- Monday
- June 22nd, 2026
ಕಲ್ಲುಗುಂಡಿ ಶ್ರೀ ದುರ್ಗಾಪರಮೇಶ್ವರಿ ಮಂದಿರದಲ್ಲಿ ಜ.09 ರಂದು ಕಲ್ಲುಗುಂಡಿ, ಚೆಂಬು, ಮತ್ತು ಕೊಡಗು ಸಂಪಾಜೆ ಗ್ರಾಮದ ಪ್ರಮುಖರು ಸೇರಿ ಬೃಹತ್ ಹಿಂದೂ ಸಮಾಜೋತ್ಸವದ ಕುರಿತು ಸಮಾಲೋಚನೆ ನಡೆಸಿದರು . ವಿಚಾರ ಮಂಡನೆ ಸೇರಿದಂತೆ , ಶ್ರೀಮತಿ ರಮಾದೇವಿ ಕಳಗಿ, ರಾಜ ಗೋಪಾಲ ಉಳುವಾರು , ಮಾಧವ ಪೇರಾಲು , ಶ್ರೀಧರ ದುಗ್ಗಳ ಮುಂತಾದವರು ಕಾರ್ಯ ಯೋಜನೆ...
ಪ್ರತಿಷ್ಠಿತ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಗ್ರಾಹಕರಿಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳನ್ನು ನೀಡಲಿದ್ದು, ಜ.11 ರಿಂದ 14 ರವರೆಗೆ ಚಿನ್ನಾಭರಣಗಳ ಪ್ರತೀ ಗ್ರಾಂ ಗಳ ಮೇಲೆ ರೂ.200 ರಂತೆ ಹಾಗೂ ಗ್ಲೋ ವಜ್ರಾಭರಣಗಳ ಮೇಲೆ ಪ್ರತೀ ಗ್ರಾಂ ಗೆ ರೂ.8,000 ದವರೆಗೆ ರಿಯಾಯಿತಿ ಪಡೆಯಬಹುದಾಗಿದೆ.ಗ್ರಾಹಕರು ಹಬ್ಬದ ಸಂದರ್ಭದಲ್ಲಿ ಈ ಕೊಡುಗೆಗಳನ್ನು ಪಡೆದುಕೊಂಡು ಸಂಭ್ರಮದಿಂದ...
ನಾಲ್ಕೂರು ಗ್ರಾಮದ ನಡುಗಲ್ಲು ಕಡವೆಪಳ್ಳ ರಾಮಣ್ಣ ನಾಯ್ಕ (76)ಅಲ್ಪ ಕಾಲದ ಅಸೌಖ್ಯದಿಂದ ಜ.09 ರಂದು ನಿಧನರಾದರು. ಮೃತರು ಪತ್ನಿ ಚಂದ್ರಾವತಿ, ಪುತ್ರಿ ಶ್ರೀಮತಿ ಸುಮತಿ, ಅಳಿಯ ರತ್ನಾಕರ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ ಸ್ಥಳೀಯರು ಹರಿಹರ ಪಳ್ಳತ್ತಡ್ಕ ಗ್ರಾಮದ ಪುಟ್ಟಣ್ಣ ಗೌಡ ಭೀಮಗುಳಿ ಎಂಬುವವರ ಮೇಲೆ ಬೀಡಾಡಿ ಹೋರಿಯೊಂದು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಇಂದು(ಜ.09) ಸಂಜೆ ಹರಿಹರ ಪೇಟೆಯಲ್ಲಿ ನಡೆದಿದೆ.ಪುಟ್ಟಣ್ಣ ಗೌಡ ರವರು ಅವರ ಮನೆಯ ಸಮೀಪದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ...
