ಸಂಧ್ಯಾ ಚೇತನ ಹಿರಿಯ ನಾಗರಿಕರ ಸಂಘದ ಮಹಾಸಭೆ

ಸಂಧ್ಯಾ ಚೇತನ ಸುಳ್ಯ ತಾಲೂಕು ಹಿರಿಯ ನಾಗರಿಕರ ಸಂಘದ ಮಹಾಸಭೆಯು ಜೂ.23 ರಂದು ಜಟ್ಟಿಪಳ್ಳ ಕಾನತ್ತಿಲ ರಸ್ತೆಯಲ್ಲಿರುವ ಹಿರಿಯರ ಮನೆಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬಾಪೂ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಗಿರೀಶ್ ಭಾರಧ್ವಜ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ, ಎಪಿಎಂಸಿ ಮಾಜಿ ಅಧ್ಯಕ್ಷ ಅಡ್ಡಂತಡ್ಕ...

ಕಿರ್ಲಾಯ :  ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಶ್ರಮದಾನ

ಅರಂತೋಡು ಗ್ರಾಮದ ಕಿರ್ಲಾಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ. 23 ರಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಶ್ರಮದಾನ ಮಾಡಲಾಯಿತು. ಈ  ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ, ಜಿಲ್ಲಾ ಕಾರ್ಯದರ್ಶಿ ಪರಮೇಶ್ವರ ಕೆಮ್ಮಿಂಜೆ, ಸುಳ್ಯ ಘಟಕ ಅಧ್ಯಕ್ಷ ರಮೇಶ್ ಕೊಡಂಕಿರಿ, ಕಾರ್ಯದರ್ಶಿ ತೇಜಕುಮಾರ್ ಅರಮನೆಗಯ, ಅರಂತೋಡು ಘಟಕ ಅಧ್ಯಕ್ಷರಾದ ನವೀನ್...
Ad Widget

ಗುತ್ತಿಗಾರು : ತಂಬಾಕು ವ್ಯಸನ ಮುಕ್ತ ಹಾಗೂ ದುಶ್ಚಟಗಳ ದುಷ್ಪರಿಣಾಮಗಳ ಕುರಿತ ಜಾಗೃತಿ

ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ತಂಬಾಕು ವ್ಯಸನ ಮುಕ್ತ ಹಾಗೂ ದುಶ್ಚಟಗಳ ದುಷ್ಪರಿಣಾಮಗಳ ಕುರಿತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವಿಷಯದ ಕುರಿತಂತೆ ಶತಾಯು ಆಯುರ್ವೇದ ಕ್ಲಿನಿಕ್ ಗುತ್ತಿಗಾರು ಇದರ ಡಾ| ನಿಶಾಂತ್.ಆರ್ನೋಜಿ ಇವರು ವಿದ್ಯಾರ್ಥಿಗಳಿಗೆ ತಂಬಾಕು ಸೇವನೆ ಹಾಗೂ ಇತರ ದುಶ್ಚಟಗಳು ಮತ್ತು ಸಾಮಾಜಿಕ ಜಾಲತಾಣಗಳಿಂದ ವಿದ್ಯಾರ್ಥಿಗಳಿಗೆ ಆಗುವ ದುಷ್ಪರಿಣಾಮಗಳ...

