- Friday
- May 8th, 2026
ಮಂಗಳೂರಿನ ಮನ್ವಿತ್(12 ವರ್ಷ) ಎಂಬಾತಅರಂತೋಡು ಗ್ರಾಮದ ಕುಕ್ಕುಂಬಳ ಹೊಳೆಯಲ್ಲಿ ಸ್ನಾನಮಾಡಲೆಂದು ಹೋದ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಸಂಜೆ ವರದಿಯಾಗಿದೆ. ಅರಂತೋಡಿನ ದಾಮೋದರ ಶೆಟ್ಟಿಯವರ ಪುತ್ರಿಯನ್ನುಮಂಗಳೂರಿಗೆ ವಿವಾಹ ಮಾಡಿಕೊಡಲಾಗಿದ್ದು, ಅವರ ಮಗ ಮನ್ವಿತ್ ಅಜ್ಜನ ಮನೆಗೆ ಬಂದ ಸಂದರ್ಭ ಹಂಸಕುಕ್ಕುಂಬಳರವರ ಮನೆ ಸಮೀಪ ಸ್ನಾನ ಮಾಡಲೆಂದು ನೀರಿಗಿಳಿದ ಬಾಲಕ ನೀರಿನಲ್ಲಿ ಮುಳುಗಿದನೆಂದು ತಿಳಿದುಬಂದಿದೆ.ಶರತ್...
ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ -ಪೂಮಾಣಿ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವುಮೇ.2ರಿಂದ ಮೇ.6ರವರೆಗೆ ನಡೆಯಲಿದ್ದು, ಆ ಪ್ರಯುಕ್ತ ಜಾತ್ರೋತ್ಸವಕ್ಕೆ ಎ.26ರಂದು ಮುಹೂರ್ತದ ಗೊನೆ ಕಡಿಯಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಗೌಡ ನಡುಬೆಟ್ಟು, ಪ್ರಧಾನ ಅರ್ಚಕ ಸುಭಾಷ್ ರೈ ಕುಕ್ಕಂದೂರು, ವೆಂಕಟ್ರಮಣ ಭಟ್ ಬೊಮ್ಮೆಟ್ಟಿ, ನಯನ ಸುತ್ತುಕೋಟೆ, ಗಂಗಾಧರ ಗೌಡ ಮಾರಡ್ಕ,ರಾಧಾಕೃಷ್ಣ ದೋಳ್ತಿಲ,...
ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೊಲ್ಲಮೊಗ್ರು ಶಾಖೆಯ ನೂತನ ಗೋದಾಮು ಕಟ್ಟಡ ಉದ್ಘಾಟನಾ ಸಮಾರಂಭವು ಎ.25 ರಂದು ನಡೆಯಿತು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ನೂತನ ಗೋದಾಮು ಕಟ್ಟಡವನ್ನು ಉದ್ಘಾಟಿಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಸುಕನ್ಯಾ ನಾಮಫಲಕ ಅನಾವರಣ ಮಾಡಿದರು....
ದೇವಚಳ್ಳ ಗ್ರಾಮದ ದೇವ ಗೆಳೆಯರ ಬಳಗದ ವತಿಯಿಂದ "ಗೆಳೆಯರ ಬಳಗ ಟ್ರೋಫಿ 2022" ವಾಲಿಬಾಲ್ ಪಂದ್ಯಾಟ ಎ.23 ರಂದು ನಡೆಯಿತು. ಪಂದ್ಯಾವಳಿಯ ಉದ್ಘಾಟನೆಯನ್ನು ಗುತ್ತಿಗಾರು ಪ್ರಕೃತಿ ಸ್ಟುಡಿಯೋ ಮಾಲಕ ಶಿವರಾಮ್ ದೇವ ನೆರವೇರಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಗೀಶ್ ದೇವ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಸದಸ್ಯ ಭವಾನಿಶಂಕರ್ ಮುಂಡೋಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ...
ಸುಳ್ಯದಲ್ಲಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟ ಮೇ.4 ರಿಂದ ಆರಂಭಗೊಂಡು ಮೇ.8ರವರೆಗೆ ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ. ಸುಮಾರು 13 ವರ್ಷಗಳ ಬಳಿಕ ಈ ಪಂದ್ಯಾವಳಿ ನಡೆಯುತ್ತಿದೆ. ಈಗಾಗಲೇ ಮೈದಾನ ಸಜ್ಜುಗೊಂಡಿದ್ದು ಗ್ಯಾಲರಿ ಕೆಲಸ ನಡೆಯುತ್ತಿದೆ. ಪುರುಷರ 6 ಹಾಗೂ ಮಹಿಳೆಯರ 4 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದೆ. ಸುಸಜ್ಜಿತವಾದ ಬೃಹತ್ ಗ್ಯಾಲರಿ ನಿರ್ಮಾಣಗೊಳ್ಳುತ್ತಿದೆ...
