ಕೊಲ್ಲಮೊಗ್ರ ಕಡಂಬಳ ಸೇತುವೆ ದುರಸ್ತಿ – ತಾ.ಪಂ.ಸದಸ್ಯ ಉದಯ ಕೊಪ್ಪಡ್ಕ ನೆರವು

ಕೊಲ್ಲಮೊಗ್ರ ದಿಂದ ಕಡಂಬಳ ಸಂಚರಿಸುವ ಕಿರುಸೇತುವೆ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕುಸಿತಗೊಂಡು ಸಂಚಾರಕ್ಕೆ ತಡೆಯಾಗಿತ್ತು. ಕೂಡಲೇ ಸಮಸ್ಯೆಗೆ ಸ್ಪಂದಿಸಿದ ಯುವ ಮುಖಂಡ ಉದಯ ಶಿವಾಲ ತಾಲೂಕು ಪಂಚಾಯತ್ ಸದಸ್ಯ ಉದಯ ಕೊಪ್ಪಡ್ಕರವರಿಗೆ ತಿಳಿಸಿ ಸ್ಪಂದಿಸುವಂತೆ ಮನವಿಮಾಡಿದ್ದರು. ಕೂಡಲೇ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ ತಾ.ಪಂ ಸದಸ್ಯ ಉದಯ ಕೊಪ್ಪಡ್ಕ ವಾರದೊಳಗೆ ತಾತ್ಕಾಲಿಕ ದುರಸ್ತಿ ಕಾರ್ಯವನ್ನು...

ರಾಜ್ಯದಲ್ಲಿ ಅ.20ರಿಂದ ಭಾರಿ ಮಳೆ ಸಂಭವ

ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಲಪ್ರಳಯ ಉಂಟಾಗಿರುವ ಬೆನ್ನಲ್ಲೇ ಮತ್ತೆ ಮಳೆ ಭೀತಿ ಎದುರಾಗಿದೆ.ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ಅ.20ರಿಂದ ಮುಂದಿನ 4 ದಿನ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಅ.21ರಂದು ಯೆಲ್ಲೋ ಅರ್ಲಟ್​ ಇದ್ದರೆ...
Ad Widget

ದೊಡ್ಡೇರಿ ಶ್ರೀ ಕಾಳಿಕಾಂಬ ಮಂದಿರದಲ್ಲಿ ನವರಾತ್ರಿ ಉತ್ಸವ

ಅಜ್ಜಾವರ ಗ್ರಾಮದ ದೊಡ್ಡೇರಿ ಶ್ರೀ ಕಾಳಿಕಾಂಬ ಮಂದಿರದಲ್ಲಿ ನವರಾತ್ರಿ ಪ್ರಯುಕ್ತ ಅ.17 ರಂದು ಗಣಪತಿ ಹವನದೊಂದಿಗೆ ಪೂಜೆ ‌ಆರಂಭಗೊಂಡಿತು.ಪ್ರತಿ ದಿನ ಪೂಜಾ ಕಾರ್ಯಕ್ರಮ ನಡೆದು,ಅ.24 ರಂದು ಮಹಾಪೂಜೆಯೊಂದಿಗೆ ನವರಾತ್ರಿ ಪೂಜೆ ಸಮಾಪನಗೊಳ್ಳಲಿದೆ.

ಡಾ.ದೇವಿಪ್ರಸಾದ್‌ ಕಾನತ್ತೂರು ಅಮಾನತು ಆದೇಶ ರದ್ದು

ಸುಳ್ಯ ಪಶು ಆಸ್ಪತ್ರೆಯ ಜಾನುವಾರು ಅಭಿವೃದ್ಧಿ ಅಧಿಕಾರಿ ಡಾ. ದೇವಿಪ್ರಸಾದ್‌ ಕಾನತ್ತೂರು ಅವರ ಅಮಾನತು ಆದೇಶ ತೆರವಾಗಿದ್ದು ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಸುಳ್ಯ ತಾಲೂಕಿನಾದ್ಯಂತ ಪ್ರಸಿದ್ಧರಾಗಿದ್ದ ಡಾ. ದೇವಿಪ್ರಸಾದ್‌ ಕಾನತ್ತೂರು ಅವರ ವಿರುದ್ಧ ಪಿತೂರಿ ನಡೆದು ಸೇವೆಯಿಂದ ಅಮಾನತಾಗುವಂತೆ ಮಾಡಲಾಗಿತ್ತು. ದಾಖಲೆ ತಿದ್ದುಪಡಿ ಮಾಡಿ...

ಸುಳ್ಯ ತಾಲೂಕು ವಿಕಲಚೇತನರ ಪರಿಶೀಲನಾ ಸಭೆ

ಸುಳ್ಯ ತಾಲೂಕು ವಿಕಲಚೇತನರ ಎಂ ಆರ್ ಡಬ್ಲ್ಯೂ ಹಾಗೂ ವಿ ಆರ್ ಡಬ್ಲ್ಯೂ ಪರಿಶೀಲನಾ ಸಭೆ ಅಕ್ಟೋಬರ್ 17ರಂದು ಸುಳ್ಯ ತಾ ಪಂ ಸಭಾಭವನದಲ್ಲಿ ನಡೆಯಿತು.ದ ಕ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಯಮುನಾ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆ ಯಲ್ಲಿ ಸಿಡಿಪಿಒ ರಶ್ಮಿ, ಯು.ಆರ್.ಡಬ್ಲ್ಯೂ ಚಂದ್ರಶೇಖರ, ನಗರ ಪಂಚಾಯತ್ ಯು.ಆರ್.ಡಬ್ಲ್ಯೂ. ಪ್ರವೀಣ್ ನಾಯಕ್ ಸುಳ್ಯ, ತಾ ಪಂ...

