ಬೆಳ್ಳಾರೆ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ವಿಜಯೋತ್ಸವ

ದ.ಕ.ಜಿಲ್ಲಾಡಳಿತ, ತಾಲೂಕು ಆಡಳಿತ ಸುಳ್ಯ, ಗ್ರಾಮ ಪಂಚಾಯತ್ ಬೆಳ್ಳಾರೆ, ನೆಹರೂ ಯುವ ಕೇಂದ್ರ ಮಂಗಳೂರು ಇದರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಅಮರ ಬೆಳ್ಳಾರೆ ವಿಜಯೋತ್ಸವ ಕಾರ್ಯಕ್ರಮ ಮಾ.27ರಂದು ನಡೆಯಿತು. ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಿದರು. ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮುಖ್ಯ ಅತಿಥಿಯಾಗಿದ್ದರು. ಹಿರಿಯ ಸಾಹಿತಿ, ವಿಶ್ರಾಂತ ಪ್ರಾಂಶುಪಾಲ ಡಾ.ಪ್ರಭಾಕರ...

ಪೆರಾಜೆ : ಕರವೇ ಸ್ವಾಭಿಮಾನಿ ಬಣದ ವತಿಯಿಂದ ಸ್ವಚ್ಛತಾ ಕಾರ್ಯ

ಪೆರಾಜೆ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಕರವೇ ಸ್ವಾಭಿಮಾನಿ ಬಣ ಪೆರಾಜೆ ಘಟಕದ ವತಿಯಿಂದ ಮಾ 26 ರಂದು ಕಾಸ್ಪಾಡಿಯಿಂದ ಪೆರಾಜೆಯ ಮೂಲಕ ದಾಸರಹಿತ್ಲು ವರೆಗೆ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಭು, ಕನ್ನಡ ಪೆರಾಜೆ ವಾರ್ಡ್ ಸದಸ್ಯ ಸುರೇಶ್ ಪೆರುಮುಂಡ, ಕರವೇ ಕೊಡಗು ಜಿಲ್ಲಾಧ್ಯಕ್ಷ ಉನೈಸ್ ಪೆರಾಜೆ ಮತ್ತು ಪೆರಾಜೆ...
Ad Widget

ಗುಡ್ಡಪ್ಪ ಗೌಡ ಪುರ್ಲುಮಕ್ಕಿ ನಿಧನ

ಗುತ್ತಿಗಾರು ಗ್ರಾಮದ ವಳಲಂಬೆ ಪುರ್ಲುಮಕ್ಕಿ ನರಿಯೂರು ಗುಡ್ಡಪ್ಪ ಗೌಡ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಇಂದು ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ರವಿಪ್ರಕಾಶ್, ಚೇತನ್, ಪುತ್ರಿ ಶ್ರೀಮತಿ ರೂಪಲತಾ, ಮೂವರು ಸಹೋದರರು, ಒರ್ವ ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ವಳಲಂಬೆ : ಕಲಾ ಪೋಷಕ ವೇಣುಗೋಪಾಲ ದೇರಪಜ್ಜನಮನೆ ಅವರಿಗೆ ಸನ್ಮಾನ

ಕಳೆದ ಎಂಟು ವರ್ಷಗಳಿಂದ ವಳಲಂಬೆ ದೇವಸ್ಥಾನದ ಜಾತ್ರಾ ಸಮಯದಲ್ಲಿ ಯಕ್ಷಗಾನ ಪ್ರದರ್ಶನವನ್ನು ಪ್ರಾಯೋಜಿಸುತ್ತಿರುವ ಕಲಾ ಪೋಷಕ ವೇಣುಗೋಪಾಲ ದೇರಪಜ್ಜನಮನೆ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮ ಮಾ.24 ರಂದು ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ...

ಎಪ್ರಿಲ್ 5 : ಬೆಳ್ಳಾರೆಯಲ್ಲಿ ಮದನಿಯಂ ಸ್ವಲಾತ್ ಮಜ್ಲೀಸ್

ಬೆಳ್ಳಾರೆ: ಅಂತರ್ಜಾಲದಲ್ಲಿ ಲಕ್ಷಾಂತರ ವಿಶ್ವಾಸಿಗಳ ಮನಗೆದ್ದ ಮದನೀಯಂ ಸ್ವಲಾತ್ ಮಜ್ಲೀಸ್ ಎಪ್ರಿಲ್ 5 ರಂದು ಬೆಳ್ಳಾರೆಯ ತೆರೆದ ವೇದಿಕೆಯಲ್ಲಿ ನಡೆಯಲಿದೆ.. ಲತ್ತೀಪ್ ಸಖಾಫಿ ಕಾಂತಪುರಂ ನೇತ್ರತ್ವದಲ್ಲಿ ನಡೆಯುವ ಈ ಬ್ರಹತ್ ಸ್ವಲಾತ್ ಮಜ್ಲೀಸ್ ಕಾರ್ಯಕ್ರಮಕ್ಕೆ ಸಾವಿರಾರು ವಿಶ್ವಾಸಿಗಳು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಚಯರ್ಮೇನ್ ಮಹಮೂದ್ ಬಿ.ಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಳ್ಳಾರೆ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಉಬರಡ್ಕದಿಂದ ಬೈಕ್ ರ‍್ಯಾಲಿ