ನಿಡುಬೆ : ಶ್ರೀ.ಧ.ಗ್ರಾ.ಯೋಜನೆಯಿಂದ ವೀಲ್ ಚಯರ್ ಹಸ್ತಾಂತರ

ಬೆಳ್ಳಾರೆ ವಲಯದ ಐವರ್ನಾಡು ಕಾರ್ಯಕ್ಷೇತ್ರದ ನಿಡುಬೆ ಎಂಬಲ್ಲಿ ವಾಸವಾಗಿರುವ ಸೋಮಶೇಖರ್ ಅವರು ಎದ್ದು ನಡೆಯಲಾಗದ ಅಸಹಾಯಕ ಸ್ಥಿತಿಯಲ್ಲಿದ್ದು ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾದ ವೀಲ್ ಚಯರನ್ನು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಜೆ.ಟಿ.ವೆಂಕಪ್ಪ ಗೌಡ ಮತ್ತು ಒಕ್ಕೂಟದ ಅಧ್ಯಕ್ಷರಾದ ವೇದ ಹೆಚ್.ರೈ ಮತ್ತು ವಲಯ ಮೇಲ್ವಿಚಾರಕರಾದ ಗೋಪಾಲಕೃಷ್ಣ ಮತ್ತು ಸೇವಾಪ್ರತಿನಿಧಿ ಶ್ರೀಮತಿ ವನಿತಾರವರ...

ಐವರ್ನಾಡು : ಶ್ರೀ ವಿಷ್ಣು ಸ್ವಸಹಾಯ ಸಂಘ ಉದ್ಘಾಟನೆ

ಬೆಳ್ಳಾರೆ ವಲಯದ ಐವರ್ನಾಡು ಒಕ್ಕೂಟದಲ್ಲಿ ಶ್ರೀ ವಿಷ್ಣು ಸ್ವಸಹಾಯ ಸಂಘವನ್ನು ಉದ್ಘಾಟನೆ ಮಾಡಲಾಯಿತು .ಈ ಸಂದರ್ಭದಲ್ಲಿ ಯೋಜನೆ ಕಾರ್ಯಕ್ರಮದ ಮಾಹಿತಿಯನ್ನು ವಲಯ ಮೇಲ್ವಿಚಾರಕರಾದ ಗೋಪಾಲಕೃಷ್ಣರವರು ಮಾಹಿತಿಯನ್ನು ನೀಡಿದರು. ಸೇವಾ ಪ್ರತಿನಿಧಿ ಶ್ರೀಮತಿ ವನಿತ, ಪ್ರಬಂಧಕರಾಗಿ ಶ್ರೀಮತಿ ಸುಂದರಿ, ಸಂಯೋಜಕರಾಗಿ ಸುನಿತಾ ಮತ್ತು ಕೋಶಾಧಿಕಾರಿಯಾಗಿ ಬೇಬಿ ಇವರನ್ನು ಆಯ್ಕೆ ಮಾಡಲಾಯಿತು.

ಪೈಂಟಿಂಗ್ ಮಾಡುತ್ತಿದ್ದ ಯುವಕ ಬಿದ್ದು ಗಂಭೀರ ಜಖಂ

: ನಿರ್ಮಾಣ ಹಂತದಲ್ಲಿರುವ ಮನೆಗೆ ಪೈಂಟ್ ಮಾಡುತ್ತಿದ್ದ ಯುವಕನೋರ್ವ ಮೇಲಿನಿಂದ ಬಿದ್ದು ಗಂಭೀರ ಜಖಂಗೊಂಡ ಘಟನೆ ಸುಳ್ಯ ಸಮೀಪದ ಬೋರುಗುಡ್ಡೆ ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ.ಪೈಂಟರ್ ಆಗಿ ವೃತ್ತಿ ನಿರ್ವಹಿಸುತ್ತಿರುವ ಸುಳ್ಯ ಜಯನಗರದ ಉಸ್ಮಾನ್ ಎಂಬ ಯುವಕ ನೂತನವಾಗಿ ನಿರ್ಮಿಸುತ್ತಿರುವ ಮನೆಯೊಂದರ ಮೊದಲನೆಯ ಅಂತಸ್ತಿನಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಇಟ್ಟಿದ್ದ ಹಲಗೆ ತುಂಡಾಗಿ ಕೆಳಕ್ಕೆ...

