ಜೂ.1 : ಪುತ್ತೂರಿನಲ್ಲಿ ಗೌಡರ ಯಾನೆ ಒಕ್ಕಲಿಗರ ಮಾತೃಸಂಘದ ಸರ್ವಸದಸ್ಯರುಗಳ ಮಹಾಧಿವೇಶನ, ಜಿಲ್ಲೆಯ ಗೌಡ ಸಮುದಾಯದ ಜನಸಂಖ್ಯೆ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಚಿಂತನೆ

ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃಸಂಘದ ಸರ್ವಸದಸ್ಯರ ಮಹಾಧಿವೇಶನ ಜೂನ್ 1 ರಂದು ಪುತ್ತೂರಿನ ತೆಂಕಿಲದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಈ ಬಗ್ಗೆ ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಾತೃಸಂಘದ ಅಧ್ಯಕ್ಷ ಲೋಕಯ್ಯ ಗೌಡ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ವಿವರ ನೀಡಿದರು. ಗೌಡರ...

ಜಿಎಲ್‌ ಆಚಾರ್ಯದಲ್ಲಿ ‘ಸ್ವರ್ಣಧಾರ’ ಸ್ಕೀಂ ಪ್ರಾರಂಭ, ಚಿನ್ನಾಭರಣ ಹೂಡಿಕೆಯ ಉಳಿತಾಯದ ಜೊತೆಗೆ ಬೋನಸ್

ಪುತ್ತೂರು: ಜಿಎಲ್‌ ಆಚಾರ್ಯ ಜ್ಯುವೆಲ್ಲರ್‌ನ ಸ್ವರ್ಣಧಾರ ಎಂಬ ಚಿನ್ನಾಭರಣದ ಉಳಿತಾಯ ಯೋಜನೆಯನ್ನು ಗುರವಾರದಂದು (ಮೇ.22) ಉದ್ಘಾಟಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರಿನ ಲಕ್ಷ್ಮೀ ಹೊಟೇಲ್ ಮಾಲಕರ ಸೊಸೆ ಹಾಗೂ ಸೂರತ್‌ನಲ್ಲಿ ಹೊಟೇಲ್ ಉದ್ಯಮಿಯಾಗಿರುವ ಮಾನಸ ಪ್ರವೀಣ ಮತ್ತು ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿ ಶ್ರೀಲಕ್ಷ್ಮೀಶ ಪಾರ್ಲ ಅವರು ಮಾಸಿಕ ಕಂತುಗಳ ಈ ವಿಶೇಷ ಯೋಜನೆಯನ್ನು ಉದ್ಘಾಟಿಸಿದರು....
Ad Widget

ಮಾಜಿ ಸೈನಿಕರ ಸಂಘದ ವತಿಯಿಂದ ಪಶು ಸಂಗೋಪನ ಆಸ್ಪತ್ರೆಗೆ ಎಲೆಕ್ಟ್ರಿಕ್ ಆಟೋಕ್ಲೇವ್ ಯಂತ್ರ ಕೊಡುಗೆ

ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘ (Ex Servicemen Association Sullia) ದ ವತಿಯಿಂದ ಪಶು ಸಂಗೋಪನ ಇಲಾಖೆಯ ಸುಳ್ಯ ತಾಲೂಕು ಆಸ್ಪತ್ರೆಗೆ ಎಲೆಕ್ಟ್ರಿಕ್ ಆಟೋಕ್ಲೇವ್ (Electric Autoclave) ಯಂತ್ರವನ್ನು 2024 25 ನೇ ಸಾಲಿನ ಕೊಡುಗೆಯಾಗಿ ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕರಾದ ನಿತಿನ್ ಪ್ರಭು ಕೆ ಇವರಿಗೆ ಹಸ್ತಾಂತರಿಸಿದರು. ಈ ಉಪಕರಣವನ್ನು ದಿನನಿತ್ಯ ನಡೆಯುವ...

