ಲ್ಯಾಂಪ್ಸ್ ಸಹಕಾರ ಸಂಘಕ್ಕೆ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ

ಸುಳ್ಯ ತಾಲೂಕು ಲ್ಯಾಂಪ್ಸ್ ಸಹಕಾರ ಸಂಘ 2021-22 ನೇ ಸಾಲಿನ ವ್ಯವಹಾರದಲ್ಲಿ ಸಾಧಿಸಿದ ಪ್ರಗತಿಯನ್ನು ಗುರುತಿಸಿ ವಿಶೇಷ ಪ್ರೋತ್ಸಾಹಕ ಬಹುಮಾನ ಪ್ರಶಸ್ತಿಯನ್ನು ಆ.05 ರಂದು ನಡೆದ ಎಸ್ ಸಿ ಡಿ ಡಿ ಸಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷರಾದ ಸೀತಾನಂದ ಎಸ್. ಮತ್ತು ಕಾರ್ಯದರ್ಶಿ ಚಂದ್ರಶೇಖರ ಡಿ. ಯವರನ್ನು ಪ್ರಶಸ್ತಿ ಸ್ಮರಣಿಕೆ ನೀಡಿ ಸನ್ಮಾಸಿದರು....

ಕೊಲ್ಲಮೊಗ್ರು-ಹರಿಹರ ಪ್ರಾ.ಕೃ.ಪ.ಸ ಸಂಘಕ್ಕೆ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಡಿ.ಸಿ.ಸಿ ಬ್ಯಾಂಕ್ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ ಲಭಿಸಿದ್ದು, ಆ.05 ರಂದು ಮಂಗಳೂರಿನಲ್ಲಿ ನಡೆದ ಡಿ.ಸಿ.ಸಿ ಬ್ಯಾಂಕ್ ಮಹಾಸಭೆಯಲ್ಲಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಸಂಘದ ಅಧ್ಯಕ್ಷರಾದ ಹರ್ಷಕುಮಾರ್ ದೇವಜನ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಪ್ರಶಸ್ತಿ...
Ad Widget

ಮಡಪ್ಪಾಡಿ : ಬಾಳಿಕಳ ಕೇಪಳಕಜೆ ರಸ್ತೆ ಸಂಪರ್ಕ ಕಡಿತ

ಮಡಪ್ಪಾಡಿ ಗ್ರಾಮದ ಬಾಳಿಕಳ ಕೇಪಳಕಜೆ ರಸ್ತೆಯಲ್ಲಿ ಭಾರಿ ಮಳೆಗೆ ಮೋರಿ ಹಾನಿಯಾಗಿ ರಸ್ತೆ ಕುಸಿದಿದೆ. ಇದರಿಂದಾಗಿ ಕೇಪಳಕಜೆ ಭಾಗದ 7 ಮನೆಗಳಿಗೆ ರಸ್ತೆ ಸಂಪರ್ಕ ಇಲ್ಲದಾಗಿದೆ. ಈ ಬಗ್ಗೆ ಸ್ಥಳೀಯಾಡಳಿತ ಶೀಘ್ರ ಗಮನಹರಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಕಲ್ಮಕಾರು :- ಗುಳಿಕ್ಕಾನದ 6 ಮನೆಯ 21 ಜನರು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ

ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಬಾಳುಗೋಡು, ಕಲ್ಮಕಾರು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕಲ್ಮಕಾರು ಗ್ರಾಮದ ಗುಳಿಕ್ಕಾನ ಎಂಬಲ್ಲಿ ಗುಡ್ಡ ಜರಿಯುವ ಭೀತಿಯಲ್ಲಿದ್ದ 6 ಕುಟುಂಬಗಳ 21 ಜನರನ್ನು ಕಲ್ಮಕಾರು ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಲ್ಮಕಾರು ಶಾಲೆಯ ಬಿಳಿಮಲೆ ಲಕ್ಷ್ಮೀ ರಾಮಣ್ಣ ರಂಗಮಂದಿರದ ತಾತ್ಕಾಲಿಕ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ವರದಿ...

ಕಂದ್ರಪ್ಪಾಡಿ: ಬರೆ ಕುಸಿದು ರಸ್ತೆ ಹಾನಿ

ಆ.4 ರ ಸಂಜೆ ಸುರಿದ ಭಾರಿ ಮಳೆಗೆ ಕಂದ್ರಪ್ಪಾಡಿ ದೇವ ಮಡಪ್ಪಾಡಿ ಸಂಪರ್ಕಿಸುವ ರಸ್ತೆಯ ಕಂದ್ರಪ್ಪಾಡಿ ಎಂಬಲ್ಲಿ ಬರೆ ಕುಸಿದು ರಸ್ತೆಯಲ್ಲಿ ಸಂಚರಿಸಲು ಸಂಕಷ್ಟವಾಗಿದೆ

ಮರ್ಕಂಜ: ಹೊಸೋಳಿಕೆ ಕೊಟ್ಟಿಗೆ ಬಿದ್ದು ಹಾನಿ

ಆ.3ರಂದು ಮುಂಜಾನೆ ಸುರಿದ ಮಳೆಗೆ ಮರ್ಕಂಜ ಗ್ರಾಮದ ಹೊಸೋಳಿಕೆ ಮೋಹನ್ ನಾಯ್ಕ್ ಎಂಬವರ ಮನೆಯ ಕೊಟ್ಟಿಗೆ ಬಿದ್ದು ಸಂಪೂರ್ಣ ಹಾನಿಗೊಂಡಿದೆ ಎಂದು ತಿಳಿದುಬಂದಿದೆ.

