ಚಿನ್ನಪ್ಪ ಗೌಡ ಹೆರ್ಕಜೆ ನಿಧನ

ದೇವಚಳ್ಳ ಗ್ರಾಮದ ಹೆರ್ಕಜೆ ಚಿನ್ನಪ್ಪ ಗೌಡ ಎಂಬುವವರು ಅಲ್ಪಕಾಲದ ಅಸೌಖ್ಯದಿಂದ ಇಂದು(ಡಿ.30) ಬೆಳಗ್ಗಿನ ಜಾವ 3:30ರ ಸುಮಾರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ 70 ವರ್ಷ ವಯಸ್ಸಾಗಿದ್ದು, ಮೃತರು ಪತ್ನಿ, ಮಕ್ಕಳು, ಅಳಿಯಂದಿರು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.ಮೃತರ ಅಂತ್ಯಸಂಸ್ಕಾರವು ಇಂದು ಮದ್ಯಾಹ್ನದ ನಂತರ ಮೃತರ ಸ್ವಗೃಹದಲ್ಲಿ ನೆರವೇರಲಿದೆ ಎಂದು ಆಪ್ತರು ತಿಳಿಸಿದ್ದಾರೆ.

ಗಿರಿಜಾಶಂಕರ ತುದಿಯಡ್ಕ ವಿಧಿವಶ.

ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರಾಗಿದ್ದ ದಿ. ತುದಿಯಡ್ಕ ವಿಷ್ಣಯ್ಯ ರವರ ಪುತ್ರ ಹಾಗೂ ಈಗಿನ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕರವರ ಸಹೋದರ ಗಿರಿಜಾಶಂಕರ ತುದಿಯಡ್ಕರವರು ನಿನ್ನೆ ಸಂಜೆ ತೀವ್ರ ಅಸೌಖ್ಯಕ್ಕೊಳಗಾಗಿ ಪ್ರಜ್ಞಾರಹಿತರಾಗಿದ್ದು ಅವರನ್ನು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು.
Ad Widget

ಗಾಂಧಿನಗರ ಕಾರ್ಯಕ್ಷೇತ್ರದ ಒಕ್ಕೂಟ ತ್ರೈಮಾಸಿಕ ಸಭೆ ಲಾಭಾಂಶ ವಿತರಣೆಯೊಂದಿಗೆ ನಡೆಯಿತು…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕಿನ ಸುಳ್ಯವಲಯದ ಗಾಂಧಿನಗರ ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆಯಲ್ಲಿ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ವೆಂಕಪ್ಪಗೌಡರವರು ಕಾನೂನಿನ ಬಗ್ಗೆ ಅರಿವು ಇರಲಿ ಎಂದು ತಿಳಿಸಿ, ವಾಹನ ಚಲಾವಣೆಯಲ್ಲಿ ಆಗುವ ಸಮಸ್ಯೆಗಳು, ನಮ್ಮಲ್ಲಿ ಬೇಕಾದ ದಾಖಲಾತಿಗಳು ಯಾವುದೆಲ್ಲ ಎಂಬುದನ್ನು ವಿವರವಾಗಿ ಮಾಹಿತಿ ನೀಡಿದರು, ದಾಖಲಾತಿಗಳು ನಮ್ಮಲ್ಲಿ ಇಲ್ಲದೆ ಇದ್ದ ಸಂದರ್ಭದಲ್ಲಿ...

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನಡೆಸಿದ ಸಿ ಎ ಪರೀಕ್ಷೆಯಲ್ಲಿ ಅಭಿರಕ್ಷಾ ಕೃಷ್ಣವೇಣಿ ತೇರ್ಗಡೆ.

ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ನಡೆಸಿದ ಸಿ ಎ ಪರೀಕ್ಷೆಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಿ ಯು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಅಭಿರಕ್ಷಾ ಕೃಷ್ಣವೇಣಿ ತೇರ್ಗಡೆ ಯಾಗಿದ್ದಾರೆ.ಪ್ರಾಥಮಿಕ ಶಿಕ್ಷಣವನ್ನು ವಿದ್ಯಾಭಾರತಿ ಶಾಲೆ ಅಡೂರು, ಪ್ರೌಢ ಶಿಕ್ಷಣವನ್ನು ಗಜಾನನ ಶಾಲೆ ಈಶ್ವರ ಮಂಗಲ, ಬಿ ಕಾಂ ನ್ನು ಶ್ರೀ ಭಾರತಿ ಕಾಲೇಜು ನಂತೂರು ಮಂಗಳೂರು, ಸಿ ಎ...

ವಸಂತ ರತ್ನ ವಿಶೇಷ ಮಕ್ಕಳ ಶಾಲೆ – ಹುಟ್ಟುಹಬ್ಬ ಆಚರಣೆ

ಸಂಸ್ಥೆಯ ಆಡಳಿತ ಮಂಡಳಿಯಾದ ವಿದ್ಯಾವಾರಿಧಿ ಚಾರೀಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಲಯನ್ಸ್ ಕ್ಲಬ್ ನ ಪದಾದೀಕಾರಿಯಾದ ಬಾಲಕೃಷ್ಣ ಗೌಡ ಮೂಲೆಮನೆಯವರ ಹುಟ್ಟು ಹಬ್ಬವನ್ನು ವಸಂತ ರತ್ನ ವಿಶೇಷ ಮಕ್ಕಳ ಶಾಲೆ ಕರಿಂಬಿಲ - ಎಡಮಂಗಲ ಇಲ್ಲೀ ವೀಶೇಷ ಮಕ್ಕಳ ಜೊತೆ ಡಿಸೆಂಬರ್ 26ರಂದು ಆಚರಿಸಲಾಯಿತು, ಮತ್ತು ಅನ್ನದಾನ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಲಯನ್ಸ...

ಜ.೩ ರಿಂದ ೫ ರ ತನಕ ಬೆಳ್ಳಾರೆ ಕೆಪಿಎಸ್ ನಲ್ಲಿವಸಂತ ಸಂಭ್ರಮ ,ವಿಧಾನ ಸಭಾಧ್ಯಕ್ಷರು ಸಹಿತ ಸಚಿವರು ಅಧಿಕಾರಿಗಳು ಸಹಿತ ಭಾಗೀ.‌

ಜ.03,4,5 : ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಸಂತ ಸಂಭ್ರಮ ಕಾರ್ಯಕ್ರಮವು ನಡೆಯಲಿದ್ದು ಅಲ್ಲದೇನವೀಕೃತ ಶಾಲಾ ಕ್ರೀಡಾಂಗಣ,ಶಾಲಾ ನೂತನ ಕೊಠಡಿಗಳ ಉದ್ಘಾಟನೆ , ಸಾಧಕರಿಗೆ ಸನ್ಮಾನದ ಕುರಿತಾಗಿ ಬೆಳ್ಳಾರೆ ಕೆಪಿಎಸ್ಸಿ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಧಾಧಿಕಾರಿಗಳು ತಿಳಿಸಿದರು. ಪತ್ರಿಕಾಗೋಷ್ಡಿಯಲ್ಲಿ ರಾಜೀವಿ ರೈ ಮತ್ತು ಎಸ್ ಎನ್ ಮನ್ಮಥರು ಮಾತನಾಡುತ್ತಾ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ...

ಜ.4,5,6,ರಂದು ಮಾಪಳಡ್ಕ ಮಖಾಂ ಉರೂಸ್ ಹಾಗೂ ಹಾಫಿಳ್ ಸನದು ದಾನ ಸಮ್ಮೇಳನ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಜಾಲ್ಲೂರು ಸಮೀಪ ಮಾಪಳಡ್ಕ ಮಖಾಂ ಶರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮಹಾತ್ಮರುಗಳ ಸ್ಮರಣಾರ್ಥ ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರುವ ಮಾಪಳಡ್ಕ ಮಖಾಂ ಉರೂಸ್ ಹಾಗೂ ಮಾಪಳಡ್ಕ ದರ್ಸಿನಲ್ಲಿ ಕುರ್-ಆನ್ ಕಂಠಪಾಠ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಹಾಫಿಝ್ ಪದವಿ ಪ್ರದಾನ ಸಮ್ಮೇಳನವು ಜನವರಿ 4,5,6 ದಿನಾಂಕಗಳಲ್ಲಿ ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು...