ಅರಂತೋಡು ಗ್ರಾಮ ಪಂಚಾಯತ್ ನ ಎನ್. ಆರ್. ಎಲ್. ಎಂ ನೂತನ ಕಟ್ಟಡಕ್ಕೆ ಸುಳ್ಯ ಶಾಸಕರಿಂದ ಗುದ್ದಲಿ ಪೂಜೆ – ಪಂಚಾಯತ್ ಸಭಾಭವನದ ಪಾಕಶಾಲೆ ನಿರ್ಮಾಣ ಕ್ಕೆ 5 ಲಕ್ಷದ ಅನುದಾನದ ಭರವಸೆ

ಅರಂತೋಡು ಗ್ರಾಮ ಪಂಚಾಯತ್ ನ ಎನ್.ಆರ್. ಎಲ್. ಎಂ. ನೂತನ ಕಟ್ಟಡದ ಗುದ್ದಲಿ ಪೂಜೆ ಕಾರ್ಯಕ್ರಮ ಮೇ.21 ರಂದು ನಡೆಯಿತು. ಸುಳ್ಯ ಶಾಸಕರಾದ ಮಾನ್ಯ ಕುl ಭಾಗೀರಥಿ ಮುರುಳ್ಯ ರವರು ಗುದ್ದಲಿಪೂಜೆ ನೆರವೇಸಿದರು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅರಂತೋಡು ಗ್ರಾಮ ಪಂಚಾಯತ್ ನ ಸಭಾಂಗಣಕ್ಕೆ ಅವಶ್ಯಕತೆ ಇರುವ ಪಾಕ ಶಾಲೆ ನಿರ್ಮಾಣಕ್ಕೆ ರೂ 5ಲಕ್ಷ...

ಸುಬ್ರಹ್ಮಣ್ಯ: ಕಾಲೇಜಿನಲ್ಲಿ ಸೀಟ್‌ಗಳ ಕೊರತೆ ನೀಗಿಸಲು ಮುಜರಾಯಿ ಸಚಿವರಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಮನವಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿಗೆ ಪ್ರವೇಶ ಬಯಸಿ ನೂರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗದೆ ನಿರಾಸೆಯಾಗಿದ್ದರು.ಈ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಬಯಸುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲು ಮತ್ತು ಸೀಟಿನ ಸಮಸ್ಯೆ ಬಗೆ ಹರಿಸಲು ಕಾಲೇಜಿನಲ್ಲಿ ಹೆಚ್ಚುವರಿ ವಿಭಾಗ ತೆರೆಯುವಂತೆ ಶ್ರೀ...

ಕೊಲ್ಲಮೊಗ್ರು : ನಾಳೆ(ಮೇ.21) ಕಣ್ಣಿನ ಉಚಿತ ತಪಾಸಣಾ ಶಿಬಿರ

ಗ್ರಾಮ ಪಂಚಾಯತ್ ಕೊಲ್ಲಮೊಗ್ರು ಇದರ ಸಹಭಾಗಿತ್ವದಲ್ಲಿ ನ್ಯೂ ವಿಷನ್ ಜನರೇಷನ್ ಪ್ರೋಗ್ರಾಮ್ ಕಾರ್ಯಕ್ರಮದ ಅಡಿಯಲ್ಲಿ 2.5 ಎನ್.ವಿ.ಜಿ ಐ-ಮಿತ್ರ ಸುರತ್ಕಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ಅಂಧತ್ವ ವಿಭಾಗ) ಇವರ ಜಂಟಿ ಆಶ್ರಯದಲ್ಲಿ ನಾಳೆ(ಮೇ.21) ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 3:00 ಗಂಟೆಯವರೆಗೆ ಕೊಲ್ಲಮೊಗ್ರು ಮಯೂರ ಕಲಾಮಂದಿರದಲ್ಲಿ “ಕಣ್ಣಿನ ಉಚಿತ ತಪಾಸಣಾ ಶಿಬಿರ” ನಡೆಯಲಿದ್ದು,...

