- Wednesday
- September 16th, 2026
ಇಂದು ಸುರಿದ ಭಾರಿ ಮಳೆಗೆ ಪೆರುವಾಜೆಯ ಶ್ರೀ ಜಲದುರ್ಗಾದೇವಿ ದೇವಾಲಯ ಜಲಾವೃತಗೊಂಡಿದೆ. ವಿಪರೀತ ಮಳೆಯಿಂದಾಗಿ ದೇವಾಲಯದ ಒಳಾಂಗಣ ಹಾಗೂ ಹೊರಾಂಗಣಕ್ಕೆ ನೀರು ನುಗ್ಗಿದೆ.
ಕಳಗಿ ಒಮಿನಿ ಸುಳ್ಯದ ಶಾಂತಿನಗರದಲ್ಲಿ ನಡೆದ ಸಂಪತ್ ಕುಮಾರ್ ಕೊಲೆಯ ಜೊತೆಗೆ ಹಳೇ ಮರ್ಡರ್ ಮಿಸ್ಟರಿಯೇ ಹೊರಬಿದ್ದಿದೆ. ಕೊಲೆಗೆ ಸ್ಕೆಚ್ ಹಾಕಿದ್ದು ಮೂವರಾದ್ರೂ ಅದರ ಹಿಂದೆ ಪ್ರಭಾವಿ ಕೈಗಳೇ ಕೈಯಾಡಿಸಿದ್ದವು ಎನ್ನುವ ಗುಮಾನಿ ಕೇಳಿಬರುತ್ತಿದೆ. ಎರಡು ವರ್ಷಗಳ ಹಿಂದೆ ಅಪಘಾತ ನಡೆಸಿ ಕೊಲೆ ಮಾಡಲಾದ ಕೊಡಗು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿ ಮುಂದಿನ...
ಸುಳ್ಯ :ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಫ್ರೆಂಡ್ಸ್ ಸರ್ಕಲ್ ಗಾಂಧಿ ನಗರ,ಸುಳ್ಯ ಜಂಟಿ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ (ಕ್ಷೇಮ) ದೇರಳಕಟ್ಟೆ,ಮಂಗಳೂರು ಇದರ ಸಹಭಾಗಿತ್ವದಲ್ಲಿ ಪ್ಲಾಸ್ಮಾ ದಾನಿಗಳ ರಕ್ತದ ಮಾದರಿ ಸಂಗ್ರಹ ಶಿಬಿರ ಸುಳ್ಯದ ಗಾಂಧಿ ನಗರದಲ್ಲಿರುವ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ ಯಶಸ್ವಿಯಾಗಿ ನಡೆಯಿತು. COVID - 19 ಸಂಕಷ್ಟದ ಸಮಯದಲ್ಲಿ ಕೋರೋನಾ...
ಗೋವು ಆಧಾರಿತ ಕೃಷಿ,ಗೋ ಕೃಪಾಮೃತ ಬಗ್ಗೆ ಪರಿಚಯ ಮತ್ತು ಪ್ರಾತ್ಯಕ್ಷಿಕೆ ಇಂದು ಮಂಡೆಕೋಲು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು . ಗೋವು ಆಧಾರಿತ ಕೃಷಿ ಬಗ್ಗೆ ಆರ್.ಕೆ.ಭಟ್ ಸುಳ್ಯ ಇವರು ಮಾಹಿತಿ ನೀಡಿದರು. ನವೋದಯ ಸಂಘದ ಸಹಭಾಗಿತ್ವದೊಂದಿಗೆ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಉಪಾಧ್ಯಕ್ಷೆ ಜಲಜಾ ದೇವರಗುಂಡ ವಹಿಸಿದ್ದರು. ಅತಿಥಿಗಳಾಗಿ ಮಂಡೆಕೋಲು ಸಹಕಾರಿ...
ಪೆರುವಾಜೆ ಗ್ರಾಮದ 3 ನೇ ವಾರ್ಡ ಬಿಜೆಪಿ ವಾರ್ಡ ಕಾರ್ಯದರ್ಶಿ ಕರುಣಾಕರ, ಬೆಳ್ಳಾರೆ ಸಹಕಾರಿ ಸಂಘದ ಮಾಜಿ ಸದಸ್ಯ ಲಕ್ಷ್ಮಣ ,ವಿಜಯ, ದಿನೇಶ, ಸುಂದರ ಇವರನ್ನು ಇಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಕಾಂಗ್ರೆಸ್ ಪಕ್ಷಕ್ಕೆಸೇರ್ಪಡೆ ಗೊಳಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ, ಬೆಳ್ಳಾರೆ ತಾಲೂಕು ಪಂಚಾಯತ್ ಕ್ಷೇತ್ರ...
