- Wednesday
- September 16th, 2026
ಎಡಮಂಗಲ ಗ್ರಾಮದ ಕೋಡಿಮಜಲು ಜಾನಕಿ ಬಂಗೇರರು ಅ. 8 ರಂದು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಸುಮಾರು 45 ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕರ್ತೆಯಾಗಿ ದುಡಿದಿರುವುದಲ್ಲದೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಎಡಮಂಗಲ ಗ್ರಾ.ಪಂ. ಸದಸ್ಯರಾಗಿ, ಎಡಮಂಗಲ ಪ್ರಾ.ಕೃ.ಪ.ಸ.ಸಂಘದಲ್ಲಿ ಮೂರು ಅವಧಿಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಎಡಮಂಗಲ...
ಸುಳ್ಯ ನಗರ ಪ್ರದೇಶಗಳ ಮುಖ್ಯ ರಸ್ತೆಗಳಲ್ಲಿ ಕೆಆರ್ ಡಿಸಿಎಲ್ ವತಿಯಿಂದ ಮಾಣಿ-ಮೈಸೂರು ರಸ್ತೆ ನಿರ್ಮಾಣ ಮಾಡುವ ಸಂದರ್ಭ ರಸ್ತೆಯ ಎರಡು ಬದಿಗಳಲ್ಲಿ ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿ ಬೃಹತ್ ಚರಂಡಿಗಳ ನಿರ್ಮಾಣ ಮಾಡಿಸಿ ನಮ್ಮ ಕೆಲಸ ಇಲ್ಲಿಗೆ ಮುಗಿಯಿತು ಎಂದು ಹೋಗಿರುತ್ತಾರೆ. ನಂತರ ಮಳೆಗಾಲದ ಸಂದರ್ಭದಲ್ಲಿ ಮಳೆಯ ನೀರು ರಸ್ತೆಯಲ್ಲಿ ಅರಿಯುವುದೋ ಅಥವಾ ಚರಂಡಿಯಲ್ಲಿ ಹರಿಯುವುದೋ...
ನಿನ್ನೆ ರಾತ್ರಿ ಸುರಿದ ಬಾರೀ ಮಳೆಗೆ ಸಂಪಾಜೆಯ ಗಡಿಕಲ್ಲಿನ ಮಸೀದಿಯ ಬಳಿ ಮಂಗಳೂರು ಮೈಸೂರ್ ರಾಜ್ಯ ಹೆದ್ದಾರಿಯ ಚರಂಡಿ ಕುಸಿದು ಅಪಾಯಕಾರಿ ಹೊಂಡ ನಿರ್ಮಾಣವಾಗಿದೆ. ದಿನಂಪ್ರತಿ ನೂರಾರು ವಾಹನಗಳು, ಪಾದಚಾರಿಗಳು ಇಲ್ಲಿ ಸಂಚರಿಸುತ್ತಿದ್ದು ಅಪಾಯದ ಮುನ್ಸೂಚನೆ ನೀಡಿದೆ. ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಮುಂದೆ ಆಗಬಹುದಾದ ದುರ್ಘಟನೆಗಳನ್ನು ತಪ್ಪಿಸಬೇಕೆಂದು ಮಹಮ್ಮದ್ ಕುಂಞಿಎಸ್ ಡಿ ಪಿ...
ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಅಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ ಹಾಗೂ ಉಪಾಧ್ಯಕ್ಷರಾಗಿ ಸರೋಜಿನಿ ಗಂಗಯ್ಯ ಮುಳುಗಾಡು ಇಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಮುಖಂಡ ನಿತ್ಯಾನಂದ ಮುಂಡೋಡಿ ಹಾಗೂ ಬಿಜೆಪಿ ಮುಖಂಡ ಮುಳಿಯ ಕೇಶವ ಭಟ್ ನೇತೃತ್ವದಲ್ಲಿ ಮಾತುಕತೆ ನಡೆದು ಚುನಾವಣೆ ನಡೆಸದೇ ಅವಿರೋಧ ಆಯ್ಕೆಮಾಡುವ ಬಗ್ಗೆ...
