ನವೀನ್ ಹೊಸೊಳಿಕೆ ವಿದೇಶ ಪ್ರಯಾಣ

ಗುತ್ತಿಗಾರು ಗ್ರಾಮದ ಹೊಸೊಳಿಕೆ ವಿಶ್ವನಾಥ ಗೌಡ ಮತ್ತು ಲಲಿತಾ ದಂಪತಿಗಳ ಪುತ್ರ ನವೀನ್ ಹೊಸೊಳಿಕೆ ಇವರು ಉದ್ಯೋಗ ನಿಮಿತ್ತ ಮಸ್ಕತ್ ಗೆ ಪ್ರಯಾಣ ಮಾ.25ರಂದು ಬೆಳೆಸಲಿದ್ದಾರೆ. ಇವರು ಮಂಗಳೂರಿನ ಲೋಬೋ ಇಂಜಿನಿಯರಿಂಗ್ ಕಂಪನಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಸ.ಹಿ.ಪ್ರಾ ಶಾಲೆ ವಳಲಂಬೆ ಹಾಗೂ ಸ.ಪ.ಪೂ ಕಾಲೇಜು ಗುತ್ತಿಗಾರು ಇದರ ಹಳೆ ವಿದ್ಯಾರ್ಥಿ.

ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಾಯಭಾರಿ ಅಯೋಗದ ಜಿಲ್ಲಾಧ್ಯಕ್ಷರಾಗಿ ರಿಯಾಝ್ ಕಲ್ಲುಗುಂಡಿ

ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಾಯಭಾರಿ ಆಯೋಗದ ಜಿಲ್ಲಾಧ್ಯಕ್ಷರಾಗಿ ಸಂಪಾಜೆ ಗ್ರಾಮದ ಕಲ್ಲುಂಗುಂಡಿಯ ರಿಯಾಝ್ ರವರನ್ನು ಅಯ್ಕೆ ಮಾಡಲಾಗಿದೆ. ಮಾನವ ಹಕ್ಕುಗಳ ಅಯೋಗದ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಪೆರಿಗೇರಿಯವರ ಶಿಫಾರಸ್ಸು ಮೇರೆಗೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗದ ರಾಷ್ಟ್ರೀಯ ನಾಯಕರಾದ ಡಾ.ಅವಿನಾಶ್ ಸಕುಂದೆ ರವರು ನೇಮಕಗೊಳಿಸಿದರು. ಇವರು ಸಂಪಾಜೆ ಗ್ರಾಮದ ಪೇರಡ್ಕ ಮುಹಿಯದ್ದೀನ್ ಜುಮ್ಮಾಮಸೀದಿ ಅಧ್ಯಕ್ಷರಾದ ಎಸ್.ಅಲಿ...
Ad Widget

ಹಾಡು ಬಾ ಕೋಗಿಲೆ ಗಾಯನ ಸ್ಪರ್ಧೆಗೆ ಅರ್ಜಿ‌ ಆಹ್ವಾನ

ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ, ಎಸ್.ಪಿ.ಬಾಲಸುಬ್ರಹ್ಮಣ್ಯ ನೆನಪಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಂಗೀತ ಜ್ಞಾನವಿರುವ ವಾದ್ಯಗೋಷ್ಠಿಯೊಂದಿಗೆ ಹಾಡುವ 12 ರಿಂದ 20 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರು. ಈ ಕೆಳಕಂಡ ಚಲನ ಚಿತ್ರಗಳಾದ ನ್ಯಾಯವೇ ದೇವರು, ಸಾಕ್ಷಾತ್ಕಾರ, ಬೆಂಕಿಯ ಬಲೆ, ದೇವರ ಮಕ್ಕಳು, ಗೆಜ್ಜೆ ಪೂಜೆ, ಕಸ್ತೂರಿ ನಿವಾಸ, ಬಂಧನ, ನೀ...

ಕಂಪ್ಯೂಟರ್ ತಿಳಿದಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ

ಬೇಕಾಗಿದ್ದಾರೆ : ಸುಳ್ಯದ ಸಂಸ್ಥೆಯೊಂದಕ್ಕೆ ಕಂಪ್ಯೂಟರ್ ತಿಳಿದಿರುವ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಮೊ : 77601 71607

ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಡಾ. ಅನುರಾಧಾ ಕುರುಂಜಿ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕರು, ಕರ್ನಾಟಕ ಶಿಕ್ಷಣ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರು ಆದ ಡಾ. ಅನುರಾಧಾ ಕುರುಂಜಿಯವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರ ಮತ್ತು ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ ಇವುಗಳ ಸಹಯೋಗದೊಂದಿಗೆ ನಡೆಯುವ "ಭಾಷಾ ಶಾಸ್ತ್ರೀಯ ನೆಲೆಯಲ್ಲಿ ದಕ್ಷಿಣದ ಲಂಬಾಣಿ ಭಾಷೆ" ಎಂಬ ವಿಷಯದ ಕುರಿತ...

