲ್ಲೂಕು ಸರ್ವೆಯರ್ ಮುಖಾಂತರ ಸರ್ವೇ ಕಾರ್ಯ ಮತ್ತು ಗಡಿ...
ಗುತ್ತಿಗಾರು ಸ.ಪ.ಪೂ.ಕಾಲೇಜಿನ ಹೈಸ್ಕೂಲ್ ವಿಭಾಗ ಪ್ರಾರಂಭವಾಗಿ 50 ವರ್ಷ ಪೂರೈಸಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಹಿನ್ನೆಲೆಯಲ್ಲಿ ಸಚಿವರಾದ ಎಸ್. ಅಂಗಾರರವರು ಶಾಲಾ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ರೂ.5 ಲಕ್ಷ ಅನುದಾನ ಒದಗಿಸಿದ್ದು ಇಂದು ಅವರು ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಭವಾನಿಶಂಕರ್, ಶಾಲಾ ಸುವರ್ಣಮಹೋತ್ಸವ ಸಮಿತಿ ಅಧ್ಯಕ್ಷ ದಯಾನಂದ ಮುತ್ಲಾಜೆ, ಎಸ್.ಡಿ.ಎಂ.ಸಿ....
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಡಾ.ಕೆ.ವಿ. ರಾಜೇಂದ್ರ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಡಾ.ಕೆ.ವಿ. ರಾಜೇಂದ್ರ ಅವರಿಂದ ತೆರವಾದ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರನ್ನು ಪ್ರಭಾರ ಜಿಲ್ಲಾಧಿಕಾರಿಯಾಗಿ ನಿಯೋಜಿಸಲಾಗಿದೆ.
ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರ ಗುತ್ತಿಗಾರು ಇದರ ವತಿಯಿಂದ ನವೆಂಬರ್ ತಿಂಗಳಿನಿಂದ ಪ್ರತೀ ಭಾನುವಾರ ಬೆಳಿಗ್ಗೆ 10:00 ಗಂಟೆಯಿಂದ ಮದ್ಯಾಹ್ನ 1:00 ಗಂಟೆಯವರೆಗೆ ನವೋದಯ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ನಡೆಯಲಿದ್ದು, ಈ ಪರೀಕ್ಷಾ ತರಬೇತಿಯ ದಾಖಲಾತಿ...
ಸೇವಾಜೆ-ಮಡಪ್ಪಾಡಿ ರಸ್ತೆಯಲ್ಲಿ ಸೇವಾಜೆ ಪ್ರಾಥಮಿಕ ಶಾಲೆಯ ಬಳಿಯ ದೊಡ್ಡ ತಿರುವಿನಲ್ಲಿ ಸಿಗುವ ಈ ಸೇತುವೆಯು ಮೂರು ರಸ್ತೆಗಳು ಸೇರುವ ಕೇಂದ್ರದಲ್ಲಿದೆ. ಈ ಸೇತುವೆಯು ಸುಮಾರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು, ನದಿಯು ಮಳೆಯ ರಭಸದಿಂದಾಗಿ ಉಕ್ಕಿ ಹರಿಯುವುದರಿಂದ ಸೇತುವೆಯು ತಳಭಾಗದಿಂದಲೇ ಸಂಪೂರ್ಣ ಕುಸಿಯುವ ಸ್ಥಿತಿಯಲ್ಲಿದ್ದು ಸೇತುವೆ ಮೇಲ್ಭಾಗದಲ್ಲಿ ತಡೆ ಬೇಲಿ ಮುರಿದು ಅಪಾಯಕಾರಿ ಸ್ಥಿತಿಯಲ್ಲಿದೆ. ರಸ್ತೆಯೂ ಕೂಡ...
"ಸಂಸ್ಕೃತಿ ಎಂದರೆ ಏನೆಂದು ತಿಳಿಯದಿದ್ದ ಬ್ರಿಟಿಷರು ಭಾರತೀಯರಿಗೆ ನಾಗರಿಕತೆಯ ಪಾಠವನ್ನು ಹೇಳಿ, ಭಾರತೀಯರ ಬುದ್ಧಿವಂತಿಕೆಯನ್ನು ಸಂಪೂರ್ಣವಾಗಿ ಆಂಗ್ಲಮಯ ಮಾಡಲು ಹೊರಟಿದ್ದರು. ಆದರೆ ಯುರೋಪಿಗಿಂತ ಮೊದಲೇ ಭಾರತೀಯರಲ್ಲಿ ಪರಿಶುದ್ಧವಾದ ಸಂಸ್ಕೃತಿ, ಸಂಸ್ಕಾರ, ನಾಗರಿಕತೆ ಮತ್ತು ಸುಜ್ಞಾನವಿತ್ತು. ಭಾರತೀಯರ ಸಜ್ಜನಿಕೆಯೇ ಅವರಿಗೆ ಮುಳುವಾಯಿತು. ತಕ್ಕಡಿ ಹಿಡಿದು ವ್ಯಾಪಾರಕ್ಕೆ ಬಂದವರು ಭಾರತೀಯರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಆಳತೊಡಗಿದಾಗ ದೇಶದ ಮೂಲೆಮೂಲೆಗಳಲ್ಲಿ...
