- Saturday
- May 9th, 2026
ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ. 21ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ಶ್ರೀ ರಾಧಾಕೃಷ್ಣ ಬೊಳ್ಳೂರು ಅವರು ವಹಿಸಿ, ಜೀವನದಲ್ಲಿ ಆರೋಗ್ಯಯುತವಾದ ಸದೃಢ ಶರೀರವನ್ನು ಇಟ್ಟುಕೊಳ್ಳಬೇಕಾದರೆ ಕನಿಷ್ಠ ಯೋಗಾಭ್ಯಾಸವನ್ನಾದರೂ ಅಳವಡಿಸಿಕೊಳ್ಳಬೇಕು ಹಾಗೂ ಅದನ್ನು ವಿದ್ಯಾರ್ಥಿ ಜೀವನದಲ್ಲೇ ರೂಢಿಸಿಕೊಳ್ಳಬೇಕು ಎಂದು ನುಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಯೋಗೇನ ಚಿತ್ತೈಸ್ಯ ಯೋಗ ಕೇಂದ್ರದ ಯೋಗಶಿಕ್ಷಕಿ...
ಕಾಸರಗೋಡಿನಿಂದ ಸುಳ್ಯಕ್ಕೆ ಬರುತ್ತಿದ್ದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಚಲಿಸಿದ ಘಟನೆ ಜೂ. 21 ರಂದು ನಡೆದಿದೆ. ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿ ವತಿಯಿಂದ ಪಕ್ಷದ 13 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಶ್ರಮದಾನ ಕಾರ್ಯಕ್ರಮವು ಬೆಳ್ಳಾರೆಯ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಗ್ರಾಮ ಸಮಿತಿ ಅಧ್ಯಕ್ಷರಾದ ಶಹೀದ್ ಬೆಳ್ಳಾರೆ, ಎಸ್‌ಡಿಪಿಐ ಬೆಳ್ಳಾರೆ ಬ್ಲಾಕ್ ಕಾರ್ಯದರ್ಶಿ ಮೊಯಿದಿನ್ ಯು ಎಚ್ ಹಾಗು ಎಸ್‌ಡಿಪಿಐ ಗ್ರಾಮ ಸಮಿತಿ, ಬೂತ್ ಸಮಿತಿ ಪದಾಧಿಕಾರಿಗಳು,...
ಸುಳ್ಯ ತಾಲೂಕಿನ ಎರಡನೇ ಅತೀ ದೊಡ್ಡ ಪೇಟೆ ಎನಿಸಿಕೊಂಡಿರುವ ಬೆಳ್ಳಾರೆ ಪೇಟೆಯ ಬೆಳ್ಳಾರೆ-ಸುಳ್ಯ ಮಾರ್ಗದಲ್ಲಿ ಬಸ್ಸು ತಂಗುದಾಣದ ಸಮೀಪವಿರುವ ಸಾರ್ವಜನಿಕ ಶೌಚಾಲಯ ಅವ್ಯವಸ್ಥೆಗಳಿಂದ ಉಪಯೋಗಶೂನ್ಯ ರೀತಿಯಲ್ಲಿದೆ. ಹೆಂಗಸರಿಗೆ ಹಾಗೂ ಗಂಡಸರಿಗೆ ಪ್ರತ್ಯೇಕ ಶೌಚಾಲಯವಿದ್ದರೂ ನೀರಿನ ಪೂರೈಕೆಯಿಲ್ಲದೆ ಶೌಚಾಲಯ ಸಾರ್ವಜನಿಕರಿಗೆ ಉಪಯೋಗವಾಗದೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಶೌಚಾಲಯದ ಎದುರುಗಡೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದ್ದು ವಿದ್ಯಾರ್ಥಿಗಳು ಶಾಲೆ...