ಸುಬ್ರಹ್ಮಣ್ಯ : ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಲಾಟ

ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಕೃಪಾ ಪೋಷಿತ ಯಕ್ಷಗಾನ ಮಂಡಳಿ, ಪಾವಂಜೆ ಮೇಳದವರಿಂದ ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ "ಶ್ರೀ ದೇವಿಮಹಾತ್ಮೆ" ಎಂಬ ಯಕ್ಷಗಾನ ಬಯಲಾಟ ಜರಗಿತು.ಈ ಸಂದರ್ಭದಲ್ಲಿ ಮೇಳದ ಪ್ರಧಾನ ಭಾಗವತರಾದ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ, ದೇವಿಪಾತ್ರಧಾರಿ ಅಕ್ಷಯ ಕುಮಾರ್ ಮಾರ್ನಾಡ್, ರಾಕೇಶ್ ರೈ ಅಡ್ಕ,ಹಾಗೂ ನೆಪಥ್ಯ ಕಲಾವಿದ ರಮೇಶ್ ಜೋಗಿ ಇವರನ್ನು...

ವಿಜ್ರಂಭಣೆಯಿಂದ ನಡೆದ ಮಾವಿನಕಟ್ಟೆ ಒತ್ತೆಕೋಲ

ದೇವಚಳ್ಳ ಗ್ರಾಮದ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವದ ಒತ್ತೆಕೋಲ ಮಹೋತ್ಸವ ಮಾರ್ಚ್ 18 ಮತ್ತು 19 ರಂದು ವಿಜ್ರಂಭಣೆಯಿಂದ ನಡೆಯಿತು. ಸುಮಾರು 3000 ಕ್ಕೂ ಮಿಕ್ಕಿ ಜನ ಭಾಗವಹಿಸಿ ದೈವದ ಪ್ರಸಾದ ಸ್ವೀಕರಿಸಿದರು. ಮಾ 18 ರಂದು ಬೆಳಿಗ್ಗೆ ಗಣಪತಿ ಹವನ, ಶುದ್ಧಿ ಕಲಶ, ಮೇಲೇರಿ ಕಾರ್ಯಕ್ರಮ, ಅಶ್ವತ್ಥ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ,...

ಗುತ್ತಿಗಾರು : ವಿದ್ಯಾರ್ಥಿ ಪೊಲೀಸ್ ಕೆಡೆಟ್ ಉದ್ಘಾಟನೆ

ಗುತ್ತಿಗಾರು ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿ ಪೊಲೀಸ್ ಕೆಡೆಟ್ ನ ಉದ್ಘಾಟನಾ ಕಾರ್ಯಕ್ರಮವು ಮಾ.13 ರಂದು ನಡೆಯಿತು. ದ.ಕ.ಜಿ.ಪಂ.ನ ಮಾಜಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿಯವರು ಉದ್ಘಾಟಿಸಿ, ಶುಭಹಾರೈಸಿದರು. ವಿದ್ಯಾರ್ಥಿ ಪೊಲೀಸ್ ಕೆಡೆಟ್ ನ ಗುರಿ ಮತ್ತು ಉದ್ದೇಶಗಳ ಕುರಿತಂತೆ ಕೆಡೆಟ್ ನ ನೋಡೆಲ್ ಅಧಿಕಾರಿಗಳಾದ ಮಲ್ಲಿಕಾರ್ಜುನ ಮತ್ತು ಅನಿಲ್ ರವರು ಮಾಹಿತಿ ನೀಡಿದರು. ಶಾಲಾ...

ಅದೋಗತಿ ತಲುಪಿದ ಸುಳ್ಯ ನಗರ ವ್ಯಾಪ್ತಿಯ ಕುದ್ಪಾಜೆ ರಸ್ತೆ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕುದ್ಪಾಜೆ ರಸ್ತೆ ಕೆಲವೆಡೆ ಡಾಮರು ಕಾಣದೇ ಹಾಗೂ ಕೆಲವೆಡೆ ಹಾಕಿದ ಡಾಮರು ಕಿತ್ತು ಹೋಗಿ ಸಂಚಾರಕ್ಕೆ ದುಸ್ಥರವಾಗಿದೆ. ಈ ರಸ್ತೆಗೆ ಸುಮಾರು 27ವರ್ಷಗಳ ಹಿಂದೆ ಹಾಕಿದ ಡಾಮರು ಎದ್ದು ಹೋಗಿದೆ. ಮತ್ತೆ ಯಾರು ಕೂಡ ಈ ರಸ್ತೆ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ. ಇಲ್ಲಿ ಸುಮಾರು 33 ಮನೆಗಳಿದ್ದು ವಾಹನ...

ಮೊಗ್ರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ 48 ದಿನ ಗಣಪತಿ ಹವನ

ಗುತ್ತಿಗಾರು: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ನಿರ್ಮಾಣ ಕಾರ್ಯದ ಅಂಗವಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ 48 ದಿನಗಳ ಕಾಲ ನಿರಂತರವಾಗಿ ನಡೆಯುವ ಗಣಪತಿ ಹವನವು ಮಾ.17 ರಿಂದ ಆರಂಭಗೊಂಡಿತು. ಮೊಗ್ರದಲ್ಲಿ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನದ ನಿರ್ಮಾಣ ಹಾಗೂ ದೈವಸ್ಥಾನಗಳ ಅಭಿವೃದ್ದಿ ಕಾರ್ಯ ನಡೆಯಲಿದೆ....
Loading posts...

All posts loaded

No more posts

error: Content is protected !!