- Monday
- June 22nd, 2026
ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ -2025 ರಾಜ್ಯಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯು ಬೆಂಗಳೂರು ಸ್ಲರ್ಪ್ ಅಕಾಡೆಮಿಯಲ್ಲಿ ನಡೆಯುತ್ತಿದ್ದು ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥನ ಬಹುಮಾನ ಪಡೆದ ತಂಡಗಳನ್ನು ಮಂಗಳೂರು ಜಂಟಿ ಸಹಾಯಕ ಕೃಷಿ ನಿರ್ದೇಶಕ ಕಛೇರಿಯ ಧನಲಕ್ಷ್ಮೀ ಡಿ. ಎನ್ ಇವರ ನೇತೃತ್ವದಲ್ಲಿ ಬೆಂಗಳೂರಿನ ಸ್ಪರ್ಧೆಯಲ್ಲಿ ಭಾಗವಹಿಸಲಾಯಿತು.ಮಂಗಳೂರಿನಲ್ಲಿ...
ಕಸ್ತೂರಿ ರಂಗನ್ ವರದಿ ವಿರೋಧಿಸಿ, ಗಡಿ ಗುರುತು ಹಾಗೂ ಜಂಟಿಸರ್ವೇ ಆಗಬೇಕೆಂಬ ವಿಚಾರವಾಗಿ ಸುಬ್ರಹ್ಮಣ್ಯ ವಲಯದ ಅಡಿಯಲ್ಲಿ ಬರುವ ಕೃಷಿಕರಿಂದ ಜ. 08 ರಂದು ಬೃಹತ್ ಪ್ರತಿಭಟನೆ ನಡೆಯಲಿದೆ. ಮಲೆನಾಡು ಜನಹಿತರಕ್ಷಣಾ ವೇದಿಕೆಯ ಅಡಿಯಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು ಈ ಪ್ರತಿಭಟನೆಯ ನಂತರದ ದಿನಗಳಲ್ಲಿ ಪಂಜ,ಸುಳ್ಯ ಹಾಗೂ ಉಪ್ಪಿನಂಗಡಿಯಲ್ಲಿಯೂ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಧರಣಿ...
ಸುಳ್ಯದ ಪುರದೊಡೆಯ ಶ್ರೀ ಚನ್ನಕೇಶವನಿಗೆ ಜಾತ್ರಾ ಸಂಭ್ರಮ ಸುಮಾರು 300 ವರ್ಷಗಳ ನಂತರ ನೂತನವಾಗಿ ಆಗಮಿಸಿದ ವಿಶೇಷವಾದ ಬ್ರಹ್ಮರಥ ಸಮರ್ಪಣೆಯ ನಂತರದ ಪ್ರಥಮ ಜಾತ್ರಾ ಮಹೋತ್ಸವ ಇದಾಗಿದ್ದು ಬ್ರಹ್ಮರಥವು ವಿಶೇಷ ಆಕರ್ಷಣೀಯ ಕೇಂದ್ರವಾದ ಕಾರಣ ತಾಲ್ಲೂಕಿನ ಮೂಲೆ ಮೂಲೆಗಳಿಂದ ಅತಿ ಹೆಚ್ಚು ಜನರು ಜಾತ್ರೆಗೆ ಆಗಮಿಸಿ. ಬ್ರಹ್ಮರಥೋತ್ಸವವನ್ನು ಕಣ್ತುಂಬಿಕೊಳ್ಳಲಿದ್ದಾರೆ ದಿನಾಂಕ 07-01-2025ನೇ ಮಂಗಳವಾರ ರಾತ್ರಿ ಉತ್ಸವ...
ರಿಫಾಯಿ ಜುಮ್ಮಾ ಮಸ್ಜಿದ್ ಸಮಹಾದಿ ಇದರ ಅಧೀನದಲ್ಲಿ ರಿಫಾಯಿ ಯೂತ್ ಫೆಡರೇಶನ್ ಸಮಹಾದಿ ಎಂಬ ನೂತನ ಯುವಕರ ಸಂಘಟನೆಯನ್ನು ರಚಿಸಲಾಯಿತು.ಇದರ ರೂಪೀಕರಣ ಸಭೆಯು ಬೈತಡ್ಕ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಇದರ ಅಧ್ಯಕ್ಷರಾದ ಬಿ.ಪಿ ಇಸ್ಮಾಯಿಲ್ ಹಾಜಿಯವರ ಅಧ್ಯಕ್ಷತೆಯಲ್ಲಿ ಸಮಹಾದಿ ಮಸೀದಿಯಲ್ಲಿ ನಡೆಯಿತು. ಮಸೀದಿ ಖತೀಬರಾದ ಬಹು| ರಫೀಕ್ ನಿಝಾಮಿ ಉಸ್ತಾದ್ ರು ಪ್ರಾಸ್ತಾವಿಕವಾಗಿ...