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ದಯಾನಂದ ಕೊರತ್ತೋಡಿ – ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ ಆಯ್ಕೆ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ ಇಂದು ಸಂಘದ ಅಧ್ಯಕ್ಷ ಪದ್ಮನಾಭ ಮುಂಡೋಕಜೆ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಾಸಭೆಯ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ದಯಾನಂದ ಕೊರತ್ತೋಡಿ, ಕಾರ್ಯದರ್ಶಿ ಯಾಗಿ ದಯಾನಂದ ಕೇರ್ಪಳ, ಖಜಾಂಜಿಯಾಗಿ ದಯಾನಂದ ಕಲ್ನಾರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸತೀಶ್ ಹೊದ್ದೆಟ್ಟಿ, ಜತೆ ಕಾರ್ಯದರ್ಶಿ ಪ್ರಜ್ಞಾ ಎಸ್. ನಾರಾಯಣ್, ನಿರ್ದೇಶಕರಾಗಿ...

ಆ.03 ; ಶಾಲಾ ಕಾಲೇಜುಗಳಿಗೆ ನಾಳೆ ರಜೆ

ವಿಪರೀತ ಮಳೆ ಹಾಗೂ ಪ್ರಾಕೃತಿಕ ವಿಕೋಪದ ಹಿನ್ನಲೆಯಲ್ಲಿ ಸುಳ್ಯ ಹಾಗು ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಶಾಲೆ ಹಾಗು ಕಾಲೇಜುಗಳಿಗೆ ಆ.03 ರಂದು ರಜೆ ಘೋಷಣೆ ಮಾಡಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶ ಮಾಡಿದ್ದಾರೆ.

ಹರಿಹರ: ಹೊಳೆಗೆ ಬಿದ್ದ ಕ್ರೇನ್ ಆಪರೇಟರ್ -ನೀರಿಗೆ ಹಾರಿ ರಕ್ಷಿಸಿದ ಸೋಮಶೇಖರ ಕಟ್ಟೆಮನೆ

ಹರಿಹರಪಲ್ಲತಡ್ಕದ ಸೇತುವೆಗೆ ಪವಾಹದಲ್ಲಿ ಬಂದಿದ್ದ ಮರದ ದಿಮ್ಮಿಗಳು ಸಿಕ್ಕಿಹಾಕಿಕೊಂಡು ಅವಾಂತರವನ್ನೇ ಸೃಷ್ಟಿಸಿತ್ತು. ಈ ಮರಗಳು ತೆರವು ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕ್ರೇನ್ ಆಪರೇಟರ್ ಶರೀಫ್ ಎಂಬವರು ನದಿಗೆ ಬಿದ್ದಿದ್ದು ಅವರನ್ನು ರಕ್ಷಿಸಿದ ಘಟನೆ ಇಂದು ನಡೆದಿದೆ. ಅಪರೇಟರ್ ನೀರಿಗೆ ಬಿದ್ದ ತಕ್ಷಣ ಸೋಮಶೇಖರ್ ಕಟ್ಟೆಮನೆ ಎಂಬವರು ನೀರಿಗೆ ಅವರನ್ನು ರಕ್ಷಿಸಿದರು. ಸ್ಥಳೀಯರ ಸಹಕಾರದಿಂದ ಅವರನ್ನು...

ಸುಬ್ರಹ್ಮಣ್ಯ : ಮಕ್ಕಳನ್ನು ಕಳೆದುಕೊಂಡ ಕುಟುಂಬಕ್ಕೆ ಸಚಿವ ಎಸ್.ಅಂಗಾರರಿಂದ ಪರಿಹಾರಧನ ಹಸ್ತಾಂತರ

ಸುಬ್ರಹ್ಮಣ್ಯದಲ್ಲಿ ಆ.1 ರಂದು ನಡೆದ ಭೂಕುಸಿತದಿಂದಾಗಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ರೂ.11 ಲಕ್ಷ 5 ಸಾವಿರ ಮೊತ್ತದ ಒಟ್ಟು 3 ಚೆಕ್ ನ್ನು ಸಚಿವ ಎಸ್. ಅಂಗಾರ ಆ. 2 ರಂದು ಕುಸುಮಾಧರಿಗೆ ಕುಸುಮಾಧರರ ತಂದೆ ಬೊಮ್ಮಣ ಗೌಡ ಕರಿಮಜಲುರವರ ನಿವಾಸದಲ್ಲಿ ವಿತರಿಸಿದರು. ಮೃತಪಟ್ಟ ಇಬ್ಬರು ಮಕ್ಕಳಿಗಾಗಿ ಸರಕಾರದಿಂದ ತಲಾ 5 ಲಕ್ಷದಂತೆ ಹಾಗೂ ಮನೆ...
Loading posts...

All posts loaded

No more posts

error: Content is protected !!