ಅಡ್ಕಾರು: ಕೋನಡ್ಕ ಪದವು ಅಚ್ಚುತ ರವರಿಗೆ ಕೆಪಿಸಿಸಿ ಸಂಯೋಜಕ ನಂದಕುಮಾರ್ ಹೆಚ್ ಎಂ ರಿಂದ ಧನ ಸಹಾಯ

ಜಾಲ್ಸೂರು ಗ್ರಾಮದ ಅಡ್ಕಾರು ಕೋನಡ್ಕ ಪದವು ಅಚ್ಚುತ ಅವರು ಕ್ಯಾನ್ಸರ್ ನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಮನೆಗೆ ಕೆಪಿಸಿಸಿ ಸಂಯೋಜಕ ನಂದಕುಮಾರ್ ಹೆಚ್ ಎಂ ರವರು ಸ್ಥಳೀಯ ಕಾಂಗ್ರೆಸ್ ನಾಯಕರ ಆಹ್ವಾನ ದಂತೆ ಬೇಟಿ ಮಾಡಿ ಧನ ಸಹಾಯ ನೀಡಿದರು.ಈ ಸಂದರ್ಭದಲ್ಲಿ ಬೋಜಪ್ಪ ನಾಯ್ಕ ವಿನೋಬನಗರ, ಹರಿಪ್ರಸಾದ್ ಅಡ್ಕಾರು, ಶ್ರೀಮತಿ ತಿರುಮಲೇಶ್ವರಿ ಅಡ್ಕಾರು, ಶ್ರೀಮತಿ...

ಸುಳ್ಯದ ಬಂಗ್ಲೆಗುಡ್ಡೆ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನಕ್ಕೆ ಕೆಪಿಸಿಸಿ ಸಂಯೋಜಕ ನಂದಕುಮಾರ್ ಹೆಚ್ ಎಂ ಭೇಟಿ

ಸುಳ್ಯದ ಬೀರಮಂಗಳದಲ್ಲಿರುವ ಬಂಗ್ಲೆಗುಡ್ಡೆ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನಕ್ಕೆ ಕೆಪಿಸಿಸಿ ಸಂಯೋಜಕ ನಂದಕುಮಾರ್ ಹೆಚ್ ಎಂ ಇಂದು ಭೇಟಿ ನೀಡಿದರು. ದೈವಸ್ಥಾನದ ಸಮಿತಿಯವರ ಆಹ್ವಾನದ ಮೇರೆಗೆ ಇಂದು ಆಗಮಿಸಿದ ನಂದಕುಮಾರ್ ಹೆಚ್ ಎಂ ರವರು ಕೊರಗಜ್ಜ ದೈವದ ಸಂಕ್ರಮಣ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೈವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಧನಸಹಾಯ ನೀಡಿದರು....
Ad Widget

ಕೆನ್ಯಾನ: ಸ.ಹಿ. ಪ್ರಾ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರ್ಯಕ್ರಮವು ಮಂಡೆಕೋಲು ಗ್ರಾಮದ ಕನ್ಯಾನದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.15 ರಂದು ನಡೆಯಿತು. ಶಾಲಾ ಎಸ್.ಡಿ.ಎಂಸಿ. ಅಧ್ಯಕ್ಷ ಜನಾರ್ದನ ಮಿತ್ತಿಲ ಧ್ವಜಾರೋಹಣ ನೆರವೇರಿಸಿದರು. ಆ ನಂತರ ಸ್ಪರ್ದಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಆಶಾಲತಾ ಕನ್ಯಾನ ಹಾಗೂ ಸದಸ್ಯರು, ಮುಖ್ಯ ಶಿಕ್ಷಕಿ ಶ್ರೀ ಮತಿ...

ಸರಕಾರಿ ಪ್ರೌಢಶಾಲೆ ಎಣ್ಮೂರು: ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನಾಚರಣೆ ಮತ್ತು ನೂತನ ಶೌಚಾಲಯ ಉದ್ಘಾಟನೆ

ಸರಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ SDMC ಕಾರ್ಯಾಧ್ಯಕ್ಷ ಶ್ರೀ ಪದ್ಮನಾಭ ಗೌಡ ಪೂದೆ ಧ್ವಜಾರೋಹಣ ನೆರವೇರಿಸಿದರು. ದಕ ಜಿಲ್ಲಾ ನಿರ್ಮಿತಿ ಕೇಂದ್ರದ ಮೂಲಕ ನೀಡಲಾದ ಬಾಲಕರ ನೂತನ ಶೌಚಾಲಯವನ್ನು ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರಿ ಜಾನಕಿ ಮುರುಳ್ಯ ಉದ್ಘಾಟಿಸಿ, ವಿದ್ಯಾರ್ಥಿಗಳು ದೇಶಭಕ್ತಿಯನ್ನು ಮೈಗೂಡಿಸಿಕೊಂಡು ದೇಶ ಸೇವೆ ಮಾಡಲು...

