- Sunday
- June 28th, 2026
ಸುಬ್ರಹ್ಮಣ್ಯ ಗ್ರಾ.ಪಂ ವತಿಯಿಂದ ಸುಬ್ರಹ್ಮಣ್ಯ ಪಂಚಾಯತ್ ವ್ಯಾಪ್ತಿಯ ಯೇನೆಕಲ್ಲುನ ಬಾನಡ್ಕ-ಬೋಳಡ್ಕ ಪಂಚಾಯತ್ ರಸ್ತೆಗೆ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸೈನಿಕ ರಸ್ತೆ ಎಂದು ನಾಮಕರಣ ಮಾಡಲಾಯಿತು.ಕಡಬ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜೆ.ಪಿ.ಎಂ ಚೆರಿಯನ್ ರಸ್ತೆ ನಾಮಕರಣ ಫಲಕವನ್ನು ಅನಾವರಣಗೊಳಿಸಿದರು.ಈ ಮೂಲಕ ಬಾನಡ್ಕ-ಬೋಳಡ್ಕ ರಸ್ತೆಯು ಅಧಿಕೃತವಾಗಿ ಸೈನಿಕ ರಸ್ತೆ ಎಂದು ಉಲ್ಲೇಖಿತವಾಯಿತು. ಗ್ರಾಮೀಣ...
ಕೊಡಗು ಸಂಪಾಜೆ ಗ್ರಾಮದ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದ್ವಜಾರೋಹಣ ಕಾರ್ಯಕ್ರಮವನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಿರ್ಮಲ ಭರತ್ ರವರು ನೆರವೇರಿಸಿದರು. ಈ ಸಮಾರಂಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಗದೀಶ್ ಪರಮಲೆ, ಸದಸ್ಯರಾದ ಶ್ರೀಮತಿ ರಮಾದೇವಿ ಕಳಗಿ, ಶ್ರೀ ಕುಮಾರ್ ಚೆದ್ಕಾರ್, ಆಡಳಿತಾಧಿಕಾರಿ ಶ್ರೀ...
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ಆ.12 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಇತ್ತೀಚೆಗೆ ಬರೆ ಜರಿದು ಮನೆ ಕಳೆದುಕೊಂಡ ತೇಜಕುಮಾರ್ ಕಜ್ಜೋಡಿ ಮನೆಯವರಿಗೆ ಲಯನ್ಸ್ ಕ್ಲಬ್ ವತಿಯಿಂದ ಸಹಾಯಧನ ವಿತರಿಸಲಾಯಿತು. ತಾರಾಮತಿ ಕಜ್ಜೋಡಿ ಅವರು ಸಹಾಯಧನ ಸ್ವೀಕರಿಸಿದರು. ಹಾಗೂ ಆ.02 ರಂದು ಹರಿಹರ ಪಲ್ಲತ್ತಡ್ಕದ ಸೇತುವೆಯಲ್ಲಿ ಸಿಲುಕಿದ...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಶಾಂತಿನಗರದಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಶಶಿಕಲಾರವರು ಮುಖ್ಯ ಶಿಕ್ಷಕಿಯಾಗಿ ಭಡ್ತಿ ಪಡೆದು ಅಲೆಕ್ಕಾಡಿ ಸ.ಹಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಆ. 10ರಂದು ಮುರುಳ್ಯ ಶಾಂತಿನಗರ ಶಾಲೆಯಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಿನೇಶ್ ನಡುಬೈಲು ವಹಿಸಿದ್ದರು. ಸನ್ಮಾನ ಕಾರ್ಯಕ್ರಮವನ್ನು...