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ ಗೋಕುಲ್ ದಾಸ್ ಸಾರ್ವಜನಿಕ ಅಭಿನಂದನಾ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ. ಅಭಿಮಾನಿಗಳು ಹಿತೈಷಿಗಳಿಂದ ಸನ್ಮಾನ.

ಸುಳ್ಯ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ ಗೋಕುಲ್ ದಾಸ್ ರವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವು ಲಯನ್ಸ್ ಸೇವಾ ಸದನ ಸುಳ್ಯದಲ್ಲಿ ಅದ್ದೂರಿಯಾಗಿ ಜರುಗಿತು . ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ಹಿರಿಯ ಸಹಕಾರಿ ಸೀತಾರಾಮ ರೈ ಸವಣೂರು ರವರು ಉದ್ಘಾಟಿಸಿ ಮಾತನಾಡುತ್ತಾ ಕೆ.ಗೋಕುಲ್ ದಾಸ್ ರವರು ಎಲ್ಲಾ ಕ್ಷೇತ್ರದಲ್ಲಿ ತಮ್ಮ ಕೈಗಳನ್ನು ಆಡಿಸಿದ್ದು ಅವರು...

ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಸಿ.ಎಸ್.ಷಡಾಕ್ಷರಿ ಪುನರಾಯ್ಕೆ : ಸುಳ್ಯ ಶಾಖೆಯಿಂದ ಗೌರವ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಸಿ.ಎಸ್. ಷಡಾಕ್ಷರಿಯವರು ಎರಡನೇ ಅವಧಿಗೆ ಆಯ್ಕೆಯಾಗಿದ್ದು, ಅವರನ್ನು ಸುಳ್ಯ ಶಾಖೆ ವತಿಯಿಂದ ಬೆಂಗಳೂರಿನಲ್ಲಿ ಗೌರವಿಸಲಾಯಿತು. ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ನಿತಿನ್ ಪ್ರಭು, ರಾಜ್ಯ ಪರಿಷತ್ ಸದಸ್ಯ ಮಂಜು, ತಾಲೂಕು ಶಾಖೆ ಪ್ರಧಾನ ಕಾರ್ಯದರ್ಶಿ ಪೃಥ್ವಿ ಕುಮಾರ್ ಟಿ, ಕೋಶಾಧಿಕಾರಿ ಕುಶಾಲಪ್ಪ ತುಂಬತ್ತಾಜೆ, ನಿರ್ದೇಶಕ...

ಪುತ್ತೂರಿನಲ್ಲಿ ಭೀಕರ ಅಪಘಾತ – ಕಾರು ಪಲ್ಟಿಯಾಗಿ ಸುಳ್ಯ ಮೂವರು ದಾರುಣ ಮೃತ್ಯು

ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಪರ್ಲಡ್ಕ ಜಂಕ್ಷನ್ ನಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಪರಿಣಾಮವಾಗಿ ಸುಳ್ಯದ ಜಟ್ಟಿಪಳ್ಳದ ಮೂವರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ನಿವೃತ್ತ ಅಂಚೆ ಪಾಲಕ ಸುಳ್ಯ ಜಟ್ಟಿಪಳ್ಳದ ಅಣ್ಣು ನಾಯ್ಕ, ಅವರ ಮಗ ಚಿದಾನಂದ ನಾಯ್ಕ ಮತ್ತು ಸಂಬಂಧಿ ರಮೇಶ್ ನಾಯ್ಕ ಮೃತಪಟ್ಟವರೆಂದು ತಿಳಿದುಬಂದಿದೆ. ಈಗ ಮೃತದೇಹಗಳನ್ನು ಪುತ್ತೂರು ಸರಕಾರಿ...
Loading posts...

All posts loaded

No more posts

error: Content is protected !!