ಐನೆಕಿದು ಕೊಪ್ಪಳಗದ್ದೆ ಸೇತುವೆ ಕೆಳಗೆ ದನದ ತಲೆ ಹಾಗೂ ತ್ಯಾಜ್ಯ ಪತ್ತೆ ಪ್ರಕರಣ ; ಹರಿಹರೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ

ಐನೆಕಿದು ಗ್ರಾಮದ ಕೊಪ್ಪಳಗದ್ದೆ ಸೇತುವೆಯ ಕೆಳಗೆ ದನದ ತಲೆ ಹಾಗೂ ತ್ಯಾಜ್ಯ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದನದ ಹತ್ಯೆ ಮಾಡಿದವರು ಹಾಗೂ ಸ್ಥಳಿಯವಾಗಿ ಸಹಕರಿಸಿದವರು ಸಿಗಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅ.04 ರಂದು ಶ್ರೀ ಹರಿಹರೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್...

ಪೆರುವಾಜೆ : ಬಿದ್ದುಸಿಕ್ಕಿದ ಕಿವಿಯೋಲೆ ಹಿಂತಿರುಗಿಸಿದ ಜನಿತಾ ಬೈತಡ್ಕ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಮಹಿಳೆಯೋರ್ವರ ಕಿವಿಯ ಬೆಂಡೋಲೆ ಬಿದ್ದು ಹೋಗಿತ್ತು. ಇದು ಉಬರಡ್ಕ ಗ್ರಾಮದ ರಾಧಾಕೃಷ್ಣ ಬೈತಡ್ಕ ಹಾಗೂ ಹವ್ಯಾ ಬೈತಡ್ಕ ರವರ ಮಗಳಾದ ಜನಿತಾಳಿಗೆ ಸಿಕ್ಕಿತ್ತು. ಕೂಡಲೇ ಅದನ್ನು ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಪ್ರಾಮಾಣಿಕತೆ ಮೆರೆದ ಆಕೆಗೆ ವ್ಯವಸ್ಥಾಪನಾ ಸಮಿತಿ ವತಿಯಿಂದ ಭಗವದ್ಗೀತೆ ಪುಸ್ತಕ ನೀಡಿ ಗೌರವಿಸಲಾಯಿತು.
Ad Widget

ಕಲ್ಲಪ್ಪಳ್ಳಿ – ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಕಲ್ಲಪ್ಪಳ್ಳಿ ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ಮಹಾಸಭೆಯು ಕ್ಲಬ್ ನ ಕಚೇರಿಯಲ್ಲಿ ಎನ್. ನಿರಂಜನ ಮಾಸ್ತರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. Nithin MS ಕಾರ್ಯದರ್ಶಿ ಗುಡ್ಡಪ್ಪ ವರದಿ ವಾಚಿಸಿದರು. ಲೆಕ್ಕಪತ್ರ ಅಂಗೀಕಾರವಾದ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹೇಶ್ ಗರುಗುಂಜ, ಕಾರ್ಯದರ್ಶಿಗಳಾಗಿ ವಸಂತ ಯಂ.ಯಂ., ಖಜಾಂಚಿಯಾಗಿ ನಿತಿನ್ ಯಂ.ಎಸ್., ಉಪಾಧ್ಯಕ್ಷರಾಗಿ ಪ್ರದೀಪ್...

ಅ.07; ಪೋಲೀಸ್ ನೇಮಕಾತಿಯ ಲಿಖಿತ ಪರೀಕ್ಷೆಯ ಮಾಹಿತಿ ಕಾರ್ಯಾಗಾರ

ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಿವಿಲ್ ಪೊಲೀಸ್ /ರಿಸರ್ವ್ ಪೊಲೀಸ್ ಮತ್ತು ಪಿ.ಯಸ್.ಐ ನೇಮಕಾತಿಯ ಲಿಖಿತ ಪರೀಕ್ಷೆಯ ಮಾಹಿತಿ ಕಾರ್ಯಾಗಾರ ಅ.7 ರಂದು ಶನಿವಾರ ಬೆಳಿಗ್ಗೆ 9.00 ಕ್ಕೆಪಂಚಾಯತ್ ಬಳಿಯ ಪ. ವರ್ಗದ ಸಭಾ ಭವನದಲ್ಲಿ ನಡೆಯಲಿದೆ. ಬೆಂಗಳೂರು ನಗರ ಠಾಣೆಯ ಪಿ.ಎಸ್.ಐ. ಪ್ರದೀಪ್ ಗೌಡ ಮಾಹಿತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ...

