ಬೆಳ್ಳಾರೆಯ ಗ್ಯಾಲಕ್ಸಿ ಮೊಬೈಲ್ಸ್ ಶೋರೂಂನಲ್ಲಿ ಆಕಸ್ಮಿಕವಾಗಿ ಸ್ಫೋಟಗೊಂಡ ಮೊಬೈಲ್

ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ನಜೀರ್ ಕಳಂಜ ಮಾಲಕತ್ವದ ಗ್ಯಾಲಕ್ಸಿ ಮೊಬೈಲ್ಸ್ ಶೋರೂಂನಲ್ಲಿ ಇಂದು ರಿಪೇರಿಗೆಂದು ಬಂದಿದ್ದ 'ರೆಡ್ಮಿ ಆಂಡ್ರಾಯ್ಡ್' ಮೊಬೈಲ್ ಫೋನ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ಸ್ಫೋಟಗೊಂಡ ಮೊಬೈಲ್ ಹೊತ್ತಿಯುರಿದಿದ್ದು, ಘಟನೆಯ ದೃಶ್ಯ ಶೋರೂಂನ ಸಿಸಿಟಿವಿಯಲ್ಲಿ ದಾಖಲಾಗಿದೆ. ಇಂದು ಬೆಳಗ್ಗೆ ಗ್ಯಾಲಕ್ಸಿ ಮೊಬೈಲ್ಸ್ ಶೋರೂಂಗೆ ಗ್ರಾಹಕಿಯೋರ್ವರು ಬಂದಿದ್ದು, ಬ್ಯಾಟರಿ ಸಮಸ್ಯೆ ಇರುವುದಾಗಿ ತಿಳಿಸಿ ರಿಪೇರಿಗೆಂದು ನೀಡಿದ್ದರು....

ಯುವ ರತ್ನ ಅಪ್ಪು ಪ್ರಶಸ್ತಿ ಆಯ್ಕೆಯಾದ ಭವಿತ್ ಬಾಳುಗೋಡು

ಬೆಂಗಳೂರಿನ ಎಸ್.ಎಸ್.ಕಲಾ ಸಂಗಮ ಕೊಡಮಾಡುವ ಯುವ ರತ್ನ ಅಪ್ಪು ಪ್ರಶಸ್ತಿಗೆ ಕಬಡ್ಡಿ ಕ್ರೀಡಾಪಟು ಭವಿತ್ ಜಿ.ಬಿ. ಆಯ್ಕೆಯಾಗಿದ್ದಾರೆ.ಇವರು ಕಬಡ್ಡಿಯಲ್ಲಿ ಮಾಡಿದ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ಎಲಿಮಲೆ ಜ್ಞಾನದೀಪ‌ ಶಾಲೆಯ ಮುಖ್ಯೋಪಾಧ್ಯಾಯ ಗದಾಧರ ಬಾಳುಗೋಡು ಮತ್ತು ದೈ.ಶಿ.ಶಿಕ್ಷಕಿ ದಿವ್ಯಾ ಬಾಳುಗೋಡುರವರ ಪುತ್ರ.ಪ್ರಶಸ್ತಿಯನ್ನು ಜೂ.25ರಂದು ಬೆಂಗಳೂರಿನ ಎ.ವಿ.ವರದಚಾರ್ ಮೆಮೊರಿಯಲ್ ಆಟ್೯ ನಲ್ಲಿ ನಡೆಯುವ ಯುವ ರತ್ನ ಅಪ್ಪು...
Ad Widget

ದೇಶದ ಭದ್ರತೆಗೆ ಅಗ್ನಿ ಪಥ ಯೋಜನೆ – ಯುವಕರೆ ಅಗ್ನಿ ವೀರರಾಗಿ- ದೇಶದ ಸಮರ್ಥ ನಾಯಕರಾಗಿ

ನಮ್ಮ ದೇಶದ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಹಾಗೂ ದೇಶದ ಯುವ ಸಮುದಾಯವನ್ನು ಸಮರ್ಥ ನಾಗರಿಕರನ್ನಾಗಿ ಮಾಡಲು ಕೆಲವು ದಿನಗಳ ಹಿಂದೆ ರಕ್ಷಣಾ ಮಂತ್ರಿಯಾದ ಶ್ರೀ ರಾಜನಾಥ ಸಿಂಗ್ ಮತ್ತು ಸೇನೆಯ ಮೂರು ಅಂಗಗಳ ಮುಖ್ಯಸ್ಥರು ಜೊತೆಯಾಗಿ ಸೈನ್ಯಕ್ಕೆ ಬೇಕಾಗಿರುವ ಮಹತ್ವದ ಸುಧಾರಣೆಯನ್ನು ಜಾರಿಗೊಳಿಸಿದರು. ಈ ಯೋಜನೆಯನ್ನು ಸುಮಾರು ಎರಡು ವರ್ಷಗಳಿಂದ ಅಧ್ಯಯನ ಮಾಡಿ  ,ಅದರ...

