ನಡುಗಲ್ಲು :- ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವ

ನಾಲ್ಕೂರು ಗ್ರಾಮದ ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ.16 ರಂದು ಶಾಲಾ ಪ್ರಾರಂಭೋತ್ಸವ(ಕಲಿಕಾ ಚೇತರಿಕಾ ವರ್ಷ 2022-23) ನಡೆಯಿತು.ಪ್ರಾರಂಭೋತ್ಸವದ ಅಂಗವಾಗಿ ಮೆರವಣಿಗೆ ನಡೆಯಿತು. ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರಾದ ವಿಜಯಕುಮಾರ್ ಚಾರ್ಮತ ಬ್ಯಾಂಡ್ ಬಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯ ನಂತರ ಶಾಲೆಯಲ್ಲಿ ಸಮಾರಂಭ ನಡೆಯಿತು. ವಿಜಯಕುಮಾರ್ ಚಾರ್ಮತ ಅವರು ದೀಪ ಬೆಳಗಿಸಿ ಸಮಾರಂಭವನ್ನು...

ಗುತ್ತಿಗಾರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಆರಂಭೋತ್ಸವ ಕಾರ್ಯಕ್ರಮ

ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು, ಹೈಸ್ಕೂಲ್ ವಿಭಾಗ ಇಲ್ಲಿ ಇಂದು 2022-23ನೇ ಶೈಕ್ಷಣಿಕ ಸಾಲಿನ ಶಾಲಾ ಆರಂಭೋತ್ಸವ ಕಾರ್ಯಕ್ರಮ ನಡೆಯಿತು. ಮೊದಲಿಗೆ ಮಕ್ಕಳ ಪಥಸಂಚಲನ ನಡೆಯಿತು. ಈ ಕಾರ್ಯಕ್ರಮವನ್ನು ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಎರ್ಧಡ್ಕ ರವರು ಬ್ಯಾಂಡ್ ಬಾರಿಸುವ ಮೂಲಕ ಉದ್ಘಾಟಿಸಿದರು. ನಂತರ ಸಭಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಚೆನ್ನಮ್ಮ...
Ad Widget

ಸುಬ್ರಹ್ಮಣ್ಯ ಹಿ.ಪ್ರಾ.ಶಾಲೆಯಲ್ಲಿ ಪ್ರಾರಂಭೋತ್ಸವ

ಸುಬ್ರಹ್ಮಣ್ಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾರಂಭದ ದಿನವಾದ ಇಂದು ವಿದ್ಯಾರ್ಥಿಗಳಿಗೆ ನೂತನ ಶೈಕ್ಷಣಿಕ ವರ್ಷಕ್ಕೆ ವಿಜ್ರಂಭಣೆಯಿಂದ ಸ್ವಾಗತಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸುಶೀಲಾರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಶಾಲಾ ಎಸ್ಡಿಎಂಸಿ ಸಿಬ್ಬಂದಿಗಳು, ಹಾಗೆಯೇ ಪೋಷಕರು, ಶಿಕ್ಷಕರು ಭಾಗಿಗಳಾಗಿದ್ದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಭಾರತಿ ದಿನೇಶ್, ಹೆಚ್ ಎಲ್ ವೆಂಕಟೇಶ್, ದಿವ್ಯ, ನಾರಾಯಣ ಅಗ್ರಹಾರ...

ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಪ್ರಾರಂಭೋತ್ಸವ

ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ ಇಲ್ಲಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ಪ್ರಾರಂಭ ದಿನವಾದ ಇಂದು ಅದ್ದೂರಿಯಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರಾದ ಭಾರತಿ ದಿನೇಶ್ ಹೆಚ್ ಎಲ್, ವೆಂಕಟೇಶ್, ಶಿಕ್ಷಕ ರಕ್ಷಕ ಸಂಘದ ದಿನೇಶ್ ಹಾಗೂ ಪೋಷಕರು, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಯಶವಂತ ರೈ, ಕಾಲೇಜು ಪ್ರಾಂಶುಪಾಲರಾದ ಸೋಮಶೇಖರ್ ನಾಯಕ...

ಶಾಂತಿನಗರ : ಶಾಲಾ ಪ್ರಾರಂಭೋತ್ಸವ

ಶಾಂತಿನಗರ ಸ.ಹಿ.ಪ್ರಾ.ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಶಾಲೆಯ ಸುತ್ತಲೂ ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ಹೊಸದಾಗಿ ಸೇರ್ಪಡೆಯಾದ ಮಕ್ಕಳಿಗೆ ಪುಷ್ಪಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು‌. ಒಂದರಿಂದ ಎಂಟನೇ ತರಗತಿವರೆಗಿನ ಎಲ್ಲಾ ಮಕ್ಕಳಿಗೂ ಉಚಿತವಾಗಿ ನೋಟ್ ಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ನಝೀರ್ ಶಾಂತಿನಗರ ವಹಿಸಿದ್ದರು. ಮುಖ್ಯಶಿಕ್ಷಕಿ ಶ್ರೀಮತಿ ತುಳಸಿ ಸ್ವಾಗತಿಸಿದರು. ಪಠ್ಯದ ಬಗ್ಗೆ ಶಿಕ್ಷಕಿ...