ದೇವಚಳ್ಳ ಗ್ರಾಮದ ದೊಡ್ಡಕಜೆ ಪರಮೇಶ್ವರಿ ಎಂಬುವವರು ಇಂದು ಮದ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.ಮೃತರಿಗೆ 88 ವರ್ಷ ವಯಸ್ಸಾಗಿತ್ತು.ಮೃತರು ಮಕ್ಕಳಾದ ಗಂಗಾಧರ, ಜತ್ತಪ್ಪ, ಮೋಹನ್, ಮೋಹನಾಂಗಿ, ಶುಭಲತಾ, ಭವಾನಿ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
ಸುಳ್ಯದ ಗಾಂಧಿನಗರದ ಜನತಾ ಸ್ಟೋರ್ ಮುಂಬಾಗದಲ್ಲಿ ಇನ್ಸ್ ಪೈರ್ ಮೆನ್ಸ್ ವೇರ್ ಡಿ.05 ರಂದು ಶುಭಾರಂಭಗೊಂಡಿತು. ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಎ. ನೀರಬೀದಿರೆ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವರ್ತಕರ ಸಂಘ ಸುಳ್ಯದ ಅಧ್ಯಕ್ಷರಾದ ಸುಧಾಕರ ರೈ ಪಿ. ಬಿ, ಗೌಡರ ಯುವ ಸೇವಾ ಸಂಘ ಸುಳ್ಯ ಇದರ ಅಧ್ಯಕ್ಷರಾದ...
ಗುತ್ತಿಗಾರು ಗ್ರಾಮದ ಮೊಗ್ರ, ಮಲ್ಕಜೆ, ಕಿನ್ನಿಕುಮೇರಿ ಭಾಗದ ಸುಮಾರು 60 ಮನೆಗಳ ಸದಸ್ಯರು ಒಟ್ಟು ಸೇರಿ ರಕ್ಷಾ ನಾಗರಿಕ ಬಳಗ ಎಂಬ ಸಮಾಜಸೇವಾ ಸಂಘಟನೆಯನ್ನು ರಚಿಸಿರುತ್ತಾರೆ.ಸಂಘಟನೆಯ ಅಧ್ಯಕ್ಷರಾಗಿ ಲ| ನಾಗೇಶ್ ಕಿನ್ನಿಕುಮೇರಿ, ಪ್ರಧಾನ ಕಾರ್ಯದರ್ಶಿಯಾಗಿ ಜೇಸಿ ಜೀವನ್ ಮಲ್ಕಜೆ, ಖಜಾಂಚಿಯಾಗಿ ದಯಾನಂದ ಕಿನ್ನಿಕುಮೇರಿಯವರನ್ನು ಆಯ್ಕೆ ಮಾಡಲಾಯಿತು.ಸಂಚಾಲಕರಾಗಿ ಲಯನ್ ಕರುಣಾಕರ ಎಣ್ಣೆಮಜಲು, ಸುಧಾಕರ ಮಲ್ಕಜೆ, ಉಮೇಶ ಮಕ್ಕಿ,...
ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಮಕೃಷ್ಣ ಭಟ್ ಕುರುಂಬುಡೇಲು ಮತ್ತು ಉಪಾಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ ಪೆರುವಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ 11 ಮಂದಿ ಅಭ್ಯರ್ಥಿಗಳು ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಇಂದು ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ರಾಮಕೃಷ್ಣ ಭಟ್ ಕುರುಂಬುಡೇಲು ಅಧ್ಯಕ್ಷತೆಗೆ ಮತ್ತು...
ಶ್ರೀ ಅಯ್ಯಪ್ಪ ಭಜನಾ ಮಂದಿರ ಶಕ್ತಿನಗರ ಕಲ್ಮಕಾರು ಇದರ ಉಪ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜ.07 ರಂದು ಅನುದಾನವನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಮಾಧವ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಅಧ್ಯಕ್ಷರಾದ ತೀರ್ಥರಾಮ ದೋಣಿಪಳ್ಳ, ಕಲ್ಮಕಾರು ಒಕ್ಕೂಟದ...
ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀ ಸುರೇಶ್ ವಾಗ್ಲೆ ವಹಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಗಾಯತ್ರಿ ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಮಾರ್ಗದರ್ಶನ ನೀಡಿದರು ಅರ್ಥಶಾಸ್ತ್ರ ಉನ್ಯಾಸಕ ಶ್ರೀ...
Loading posts...
All posts loaded
No more posts
