- Tuesday
- August 25th, 2026
ಪ್ರತಿಷ್ಟಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ (VTU) ಮಾನ್ಯ ಉಪಕುಲಪತಿಗಳ ನಿರ್ದೇಶನದಂತೆ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಮತ್ತು ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರಾದಡಾ. ಉಜ್ವಲ್ ಊರುಬೈಲು ವಿಶ್ವವಿದ್ಯಾಲಯದ ಮಾಲ್ ಪ್ರಾಕ್ಟೀಸ್ ಕೇಸಸ್ ಕನ್ಸಿಡರೇಶನ್ ಕಮಿಟಿ (MPCC) ಅಧ್ಯಕ್ಷರಾಗಿ ನೇಮಕಗೊಂಡಿರುತ್ತಾರೆ. ಇವರಿಗೆ ಡಾ| ರೇಣುಕಾಪ್ರಸಾದ್ ಕೆ.ವಿ. ಮತ್ತು...
ಸುಳ್ಯದಲ್ಲಿ ವಕೀಲರಾಗಿರುವ ಸಂದೀಪ್ ಮದುವೆಗದ್ದೆ ಯವರು ಚೀಟಿ ನಿಧಿ ಅಧಿನಿಯಮ 1982 ರಡಿ ಚೀಟಿ ದಾವೆಗಳನ್ನು ಇತ್ಯರ್ಥಪಡಿಸಲು ಚೀಟಿ ನಿಬಂಧಕರ ನಾಮಿನಿ ವಕೀಲರಾಗಿ ನೇಮಕಗೊಂಡಿರುತ್ತಾರೆ.ಇವರನ್ನು ಸಹಕಾರ ಸಂಘಗಳ ನಿಬಂಧಕರು ಹಾಗೂ ಚೀಟಿ ಮಹಾ ಪ್ರಬಂಧಕರು ಕರ್ನಾಟಕ ರಾಜ್ಯ, ಬೆಂಗಳೂರು ಇವರು ಬೆಂಗಳೂರು ನಗರ ಜಿಲ್ಲೆಯ ಚೀಟಿ ಸಂಸ್ಥೆಗೆ ಸಂಬಂಧಿಸಿದ ದಾವೆಗಳನ್ನು ಇತ್ಯರ್ಥಪಡಿಸಲು ನೇಮಕಗೊಳಿಸಿರುತ್ತಾರೆ.
ರೈಟ್ ಟು ಲಿವ್ (ಕೋಟೆ ಫೌಂಡೇಶನ್) ಹಾಗೂ ಸ್ನೇಹ ಶಾಲೆಯ ಸಹಯೋಗಿತ್ವದಲ್ಲಿ ನಡೆಯುತ್ತಿರುವ ‘ಸ್ಫೂರ್ತಿ ಕೌಶಲ್ಯ ತರಬೇತಿ ಕೇಂದ್ರ’ದಲ್ಲಿ, ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಮಾ. 2ರಂದು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಚಂದ್ರಶೇಖರ ದಾಮ್ಲೆ ಹಾಗೂ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಇವರು ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೋಟೆ ಫೌಂಡೇಶನ್...
ರಾಜ್ಯ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ರಾಜ್ಯ ಒಕ್ಕಲಿಗರ ಸಂಘ ವಿಶ್ವವಿದ್ಯಾಲಯ (ಆರ್.ವಿ.ಎಸ್.ಯು)ದ ಸ್ಥಾಪನೆಗೆ ಸರಕಾರದಿಂದ ಅನುಮೋದನೆ ದೊರೆತಿದೆ. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಯವರ ಅಧ್ಯಕ್ಷತೆಯಲ್ಲಿ 15 ಜನರ ಸದಸ್ಯರುಗಳನ್ನೊಳಗೊಂಡ ಸಮಿತಿಯನ್ನು ರಚಿಸಿ ಸರಕಾರಕ್ಕೆ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಸ್ತಾಪನೆಯನ್ನು ತಯಾರು ಮಾಡಿ ಸಲ್ಲಿಸಲಾಗಿತ್ತು.ಈ ಪ್ರಸ್ತಾವನೆಯನ್ನು ಸಲ್ಲಿಸಲು ಡಾ....
ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ಸಾಧನೆ ಮತ್ತು ಜನಪರ ಯೋಜನೆಗಳನ್ನು ಒಳಗೊಂಡ ದೃಶ್ಯಾವಳಿಗಳನ್ನು ಬಿತ್ತರಿಸುವ ಪ್ರಗತಿ ರಥ ವಾಹನಕ್ಕೆ ಮಾ.1ರಂದು ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷರಾದ ಹರೀಶ್ ಕಂಜಿಪಿಲಿಯವರು ಸುಳ್ಯದ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಂಡಲದ ಪ್ರದಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ ಹಾಗೂ...
ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದಲ್ಲಿ ಮಾ.5ರಿಂದ 7 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳೊಂದಿಗೆ ವರ್ಷಾವಧಿ ಜಾತ್ರೋತ್ಸವವು ನಡೆಯಲಿದೆ.ಮಾ.5 ರಂದು ಬೆಳಿಗ್ಗೆ ತೋರಣ ಮುಹೂರ್ತ ಮತ್ತು ಉಗ್ರಾಣ ಪೂಜೆ, ಹಸಿರುವಾಣಿ ಸಮರ್ಪಣೆ ನಡೆಯಲಿದೆ. ನಂತರ ಶ್ರೀ ಬೆಳರಂಪಾಡಿ ವನಶಾಸ್ತಾವು ಕ್ಷೇತ್ರದಲ್ಲಿ ಸಾನಿಧ್ಯ ಕಲಶ ಮತ್ತು ಪಂಚಗವ್ಯ, ವಿಶೇಷ...
ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ವಿಶ್ವ ಶ್ರವಣ ದಿನದ ಪ್ರಯುಕ್ತ ಮಾ.03 ಶುಕ್ರವಾರದಂದು ಬೆಳಿಗ್ಗೆ ಕಿವಿ ಮೂಗು ಗಂಟಲಿನ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು, ನುರಿತ ತಜ್ಞರಿಂದ ತಪಾಸಣೆ ನಡೆಸಲಾಗುವುದು, ಆದುದರಿಂದ 0-6 ವರ್ಷದ ಮೂಗು, ಗಂಟಲು ಕಿವಿಯ ಯಾವುದೇ ಸಮಸ್ಯೆ ಇರುವ ಮಕ್ಕಳನ್ನು ತಪಾಸಣಾ ಶಿಬಿರಕ್ಕೆ ಕರೆ ತರಬೇಕಾಗಿ ತಾಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್ ತಿಳಿಸಿದ್ದಾರೆ.
ಅಲೆಕ್ಕಾಡಿ ಶಾಲಾ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರ ವತಿಯಿಂದ ಮಾ.9ರಂದು ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.ಎಂದು ಪ್ರಾಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುತ್ತಿಗಾರು : ಮಾ.3 ಮತ್ತು 4 ರಂದು ಮುತ್ತಪ್ಪ ತಿರುವಪ್ಪ ದೈವದ ಪುನರ್ ಪ್ರತಿಷ್ಠೆ ಹಾಗೂ ಜಾತ್ರೋತ್ಸವ ಗುತ್ತಿಗಾರಿನ ಮುತ್ತಪ್ಪನಗರದಲ್ಲಿರುವ ಶ್ರೀ ಮುತ್ತಪ್ಪೇಶ್ವರ ದೈವಸ್ಥಾನದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮೋತ್ಸವ ಮಾ. 03 ಮತ್ತು ಮಾ. 04 ರಂದು ಪುನರ್ ಪ್ರತಿಷ್ಠೆ ಹಾಗೂ ವಾರ್ಷಿಕ ಜಾತ್ರೋತ್ಸವ ನಡೆಯಲಿದೆ.ಮಾ....
ಮಾಣಿಯಲ್ಲಿ ಮಾ.1 ರಂದು ನಡೆದ ಕರ್ನಾಟಕ ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಎಸ್‌ಡಿಎಂಸಿ ಯ 21ನೇ ವರ್ಷಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕ್ರಿಯಾಶೀಲ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸುಳ್ಯ ತಾಲೂಕಿನ ಅಚ್ರಪ್ಪಾಡಿ ಶಾಲೆಯು ತಾಲೂಕು ಮಟ್ಟದ "ಕ್ರಿಯಾಶೀಲ ಶಾಲಾಭಿವೃದ್ಧಿ ಮತ್ತು...
Loading posts...
All posts loaded
No more posts
