ಸುಳ್ಯ : ವಿಷ್ಣು ಎಂಟರ್ ಪ್ರೈಸಸ್ ಡಿಜಿಟಲ್ ಜನಸೇವಾ ಕೇಂದ್ರ ಶುಭಾರಂಭ

ಸುಳ್ಯದ ಕೆ‌.ಎಸ್.ಆರ್‌.ಟಿ.ಸಿ. ಬಸ್ ನಿಲ್ದಾಣದ ಬಳಿ ಇರುವ ಪ್ರಾಥಮಿಕ ಸಹಕಾರ ‌ಕೃಷಿ‌ ಮತ್ತು ಗ್ರಾಮೀಣ ‌ಭೂ ಅಭಿವೃದ್ಧಿ ಬ್ಯಾಂಕಿನ ವಾಣಿಜ್ಯ ಸಂಕೀರ್ಣದಲ್ಲಿ ಮುಖೇಶ್ ಪಡ್ಪು ರವರ ಮಾಲಕತ್ವದ ಶ್ರೀ ವಿಷ್ಣು ಎಂಟರ್ ಪ್ರೈಸಸ್ ಡಿಜಿಟಲ್ ಜನ ಸೇವಾ ಕೇಂದ್ರ ಡಿ. 17‌ ರಂದು ಶುಭಾರಂಭಗೊಂಡಿತು.

ಡಿ.19 ರಂದು ಸುಬ್ರಹ್ಮಣ್ಯ-ಐನೆಕಿದು ಪ್ರಾ.ಕೃ.ಪ.ಸ ಸಂಘದ ವಾರ್ಷಿಕ ಮಹಾಸಭೆ

ಸುಬ್ರಹ್ಮಣ್ಯ - ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಡಿ.19 ರ ಆದಿತ್ಯವಾರದಂದು ಬೆಳಿಗ್ಗೆ 10:00 ಗಂಟೆಗೆ ಎಸ್.ಎಸ್.ಪಿ.ಯು ಕಾಲೇಜಿನ ಬೆಳಿಹಬ್ಬ ಸಭಾಭವನದಲ್ಲಿ ನಡೆಯಲಿದ್ದು, ಮಹಾಸಭೆಯ ನಂತರ ಮದ್ಯಾಹ್ನ 12:00 ಗಂಟೆಗೆ ಮಿತ್ರ ಆಪ್ತ ಸಮಾಲೋಚನಾ ಕೇಂದ್ರ ತುಮಕೂರು ಇದರ ನಿರ್ದೇಶಕರಾದ ಸಿ.ಸಿ ಪಾವಟೆ ಅವರಿಂದ "ಗ್ರಾಮೀಣ ಅಭಿವೃದ್ಧಿಯಲ್ಲಿ ಕೃಷಿಕರ ಪಾತ್ರ...
Ad Widget

ಜ.13 ರಿಂದ ಜ.16 : ನಾಲ್ಕೂರು ಹಲ್ಗುಜಿ ಯಲ್ಲಿ ದೈವಸ್ಥಾನ ಪುನರ್ ಪ್ರತಿಷ್ಠೆ, ಕಲಶಾಭಿಷೇಕ – ಆಮಂತ್ರಣ ಪತ್ರಿಕೆ ಬಿಡುಗಡೆ

ನಾಲ್ಕೂರು ಗ್ರಾಮದ ಹಲ್ಗುಜಿಯಲ್ಲಿ ಜ.13 ರಿಂದ ಜ.16 ರ ತನಕ ಶ್ರೀ ಶಿರಾಡಿ ದೈವ ಮತ್ತು ಅಗ್ನಿ ಗುಳಿಗ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ನಡೆಯಲಿದ್ದು ಇಂದು ದೈವಸ್ಥಾನದ ಬಳಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.ದೈವಸ್ಥಾನದ ವಾಸ್ತುಶಿಲ್ಪಿ ವೆಂಕಟರಮಣ ಆಚಾರ್ಯ ಮರ್ಕಂಜ ಅವರು ಪುನರ್ ಪ್ರತಿಷ್ಠೆ, ಕಲಶಾಭಿಷೇಕದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು....