ಮನಮೋಹನ ಸೂರ್ಯಮನೆ ಆತ್ಮಹತ್ಯೆ

ಉಬರಡ್ಕ ಮಿತ್ತೂರು ಗ್ರಾಮದ ಸೂರ್ಯಮನೆ ಮನಮೋಹನ ಎಂಬ ಯುವಕ ಜೂ.18ರಂದು ರಾತ್ರಿ ಬೆಂಗಳೂರಿನಲ್ಲಿ ಆತ್ಯಹತ್ಯೆಗೆ ಶರಣಾಗಿದ್ದಾರೆ.ಉಬರಡ್ಕ ಮಿತ್ತೂರು ಗ್ರಾಮದ ಸೂರ್ಯಮನೆ ರುಕ್ಮಯ್ಯ ಗೌಡ ಎಂಬವರ ಪುತ್ರರಾದ ಮನಮೋಹನ್ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕುಟುಂಬ ಸಮೇತರಾಗಿ ನೆಲೆಸಿದ್ದು, ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ನಿತ್ಯ, ಪುತ್ರ ಮನೀಶ್ ಹಾಗೂ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.ಆತ್ಯಹತ್ಯೆಗೆ ಕಾರಣ...

ಎಸ್.ಡಿ.ಪಿ.ಐ. ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಸಾಮಾಜಿಕ ಕಾರ್ಯಕ್ರಮ

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಎಸ್‌ಡಿಪಿಐ ಸಂಪಾಜೆ ಗ್ರಾಮ ಸಮಿತಿಯ ವತಿಯಿಂದ ಒಂದು ವಾರಗಳ ನಿರಂತರ "ಸಾಮಾಜಿಕ ಕಾರ್ಯಕ್ರಮ"ಕ್ಕೆ ಜೂನ್ 18 ರಂದು ಗ್ರಾಮ ಸಮಿತಿ ಕಾರ್ಯದರ್ಶಿ ಶರೀಫ್ ಸೆಟ್ಟಿಯಡ್ಕ ಚಾಲನೆಯನ್ನು ನೀಡಿದರು. ಇದರ ಅಂಗವಾಗಿ ಸಂಪಾಜೆ ಗ್ರಾಮ ವ್ಯಾಪ್ತಿಯ ಸುಮಾರು 11 ಬಸ್ಸು ತಂಗುದಾಣಗಳನ್ನು ಸ್ವಚ್ಛಗೊಳಿಸಲಾಯಿತು....

ಜೂ.25: ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ಮಾಡಿದವರಿಗೆ ಗೌರವಾರ್ಪಣೆ ಹಾಗು ‘ಸಂಕೋಲೆ ಸಂಗ್ರಾಮ ಸ್ವಾತಂತ್ರ್ಯ’ ಪುಸ್ತಕ ಬಿಡುಗಡೆ

ಮಂಥನ ವೇದಿಕೆ ಸುಳ್ಯ, ಸೇವಾಭಾರತಿ ಹೆಲ್ಪ್‌ಲೈನ್ ಟ್ರಸ್ಟ್‌ ವತಿಯಿಂದ ತುರ್ತು ಪರಿಸ್ಥಿತಿಯ ಕರಾಳ ನೆನಪುಗಳು, ಹೋರಾಟಗಾರರಿಗೆ ಗೌರವಾರ್ಪಣೆ ಹಾಗೂ “ಸಂಕೋಲೆ -ಸಂಗ್ರಾಮ-ಸ್ವಾತಂತ್ರ್ಯ” ಪುಸ್ತಕ ಬಿಡುಗಡೆ ಕಾರ್ಯಕ್ರಮ ಜೂ. 25ರಂದು ಸುಳ್ಯದ ಶ್ರೀ ಕುರುಂಜಿ ಜಾನಕಿ ವೆಂಕಟರಮಣ ಸಭಾಭವನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕ ಪ್ರದ್ಯುಮ್ನ ಉಬರಡ್ಕ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತುರ್ತು ಪರಿಸ್ಥಿತಿಯ ಸಂದರ್ಭ...

