ಎಪ್ರಿಲ್ 5 : ಬೆಳ್ಳಾರೆಯಲ್ಲಿ ಮದನಿಯಂ ಸ್ವಲಾತ್ ಮಜ್ಲೀಸ್

ಬೆಳ್ಳಾರೆ: ಅಂತರ್ಜಾಲದಲ್ಲಿ ಲಕ್ಷಾಂತರ ವಿಶ್ವಾಸಿಗಳ ಮನಗೆದ್ದ ಮದನೀಯಂ ಸ್ವಲಾತ್ ಮಜ್ಲೀಸ್ ಎಪ್ರಿಲ್ 5 ರಂದು ಬೆಳ್ಳಾರೆಯ ತೆರೆದ ವೇದಿಕೆಯಲ್ಲಿ ನಡೆಯಲಿದೆ.. ಲತ್ತೀಪ್ ಸಖಾಫಿ ಕಾಂತಪುರಂ ನೇತ್ರತ್ವದಲ್ಲಿ ನಡೆಯುವ ಈ ಬ್ರಹತ್ ಸ್ವಲಾತ್ ಮಜ್ಲೀಸ್ ಕಾರ್ಯಕ್ರಮಕ್ಕೆ ಸಾವಿರಾರು ವಿಶ್ವಾಸಿಗಳು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಚಯರ್ಮೇನ್ ಮಹಮೂದ್ ಬಿ.ಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಳ್ಳಾರೆ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಉಬರಡ್ಕದಿಂದ ಬೈಕ್ ರ‍್ಯಾಲಿ

ಸ್ವಾತಂತ್ರ್ಯೋತ್ಸವದ ಅಮೃತ ವರ್ಷದ ಅಂಗವಾಗಿ ಅಮರ ಸುಳ್ಯ ರೈತ ಕ್ರಾಂತಿ ನಡೆಸಿ ಬ್ರಿಟಿಷರನ್ನು ಓಡಿಸಿದ ಘಟನೆಯ ನೆನಪಿಗಾಗಿ ಮಾ.27ರಂದು ಬೆಳ್ಳಾರೆ ಸ್ವಾತಂತ್ರ್ಯದ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದೆ. ಆ ಪ್ರಯುಕ್ತ ಉಬರಡ್ಕ ಮಿತ್ತೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರಾದ ದಿ. ಕೆದಂಬಾಡಿ ರಾಮಯ್ಯ ಗೌಡ ಇವರ ಸ್ಮರಣಾರ್ಥ ಮಾ. 27 ಶನಿವಾರದಂದು ಪೂರ್ವಾಹ್ನ 8.00 ಗಂಟೆಗೆ ಉಬರಡ್ಕ ಮಿತ್ತೂರು...
Ad Widget

ಬಿಜೆಪಿ ಯುವಮೋರ್ಚಾ ವತಿಯಿಂದ ಉಚಿತ ಮಾಸ್ಕ್ ವಿತರಣೆ

ಬಿಜೆಪಿ ಯುವಮೋರ್ಚಾ ಸುಳ್ಯ ಮಂಡಲದ ವತಿಯಿಂದ ಸುಳ್ಯದ ಸರಕಾರಿ ಬಸ್ ನಿಲ್ದಾಣದಲ್ಲಿ ಮತ್ತು, ಖಾಸಗಿ ಬಸ್ ನಿಲ್ದಾಣ ಹಾಗೂ ನಗರದ ವಿವಿಧ ಭಾಗಗಳಲ್ಲಿ ಉಚಿತ ಮಾಸ್ಕ್ ವಿತರಣೆಯ ಮೂಲಕ ಕೋರೋನ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಕ್ರಮಕ್ಕೆ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ ಚಾಲನೆ ನೀಡಿದರು, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್...

ಸುಳ್ಯ : ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲು ಸಚಿವರಿಗೆ ಮನವಿ

ಸುಳ್ಯ ವಿಧಾನ ಸಭಾ ಕ್ಷೇತ್ರ ಕ್ಕೊಳಪಟ್ಟ ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನ ಕೆಲವು ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸಲು ಮಾನ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಈಶ್ವರಪ್ಪರವರಿಗೆ, ಬಂದರು ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರ ನೇತೃತ್ವದಲ್ಲಿ ಸುಳ್ಯ ಮಂಡಲ ವತಿಯಿಂದ ಮನವಿ ಸಲ್ಲಿಸಲಾಯಿತು. ಅನುದಾನ ನೀಡುವ...

ಮಾ.27 ರಂಗಮನೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆಯಲ್ಲಿ ಮಾ.27 ರಂದು ಸಂಜೆ 4.30ಕ್ಕೆ ವಿಶ್ವ ರಂಗಭೂಮಿ ದಿನಾಚರಣೆಯನ್ನು ರಂಗ ಉಪನ್ಯಾಸ ಮತ್ತು ರಂಗಗೀತೆ ಗಾಯನ ಕಾರ್ಯಕ್ರಮದ ಮೂಲಕ ಆಚರಿಸಲಾಗುವುದು. 2021 ನೇ ವಿಶ್ವ ರಂಗಭೂಮಿ ದಿನದ ಸಂದೇಶ ವಾಚನ ಮತ್ತು ವರ್ತಮಾನ-ರಂಗಭೂಮಿಯ ಅನಿವಾರ್ಯತೆ ಈ ವಿಷಯದಲ್ಲಿ ರಂಗನಿರ್ದೇಶಕ ಜೀವನ್ ರಾಂ ಸುಳ್ಯ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬಳಿಕ ರಂಗಮನೆ ನಾಟಕ...