ಲಾಲ್ ಬಹದ್ದೂರ ಶಾಸ್ತ್ರಿ ಕಲಾ ಸಂಘದಿಂದ ರೋಗಿಗಳಿಗೆ ಹಣ್ಣು ವಿತರಣೆ ಕಾರ್ಯಕ್ರಮ

ಸುಳ್ಯದ ಲಾಲ್ ಬಹದ್ದೂರ ಶಾಸ್ತ್ರಿ ಸಾಂಸ್ಕೃತಿಕ ಕಲಾ ಸಂಘದಿಂದ ಸರಕಾರಿ ಆಸ್ಪತ್ರೆಯಲ್ಲಿಯ ರೋಗಿಗಳಿಗೆ ಹಣ್ಣು ವಿತರಣಾ ಕಾರ್ಯಕ್ರಮ ಕಾರ್ಯಕ್ರಮವು ಅಕ್ಟೊಬರ್ 2 ರಂದು ನಡೆಯಿತು . ಅಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮತ್ತು ಮಹಾತ್ಮಾ ಗಾಂಧೀಜಿ ಅವರ ಜಯಂತಿ ಇದ್ದ ಪ್ರಯುಕ್ತ ಸಂಘಟನೆಯು ರೋಗಿಗಳು ಬೇಗ ಗುಣಮುಖರಾಗಿ ಆರೋಗ್ಯ ಏಳಿಗೆ ಕಂಡು ಸುಂದರ ಬಾಳು...

ಎಲಿಮಲೆ : ಕಾರು-ಸ್ಕೂಟಿ ಅಪಘಾತ ; ಅಣ್ಣ- ತಂಗಿ ಇಬ್ಬರು ದುರ್ಮರಣ

ಎಲಿಮಲೆಯ ಸಮೀಪದ ಜಬಳೆ ಬಳಿ ಮಾರುತಿ ಕಾರು ಮತ್ತು ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿ ಅಣ್ಣ ಮತ್ತು ತಂಗಿ ಇಬ್ಬರೂ ಮೃತಪಟ್ಟ ಹೃದಯವಿದ್ರಾಹಕ ಘಟನೆ ಇಂದು ವರದಿಯಾಗಿದೆ. ಇದ್ದ ಇಬ್ಬರೂ ಮಕ್ಕಳನ್ನು ಕಳೆದುಕೊಂಡು ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಎಲಿಮಲೆಗೆ ಆಯುಧಪೂಜೆಗೆ ಹೋಗಿದ್ದ ನಿಶಾಂತ್ ತನ್ನ ತಂಗಿ ಮೋಕ್ಷಳನ್ನು ಕರೆದುಕೊಂಡು ಸ್ಕೂಟಿಯಲ್ಲಿ ಮನೆಗೆ  ಹೋಗುತ್ತಿದ್ದಾಗ ಸುಳ್ಯ ಕಡೆಯಿಂದ...