ಕೊಲೆಯಾದ ಸಂಪತ್- ಕಳೆದ ವರ್ಷ ಮಾರ್ಚ್ ನಲ್ಲಿ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಅವರನ್ನು ಅಪಘಾತದಲ್ಲಿ ಕೊಲೆ ಮಾಡಿಸಿದ ಕೇಸ್ ನ ಪ್ರಮುಖ ಆರೋಪಿ ಸಂಪತ್ ನನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಪ್ರಮುಖ ಆರೋಪಿಗಳನ್ನು ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದ ಹಾಗೂ ಮಂಗಳೂರು ಡಿಸಿಐಬಿ ಪೊಲೀಸರ ತನಿಖಾ ತಂಡ ಬಂಧಿಸಿರುವ...
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷರಾಗಿ ಮಹೇಶ್ ಕುಮಾರ್ ರೈ ಮೇನಾಲ ಇವರು ಆಯ್ಕೆಯಾಗಿದ್ದಾರೆ. ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮೇನಾಲ ನಿವಾಸಿಯಾಗಿರುವ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ, ಹಿಂದೂ ಜಾಗರಣ ವೇದಿಕೆ ಪುತ್ತೂರು ಹಾಗೂ ಸುಳ್ಯ ತಾಲೂಕುಗಳ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಎಸ್ಎಂಎ ಬೆಳ್ಳಾರೆ ಝೋನಲ್ ಸಮಿತಿ ವತಿಯಿಂದ ಎಸ್ಎಂಎ ಲೀಡರ್ಸ್ ಮೀಟ್ ಹಾಗೂ ಇತ್ತೀಚೆಗೆ ನಿಧನರಾದ ತಾಜಲ್ ಫುಖಹ ಬೇಕಲ್ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮ ಬೆಳ್ಳಾರೆ ಸುನ್ನೀ ಸೆಂಟರ್ ಸಭಾಂಗಣದಲ್ಲಿ ಬೆಳ್ಳಾರೆ ಝೋನಲ್ ಸಮಿತಿ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಪಡ್ಪಿನಂಗಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಲೀಡರ್ಸ್ ಮೀಟ್ ಸಭಾಕಾರ್ಯಕ್ರಮವನ್ನು ಎಸ್ಎಂಎ ಜಿಲ್ಲಾ ಸಮಿತಿ...
ಸುಳ್ಯ ಪರಿವಾರಕಾನ ಗ್ರ್ಯಾಂಡ್ ಪರಿವಾರ್ ಬಳಿ ಅನುಗ್ರಹ ಮೋಟಾರ್ಸ್ ಸುಜುಕಿ ದ್ವಿಚಕ್ರ ವಾಹನದ ಶೋರೂಮ್ ಅ.9 ರಂದು ಶುಭಾರಂಭಗೊಂಡಿತು.ನೂತನ ಸಂಸ್ಥೆಯನ್ನು ಸುಜುಕಿ ಸೇಲ್ಸ್ ಏರಿಯಾ ವ್ಯವಸ್ಥಾಪಕ ಗುರು ಪ್ರಸಾದ್ ಉದ್ಘಾಟಿಸಿದರು.ಸುಜುಕಿ ಸರ್ವಿಸ್ ಏರಿಯಾ ವ್ಯವಸ್ಥಾಪಕ ಕಿಲ್ಲನ್ ರಾಂಬರ್,ಅನಘ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಎನ್.ವೆಂಕಟ ಫಾಣಿ,ಸಂಸ್ಥೆಯ ನಿರ್ದೇಶಕಿಯವರ ತಂದೆಯವರಾದ ಈಶ್ವರ,ತಾಯಿ ಶಶಿಕಲಾ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್...
ಎಸ್ ಎಸ್ ಎಫ್ ಬ್ಲಡ್ ಸೈಬೋ 199 ನೇ ರಕ್ತದಾನ ಶಿಬಿರ ಅ.18 ರಂದು ಸುಳ್ಯ ಗಾಂಧಿನಗರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದು ಸಂಘಟಕರು ಇಂದು ಸುಳ್ಯ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಎಸ್ಎಸ್ಎಫ್ ಸಂಘಟನೆಯ ಬ್ಲಡ್ ಸೈಬೋ ವಿಭಾಗವು ರಾಷ್ಟ್ರ ಮತ್ತು ರಾಜ್ಯದ ಮೂಲೆಮೂಲೆಗಳಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತಿದ್ದು ಸಾವಿರಾರು ಜೀವಗಳನ್ನು ರಕ್ಷಿಸುವಲ್ಲಿ...
Loading posts...
All posts loaded
No more posts
