ಅರಂತೋಡು ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಅರಂತೋಡು ಮಾಣಿ ಮೈಸೂರು ರಸ್ತೆ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ನಡೆದಿದೆ. ಚಾಲಕ ಮಡಿಕೇರಿ ಯಿಂದ ಸುಳ್ಯ ಕಡೆ ಕಾರು ಚಲಾಯಿಸಿಕೊಂಡು ಬರುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸಾಧನೆ ಸುಲಭವಲ್ಲ ; ಆತ್ಮವಿಶ್ವಾಸವಿದ್ದರೆ ಕಷ್ಟ ಎನ್ನುವುದೇ ಇಲ್ಲ…

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಕನಸುಗಳಿರುತ್ತವೆ, ಏನಾದರೂ ಸಾಧಿಸ್ಬೇಕು ಅನ್ನೋ ಆಕಾಂಕ್ಷೆ ಇರುತ್ತದೆ. ಹಾಗಂತ ಸಾಧನೆ ಅನ್ನೋದು ಅಂದುಕೊಂಡ ತಕ್ಷಣ ಸಿಗುವಂಥದ್ದಲ್ಲ ಅಥವಾ ಒಂದೆರಡು ದಿನದಲ್ಲಿ ಆಗುವಂಥದ್ದಲ್ಲ.ಈಗ ಒಬ್ಬ ವ್ಯಕ್ತಿ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಿದ್ದಾನೆ ಅಂದ್ರೆ ಅವನೇನು ಒಂದೆರಡು ದಿನದಲ್ಲಿ ಆ ಮಟ್ಟಕ್ಕೆ ಬೆಳೆದಿರುವುದಿಲ್ಲ ಅಥವಾ ಸಾಧನೆ ಮಾಡಿರುವುದಿಲ್ಲ. ಆದರೆ ನಮಗೆ ನೋಡುವವರಿಗೆ ಅವನ ಸಾಧನೆ...
Ad Widget

ಅಜ್ಜಾವರ,ಮಂಡೆಕೋಲು ಹಾಗೂ ಕನಕಮಜಲು ವ್ಯಾಪ್ತಿಯಲ್ಲಿ ಸಚಿವ ಅಂಗಾರರಿಂದ ರೂ.3.80 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ

ಅಜ್ಜಾವರ, ಮಂಡೆಕೋಲು ಹಾಗೂ ಕನಕಮಜಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಚಿವರಾದ ಎಸ್. ಅಂಗಾರರವರು ಇಂದು ರೂ.3.80 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದರು. *ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ, ಜಾಲ್ಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಜಯರಾಜ್ ಕುಕ್ಕೇಟಿ, ಪ್ರಮುಖರಾದ ಸುರೇಶ್ ಕಣೆಮರಡ್ಕ, ಶಂಕರ್ ಪೆರಾಜೆ,...

ಜ.23: ಕಳಂಜ ಗ್ರಾಮ ಸಭೆ

ಕಳಂಜ ಗ್ರಾಮ ಪಂಚಾಯತಿನ 2022-23ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜ.23 ಸೋಮವಾರದಂದು ಪೂರ್ವಾಹ್ನ ಗಂಟೆ 10.30ಕ್ಕೆ ಕಳಂಜ ಗ್ರಾಮ ಪಂಚಾಯತಿನ ಗೌರಿ ಸಭಾಂಗಣದಲ್ಲಿ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಕೆ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗ್ರಾಮ ಸಭೆಯ ನೋಡಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸುಳ್ಯ ಇದರ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಭಾಗವಹಿಸಲಿದ್ದಾರೆ....

ಜ.26-ಜ.29: ಅಯ್ಯನಕಟ್ಟೆ ಜಾತ್ರೋತ್ಸವ; ಉಪಸಮಿತಿಗಳ ಸಂಚಾಲಕರು, ಉಪ ಸಂಚಾಲಕರು ಹಾಗೂ ಭಕ್ತರ ಸಭೆ

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಸ್ಥಾನ ಮೂರುಕಲ್ಲಡ್ಕದಲ್ಲಿ ಜ.26ರಿಂದ ಜ.29ರ ತನಕ ಅಯ್ಯನಕಟ್ಟೆ ಜಾತ್ರೋತ್ಸವ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಜಾತ್ರೋತ್ಸವ ಉಪಸಮಿತಿಗಳ ಸಂಚಾಲಕರು, ಉಪ ಸಂಚಾಲಕರು ಹಾಗೂ ಭಕ್ತರ ಸಭೆಯು ಇಂದು(ಜ.17) ನಡೆಯಿತು. ಸಭೆಯಲ್ಲಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುವ ಅಭಿಯಾನ ನಡೆಸುವ ಸಲುವಾಗಿ ವಿವಿಧ ತಂಡಗಳನ್ನು ರಚಿಸಲಾಯಿತು. ಸಭೆಯಲ್ಲಿ...