ಕನಕಮಜಲು ಪ್ರಾ.ಕೃ.ಪ.ಸ.ಸಂಘದಲ್ಲಿ ನಾನಾಜಿ ದೇಶ್ ಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರದ ಅಂಗವಾಗಿ ಸಚಿವರೊಂದಿಗೆ ಸಂವಾದ ಕಾರ್ಯಕ್ರಮ ಇಂದು ನಡೆಯಿತು. ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಜತೆ ಗ್ರಾಮಸ್ಥರು ಸಂವಾದ ನಡೆಸಿದರು. ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಭಾರತ ಸಹ...
ಕನಕಮಜಲು ಗ್ರಾಮ ಪಂಚಾಯತಿಗೆ 2019-20ನೇ ಸಾಲಿನಲ್ಲಿ ನಾನಾಜಿ ದೇಶ್ಮುಖ್ ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರ ದೊರೆತಿದ್ದು, ಈ ಪ್ರಯುಕ್ತ ನಾನಾಜಿ ದೇಶ್ಮುಖ್ ಅವರ ಭಾವಚಿತ್ರವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಅನಾವರಣಗೊಳಿಸಿ, ಶುಭಹಾರೈಸಿದರು.ಈ ಸಂದರ್ಭದಲ್ಲಿ ಶಾಸಕ ಎಸ್. ಅಂಗಾರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಭಾರತ ಸಹ...
ಸುಳ್ಯ ಜೂನಿಯರ್ ಕಾಲೇಜಿನ ಬಳಿ ಸೆ. 27 ರಂದು ಮಾತೃಭೂಮಿ ನವೋದಯ ಸ್ವಸಹಾಯ ಸಂಘ ರಚನೆಗೊಂಡಿತು. ಸಂಘದ ಅಧ್ಯಕ್ಷರಾಗಿ ಶ್ರೀಮತಿ ಸತ್ಯ, ಕಾರ್ಯದರ್ಶಿಯಾಗಿ ಶ್ರೀಮತಿ ಪ್ರಿಯ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಗಳಾಗಿ ಯಶೋದ. ಬೇಬಿ, ಮಂಜುಳ ಮತ್ತು ದಮಯಂತಿಯವರನ್ನು ಆಯ್ಕೆ ಮಾಡಲಾಯಿತು. ಸಂಘದ ವಲಯ ಪ್ರೇರಕರಾದ ಶ್ರೀಧರ ಮಾಣಿಮರ್ಧು ಮಾಹಿತಿ ನೀಡಿದರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಮುಡ್ನೂರು ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಬಳ್ಪ ಗ್ರಾಮದ ವಾರ್ಡ್ 3 ರಲ್ಲಿ ಭಾರತೀಯ ಜನತಾ ಪಾರ್ಟಿ ಯಿಂದ ಟಿಕೆಟ್ ನೀಡುವಂತೆ ಬೀದಿಗುಡ್ಡೆ ಪರಿಸರದ ಸಂಘಟನೆಗಳ ಒಕ್ಕೂಟದಿಂದ ಪಕ್ಷದ ಪ್ರಮುಖರಿಗೆ ಮನವಿಯನ್ನು ಸಲ್ಲಿಸಲಾಯಿತು.
ಕೊಲ್ಲಮೊಗ್ರ ಪೇಟೆಯ ಸಮೀಪ ಇರುವ ಕಿರು ಸೇತುವೆ ನಿನ್ನೆ ದಿನ ಭಾರಿ ಮಳೆಯಿಂದ ಸೇತುವೆಗೆ ಹಾನಿಯಾಗಿದ್ದು ರಸ್ತೆಯ ಸಮೀಪ ಇದ್ದ ಮರ ಉರುಳಿ ಬಿದ್ದಿದೆ. ರಸ್ತೆಯ ಸಮೀಪ ದೊಡ್ಡ ದೊಡ್ಡ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿದೆ. ನಿನ್ನೆ ಸುರಿದ ಭಾರಿ ಮಳೆಗೆ ನಾಲ್ಕುಗಂಟೆಗಳ ಕಾಲ ರಸ್ತೆ ಸಂಪೂರ್ಣ ಬಂದ್ ಆಗಿ ಸಾರ್ವಜನಿಕರು ಪರದಾಡಿದ್ದರು. ರಾತ್ರಿ ಸಮಯದಲ್ಲಿ ಸೇತುವೆ...
Loading posts...
All posts loaded
No more posts
