- Wednesday
- August 26th, 2026
ಎಣ್ಮೂರು ಗ್ರಾಮದಲ್ಲಿ ಗ್ರಾಮಸ್ಥರು ಪಂಚಾಯತ್ ನಿಂದ ಏನೇ ಕೆಲಸವಾಗಬೇಕಾದರೂ 7 ಕಿ. ಮೀ. ದೂರದಲ್ಲಿರುವ ಎಡಮಂಗಲ ಗ್ರಾಮ ಪಂಚಾಯತ್ ಗೆ ಹೋಗಬೇಕು. ಎಣ್ಮೂರು ಗ್ರಾಮದಲ್ಲಿ ಪುನಃ ಕಾರ್ಯಾಲಯವನ್ನು ತರಬೇಕು ಇಲ್ಲವಾದಲ್ಲಿ ಮತದಾನ ಬಹಿಷ್ಕರಿಸುತ್ತೇವೆಂದು ಬ್ಯಾನರ್ ಅಳವಡಿಸಲಾಗಿದೆ.
ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವವು ಏ.13ರಿಂದ ಏ.19 ರವರೆಗೆ ನಡೆಯಲಿದ್ದು, ಇಂದು ಗೊನೆ ಮುಹೂರ್ತ ನಡೆಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಯು.ಯಂ.ಕಿಶೋರ್ ಕುಮಾರ್ ಮತ್ತು ವ್ಯ.ಸ.ಸದಸ್ಯರು, ಮಾಜಿ ಅಧ್ಯಕ್ಷರಾದ ಕೇಶವ ಕೊಳಲುಮೂಲೆ, ದೇವಳದ ಮನೇಜರ್ ಆನಂದ ಕಲ್ಲಗದ್ದೆ, ಅರ್ಚಕರು, ಊರ ಭಕ್ತಾಧಿಗಳು ಉಪಸ್ಥಿತರಿದ್ದರು.
ಇತಿಹಾಸ ಪ್ರಸಿದ್ಧ ಪೆರಾಜೆ ಶ್ರೀ ಶಾಸ್ತಾವು ದೇವಾಲಯದಲ್ಲಿ ಜಾತ್ರೋತ್ಸವ ನಡೆಯುತ್ತಿದ್ದು, ಇಂದು ಸಂಜೆ 4 ಗಂಟೆಗೆ ಶ್ರೀ ಭಗವತಿ ದೊಡ್ಡಮುಡಿ ಉತ್ಸವ ನಡೆಯುವುದು. ಬೆಳಗ್ಗೆ ಪೊಟ್ಟನ್ ದೈವ ನಡೆಯಿತು. ರಕ್ತೇಶ್ವರಿ, ಆಯರ್ ಭಗವತಿ, ಪುಲ್ಲೂರು ಕಾಳಿ, ಪುಲ್ಲೂರು ಕಣ್ಣನ್, ವಿಷ್ಣುಮೂರ್ತಿ ಮತ್ತು ಬೇಟೆ ಕರಿಮಗನ್ ಈಶ್ವರನ್ ದೈವ ನಡೆಯುವುದು. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯುವುದು.ಸಂಜೆ...
ಐನೆಕಿದು ಗ್ರಾಮದ ಕೂಜುಗೋಡು ಕಟ್ಟೆಮನೆ ತರವಾಡು ಶ್ರೀ ಕೆಂಚಾಂಬದೇವಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ.29 ಮತ್ತು 30 ರಂದು ನಡೆದರೆ, ಎ.1ರಂದು ಶ್ರೀ ರುದ್ರಚಾಮುಂಡಿ ಮತ್ತು ಸಪರಿವಾರ ದೈವಗಳ ಪ್ರತಿಷ್ಠೆ ಮತ್ತು ಧರ್ಮ ನಡಾವಳಿ ನಡೆಯುವುದು. ಮಾ.29 ರಂದು ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ದೇವತಾ ಪ್ರಾರ್ಥನೆ ನಡೆದು ವಿವಿಧ ಪೂಜಾ ಕಾರ್ಯಗಳು ನಡೆದವು. ಮಾ.30ರಂದು ಬೆಳಗ್ಗೆ...
ಜನಪ್ರಿಯ ವೈದ್ಯರಾಗಿ ಗುರುತಿಸಿಕೊಂಡಿದ್ದ ಸುಳ್ಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ತಜ್ಞರಾದ ಡಾ.ಹಿಮಕರ ಕೆ.ಎಸ್.ಅವರು ಸರಕಾರಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಅವರು ತಮ್ಮ 30 ವರ್ಷಗಳ ಸರಕಾರಿ ಸೇವೆಯಿಂದ ಅವರು ಮಾ.31ರಂದು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಇನ್ನೂ 6 ವರ್ಷಗಳ ಸೇವಾ ಅವಧಿಉಳಿದಿರುವಂತೆಯೇ ಅವರು ಸ್ವಯಂ ನಿವೃತ್ತಿ ಪಡೆದಿದ್ದಾರೆ. 1993ರಲ್ಲಿ ವೈದ್ಯರಾಗಿ ಸರಕಾರಿ ಸೇವೆಗೆ ಸೇರಿದ್ದ ಡಾ.ಹಿಮಕರ...