ಅಮರಮುಡ್ನೂರು ನಿವೇದಿತಾ ಸಂಚಲನಾ ತಂಡ ರಚನೆ

ಅಮರಮುಡ್ನೂರು ಗ್ರಾಮದ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ಗ್ರಾಮವಾರು ಸಮಿತಿ ರಚನೆ ಗೊಂಡಿತು. ಸಂಚಾಲಕರಾಗಿ ಹೇಮಾವತಿ ತಂಟೆಪಾಡಿ ಹಾಗು ಸಹ ಸಂಚಾಲಕ ರಾಗಿ ಶ್ವೇತಾ ನಾಯರ್ ಕೆರೆ ಆಯ್ಕೆಯಾಗಿದ್ದಾರೆ.. ಸದಸ್ಯ ರುಗಳಾಗಿ ಸೀತಾ ರತ್ನ ಹಿರಿಯಡ್ಕ, ಕಮಲ ಹಾಸನಡ್ಕ,, ಶೋಭಾ ಕಾನಡ್ಕ,. ಸವಿತಾ ಚಿಲ್ಪಾರ್. ರೇಷ್ಮಾ ಮೇರ್ಕಜೆ ಆಯ್ಕೆ ಯಾದರು. ಈ ಸಂದರ್ಭದಲ್ಲಿ...

ಕಲ್ತಡ್ಕ ತರವಾಡಿನ ಅಣ್ಣಪ್ಪ ಪಂಜುರ್ಲಿ ಹಾಗೂ ಸಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ಧರ್ಮ ನಡಾವಳಿ

ಅಜ್ಜಾವರ ಗ್ರಾಮದ ಕಲ್ತಡ್ಕ ತರವಾಡು ಮನೆಯಲಿ ಶ್ರೀ ಅಣ್ಣಪ್ಪ ಪಂಜುರ್ಲಿ ಹಾಗೂ ಸಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ಧರ್ಮ ನಡಾವಳಿ ನೆರವೇರಿತು.ಕಲ್ತಡ್ಕ ತರವಾಡಿನ ನವೀಕೃತಗೊಂಡ ದೈವಸ್ಥಾನದಲ್ಲಿ ಜ.11 ರಿಂದ 16 ರವರೆಗೆ ಶ್ರೀ ಧರ್ಮಧೈವ ಶ್ರೀ ಅಣ್ಣಪ ಪಂಜುರ್ಲಿ ಹಾಗೂ ಸಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವವು ಬಂಬ್ರಾಣ ಶ್ರೀ ಬಿ ಶಂಕರನಾರಾಯಣ ಕಡಮಣ್ಣಾಯ ತಂತ್ರಿಗಳ...

ಕಲ್ಲುಗುಂಡಿ : ರಸ್ತೆ ಸುರಕ್ಷತಾ ಸಪ್ತಾಹ

ಪೋಲೀಸ್ ಹೊರಠಾಣೆ ಕಲ್ಲುಗುಂಡಿ ಇವರ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಇಂದು ನಡೆಯಿತು.‌ ಜನರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಈ ಕಾರ್ಯಕ್ರಮದಲ್ಲಿ ಎ.ಎಸ್.ಐ ನಾಗೇಶ್, ಪೋಲೀಸ್ ಕಾನ್ ಸ್ಟೇಬಲ್ ರಾಜು , ಗೃಹರಕ್ಷಕದಳದ ರಾಮ್ ರಾಜ್ ಹಾಗೂ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.

ಸುಳ್ಯ : ಶಾರದಾ ಕಾಲೇಜಿನಲ್ಲಿ ಪೋಷಕರ ಸಭೆ

ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ಪೋಷಕರ ಸಭೆ ಇಂದು ನಡೆಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿ ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಶ್ರೀ ಧನಂಜಯ ಅಡ್ಪಂಗಾಯ ರವರು ಅಧ್ಯಕ್ಷತೆ ವಹಿಸಿ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರವನ್ನು ವಿವರಿಸಿ ಅತ್ಯುತ್ತಮ ಸಲಹೆ ಸೂಚನೆಗಳನ್ನು ನೀಡಿದರು. ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಕೆ. ಪ್ರಾಸ್ತಾವಿಕವಾಗಿ...

ಸುಬ್ರಹ್ಮಣ್ಯ : ಪೋಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಸಚಿವರಾದ ಅಂಗಾರರಿಂದ ಗುದ್ದಲಿಪೂಜೆ – ಸುಮಾರು 1.23 ಕೋಟಿ ವೆಚ್ಚದಲ್ಲಿ ನಿರ್ಮಾಣ

ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 1.23 ಕೋಟಿ ರೂ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ, ಕೇಂದ್ರೀಯ ರಬ್ಬರ್ ಮಂಡಳಿಯ ಸದಸ್ಯರಾದ ಮುಳಿಯ ಕೇಶವ ಭಟ್,...
Loading posts...

All posts loaded

No more posts

error: Content is protected !!