ಮಿತ್ರ ಯುವಕ ಮಂಡಲ ಕೈೂಕುಳಿ ಇದರ ವಾರ್ಷಿಕ ಮಹಾಸಭೆಯು ಅ.16 ರಂದು ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮಿತ್ರಯುವಕ ಮಂಡಲದ ಅಧ್ಯಕ್ಷರಾದ ದಿನೇಶ ಕೈೂಕುಳಿ ವಹಿಸಿದ್ದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಅಕ್ಷಯ್ ಮೂಡೆಕಲ್ಲು ಹಾಗೂ ಲೆಕ್ಕಪತ್ರವನ್ನು ಕೋಶಾಧಿಕಾರಿ ಚಿದಾನಂದ ಕೈೂಕುಳಿ ಮಂಡಿಸಿದರು. ವೇದಿಕೆಯಲ್ಲಿ ನೂತನ ಅಧ್ಯಕ್ಷರಾದ ಚೇತನ್ ಕಲ್ಮಡ್ಕ, ಕಾರ್ಯದರ್ಶಿ ಪ್ರದೀಪ ಕೈೂಕುಳಿ...
ಕುರಲ್ ತುಳುಕೂಟ ದುಗ್ಗಲಡ್ಕ ಇದರ ಮಹಾಸಭೆ ಇತ್ತೀಚೆಗೆ ನಡೆದು ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಬಿ. ನಾರಾಯಣ ಟೈಲರ್,ಸಂಚಾಲಕರಾಗಿ ಕೆ.ಟಿ. ವಿಶ್ವನಾಥ, ಅಧ್ಯಕ್ಷರಾಗಿ ಶ್ರೀಮತಿ ನವ್ಯ ದಿನೇಶ್ ಕೈೂಕುಳಿ, ಉಪಾಧ್ಯಕ್ಷರುಗಳಾಗಿ ಶ್ರೀಮತಿ ವಾಣಿಜ ಕೊರಗಪ್ಪ ಕೈೂಕುಳಿ, ಚಂದ್ರಶೇಖರ ಗೌಡ ಮದಕ, ಶ್ರೀಮತಿ ಶೀಲಾವತಿ ಮಾಧವ, ಕೃಷ್ಣಸ್ವಾಮಿ ಕಂದಡ್ಕ, ಧನಂಜಯ ಕಲ್ಮಡ್ಕ, ಇಬ್ರಾಹಿಂ ನೀರಬಿದಿರೆ, ಪ್ರ.ಕಾರ್ಯದರ್ಶಿಯಾಗಿ...
ಸುಳ್ಯದ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ಅ.03 ರಿಂದ ನ.05 ರವರೆಗೆ ದೀಪಾವಳಿ ಡಬಲ್ ಧಮಾಕ ಯೋಜನೆಯನ್ನು ಹಮ್ಮಿಕೊಂಡಿದ್ದು, ಗೃಹೋಪಯೋಗಿ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಹಾಗೂ ಸ್ಕ್ರಾಚ್ ಕಾರ್ಡ್ ಬಹುಮಾನ ನಡೆಯುತ್ತಿದೆ. ಅ.20ರಂದು ಸ್ಕ್ರಾಚ್ ಕಾರ್ಡ್ ನಲ್ಲಿ ಚೇತನ್ ಬಾಳುಗೋಡು(ವಿಷ್ಣು ಬೇಕರಿ ಎಲಿಮಲೆ) ಇವರು 10 ಸಾವಿರ ರೂಪಾಯಿ ವಿಜೇತರಾಗಿ ಗೃಹೋಪಯೋಗಿ ವಸ್ತುಗಳನ್ನು ಬಹುಮಾನವಾಗಿ ಪಡೆದುಕೊಂಡರು....
ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ಸಂಗಮ ಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಅ.17 ರಂದು ಸಂಜೆ 7:22ರ ಶುಭ ಮುಹೂರ್ತದಲ್ಲಿ ತೀರ್ಥೋದ್ಭವ ನಡೆಯಿತು. ಅ.18 ರಂದು ಬೆಳಿಗ್ಗೆ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ಅವರು ನದಿಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಸಮರ್ಪಿಸಿದರು. ಈ ಸಂದರ್ಭದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ...
Loading posts...
All posts loaded
No more posts