ಬಳ್ಪ ಗ್ರಾಮದ ಕೊರಪ್ಪಣೆ ಸತೀಶ್ ಪೂಜಾರಿಯವರ ಮದುವೆಯ ಪ್ರಯುಕ್ತ ನಡೆದ ಮದರಂಗಿ ಶಾಸ್ತ್ರ ಕಾರ್ಯಕ್ರಮದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಮದರಂಗಿ ಶಾಸ್ತ್ರ ಮುಗಿದ ನಂತರ ಸಂಜೆ ಸ್ಥಳೀಯ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನೆರವೇರಿತು.
ಮರಕತ ಶ್ರೀ ದುರ್ಗಾಪರಮೇಶ್ವರಿ ಪ್ರತಿಷ್ಠಾ ವಾರ್ಷಿಕೋತ್ಸವ ಸಂಪನ್ನ ಪ್ರತಿಯೊಬ್ಬರ ಹೃದಯದಲ್ಲಿ ಧರ್ಮದ ಪ್ರತಿಷ್ಠಾಪನೆ ಆಗಬೇಕಾಗಿದೆ. ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಧಾರ್ಮಿಕ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಸುಳ್ಯದ ರೋಟರಿ ಆಂಗ್ಲಮಾಧ್ಯಮ ಶಾಲಾ ಶಿಕ್ಷಕಿ ನಳಿನಾಕ್ಷಿ ಆಚಾರ್ಯ ಅವರು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಿಯ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಏ. 23 ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ...
ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿರುವ "ನಿನಾದ" ಸಾಂಸ್ಕೃತಿಕ ಕೇಂದ್ರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ವಿರಚಿತ "ಕೋವಿಡ್ ಕಥೆಗಳು" ಎಂಬ ಪುಸ್ತಕ ಬಿಡುಗಡೆಗೊಳಿಸಲಾಯಿತು. ಮಾಜಿ ವಿಧಾನಪರಿಷತ್ ಸದಸ್ಯರಾದ ಅಣ್ಣಾ ವಿನಯಚಂದ್ರರವರು ಸಾಂಕೇತಿಕವಾಗಿ ಪುಸ್ತಕ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಇಂದಾಜೆ, ಸಂಘದ ಪ್ರಧಾನಕಾರ್ಯದರ್ಶಿ...
ದೇವಚಳ್ಳ ಗ್ರಾಮದ ಎಲಿಮಲೆಯಲ್ಲಿರುವ ಕೋಲ್ಚಾರ್ ದಿ. ಚಿನ್ನಪ್ಪ ಗೌಡರ ಪುತ್ರ ಮಹೇಶ್ ರವರ ವಿವಾಹವು ಕಾಸರಗೋಡು ತಾ. ದೇಲಂಪಾಡಿ ಗ್ರಾಮದ ವಾಲ್ತಾಜೆ ಮನೆ ಪದ್ಮಯ್ಯ ಗೌಡರ ಪುತ್ರಿ ಶ್ರುತಿಯವರೊಂದಿಗೆ ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣು ಸಭಾಭವನದಲ್ಲಿ ಎ.24ರಂದು ನಡೆಯಿತು.
ಕಳಂಜ ಗ್ರಾಮದ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ "ಸಾಧನೆಯ ಸಂಭ್ರಮ", ಸಾಧಕರೊಂದಿಗೆ ಸಂವಾದ, ಸಾಧಕರಿಗೆ ಸನ್ಮಾನ ಹಾಗೂ "ಮುಖ್ಯಮಂತ್ರಿ" ನಾಟಕ ಪ್ರದರ್ಶನ ಏ.24 ಆದಿತ್ಯವಾರದಂದು ಜರುಗಿತು. ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಜನಪ್ರಿಯ ಚಲನಚಿತ್ರ, ಧಾರಾವಾಹಿ ಮತ್ತು ರಂಗಭೂಮಿ ನಟರಾದ ಶ್ರೀ ಮುಖ್ಯಮಂತ್ರಿ ಚಂದ್ರು ಹಾಗೂ ಡಾ.ಬಿ.ವಿ.ರಾಜಾರಾಂ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸಾಧಕರ ಸನ್ಮಾನದ ಅಂಗವಾಗಿ ಏಕಲವ್ಯ ಪ್ರಶಸ್ತಿ ಪುರಸ್ಕೃತ...
Loading posts...
All posts loaded
No more posts
