ಸಂಪಾಜೆ : ಹೊಳೆಗೆ ಉರುಳಿ ಬಿದ್ದ ಬಸ್ – ಹಲವಾರು ಮಂದಿಗೆ ಗಾಯ

ಸಂಪಾಜೆ ಗಡಿಕಲ್ಲು ಬಳಿ ಸರಕಾರಿ ಬಸ್ಸು ರಸ್ತೆಯ ಬದಿಯ ಹೊಳೆಗೆ ಉರುಳಿ ಬಿದ್ದಿದ್ದು ಬಸ್ಸಲ್ಲಿದ್ದ ಹಲವಾರು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ತಂದು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಬಸ್ ನ ಎದುರಿನ ಟಯರ್ ಒಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಸುಳ್ಯ : ಬಿಕೋ ಎನ್ನುತ್ತಿರುವ ಗಾಂಧಿನಗರ – ಬಂದ್ ಗೆ ಬೆಂಬಲ ಸೂಚಿಸಿ ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮ್ ಸಮುದಾಯ

ಹೈಕೋರ್ಟ್ ನಲ್ಲಿ ಹಿಜಾಬ್ ಕುರಿತ ಬಂದಿರುವ ತೀರ್ಪಿನ ಕುರಿತು, ಮುಸ್ಲಿಂ ಸಮುದಾಯದ ವಿವಿಧ ಸಂಘ ಸಂಸ್ಥೆಗಳು ಇಂದು ಸ್ವಯಂಪ್ರೇರಿತ ಬಂದ್ ಕರೆ ನೀಡಿದ್ದು ಸುಳ್ಯದಲ್ಲೂ ಕೂಡ ಮುಸ್ಲಿಂ ಸಮುದಾಯ ಬೆಂಬಲ ಸೂಚಿಸಿ ಅಂಗಡಿಗಳನ್ನು ಬಂದ್ ಮಾಡಿದ್ದಾರೆ.ಸುಳ್ಯದ ಗಾಂಧಿನಗರ ಸಂಪೂರ್ಣ ಬಿಕೋ ಎನ್ನುತ್ತಿದೆ. ಬಾಳೆಮಕ್ಕಿ, ಶ್ರೀರಾಮ ಪೇಟೆ, ಹಳೆಗೇಟು, ಪೈಚಾರು, ಕುರುಂಜಿಭಾಗ್, ಜೂನಿಯರ್ ಕಾಲೇಜು ರಸ್ತೆ ಸೇರಿದಂತೆ...
Ad Widget

ಮಾ 17 : ಕರ್ನಾಟಕ ಬಂದ್ ಕರೆಗೆ ಸುಳ್ಯ ತಾಲೂಕು ಮುಸ್ಲಿಮ್ ಒಕ್ಕೂಟ ಬೆಂಬಲ – ಇಕ್ಬಾಲ್ ಎಲಿಮಲೆ

ಕರ್ನಾಟಕ ಉಚ್ಛ ನ್ಯಾಯಾಲಯದ ಹಿಜಾಬ್ ಕುರಿತ ತೀರ್ಪಿನಲ್ಲಿ ಇಸ್ಲಾಮಿನಲ್ಲಿ ಮುಸ್ಲಿಮ್ ಮಹಿಳೆಯರಿಗೆ ಹಿಜಾಬ್ ಮಹತ್ವವಲ್ಲ ಮತ್ತು ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗ ವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದು ಒಪ್ಪುಲು ಸಾಧ್ಯವಿಲ್ಲ, ಇದನ್ನು ನ್ಯಾಯಾಲಯ ಮರುಪರಿಶೀಲಿಸಿಬೇಕೆಂದು ಒತ್ತಾಯಿಸಿ ರಾಜ್ಯದಾದ್ಯಂತ ಮಾ. 17 ರಂದು ಸ್ವಯಂ ಪ್ರೇರಿತ ವ್ಯವಹಾರ ಸ್ಥಗಿತಕ್ಕೆ ವಿವಿಧ ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದು, ಈ...

ಮಾ.18-19 ರಂದು ಮಾವಿನಕಟ್ಟೆಯಲ್ಲಿ ಒತ್ತೆಕೋಲ ಮಹೋತ್ಸವ

ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವದ ಒತ್ತೆಕೋಲ ಮಹೋತ್ಸವ ಮಾ.18 ಮತ್ತು 19 ರಂದು ನಡೆಯಲಿದೆ.ಮಾ.18 ರಂದು ಬೆಳಿಗ್ಗೆ ಗಂಟೆ 6 ರಿಂದ ಗಣಪತಿ ಹವನ, 7 ಗಂಟೆಗೆ ಮೇಲೆರಿ ಕಾರ್ಯಕ್ರಮ, 8.30 ಕ್ಕೆ ಅಶ್ವತ್ಥ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಗಂಟೆ 7ಕ್ಕೆ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿ ಸ್ಪರ್ಶ, ಸಾರ್ವಜನಿಕ...

ದೇಶವನ್ನು ಆಳುವ ಸರಕಾರಗಳು ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲ – ವಸಂತ ಆಚಾರಿ

ಸಮಾಜದಲ್ಲಿ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕ ವರ್ಗ ಅಭಿವೃದ್ಧಿಯಾಗದ ದೇಶ ಅಭಿವೃದ್ಧಿ ಸಾಧ್ಯವಿಲ್ಲ. ಆದರೆ ದೇಶವನ್ನಾಳುವ ಸರಕಾರಗಳು ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ಬಂಡವಾಳ ಶಾಹಿಗಳ ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಇತ್ತೀಚೆಗೆ ಸುಳ್ಯ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ಅಕ್ಷರ ದಾಸೋಹ ನೌಕರರ ಸಮಾವೇಶದಲ್ಲಿ ನೌಕರರನ್ನು ಉದ್ದೇಶಿಸಿ ಅವರು ಮಾತನಾಡಿದರು. ನಮ್ಮ ದೇಶದ...