ಬೆಳ್ಳಾರೆ: ಪ್ರಣಮ್ಯ ಕಾರ್ ಕೇರ್ ಸಂಸ್ಥೆಯಲ್ಲಿ ಆಯುಧಪೂಜೆ

ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯಾಚರಿಸುತ್ತಿರುವ ಪ್ರಣಮ್ಯ ಕಾರ್ ಕೇರ್ ಸಂಸ್ಥೆಯಲ್ಲಿ ಆಯುಧಪೂಜೆ ಕಾರ್ಯಕ್ರಮ ಅ.04ರಂದು ನಡೆಯಿತು. ಪ್ರಶಾಂತ್ ಕಿಲಂಗೋಡಿ ಪೂಜಾ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಣಮ್ಯ ಕಾರ್ ಕೇರ್ ಸಂಸ್ಥೆಯ ಮಾಲಕರಾದ ಶಾಂತಮೂರ್ತಿ ಕಿಲಂಗೋಡಿ ಹಾಗೂ ರಮೇಶ್ ಮಠತ್ತಡ್ಕ, ಸಿಬ್ಬಂದಿಗಳಾದ ಮಧುಸೂದನ್, ಅಲೆಕ್ಸ್ ಡಿ'ಸೋಜ, ಪ್ರವೀಣ್, ರಮೇಶ್ ಹಾಗೂ ಚಂದ್ರಶೇಖರ ತಂಟೆಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಪಾಂಡಿಗದ್ದೆ ದ.ಕ ಜಿ. ಪ.ಸ.ಕಿ. ಪ್ರಾ. ಶಾಲೆಯಲ್ಲಿ ದತ್ತು ನಿಧಿ ಸ್ಥಾಪನೆ ಮತ್ತು ಸ್ವಚ್ಛತಾ ಸಂಕಲ್ಪ ಕಾರ್ಯಕ್ರಮ

ಪಂಜ ಲಯನ್ಸ್ ಕ್ಲಬ್ ವತಿಯಿಂದ ಅ.2ರಂದು ಪಾಂಡಿಗದ್ದೆ ದ.ಕ ಜಿ. ಪ.ಸ.ಕಿ. ಪ್ರಾ. ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ ಅಂಗವಾಗಿ ದತ್ತು ನಿಧಿ ಸ್ಥಾಪನೆ ಮತ್ತು ಸ್ವಚ್ಛತಾ ಸಂಕಲ್ಪ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪಾಂಡಿಗದ್ದೆ ಎಸ್.ಡಿ ಎಂ. ಸಿ ಅಧ್ಯಕ್ಷ ವಾಚಣ್ಣ...

ಸುಬ್ರಹ್ಮಣ್ಯ: ಎಸ್ ಎಸ್ ಪಿ ಯು ಕಾಲೇಜಿನಲ್ಲಿ 52ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶಾರದಾ ಪೂಜೆ

ಸುಬ್ರಹ್ಮಣ್ಯದ ಎಸ್ ಎಸ್ ಪಿ ಯು ಕಾಲೇಜಿನಲ್ಲಿ ಅ.2 ರಂದು ಶಿಕ್ಷಕ ರಕ್ಷಕ ಸಂಘದ ವತಿಯಿಂದ 52ನೇ ವರ್ಷ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶಾರದಾ ಪೂಜೆ ನಡೆಯಿತು. ಪೂಜಾ ವಿಧಾನ ಪೂರೈಸಿ ಮಧ್ಯಾಹ್ನ ಮಹಾ ಪೂಜೆಯ ನಂತರ ಪ್ರಸಾದ ವಿತರಣೆ ನೆರವೇರಿತು.ಈ ಸಂದರ್ಭದಲ್ಲಿ ಕಲಾವಿದ ಗಣೇಶ್ ಪರ್ವತಮುಖಿ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನೆರವೇರಿತು. ಕಲಾವಿದ...

ಸುಳ್ಯ ರಂಗಮಯೂರಿ ಕಲಾ ಶಾಲೆಯಲ್ಲಿ ಶ್ರೀ ಶಾರದಾ ದೇವಿ ಪೂಜೆ

ಸುಳ್ಯ: ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ರಂಗಮಯೂರಿ ಕಲಾ ಶಾಲೆಯಲ್ಲಿ ಅ.3 ರಂದು ನವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಶ್ರೀ ಶಾರದಾ ದೇವಿ ಪೂಜೆ ನೆರವೇರಿತು.ಬೆಳಗ್ಗೆ ಗಣಪತಿ ಹವನ ನಡೆದ ಬಳಿಕ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಶಾಸ್ತ್ರೀಯ ಸಂಗೀತ ಶಿಕ್ಷಕ ಮಹಾಬಲೇಶ್ವರ ಬೀರ್ಮಕಜೆ ಮತ್ತು ಸುಗಮ ಸಂಗೀತ ಶಿಕ್ಷಕಿ ಶ್ರೀಮತಿ ಸುಮನಾ...
Loading posts...

All posts loaded

No more posts

error: Content is protected !!