ಸುಳ್ಯ :- ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಅಕ್ಕಿ ಹಾಗೂ ತರಕಾರಿ ಹಸ್ತಾಂತರ

ಸುಳ್ಯ ತಾಲೂಕಿನ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಡಿ.12 ರಿಂದ ಡಿ.26 ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಭಕ್ತರಿಗೆ ನಿರಂತರ ಅನ್ನದಾನ ಇರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಚೆನ್ನಕೇಶವ ದೇವಸ್ಥಾನಕ್ಕೆ 40 ಕ್ವಿಂಟಾಲ್ ಅಕ್ಕಿ ಹಾಗೂ ತರಕಾರಿಗಳನ್ನು ಡಿ.18 ರಂದು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ಹರಪ್ರಸಾದ್...

ಸುಬ್ರಹ್ಮಣ್ಯ :- ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಆಶ್ಲೇಷ್ ಗೆ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿ ಆಶ್ಲೇಷ್.ಆರ್.ವಿ 32 ನಿಮಿಷ 4 ಸೆಕೆಂಡುಗಳ ಕಾಲ ತನ್ನ ಕೈಯ ತೋರು ಬೆರಳನ್ನು ಕೈಯ ಮಣಿಗಂಟಿನ ಹಿಂಭಾಗದಲ್ಲಿ ಮಡಚಿ ಹಿಡಿದಿಟ್ಟುಕೊಂಡು "ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್" ನಲ್ಲಿ ಸ್ಥಾನ ಪಡೆದಿದ್ದಾನೆ.ಬಳ್ಪ ಗ್ರಾಮದ ಕೃಷಿಕರಾದ ರಮೇಶ್ ಭಟ್ ಹಾಗೂ ವೀಣಾ ಸಾವಿತ್ರಿ ದಂಪತಿಗಳ ಪುತ್ರನಾದ ಆಶ್ಲೇಷ್...

ಡಿ.25- 26 ರಂದು ಸುಳ್ಯ ಹಬ್ಬ ಡಾ.ಪ್ರಭಾಕರ ಶಿಶಿಲ, ಕಮಲಾಕ್ಷಿ ವಿ. ಶೆಟ್ಟಿ ಕೆವಿಜಿ ಸಾಧನಶ್ರೀ ಪ್ರಶಸ್ತಿ

ಕೆವಿಜಿ ಸುಳ್ಯ ಹಬ್ಬದ ದಶಮಾನೋತ್ಸವ ಸಂಭ್ರಮವು ಇದೇ ಡಿ.25 ಹಾಗೂ ಡಿ. 26 ರಂದು ಕೆವಿಜಿ ಕಾನೊನು ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ ಎಂದು ಸುಳ್ಯ ಹಬ್ಬ ಸೇವಾ ಸಂಘ ಸುಳ್ಯ ಸಂಘದ ಅಧ್ಯಕ್ಷ ಪಿ.ಸಿ ಜಯರಾಮ ಅವರು ಹೇಳಿದರು.ಡಿ.17 ರಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಡಿ.25ರಂದು ಪೂ. 9.30...

ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ – ಸಂಘಕ್ಕೆ ರೂ.24,90,223.32/- ನಿವ್ವಳ ಲಾಭ, ಸದಸ್ಯರಿಗೆ 4% ಡಿವಿಡೆಂಡ್ ಘೋಷಣೆ

ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಎಡಮಂಗಲ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಎಂ.ರಾಮಕೃಷ್ಣ ರೈ ಮಾಲೆಂಗ್ರಿ ಇವರ ಅಧ್ಯಕ್ಷತೆಯಲ್ಲಿ ಡಿ.18 ಶನಿವಾರದಂದು ಎಡಮಂಗಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ.ಡಿ ಕಾರ್ಯಸೂಚಿ ಮಂಡಿಸಿದರು. 2020-21ನೇ ಸಾಲಿನಲ್ಲಿ ಸಂಘವು ರೂ.24,90,223.32/- ನಿವ್ವಳ ಲಾಭ ಗಳಿಸಿದ್ದು,...