ಪಂಜ:ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭ

ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ಸಹಕಾರ ಭಾರತಿ ದ.ಕ.ಜಿಲ್ಲೆ ಇವುಗಳ ಸಹಯೋಗದೊಂದಿಗೆ ‘ಉದ್ಯೋಗ ನೈಪುಣ್ಯ ತರಬೇತಿ’ ಯು ಸಮಾರೋಪ ಸಮಾರಂಭ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಅ.17ರಂದು ನಡೆಯಿತು.ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯಪ್ರತಾಪ್ ಸಿಂಹ ನಾಯಕ್, ರಾಷ್ಟ್ರೀಯ ಸ್ವಯಂ ಸೇವಕ...

ಅಕ್ಟೋಬರ್ 29(ರಬೀಉಲ್ ಅವ್ವಲ್ 12): ಅಕ್ಟೋಬರ್ 18 ಭಾನುವಾರ ರಬೀಉಲ್ ಅವ್ವಲ್ ತಿಂಗಳು ಪ್ರಾರಂಭ

ಮುಸಲ್ಮಾನ ಬಾಂಧವರ ಪೈಗಂಬರ್ ಮುಹಮ್ಮದ್ ಸ.ಅ.ರವರ ಜನ್ಮ ದಿನದ ಆಚರಣೆಯ ರಬೀಉಲ್ ಅವ್ವಲ್ ತಿಂಗಳ ಚಂದ್ರದರ್ಶನ ವಾಗಿದ್ದು, ಭಾನುವಾರ (ಅ. 18) ರಬೀಉಲ್ ಅವ್ವಲ್ ಚಾಂದ್ 1 ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿಗಳು ಘೋಷಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 29 (ರಬೀಉಲ್ ಅವ್ವಲ್ 12) ರ ಮೀಲಾದುನ್ನಬಿ (ಈದ್ ಮಿಲಾದ್)ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ...

ಕಸ್ತೂರಿರಂಗನ್ ವರದಿ ಅವೈಜ್ಞಾನಿಕ : ಸರಕಾರ ಜನರ ಅಭಿಪ್ರಾಯ ಪಡೆಯಬೇಕು – ರೈತರ ಉಳಿವಿಗಾಗಿ ಜನಾಂದೋಲನದ ಎಚ್ಚರಿಕೆ ನೀಡಿದ ಮಲೆನಾಡು ಜಂಟಿ ಕ್ರಿಯಾ ಸಮಿತಿ

ಕಸ್ತೂರಿರಂಗನ್ ವರದಿ ಜಾರಿಗೂ ಮೊದಲು ರೈತರ, ಜನರ ಅಭಿಪ್ರಾಯ ವನ್ನು ಸರಕಾರಗಳು ಪಡೆಯಬೇಕು. ಒಂದು ವೇಳೆ ಅಭಿಪ್ರಾಯ ಪಡೆಯದೇ ಜಾರಿಗೊಂಡರೆ ಮಲೆನಾಡು ಜಂಟಿ ಕ್ರಿಯಾ ಸಮಿತಿ ಜನಾಂದೋಲನ ಕೈಗೊಂಡು ಹೋರಾಟ ನಡೆಸಲಿದೆ ಎಂದು ಮಲೆನಾಡು ಜಂಟಿ ಕ್ರಿಯಾಯ ಸಂಚಾಲಕ ಪ್ರದೀಪ್ ಕೆ.ಎಲ್. ಹಾಗೂ ಅಶೋಕ್ ಎಡಮಲೆ ತಿಳಿಸಿದ್ದಾರೆ. ಅ.17 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ...

ಗಾಂಧಿನಗರ : ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮೇಲುಸ್ತುವಾರಿ ಸಮಿತಿ ಸಭೆ

ಗಾಂಧಿನಗರ ಸುಳ್ಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮೇಲುಸ್ತುವಾರಿ ಸಮಿತಿ ಸಭೆ ಗಾಂಧಿನಗರ ಕಾಲೇಜ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಸಕ ಅಂಗಾರ ವಹಿಸಿದ್ದರು. ಎಂಬಿ ಫೌಂಡೇಶನ್ ಅಧ್ಯಕ್ಷ ಎಂಬಿ ಸದಾಶಿವ.,ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಶಾಲಾ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ನಾಯಕ್ ಸುಳ್ಯ,ಶಾಲಾ ಸಮಿತಿಯ ಹಿರಿಯ ಸಲಹೆಗಾರರು ಎಂ ವೆಂಕಪ್ಪ ಗೌಡ, ಎನ್...

ಕಲ್ಮಕಾರು : ಯುವಕ ಆತ್ಮಹತ್ಯೆ

ಕಲ್ಮಕಾರು ಗ್ರಾಮದ ಪಡ್ಪು ವಸಂತ ರವರ ಪುತ್ರ ಲೋಹಿತ್ (24) ಇಂದು ಮಧ್ಯಾಹ್ನ ಮನೆಯ ಸಮೀಪದ ಮಾವಿನಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತ ಲೋಹಿತ್ ತಂದೆ,ಹಾಗೂ ತಂಗಿಯನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!