ವಿವಾಹ ನಿಶ್ಚಿತಾರ್ಥ : ರೇಶ್ಮಾ – ನವೀನ

ಕಳಂಜ ಗ್ರಾಮದ ಮುಂಡುಗಾರು ಮನೆ ಶ್ರೀಮತಿ ಮತ್ತು ಶ್ರೀ ನಾಗಪ್ಪ ಗೌಡರವರ ಪುತ್ರಿ ರೇಶ್ಮಾರವರ ವಿವಾಹ ನಿಶ್ಚಿತಾರ್ಥವು ಶಾಂತಿಗೋಡು ಗ್ರಾಮದ ಮರಕ್ಕೂರು ಮನೆ ಶ್ರೀಮತಿ ಮತ್ತು ಶ್ರೀ ಪೂವಣಿ ಗೌಡರವರ ಪುತ್ರ ನವೀನರೊಂದಿಗೆ ಮಾ.24 ರಂದು ಮುಂಡುಗಾರು ವಧುವಿನ ಮನೆಯಲ್ಲಿ ನಡೆಯಿತು.

ಎಲಿಮಲೆ ಪ್ರೌಢಶಾಲೆಯಲ್ಲಿ ಪೋಲಿಸ್ ಕೆಡೆಟ್ ತರಬೇತಿ

ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ 2020-21 ಶೈಕ್ಷಣಿಕ ಸಾಲಿನ ಪೋಲಿಸ್ ಕೆಡೆಟ್ ತರಬೇತಿ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಚಂದ್ರಶೇಖರ ಪೇರಾಲ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರು ವಹಿಸಿದ್ದರು. ಸ್ಟೂಡೆಂಟ್ ಪೋಲಿಸ್ ಕೆಡೆಟ್ ನ ನೋಡೆಲ್ ಅಧಿಕಾರಿಗಳಾದ ಅನಿಲ್ ಹಾಗೂ ಮಲ್ಲಿಕಾರ್ಜುನ ಇವರು ಇದರ ಧ್ಯೇಯ ಉದ್ದೇಶಗಳ ಬಗ್ಗೆ...

ನಾಲ್ಕೂರು – ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ಮರಕತ ದೇವಸ್ಥಾನದಲ್ಲಿ ಶ್ರಮದಾನ

ನಾಲ್ಕೂರು ಗ್ರಾಮದ ಮರಕತ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 𝟴𝟱𝟬 ವರ್ಷಗಳ ಹಿಂದಿನಿಂದಲೂ ಪೂಜಿಸಿಕೊಂಡು ಬಂದಿರುವ ವಿಶೇಷ ದೇವರ ಮೀನುಗಳಿಗೆ (ನಾಗಕನ್ನಿಕೆಯರೆಂದು ಪ್ರತೀತಿ ) ನೀರಿನ ಒಳಹರಿವು ಕಡಿಮೆ ಇರುವುದನ್ನು ಅರಿತ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮಾ.𝟮𝟭 ರಂದು ನೀರಿಗೆ ಅಡ್ಡಲಾಗಿ ಕಟ್ಟ ನಿರ್ಮಾಣ ಮಾಡಿ ನೀರಿನ ಮಟ್ಟವನ್ನು ಹೆಚ್ಚಿಸುವ ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ...

ಕೊಲ್ಲಮೊಗ್ರು ಗ್ರಾಮ ವಾಸ್ತವ್ಯ – ಸುಳ್ಯದ 7 ಜನರಿಗೆ ಕೃಷಿ ಪ್ರಶಸ್ತಿ

ಕೊಲ್ಲಮೊಗ್ರದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಮಯೂರ ಕಲಾಮಂದಿರದಲ್ಲಿ ಮಾ.20 ರಂದು ನಡೆಯಿತು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಯೋಜನೆಯಡಿ ಕೊಡುವ ತಾಲೂಕು ಕೃಷಿ ಪ್ರಶಸ್ತಿಯನ್ನು ಸುಳ್ಯ ತಾಲೂಕಿನ 7 ಮಂದಿ ಕೃಷಿಕರಿಗೆ ನೀಡಲಾಯಿತು. ಹೈನುಗಾರಿಕೆಯಲ್ಲಿ ಜಿಲ್ಲಾ ಪ್ರಶಸ್ತಿ ಪಡೆದ ವಿಶ್ವನಾಥ್ ಪೈ, ಸಮಗ್ರ ಕೃಷಿ ಪದ್ಧತಿ ಘಟಕದಡಿ ನೀಡುವ ಪ್ರಶಸ್ತಿಗೆ ಕೊಲ್ಲಮೊಗ್ರದ ಜಯಪ್ರಕಾಶ್ ಕಟ್ಟ, ತೋಟಗಾರಿಕ...

ಬಾಳಿಲ ವಿದ್ಯಾಭೋದಿನಿ ಹಿ.ಪ್ರಾ.ಶಾಲೆಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿ ತರಬೇತಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ ಅಡಿಯಲ್ಲಿ ಬಾಳಿಲ ವಿದ್ಯಾಭೋದಿನಿ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿ ತರಬೇತಿಯನ್ನು ಮಾ.19 ರಂದು ನಡೆಸಲಾಯಿತು. ಅಡುಗೆ ಪ್ರಾವಿಣ್ಯತಾ ನಿಟ್ಟಿನಲ್ಲಿ ಈ ಅಡುಗೆ ತರಬೇತಿಯನ್ನು ನಡೆಸಲಾಗಿದ್ದು ಹಲವು ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡರು.ಸ್ಕೌಟ್ ಮಾಸ್ಟರ್ ಶಿವಪ್ರಸಾದ್ ಜಿ., ಗೈಡ್ ಕ್ಯಾಪ್ಟನ್ ಯಶೋಧ...
Loading posts...

All posts loaded

No more posts

error: Content is protected !!