ಪೆರಾಜೆ ಗ್ರಾಮದ ಬಂಗಾರಕೋಡಿ ಪರಿಸರದಲ್ಲಿ ಕಾಡಾನೆಗಳು ತೋಟಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿ ನಷ್ಟ ಮಾಡಿರುವ ಘಟನೆ ವರದಿಯಾಗಿದೆ. ಬಂಗಾರಕೋಡಿ ಜಯರಾಮ ಎಂಬವರ ತೋಟಕ್ಕೆ ಕಳೆದ ರಾತ್ರಿ ನುಗ್ಗಿರುವ ಕಾಡಾನೆಗಳು ಅಪಾರ ಪ್ರಮಾಣದ ಬಾಳೆಗಿಡಗಳು,ತೆಂಗು, ಅಡಿಕೆ ಗಿಡಗಳನ್ನು ನಾಶ ಮಾಡಿರುವ ಬಗ್ಗೆ ವರದಿಯಾಗಿದೆ.
ಕಲ್ಮಕಾರು ಗ್ರಾಮದ ಕೊಪ್ಪಡ್ಕ ಸುಬ್ರಹ್ಮಣ್ಯ ಕೊಪ್ಪಡ್ಕ ಮತ್ತು ಮೇನಕ ಸುಬ್ರಹ್ಮಣ್ಯ ಇವರು ಬಿಜೆಪಿಯ ತತ್ವ ಸಿದ್ಧಾಂತಗಳಿಗೆ ಬದ್ದವಾಗಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನವೀನ್ ಮುಳುಗಾಡು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ ಇವರ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು.
ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿದ್ದು, ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಪಿ.ಸಿ.ಜಯರಾಮ ಹಾಗೂ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಯಾದ ಹಾಲಿ ನಿರ್ದೇಶಕ ಚಂದ್ರಾ ಕೋಲ್ಟಾರ್ ರವರಿಗೆ ಸಂಘದ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೋಹನರಾಮ್ ಸುಳ್ಳಿ, ನಿರ್ದೇಶಕರುಗಳಾದ ನಿತ್ಯಾನಂದ ಮುಂಡೋಡಿ, ಜಾಕೆ...
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ನಿರ್ದೇಶಕರುಗಳ ಆಯ್ಕೆಗೆ ಮತದಾನ ಜ.16 ರಂದು ನಡೆಯಲಿದೆ. ಜ.4 ರಿಂದ ಜ.8 ರ ತನಕ ಬೆಳಿಗ್ಗೆ ಗಂಟೆ 11 ರಿಂದ ಮಧ್ಯಾಹ್ನ ಗಂಟೆ 1 ತನಕ ನಾಮ ಪತ್ರ ಸಲ್ಲಿಕೆಗೆ ಅವಕಾಶ ಇರುತ್ತದೆ. ಜ.4 ರಂದು 5 ಮಂದಿ ನಾಮ ಪತ್ರ ಸಲ್ಲಿಸಿದ್ದಾರೆ.ಸಾಮಾನ್ಯ...
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜ. ೩೦ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೂತನ ರಾಜಗೋಪುರದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಇದರ ಆಮಂತ್ರಣ ಪತ್ರ ಬಿಡುಗಡೆ ಜ.4ರಂದು ದೇವಳದ ವಠಾರದಲ್ಲಿ ನಡೆಯಿತು.ರಾಮಕಜೆ ರಾಜಗೋಪಾಲರವರು ಆಮಂತ್ರ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ಸಹಕಾರ್ಯದರ್ಶಿ ಚಿನ್ನಪ್ಪ ಅಡ್ಕ, ಮಾಜಿ...
ಸರಕಾರಿ ಶಾಲೆಗಳ ಉತ್ತೇಜನಕ್ಕೆ ಹಲವಾರು ರೀತಿಯ ಯೋಜನೆಗಳನ್ನು ಸರಕಾರಗಳು ನಡೆಸುತ್ತಿದ್ದು ಖಾಸಗಿ ಶಾಲೆಗಳ ಸ್ಪರ್ಧೆಯಿಂದ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವಾಗ ಸರಕಾರಿ ಶಾಲೆಗಳಿಗೆ ಸರಕಾರಿ ಸಂಸ್ಥೆಯೇ ನೀರಿನ ಸಂಪರ್ಕ ಕಡಿತ ಗೊಳಿಸಿದ್ದರು. ಈ ಶಾಲೆಯವರು ದೂರು ಸಲ್ಲಿಸಿದ ಬಳಿಕ ಹಿರಿಯ ಅಧಿಕಾರಿಗಳ ಖಡಕ್ ಎಚ್ಚರಿಕೆಯ ಬಳಿಕ ನೀರಿನ ಸಂಪರ್ಕ ಮರು ಜೋಡಣೆ ನಡೆಸಿದ ಘಟನೆ ಜ.೩ ರಂದು...
Loading posts...
All posts loaded
No more posts