ಸುಬ್ರಹ್ಮಣ್ಯ : ಎಸ್ ಎಸ್ ಪಿ ಯು ಕಾಲೇಜಿಗೆ 91 ಶೇ. ಫಲಿತಾಂಶ – 591 ಅಂಕ ಗಳಿಸಿ ರಾಜ್ಯಕ್ಕೆ 6ನೇ ಸ್ಥಾನ ಪಡೆದ ಸ್ವಾತಿ ಜಿ ಆರ್

(ವರದಿ : ಅನನ್ಯ ಸುಬ್ರಹ್ಮಣ್ಯ) ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತಕ್ಕೊಳಪಟ್ಟ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ೨೦೨೧-೨೨ನೇ ಸಾಲಿನ ಪಿ.ಯು.ಸಿ. ಪರೀಕ್ಷೆಗೆ ಪರೀಕ್ಷೆಗೆ ಹಾಜರಾದ ಒಟ್ಟು ೩೨೯ ವಿದ್ಯಾರ್ಥಿಗಳಲ್ಲಿ ೩೦೧ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಇವರಲ್ಲಿ ೭೧ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ೧೮೬ ಮಕ್ಕಳು ಪ್ರಥಮ ಶ್ರೇಣಿಯಲ್ಲಿ,೩೭ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ ೧೩ ವಿದ್ಯಾರ್ಥಿಗಳು...

ಜೂ.23 ; ಎನ್.ಎಂ.ಸಿ.ಯಲ್ಲಿ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಹಗ್ಗಜಗ್ಗಾಟ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಹಗ್ಗ ಜಗ್ಗಾಟ ಸ್ಪರ್ಧೆಯು ಇದೇ ಬರುವ 23 ಜೂನ್ 2022ರಂದು ನಡೆಯಲಿದೆ. ಈ ಪಂದ್ಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಸುಮಾರು 32 ಪುರುಷರ ಮತ್ತು 30 ಮಹಿಳಾ ತಂಡಗಳು ಭಾಗವಹಿಸಲಿವೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಅಜ್ಜಾವರ : ಪ್ರತಾಪ ಯುವಕ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ

ಪ್ರತಾಪ ಯುವಕ ಮಂಡಲ ಅಜ್ಜಾವರ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂ.12 ರಂದು ಸರಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ ನಡೆಯಿತು ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಶಿವಪ್ರಕಾಶ್ ಅಡ್ಪಂಗಾಯವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಯುವಜನ ಸಂಯುಕ್ತ ಮಂಡಳಿ ಯ ಪೂರ್ವ ಅಧ್ಯಕ್ಷರಾದ ದಿನೇಶ್ ಮಾಡಪ್ಪಾಡಿ ಯವರು ಉದ್ಘಾಟಿಸಿದರು.ನೂತನ ಪದಾಧಿಕಾರಿಗಳಿಗೆ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ದಯಾನಂದ ರವರು...

ಜೂ.22 : ಜಯನಗರದಲ್ಲಿ ನೂತನವಾಗಿ ಅಭಿವೃದ್ಧಿಗೊಂಡ ರುದ್ರಭೂಮಿ ಹಸ್ತಾಂತರ

ಸುಳ್ಯ ರೋಟರಿ ಕ್ಲಬ್ ವತಿಯಿಂದ ಜಯನಗರದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ರುದ್ರಭೂಮಿಯ ಬಗ್ಗೆ ಕ್ಲಬ್ ಅಧ್ಯಕ್ಷ ಪ್ರಭಾಕರ ನಾಯರ್ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ರೊಟರಿ ಕ್ಲಬ್ ಸುಳ್ಯ 2021-22ರ ಅವಧಿಯ ಜಿಲ್ಲಾ ಯೋಜನೆಯಂತೆ ಸುಳ್ಯ ನಗರ ಪಂಚಾಯತ್ ಅಧೀನದಲ್ಲಿರುವ ಜಯನಗರದಲ್ಲಿ ನೂತನವಾಗಿ ಅಭಿವೃದ್ಧಿಗೊಂಡಿರುವ ಸಾರ್ವಜನಿಕ ರುದ್ರಭೂಮಿಯನ್ನು ಜೂ.22 ರಂದು ಶಾಸಕರು ಮತ್ತು ಸಚಿವರಾದ ಎಸ್....
Loading posts...

All posts loaded

No more posts

error: Content is protected !!