- Saturday
- July 11th, 2026
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಕಾರಣಕರ್ತರಾದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಜ.2 ಶನಿವಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಾಸಕ ಎಸ್. ಅಂಗಾರ ಮತ್ತು ಪಾರ್ಟಿಯ ಪ್ರಮುಖರು ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆ ಬಾಕಿಲದಿಂದ ಮುತ್ತಪ್ಪ ನಗರದ ವರೆಗೆ ವಿಜಯೋತ್ಸವದ ಮೆರವಣಿಗೆ ನಡೆಯಲಿದೆ ಎಂದು ಗುತ್ತಿಗಾರು ಬಿಜೆಪಿ ಪ್ರಕಟಣೆ ತಿಳಿಸಿದೆ.
ಸುಳ್ಯದ ಉದ್ಯಮಿ ಕಾವೇರಿ ಸಂತೋಷ್ ಮಡ್ತಿಲ ದೇವಚಳ್ಳ ಗ್ರಾಮದ ದೇವ ಎಂಬಲ್ಲಿ ಮನೆ ನೋಡಲು ತೆರಳಿದ್ದ ವೇಳೆ ಟೆರೆಸ್ ಮೇಲಿನಿಂದ ಬಿದ್ದು ಗಂಭಿರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಇಂದು ನಡೆದಿದೆ. ಮಹಡಿಯಿಂದ ಸಂಜೆ 5.30 ಕ್ಕೆ ಬಿದ್ದ ಕೂಡಲೇ ಅವರನ್ನು ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ,ಹೆಚ್ಚಿನ ಚಿಕಿತ್ಸೆ ಗೆ ಮಂಗಳೂರಿನ ಪಸ್ಟ್...
ಕರ್ನಾಟಕ ಸರ್ಕಾರ ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಹುಟ್ಟು ಹಬ್ಬದ ಅಂಗವಾಗಿ ಸುಳ್ಯದ ಉದ್ಯಮಿ ರಂಜಿತ್ ಪೂಜಾರಿ ಹಾಗೂ ಅವರ ಪತ್ನಿ ಕೀರ್ತಿಕ ರಂಜಿತ್ ಪೂಜಾರಿ ಕೆವಿಜಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡುವ ಮೂಲಕ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಸುಳ್ಯದ ರಕ್ತದಾನಿ ಪಿ.ಬಿ. ಸುಧಾಕರ ರೈ, ಸ್ಥಳೀಯರಾದ...
ಜೆಸಿಐ ಸುಳ್ಯ ಸಿಟಿ ಹಾಗೂ ಎನ್‌ಎಸ್‌ಎಸ್ ಘಟಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇದರ ಜಂಟಿ ಆಶ್ರಯದಲ್ಲಿ "ಹೊಸ ವರ್ಷ -2021" ರ ಆಚರಣಾ ಕಾರ್ಯಕ್ರಮವನ್ನು ಕೊಡಿಯಾಲಬೈಲ್ ಕಾಲೋನಿಯಲ್ಲಿ ತೆಂಗಿನ ಗಿಡವನ್ನು ನೆಡುವ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಬರಡ್ಕ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಹರೀಶ್ ರೈ ಉಬರಡ್ಕ, ಉಬರಡ್ಕ ಗ್ರಾಮ...
ಪತಂಜಲಿ ಯೋಗ ಪೀಠ ಹರಿದ್ವಾರದ ಮಾರ್ಗದರ್ಶನದಲ್ಲಿ ಆನ್-ಲೈನ್ ಯೋಗ ಶಿಕ್ಷಕರ ತರಬೇತಿ ಶಿಬಿರ ಜನವರಿ 01ರಿಂದ ಜನವರಿ 30 ವರೆಗೆ ನಡೆಯಲಿದ್ದು ಈ ಶಿಬಿರಕ್ಕೆ ಸುಳ್ಯದಿಂದ ಶರತ್ ಮರ್ಗಿಲಡ್ಕರವರು ಆಯ್ಕೆ ಆಗಿದ್ದಾರೆ. ಇವರು 2ಸಲ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.ಯೋಗಗುರು ಸಂತೋಷ್ ಮುಂಡಕಜೆಯ ವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. https://youtu.be/O_4uTnYXmsM
ಭಾರತೀಯ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಮಾಹಿತಿ ಶಿಬಿರವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇಂದು ( ಜ.2 ರಂದು) ಉದ್ಘಾಟಿಸಿದರು. ಹರಿಹರಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯುವ ಈ ಮಾಹಿತಿ ಶಿಬಿರ ಜ. 3 ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿವಿಧಾನ ಪರಿಷತ್ ಸದಸ್ಯೆ ಡಾ| ತೇಜಸ್ವಿನಿ...
ಆಪರೇಶನ್ ವಿಜಯ್ ಕಾರ್ಗಿಲ್ ನಲ್ಲಿ ಭಾಗವಹಿಸಿದ್ದ ಭಾರತೀಯ ಸೇನೆಯ ಕ್ಯಾಪ್ಟನ್ ಸುದಾನಂದ ಮಾವಿನಕಟ್ಟೆ ಡಿ.31ರಂದು ಭೂಸೇನೆಯಿಂದ ನಿವೃತ್ತಿಯಾದರು . ಇವರು ಡಿಸೆಂಬರ್ 1990ರಲ್ಲಿ ಭಾರತೀಯ ಸೇನೆಯ ಮಿಲಿಟರಿ ಪೊಲೀಸ್ ವಿಭಾಕಕ್ಕೆ ಸೇರ್ಪಡೆಯಾಗಿ 30ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಇವರು ಭಾರತದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್,ಉತ್ತರ ಪ್ರದೇಶ, ಸಿಕ್ಕಿಂ,...
ಕಳಂಜ - ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ವೆಂಕಪ್ಪಯ್ಯರು ಡಿ. 31 ರಂದು ತಮ್ಮ 40 ವರ್ಷಗಳ ಸೇವೆಯಿಂದ ನಿವೃತ್ತರಾದರು. ಇವರು 1980 ಜನವರಿ 15 ರಂದು ಸಂಘದ ಕೋಟೆಮುಂಡುಗಾರು ಶಾಖೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸೇವೆ ಆರಂಭಿಸಿ, 1980 ಜುಲೈ 25 ರಿಂದ ಖಾಯಂ ದ್ವಿತೀಯ ದರ್ಜೆ ಗುಮಾಸ್ತನಾಗಿ,...
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಮಡಪ್ಪಾಡಿ ಗ್ರಾಮ ಪಂಚಾಯತನ್ನು ಕಳೆದ ಬಾರಿ ಬಿಜೆಪಿ ವಶಪಡಿಸಿಕೊಂಡಿತ್ತು. ಇದೀಗ ಕಾಂಗ್ರೆಸ್ ಪುನಃ ಆಧಿಕಾರಕ್ಕೆರಿದೆ. ಕಾಂಗ್ರೆಸ್ ನ ಮಿತ್ರದೇವ ಮಡಪ್ಪಾಡಿ, ಉಷಾ ಜಯರಾಂ, ಸುಜಾತ ಹಾಡಿಕಲ್ಲು, ಶರ್ಮಿಳ ಕಜೆ ಗೆಲುವು ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದೆ. ಬಿಜೆಪಿಗೆ ಇಲ್ಲಿ ಮರ್ಮಘಾತವಾಗಿದೆ. ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು, ಮಾಜಿ ಅಧ್ಯಕ್ಷೆ ಶಕುಂತಲಾ ಕೇವಳ,ವಸಂತಿ...
Loading posts...
All posts loaded
No more posts