ಸ್ವಾತಂತ್ರ್ಯೋತ್ಸವದ ಅಮೃತ ವರ್ಷದ ಅಂಗವಾಗಿ ಅಮರ ಸುಳ್ಯ ರೈತ ಕ್ರಾಂತಿ ನಡೆಸಿ ಬ್ರಿಟಿಷರನ್ನು ಓಡಿಸಿದ ಘಟನೆಯ ನೆನಪಿಗಾಗಿ ಮಾ.27ರಂದು ಬೆಳ್ಳಾರೆ ಸ್ವಾತಂತ್ರ್ಯದ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದೆ. ಆ ಪ್ರಯುಕ್ತ ಉಬರಡ್ಕ ಮಿತ್ತೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರಾದ ದಿ. ಕೆದಂಬಾಡಿ ರಾಮಯ್ಯ ಗೌಡ ಇವರ ಸ್ಮರಣಾರ್ಥ ಮಾ. 27 ಶನಿವಾರದಂದು ಪೂರ್ವಾಹ್ನ 8.00 ಗಂಟೆಗೆ ಉಬರಡ್ಕ ಮಿತ್ತೂರು...

ಬಿಜೆಪಿ ಯುವಮೋರ್ಚಾ ವತಿಯಿಂದ ಉಚಿತ ಮಾಸ್ಕ್ ವಿತರಣೆ

ಬಿಜೆಪಿ ಯುವಮೋರ್ಚಾ ಸುಳ್ಯ ಮಂಡಲದ ವತಿಯಿಂದ ಸುಳ್ಯದ ಸರಕಾರಿ ಬಸ್ ನಿಲ್ದಾಣದಲ್ಲಿ ಮತ್ತು, ಖಾಸಗಿ ಬಸ್ ನಿಲ್ದಾಣ ಹಾಗೂ ನಗರದ ವಿವಿಧ ಭಾಗಗಳಲ್ಲಿ ಉಚಿತ ಮಾಸ್ಕ್ ವಿತರಣೆಯ ಮೂಲಕ ಕೋರೋನ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಕ್ರಮಕ್ಕೆ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ ಚಾಲನೆ ನೀಡಿದರು, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್...

ಸುಳ್ಯ : ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲು ಸಚಿವರಿಗೆ ಮನವಿ

ಸುಳ್ಯ ವಿಧಾನ ಸಭಾ ಕ್ಷೇತ್ರ ಕ್ಕೊಳಪಟ್ಟ ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನ ಕೆಲವು ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸಲು ಮಾನ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಈಶ್ವರಪ್ಪರವರಿಗೆ, ಬಂದರು ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರ ನೇತೃತ್ವದಲ್ಲಿ ಸುಳ್ಯ ಮಂಡಲ ವತಿಯಿಂದ ಮನವಿ ಸಲ್ಲಿಸಲಾಯಿತು. ಅನುದಾನ ನೀಡುವ...

ಮಾ.27 ರಂಗಮನೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆಯಲ್ಲಿ ಮಾ.27 ರಂದು ಸಂಜೆ 4.30ಕ್ಕೆ ವಿಶ್ವ ರಂಗಭೂಮಿ ದಿನಾಚರಣೆಯನ್ನು ರಂಗ ಉಪನ್ಯಾಸ ಮತ್ತು ರಂಗಗೀತೆ ಗಾಯನ ಕಾರ್ಯಕ್ರಮದ ಮೂಲಕ ಆಚರಿಸಲಾಗುವುದು. 2021 ನೇ ವಿಶ್ವ ರಂಗಭೂಮಿ ದಿನದ ಸಂದೇಶ ವಾಚನ ಮತ್ತು ವರ್ತಮಾನ-ರಂಗಭೂಮಿಯ ಅನಿವಾರ್ಯತೆ ಈ ವಿಷಯದಲ್ಲಿ ರಂಗನಿರ್ದೇಶಕ ಜೀವನ್ ರಾಂ ಸುಳ್ಯ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬಳಿಕ ರಂಗಮನೆ ನಾಟಕ...

ವಿವಾಹ ನಿಶ್ಚಿತಾರ್ಥ : ರೇಶ್ಮಾ – ನವೀನ

ಕಳಂಜ ಗ್ರಾಮದ ಮುಂಡುಗಾರು ಮನೆ ಶ್ರೀಮತಿ ಮತ್ತು ಶ್ರೀ ನಾಗಪ್ಪ ಗೌಡರವರ ಪುತ್ರಿ ರೇಶ್ಮಾರವರ ವಿವಾಹ ನಿಶ್ಚಿತಾರ್ಥವು ಶಾಂತಿಗೋಡು ಗ್ರಾಮದ ಮರಕ್ಕೂರು ಮನೆ ಶ್ರೀಮತಿ ಮತ್ತು ಶ್ರೀ ಪೂವಣಿ ಗೌಡರವರ ಪುತ್ರ ನವೀನರೊಂದಿಗೆ ಮಾ.24 ರಂದು ಮುಂಡುಗಾರು ವಧುವಿನ ಮನೆಯಲ್ಲಿ ನಡೆಯಿತು.
Loading posts...

All posts loaded

No more posts

error: Content is protected !!