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿಯ ಪಳ್ಳಿಮಜಲ್ ಬೂತ್ ವತಿಯಿಂದ ಪಕ್ಷದ 13ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜೂ.21ರಂದು ಧ್ವಜಾರೋಹಣ ಕಾರ್ಯಕ್ರಮವು ನಡೆಯಿತು. ಪಳ್ಳಿಮಜಲು ಬೂತ್ ಅಧ್ಯಕ್ಷರಾದ ಸದ್ದಾಂ ಧ್ವಜಾರೋಹಣ ನೆರವೇರಿಸಿದರು. ಎಸ್‌ಡಿಪಿಐ ಬೆಳ್ಳಾರೆ ಗ್ರಾಮ ಸಮಿತಿ ಉಪಾಧ್ಯಕ್ಷರಾದ ಶಫೀಕ್ ಬೆಳ್ಳಾರೆ ಸಂದೇಶ ಬಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಪಳ್ಳಿಮಜಲು ಮಸೀದಿ ಕಾರ್ಯದರ್ಶಿ...
ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಅಮರಪಡ್ನೂರು ಗ್ರಾಮದ ಕಜೆಮೂಲೆ ಹಾಸನಡ್ಕ ಸಾತ್ವಿಕ್ ಎಚ್ ಎಸ್ ರವರನ್ನು ಗ್ರಾಮ ಪಂಚಾಯತ್ ವತಿಯಿಂದ ಜೂ.19ರಂದು ಗೌರವಿಸಲಾಯಿತು. ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಚೂಂತಾರು, ಮೀನಾಕ್ಷಿ ಚೂಂತಾರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ ಆಕಾಶ್ ರವರು ಗೌರವಿಸಿದರು. ಈ...
ಥಾಯ್ಲೆಂಡ್ ನಲ್ಲಿ ಜರುಗುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧಕಅಮರಪಡ್ನೂರು ಗ್ರಾಮದ ತಂಟೆಪ್ಪಾಡಿ ವಿಶ್ವನಾಥ ರವರ ಪುತ್ರ ಮೋನಿಷ್ ತಂಟೆಪ್ಪಾಡಿಯವರಿಗೆ ಅಮರಮೂಡ್ನೂರು ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನ ಮತ್ತು ಗೌರವಾರ್ಪಣೆಯನ್ನು ಜೂ.19ರಂದು ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಚೂಂತಾರು, ಮೀನಾಕ್ಷಿ ಚೂಂತಾರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ.ಆಕಾಶ್ ರವರು ಹಮ್ಮಿಕೊಂಡರು....
ಶಾಂತಿನಗರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದೀಗ ಮುಖ್ಯ ಶಿಕ್ಷಕಿಯಾಗಿ ಭಡ್ತಿಗೊಂಡು ವರ್ಗಾವಣೆಗೊಂಡ ಶೀಮತಿ ವಸಂತಿ ಹಾಗೂ ಶ್ರೀಮತಿ ಹೇಮಲತಾರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಜೂ.22ರಂದು ನಡೆಯಿತು. ಶ್ರೀಮತಿ ವಸಂತಿಯವರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಾಲ್ಸೂರು ಹಾಗೂ ಶ್ರೀಮತಿ ಹೇಮಲತಾ ಎಸ್ ಇವರು ಸರಕಾರಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಮಣ್ಯ ಇದರ ವತಿಯಿಂದ ವೃಕ್ಷಮಿತ್ರ ಅಭಿಯಾನ ಕಾರ್ಯಕ್ರಮವು ಕೆಎಸ್ಎಸ್ ಕಾಲೇಜು ಸುಬ್ರಹ್ಮಣ್ಯ ಇಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ದಿನೇಶ್ ಪಿ ಟಿ ಹಾಗೂ ಪ್ರಸಾದ್ ಎನ್ ಉಪಸ್ಥಿತರಿದ್ದರು ಹಾಗೂ ಕಾರ್ಯಕರ್ತರು ಗಿಡನೆಟ್ಟು ಅಭಿಯಾನವನ್ನು ಪ್ರಾರಂಭಿಸಿದರು.
Loading posts...
All posts loaded
No more posts