ನಾಲ್ಕೂರು ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಪ್ರಸ್ತಾಪಗೊಂಡು ಮರುವಶಕ್ಕೆ ಆದೇಶ ನೀಡಿದ್ದ ಸರ್ಕಾರಿ ಜಾಗದ ಅತಿಕ್ರಮಣ ಶುಕ್ರವಾರ ಕಂದಾಯ ಇಲಾಖೆ ತೆರವು ಮಾಡಿದೆ. ನಾಲ್ಕೂರಿನ ಉಜಿರಡ್ಕ ಎಂಬಲ್ಲಿ ಸುಮಾರು 4ಎಕ್ರೆ ಸರ್ಕಾರಿ ಜಾಗವನ್ನು ಮನುದೇವ ಪರಮಲೆ ಎಂಬವರು ಅತಿಕ್ರಮಣ ಮಾಡಿ ಅಡಿಕೆ ಕೃಷಿ ಮಾಡಿದ್ದರು. ಈ ಬಗ್ಗೆ ನಾಲ್ಕೂರಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿ ಗ್ರಾಮ...
ಗುತ್ತಿಗಾರಿನ ಬಾಕಿಲದ ಆನಂದ ರವರ ಪುತ್ರ ಗುತ್ತಿಗಾರು ಗ್ರಾ.ಪಂ.ಸದಸ್ಯ ಜಗದೀಶ್ ಮತ್ತು ದೇವಚಳ್ಳ ಗ್ರಾಮದ ಅಡ್ಡನಪಾರೆ ನಿವಾಸಿ ಅಚ್ರಪ್ಪಾಡಿ ದಿ. ಜನಾರ್ಧನ ಅವರ ಪುತ್ರಿ ಪ್ರತಿಮಾ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತಿದ್ದರೆನ್ನಲಾಗಿದೆ. ಆದರೆ ಮದುವೆಗೆ ಹುಡುಗಿ ಕಡೆಯವರ ವಿರೋಧವಿತ್ತೆನ್ನಲಾಗಿದೆ. ಮನೆಯವರು ಬೇರೆ ಹುಡುಗನ ನೋಡುತ್ತಿದ್ದಾರೆಂದು ಮನೆ ಬಿಟ್ಟು ವರನೊಂದಿಗೆ ತೆರಳಿ ಮದುವೆಯಾಗಿ, ವಿವಾಹ ನೋಂದಣಿ ಮಾಡಿರುವುದಾಗಿ...
ವಿಧಾನಸಭಾ ಚುನಾವಣೆ ದಿನ ನಿಗದಿಯಾದ ಬೆನ್ನಲ್ಲೇ ಎಲ್ಲಾ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ಜೋರಾಗಿಯೇ ಇದೆ. ಬಿಜೆಪಿ ಈ ಬಾರಿ ವಿನೂತನ ಕ್ರಮಕ್ಕೆ ಮುಂದಾಗಿದೆ. ಕ್ಷೇತ್ರದ ಆಯ್ದ ಜನಪ್ರತಿನಿಧಿಗಳ ಮೂಲಕ ಮತದಾನದ ಪ್ರಕ್ರಿಯೆ ಮುಖಾಂತರ ಆಯ್ಕೆ ಮಾಡಿ ಬಿಜೆಪಿ ಕಾರ್ಯಕರ್ತರ ಪಕ್ಷವಾಗಿಸಲು ಪ್ರಯತ್ನ ನಡೆಸಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ 128 ಮಂದಿ ಮತ ಚಲಾಯಿಸಲು...
ಕಲ್ಲುಗುಂಡಿ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಮಾ.28 ಮತ್ತು 29 ರಂದು ಶ್ರೀ ಮಾಹವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಿತು. ಮಾ.3೦ ರಂದು ಪಂಜುರ್ಲಿ, ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ಸಮ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಕೆ.ಆರ್.ಜಗದೀಶ್ ರೈ, ಮೊಕ್ತೇಸರರಾದ ಕೆ.ಕರುಣಾಕರ, ಕಾರ್ಯದರ್ಶಿ ಮಂಜುನಾಥ ಕೆ.ವಿ., ಕೋಶಾಧಿಕಾರಿ ಬಿ.ಆರ್.ಪದ್ಮಯ್ಯ, ಪ್ರಧಾನ ಪೂಜಾರಿ ನಾರಾಯಣ...
ಅರಂತೋಡಿನ ಗಿರಿಜಾ ಕಾಂಪ್ಲೆಕ್ಸ್‌ನಲ್ಲಿ ಮನಮೋಹನ್‌ರ ಮಾಲಕತ್ವದ ನಿಸರ್ಗ ಪೈಂಟ್ಸ್ ಮತ್ತು ಹಾರ್ಡ್‌ವೇರ್ ಮಾ.೩೧ ರಂದು ಶುಭಾರಂಭಗೊಂಡಿತು. ಉದ್ಘಾಟನೆಯನ್ನು ಗ್ರಾ.ಪಂ. ಅಧ್ಯಕ್ಷೆ ಹರಿಣಿ ದೇರಾಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪಿ.ಬಿ.ಪ್ರಭಾಕರ ರೈ, ಗ್ರಾ.ಪಂ. ಸದಸ್ಯರುಗಳು, ಸಿಬ್ಬಂದಿಗಳು ಮತ್ತು ಮನಮೋಹನ್‌ರವರ ಬಂಧು ಮಿತ್ರರು ಉಪಸ್ಥಿತಿದ್ದರು. ಗಣಪತಿ ಹವನದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಮನಮೋಹನರು ಸ್ವಾಗತಿಸಿ, ವಂದಿಸಿದರು. ಇಲ್ಲಿ ಪೈಂಟ್ ಮಿಕ್ಸಿಂಗ್...
Loading posts...
All posts loaded
No more posts