ಚಂದನ ಸಾಹಿತ್ಯ ವೇದಿಕೆ ವತಿಯಿಂದ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮ

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಶಿಕ್ಷಣ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮವು ಜರುಗಿತು . ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಜ್ಯೋತಿಷಿ ಮತ್ತು ಸಾಹಿತಿ ಎಚ್ .ಭೀಮರಾವ್ ವಾಷ್ಠರ್ ರವರು ಅಧ್ಯಕ್ಷತೆ ವಹಿಸಿದ್ದರು . ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ...

ಮಾ.19, 20 : ಕಳಂಜ ಒತ್ತೆಕೋಲ ನಡಾವಳಿ

ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಕಳಂಜ ವತಿಯಿಂದ ಕಳಂಜ ಒತ್ತೆಕೋಲವು ಮಾ.19 ಮತ್ತು ಮಾ.20 ರಂದು ನಡೆಯಲಿದೆ.ಮಾ.19 ರಂದು ಸಂಜೆ ಗಂಟೆ 6.00 ಕ್ಕೆ ಸ್ಥಾನದಿಂದ ಭಂಡಾರ ತೆಗೆಯುವುದು.ರಾತ್ರಿ ಗಂಟೆ 7.30 ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ, ಗಂಟೆ 9.00 ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 11.00 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚಟ್ಟು ನಡೆಯಲಿದೆ.ಮಾ.20...

ಕಳೆದುಹೋಗಿದೆ…..

ಸುಳ್ಯ- ಜಾಲ್ಸೂರು- ಕಾಡುಸೋರಂಜ ದಾರಿ ಮದ್ಯೆ ಇಲೆಕ್ಟ್ರಿಕಲ್ ಟೂಲ್ಸ್ ಬ್ಯಾಗ್ ಮಾ.11ರಂದು ಸಂಜೆ ಸಮಯ 7ರಿಂದ 9ಗಂಟೆ ಸಮಯದಲ್ಲಿ ಕಳೆದುಹೋಗಿರುತ್ತದೆ. ಯಾರಿಗಾದರೂ ಸಿಕ್ಕಿದಲ್ಲಿ ಕೂಡಲೇ ಸಂಪರ್ಕಿಸಿ94487928368861078536ಗುರುಪ್ರಸಾದ್

ಕುಕ್ಕೆ ಸುಬ್ರಹ್ಮಣ್ಯ : ಅನ್ಯ ಧರ್ಮೀಯ ವ್ಯಾಪಾರ ನಿಷೇಧಿಸುವಂತೆ ಒತ್ತಾಯಿಸಿ ಹಿಂದು ಸಂಘಟನೆಗಳಿಂದ ಮನವಿ

ಹಿಂದೂ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಅನ್ಯ ಧರ್ಮಿಯ ವ್ಯಾಪಾರವನ್ನು ನಿಷೇಧಿಸುವ ಕುರಿತು ವಿಹಿಂಪ ಮತ್ತು ಹಿಂಜಾವೇ ದೇವಳಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲೆ ವಿಹಿಂಪ ಸಹ ಕಾರ್ಯದರ್ಶಿ ನವೀನ್ ಕುಮಾರ್ ನೆರಿಯ ಸರಪಾಡಿ, ಪ್ರಖಂಡ ಕಾರ್ಯದರ್ಶಿ ಪ್ರಮೋದ್ ಕುಮಾರ್ ಕಡಬ, ವಿಹಿಂಪ ಸುಬ್ರಹ್ಮಣ್ಯ ಘಟಕಾಧ್ಯಕ್ಷ ಅಶೋಕ್ ಆಚಾರ್ಯ, ಸುಬ್ರಹ್ಮಣ್ಯ ಘಟಕ...

ಕಾಜಿಮಡ್ಕ – ಅಚ್ರಪ್ಪಾಡಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ದೇವಚಳ್ಳ ಗ್ರಾಮ ದ ಕಾಜಿಮಡ್ಕ - ಅಚ್ರಪ್ಪಾಡಿ ಸಾರ್ವಜನಿಕ ಸಂಪರ್ಕ ರಸ್ತೆ ಯ ಕಾಂಕ್ರೀಟಿಕರಣ ಉದ್ಘಾಟನಾ ಕಾರ್ಯಕ್ರಮವು ಮಾ.14 ರಂದು ನಡೆಯಿತು.ಉದ್ಘಾಟನೆ ಯನ್ನು ರಾಮಣ್ಣ ನಾಯ್ಕ ಕಾಜಿಮಡ್ಕ ರವರು ದೀಪ ಬೆಳಗಿಸುವುದರ ಮೂಲಕ ಹಾಗೂ ಭುವನೇಶ್ವರ ಅಚ್ರಪ್ಪಾಡಿ ತೆಂಗಿನ ಕಾಯಿ ಒಡೆಯುವ ಮೂಲಕ ನೆರೆವೇರಿಸಿದರು. ಈ ಸಂದರ್ಭದಲ್ಲಿಗ್ರಾಮ ಪಂಚಾಯತ್ ಸದಸ್ಯರು ಗಳಾದ ಶೈಲೇಶ್ ಅಂಬೆಕಲ್ಲು, ದುರ್ಗಾದಾಸ್...
Loading posts...

All posts loaded

No more posts

error: Content is protected !!