ಬೇಂಗಮಲೆ : ಕ್ಷೀರ ಭಾಗ್ಯ ಯೋಜನೆಯ ಪ್ಯಾಕೆಟ್ ಎಸೆದಿರುವುದು ಪತ್ತೆ ; ಉಚಿತವಾಗಿ ನೀಡುವುದು ತಪ್ಪೇ? ಕಳಪೆಯಾಗಿದೆಯೇ? ಜನರ ಪ್ರಶ್ನೆ

ಬೇಂಗಮಲೆಯ ಪರಿಸರವನ್ನು ಸ್ವಚ್ಛವಾಗಿರಿಸಲು ಐವರ್ನಾಡು ಗ್ರಾಮ ಪಂಚಾಯತ್ ಸತತ ಪ್ರಯತ್ನ ಮಾಡುತ್ತಿದ್ದರೂ ಕೆಲವರ ಮಾತ್ರ ಅನಾಗರಿಕತೆಯನ್ನು ಬಿಡುತ್ತಿಲ್ಲ. ಸರಕಾರದ ಕ್ಷೀರ ಭಾಗ್ಯ ಯೋಜನೆಯಡಿ ಉಚಿತವಾಗಿ ವಿತರಣೆಯಾಗಿದ್ದ ಹಾಲಿನ ಪುಡಿಯ ಪ್ಯಾಕೇಟನ್ನು ಬೇಂಗಮಲೆಯಲ್ಲಿ ಎಸೆದಿರಿವುದನ್ನು ಪಿಡಿಓ ಶ್ಯಾಮ್ ಪ್ರಸಾದ್ ಪರಿಶೀಲನೆಗೆ ತೆರಳಿದಾಗ ಕಂಡುಬಂದಿದೆ.ಸರಕಾರ ಉಚಿವಾಗಿ ನೀಡುವುದು ತಪ್ಪೇ, ಅಥವ ಕಳಪೆ ಆಹಾರ ನೀಡುತ್ತಿದೆಯೇ ಎಂಬ ಸಂಶಯ ಕೂಡ...

ನಾಲ್ಗುತ್ತು-ಕಳಂಜ ಕಾಲುದಾರಿ ದುರಸ್ತಿ

ಕಳಂಜ ಗ್ರಾಮಪಂಚಾಯಿತಿಗೆ ಒಳಪಟ್ಟ ನಾಲ್ಗುತ್ತು -ಕಳಂಜ ಕಾಲುದಾರಿಯು ಸಾರ್ವಜನಿಕ ಸಂಚಾರಕ್ಕೆ ಕೆಲವು ವರ್ಷಗಳಿಂದ ತೊಂದರೆಯಾಗುತ್ತಿದ್ದು ಚರಂಡಿ ನೀರು ಕಾಲು ದಾರಿಯ ಮೂಲಕವೇ ಹರಿಯುತ್ತಿದೆ. ತೋಟದ ಮಧ್ಯೆ ಇರುವ ಕಾಲುದಾರಿಯು ಜರಿದು ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ನಾಳೆಯಿಂದ ಶಾಲಾ ಆರಂಭೋತ್ಸವ ಆಗಿರುವುದರಿಂದ ಇದನ್ನು ಮನಗಂಡ ಊರವರಾದ ಕುಶಾಲಪ್ಪ ನಾಲ್ಗುತ್ತು ,ಮೋಹನ ತಂಟೆಪ್ಪಾಡಿ ,ಲೋಕೇಶ್ ತಂಟೆಪ್ಪಾಡಿ ,ಉಮೇಶ್...

ಮುಖ್ಯ ಶಿಕ್ಷಕರಾಗಿ ಪದೋನ್ನತಿಗೊಂಡ ಚಂದ್ರಶೇಖರ ಪಾರೆಪ್ಪಾಡಿಯವರಿಂದ ಮಡಪ್ಪಾಡಿ ಶಾಲೆಗೆ ದತ್ತಿನಿಧಿ ಕೊಡುಗೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಡಪ್ಪಾಡಿಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಚಂದ್ರಶೇಖರ ಪಾರೆಪ್ಪಾಡಿ ಇವರು ಮುಖ್ಯ ಶಿಕ್ಷಕರಾಗಿ ಪದೋನ್ನತಿಗೊಂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿಗೆ ವರ್ಗಾವಣೆಗೊಂಡಿರುತ್ತಾರೆ. ಈ ಸಂದರ್ಭದಲ್ಲಿ ಮಡಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆಗೆ ದತ್ತಿನಿಧಿ ಕೊಡುಗೆಯಾಗಿ ₹6,666/- ಯನ್ನು ನೀಡಿದರು. ದತ್ತಿನಿಧಿಯನ್ನು ಪ್ರಸ್ತುತ ಪ್ರಭಾರ ಮುಖ್ಯ ಶಿಕ್ಷಕರಾಗಿರುವ...

ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಕಾರ್ಮಿಕರ ಸಂಘ (citu) ಚೆಂಬು ಘಟಕ ಗ್ರಾಮ ಪಂಚಾಯತ್ ಚೆಂಬು ಜಂಟಿ ಸಹಭಾಗಿತ್ವದಲ್ಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಮೇ. 15 ರಂದು ಬಾಲೆಂಬಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಸಿಐಟಿಯು ತಾಲೂಕು ಅಧ್ಯಕ್ಷರಾದ ಜಾನಿ.ಕೆ.ಪಿ ಮತ್ತು ಕಟ್ಟಡ...

ನಿವೃತ್ತ ಸಿಇಓ ಸುಬ್ರಹ್ಮಣ್ಯ ಜೋಷಿ ಯವರಿಗೆ ಬೀಳ್ಕೊಡುಗೆ

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಸುಬ್ರಹ್ಮಣ್ಯ ಜೋಷಿ ಯವರಿಗೆ ಸುಳ್ಯ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಭೆಯಲ್ಲಿ ಬೀಳ್ಕೊಡುಗೆ ಸಮಾರಂಭವು ಮೇ 7ರಂದು ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು. ಸುಳ್ಯ ಸಿ .ಎ ಬ್ಯಾಂಕ್ ನ ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯ ಮತ್ತು ಸುಳ್ಯ...
Loading posts...

All posts loaded

No more posts

error: Content is protected !!