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ- ಒಟ್ಟು ಲಾಭಾಂಶ ರೂ.20,78,434.33, ಸದಸ್ಯರಿಗೆ 3% ಡಿವಿಡೆಂಡ್ ಘೋಷಣೆ

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ರಾಘವೇಂದ್ರ.ಪಿ.ಕೆ ಇವರ ಅಧ್ಯಕ್ಷತೆಯಲ್ಲಿ ಡಿ.18 ಶನಿವಾರದಂದು ಸಂಘದ ಸಭಾಭವನ 'ಅಮರ ಸಹಕಾರ ಸೌಧ' ಕುಕ್ಕುಜಡ್ಕದಲ್ಲಿ ನಡೆಯಿತು.ಸಂಘದ ನಿರ್ದೇಶಕ ಗಣೇಶ್ ಪಿಲಿಕಜೆ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷರಾದ ರಾಘವೇಂದ್ರ.ಪಿ.ಕೆ ಸರ್ವರನ್ನು ಸ್ವಾಗತಿಸಿ, ಸಂಘವು 2020-21ನೇ ಸಾಲಿನಲ್ಲಿ ರೂ.20,78,434.33/- ನಿವ್ವಳ...

ಕುಕ್ಕೆ ಸುಬ್ರಹ್ಮಣ್ಯ : ದೈವಗಳ ನಡಾವಳಿ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಮಹೋತ್ಸವ ಪ್ರಯುಕ್ತ ಡಿ.16 ರ ಗುರುವಾರದಂದು ಮುಂಜಾನೆ ದೈವಗಳ ನಡಾವಳಿ ಜರುಗಿತು.ಡಿ.15 ರ ಬುಧವಾರದಂದು ರಾತ್ರಿ ದೀಪಾರಾಧನೆಯುಕ್ತ ಪಾಲಕಿ ಉತ್ಸವ ನಡೆದು, ಕ್ಷೇತ್ರದ ದೈವಗಳಿಗೆ ಗೋಪುರ ನಡಾವಳಿ ನಡೆಯಿತು. ಕ್ಷೇತ್ರದ ರಕ್ಷಣಾ ದೈವಗಳಿಗೆ ಕೊಡುವ ಕಟ್ಟುಕಟ್ಟಲೆಯ ಕೋಲ ಮತ್ತು ಪರ್ವಗಳನ್ನೊಳಗೊಂಡ ಗೋಪುರ ನಡಾವಳಿ ಜರುಗಿತು. ಬೆಳಿಗ್ಗೆ ಪುರುಷರಾಯ...

ಗುತ್ತಿಗಾರು: ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಆಂಬುಲೆನ್ಸ್ ಖರೀದಿ ಯೋಜನೆಗೆ ಸಹಾಯಧನ ವಿತರಣೆ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಖರೀದಿಸುವ ಆಂಬುಲೆನ್ಸ್ ಖರೀದಿ ಯೋಜನೆಗೆ ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ಶ್ರೀ ಶಂಖಪಾಲ ಸುಬ್ರಮಣ್ಯ ದೇವಸ್ಥಾನ ವಳಲಂಬೆ ಇದರ ಮಾಜಿ ಅಧ್ಯಕ್ಷ ಕೇಶವ ಹೊಸೊಳಿಕೆ ಹಾಗೂ ಹೆಚ್. ವಿಮಲಾ ಹೊಸೊಳಿಕೆ ಮತ್ತು ಮನೆಯವರು ಸಹಾಯಧನ ನೀಡಿ ಮಹತ್ವದ ಈ...
Loading posts...

All posts loaded

No more posts

error: Content is protected !!