ಸುಳ್ಯ ತಾಲೂಕಿನ ಹಲವೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ಮಳೆ ಸಾಧ್ಯತೆ

ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಮೇ.21 ರಿಂದ 23 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವ ಕಾರಣ ಜಿಲ್ಲೆಯಲ್ಲಿ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಿಸಿದ ಬೆನ್ನಲ್ಲೇ ಸುಳ್ಯ ಹಾಗೂ ಕಡಬ ತಾಲೂಕಿನ ಹಲವೆಡೆ ಕಳೆದ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು,...

ಮೇನಾಲದಲ್ಲಿ ದಿ. ನವೀನ್ ಕುಮಾರ್ ರೈ ಮೇನಾಲ ಸ್ಮರಣೆ

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಬಿಜೆಪಿ ಮುಖಂಡರಾಗಿದ್ದ ನವೀನ್ ರೈ ಮೇನಾಲರು ನಿಧನರಾಗಿ ಮೇ.18ಕ್ಕೆ ಎರಡು ವರ್ಷವಾಗಿದ್ದು ಆ ಪ್ರಯುಕ್ತ ಸ್ಮರಣೆ ಕಾರ್ಯಕ್ರಮ ಮೇನಾಲ ಶ್ರೀಕೃಷ್ಣಾ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ದಿ.ನವೀನ್ ರೈಯವರಿಗೆ ನುಡಿನಮನ ಸಲ್ಲಿಸಿದ ಸುಳ್ಯ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಸುಬೋಧ್ ಶೆಟ್ಟಿ ಮೇನಾಲರುನಮ್ಮನ್ನಗಲಿದ ನವೀನ್ ರೈ ಮೇನಾಲ ರವರು...

ಸಹಕಾರಿ ಸಂಘಗಳು ಗ್ರಾಮೀಣ ಜನರ ಬೆನ್ನೆಲುಬು – ಬಿ.ವೈ.ವಿಜಯೇಂದ್ರ – ಸುಳ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಪ್ರಥಮ ಭೇಟಿ

ಸಹಕಾರಿ ಸಂಘಗಳು ಗ್ರಾಮೀಣ ಜನರ ಬೆನ್ನೆಲುಬು ಆಗಿ ನಿಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಅವರು ಸುಳ್ಯದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾಯಿತ ಸಹಕಾರಿಗಳ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಹಕಾರಿಗಳು ಸಮಾಜ ಸೇವೆಯ ಜತೆಗೆ ಸಂಘಟನೆಗೂ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದರು. ರಾಜ್ಯ ಸರಕಾರವನ್ನು ಪ್ರಶ್ನಿಸಿದ ಅವರು...

ಕವನ : ಸಾಗೋಣ ಮತ್ತೆ ಶಾಲೆಯ ಕಡೆಗೆ…

ಬೇಸಿಗೆಯ ರಜೆಯೀಗ ಮುಗಿಯುತ್ತಾ ಬಂದಿದೆ, ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಕೇಳಿಸುವ ಸಮಯ ಇದೀಗ ಹತ್ತಿರವಾಗಿದೆ…ಎರಡು ತಿಂಗಳುಗಳ ಸುಧೀರ್ಘ ರಜೆಯದು ಕಣ್ಮುಚ್ಚಿ ಬಿಡುವಷ್ಟರಲ್ಲಿ ಮುಕ್ತಾಯಗೊಂಡಿದೆ, ಸ್ನೇಹಿತರ ಜೊತೆಗೂಡಿ ಆಟಗಳ ಆಡುತ್ತಾ ಪಾಠಗಳ ಕಲಿಯುವ ಸಮಯವೀಗ ಮತ್ತೆ ಮರಳಿ ಬಂದಿದೆ…ರಜೆಯ ದಿನಗಳ ಮೆಲುಕನ್ನು ಹಾಕುತ್ತಾ, ತಂದೆ-ತಾಯಿಯ ಆಶೀರ್ವಾದವ ಪಡೆಯುತ್ತಾ ಪುಸ್ತಕದ ಚೀಲವನ್ನು ಬೆನ್ನಿಗೆ ಹಾಕಿ ಸಾಗೋಣ ಮತ್ತೆ...
Loading posts...

All posts loaded

No more posts

error: Content is protected !!