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ರವರ ಪೆನ್ಸಿಲ್ ಆರ್ಟ್ ಭಾವಚಿತ್ರವನ್ನು ಸುಳ್ಯ ಕಸಬಾದ ಬೆಟ್ಟಂಪಾಡಿ ನಿವಾಸಿ ಪೂಜಾ ರವರು ಬರೆದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಶೋಭಾ ಚಿದಾನಂದ, ಅಕ್ಷಯ್ ಕೆ.ಸಿ,ಹೇಮನಾಥ ಕೆ.ವಿ,ಜಗದೀಶ್ ಅಡ್ತಲೆ, ರಜತ್ ಅಡ್ಯಾರ್, ನವನೀತ್ ಬೆಟ್ಟಂಪಾಡಿ ಉಪಸ್ಥಿತರಿದ್ದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಮೂಡುಬಿದ್ರೆ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ನಡೆದ ರಾಜ್ಯ ಮಟ್ಟದ ಅಂತರ್ ವಿ.ವಿ.ಗಳ ಕಿರುನಾಟಕ ಸ್ಪರ್ಧೆಯಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿದ 'ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ-1837' ನಾಟಕವು ಪ್ರಥಮ ಪ್ರಶಸ್ತಿಯನ್ನು ಪಡೆದಿರುತ್ತದೆ. ಕರ್ನಾಟಕದ ಪ್ರತಿಷ್ಠಿತ 15 ವಿಶ್ವವಿದ್ಯಾನಿಲಯಗಳು ಪ್ರದರ್ಶಿಸಿದ ಒಟ್ಟು 31...
ಮಡಪ್ಪಾಡಿ ಗ್ರಾಮ ಪಂಚಾಯಿತಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಕುರಿತು ಮತ್ತು ''ಹರ್ ಘರ್ ತಿರಂಗಾ '' ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆಯನ್ನು ಆಗಸ್ಟ್ 8ರಂದು ನಡೆಸಲಾಯಿತು. ನಂತರ ಮನೆಮನೆಗೂ ರಾಷ್ಟ್ರಧ್ವಜವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ,ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು,...
ಆ.07 ರಂದು ನಡುಗಲ್ಲು ಶಾಲೆಯ ಹತ್ತಿರದಿಂದ ಅಂಬೆಕಲ್ಲು, ಹಲ್ಗುಜಿ, ಕಲ್ಲಾಜೆಯವರೆಗೆ ವಿದ್ಯುತ್ ಲೈನ್ ಗೆ ತಾಗುವ ಗೆಲ್ಲು ಕಡಿಯುವ ಮೂಲಕ ಶ್ರಮದಾನ ಮಾಡಲಾಯಿತು. ಊರಿನವರು ಈ ಶ್ರಮದಾನದಲ್ಲಿ ಭಾಗವಹಿಸಿದ್ದರು. ಹಾಗೂ ಮೆಸ್ಕಾಂ ನವರು ಸಹಕರಿಸಿದರು. ವರದಿ :- ಉಲ್ಲಾಸ್ ಕಜ್ಜೋಡಿ
ಅರಂತೋಡು ಪೇಟೆಯಲ್ಲಿ ಹೋಟೆಲ್ ನಡೆಸಿ ಜೀವನ ಸಾಗಿಸುತ್ತಿರುವ ಯೋಗೀಶ್ ಹಾಗೂ ಲಲಿತಾ (ರೇಷ್ಮಾ) ದಂಪತಿಗಳ ಪುತ್ರಿ ಖುಷಿ ಇದುವರೆಗೂ ಎಲ್ಲರಂತೆ ಖುಷಿಯಿಂದ ಓಡಾಡಿಕೊಂಡಿದ್ದ ಹುಡುಗಿ. ಯೋಗೀಶ್ ಅವರ ಮೂವರು ಮಕ್ಕಳಲ್ಲಿ ಖುಷಿ (9ವರ್ಷದ) ಎರಡನೆಯವಳು. ದಿನ ತಲೆ ನೋವು ಎಂದು ಅಳುತ್ತಿದ್ದ ಖುಷಿಯನ್ನು ಪರಿಕ್ಷೀಸಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಮಗು ಬ್ರೈನ್ ಟ್ಯೂಮರ್ ಕಾಯಿಲೆಯಿಂದಬಳಲುತ್ತಿದ್ದು ಬಾಲಕಿಗೆ...
Loading posts...
All posts loaded
No more posts