ಮಸೀದಿಗಳಲ್ಲಿ ಕೋಮುವಾದಕ್ಕೆ ಯಾವುದೇ ರೀತಿಯ ಸಹಕಾರ ಇಲ್ಲ – ಟಿ.ಎಂ.ಶಹೀದ್

ಇಂದಿನ ಯುವ ಜನತೆ ಕೋಮುಗಲಭೆಗೆ ತುತ್ತಾಗುತ್ತಿರುವ ವಿಷಯವಾಗಿ ತೆಕ್ಕಿಲ್ ಪ್ರತಿಷ್ಠಾನದ ಟಿ.ಎಂ.ಶಹೀದ್ ಅವರಿಂದ ಆ.16ರಂದು ಪತ್ರಿಕಾಗೋಷ್ಟಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸುಳ್ಯದಲ್ಲಿ ಎರಡು ಹತ್ಯೆ ಮಾಡಿದ್ದು ದೊಡ್ಡ ನಷ್ಟ ಉಂಟಾಗಿದೆ ಈ ನಷ್ಟವನ್ನು ಯಾವ ಸಂಘಟನೆಗಳು ಭರ್ತಿ ಮಾಡಲು ಸಾಧ್ಯವಿಲ್ಲ. ಮುಖ್ಯವಾಗಿ ಯುವಕರು ಜೀವ ತೆಗೆಯುವ ಮಟ್ಟಕ್ಕೆ ಹೋಗುವುದು ಒಳ್ಳೆ ಲಕ್ಷಣ ಅಲ್ಲ....

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಧ್ವಜಾರೋಹಣ

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸ್ವಾತಂತ್ರ ಅಮೃತ ಮಹೋತ್ಸವ ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಕೂಸಪ್ಪಗೌಡ ಮುಗುಪ್ಪು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರು ಮತ್ತು ಸದಸ್ಯರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ನಾಯಕ್ ಮತ್ತು ಸಿಬ್ಬಂದಿಗಳು , ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಶಾಂತ್ ಕಿಲಂಗೋಡಿ, ಸದಸ್ಯರು ಮತ್ತು ಸಿಬ್ಬಂದಿ...

ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಆಚರಣೆ

ಕೆವಿಜಿ ಐಪಿಎಸ್, ಕೆವಿಜಿ ಐಟಿಐ ಮತ್ತು ಕೆವಿಜಿ ಅಮರಜ್ಯೋತಿ ಪಿಯು ಕಾಲೇಜು ಜಂಟಿಯಾಗಿ ಅ.15 ರಂದು ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು . ಕೆವಿಜಿ ಐಟಿಐ ಸಿಬ್ಬಂದಿ ಭವಾನಿ ಶಂಕರ್ ಅಡ್ತಲೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಸೈನಿಕ ಸಂಘ ಸುಳ್ಯ ಇದರ ಉಪಾಧ್ಯಕ್ಷ ಮಾಧವ ಬಿ....

ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಇದರ ಅಂಗವಾಗಿ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಉಮೇಶ್ವರಿಯವರು ಧ್ವಜಾರೋಹಣ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಭಾಷಣ, ಯೋಧರ ಚರಿತ್ರೆ ಓದುವುದು, ದೇಶಭಕ್ತಿ ಗೀತೆ ಹಾಡುವುದು ನಡೆಯಿತು. ಶಾಲಾ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಮೋಹನ್ ಉತ್ರಂಬೆ ಮತ್ತು ಮೋಹನ್...

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

ಅಮರಮುಡ್ನೂರು ಗ್ರಾಮದ ಚೊಕ್ಕಾಡಿ ವಿದ್ಯಾಸಂಸ್ಥೆ ಕುಕ್ಕುಜಡ್ಕದಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯು ಆ.15 ರಂದು ನಡೆಯಿತು. ಬೆಳಗ್ಗೆ ನಿವೃತ್ತ ಮುಖ್ಯ ಶಿಕ್ಷಕ ಶ್ರೀ ವಿ.ಸುಬ್ರಾಯ ರವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಇವರು ಸ್ವಾತಂತ್ರ್ಯ ಪೂರ್ವದ ನೆನಪುಗಳು, ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮ, ಸ್ವಾತಂತ್ರ್ಯ...

ಪಂಬೆತ್ತಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

ಪಂಬೆತ್ತಾಡಿ ಹಾಲು ಉತ್ಪಾದಕರ ಸಂಘದಲ್ಲಿ ಅಧ್ಯಕ್ಷ ಜಯರಾಮ ಭಟ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಜಾಕೆ ದಯಾನಂದ, ಸಂಘದ ನಿರ್ದೇಶಕರಾದ ಕುಲದೀಪ್, ದಿನೇಶ್ ಪಂಜದ ಬೈಲು, ನಾಗಪ್ಪ ಗೌಡ,ಗಣೇಶ್ ಭಟ್,ಕಾರ್ತಿಕ್ ಭೀಮಗುಳಿ,ಊರಿನ ಪ್ರಮುಖರು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!