ಅರಂತೋಡು: ಆರೋಗ್ಯಯುತ ಜೀವನಕ್ಕೆ ಯೋಗ ಸಹಕಾರಿ -ಕೆ.ಆರ್ ಗಂಗಾಧರ್

ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕತ ಹಾಗೂ ಕಾಲೇಜಿನ ಸಂಚಾಲಕರಾದ ಕೆ. ಆರ್. ಗಂಗಾಧರ್ ಗಿಡಕ್ಕೆ ನೀರು ಹಾಕುವ ಮೂಲಕ ನೆರವೇರಿಸಿ ಮಾತನಾಡಿ, ಜಗತ್ತಿಗೆ ಭಾರತದ ಪ್ರಮುಖ ಕೊಡುಗೆಗಲ್ಲಿ ಯೋಗ ಪ್ರಮುಖ ವಾಗಿದೆ. ಪ್ರಧಾನಿ ನರೇಂದ್ರ ಮೋದಿ ಭಾರತೀಯ ಯೋಗ ಪರಂಪರೆಗೆ ಅಂತಾರಾಷ್ಟ್ರೀಯ...

ಬಿಳಿನೆಲೆ: ವಿಶ್ವ ಯೋಗ ದಿನಾಚರಣೆ

ಶ್ರೀ ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ರಿಜಿಸ್ಟರ್ ಸುಬ್ರಮಣ್ಯ ಇದರ ಅಂಗಸಂಸ್ಥೆಯಾದ ಶ್ರೀ ವೇದವ್ಯಾಸ ವಿದ್ಯಾಲಯ ಬಿಳಿನೆಲೆ ಇಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ 21/06/2023 ಬುಧವಾರದಂದು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಶರ್ಮ ಕಾರ್ಯದರ್ಶಿಗಳು, ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ (ರಿ) ಇವರು ಮಾತನಾಡಿ ಯೋಗವು ಮಾನವನ ಸರ್ವಾಂಗಿನ ಬೆಳವಣಿಗೆಗೆ ಹಾಗೂ...

ನಾಲ್ಕೂರು :- ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಗುತ್ತಿಗಾರು ವಲಯ, ಶೌರ್ಯ ವಿಪತ್ತು ನಿರ್ವಹಣಾ ತಂಡ ನಾಲ್ಕೂರು, ಶಾಲಾಭಿವೃದ್ಧಿ ಸಮಿತಿ ನಡುಗಲ್ಲು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಉಮೇಶ್ವರಿಯವರ ಅಧ್ಯಕ್ಷತೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ನಡೆಸಲಾಯಿತು....

ದೇವರಕೊಲ್ಲಿ : ಸ್ವಿಫ್ಟ್ ಕಾರು ಹಾಗೂ ಕಂಟೈನರ್ ನಡುವೆ  ಭೀಕರ ಅಪಘಾತ – ಓರ್ವ ಮೃತ್ಯು

ದೇವರಕೊಲ್ಲಿ ಬಳಿ ಸ್ವಿಫ್ಟ್ ಕಾರು ಹಾಗೂ ಕಂಟೈನರ್ ನಡುವೆ ಇಂದು ರಾತ್ರಿ  ಭೀಕರ ಅಪಘಾತ ನಡೆದಿದ್ದು ಗಂಭೀರ ಗಾಯಗೊಂಡಿದ್ದ ನಾಲ್ವರ ಪೈಕಿ ಕಾರಿನಲ್ಲಿದ್ದ ಒರ್ವ ಮೃತಪಟ್ಟ ಘಟನೆ ನಡೆದಿದೆ. ಗಾಯಾಳುಗಳನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿ ಪುನಃ ಬೆಂಗಳೂರಿಗೆ ಹಿಂತಿರುಗುತ್ತಿದ್ದರೆನ್ನಲಾಗಿದೆ. ಕಾರಿನಲ್ಲಿ ಐವರು ಪ್ರಯಾಣಿಕರಿದ್ದು, ಇಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು...
Loading posts...

All posts loaded

No more posts

error: Content is protected !!