ಕೊಡಿಯಾಲ: ಅಂಗಾರ ಕಲ್ಲಗದ್ದೆ ನಿಧನ

ಕೊಡಿಯಾಲ ಗ್ರಾಮದ ಕಲ್ಲಗದ್ದೆ ನಿವಾಸಿ ಅಂಗಾರ ರವರು ಅಸೌಖ್ಯದಿಂದ ಅ.15ರಂದು ನಿಧನರಾದರು. ಅವರಿಗೆ ಸುಮಾರು 45 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಯಮುನಾ, ಮಗಳು ದೀಪಿಕಾ ಮತ್ತು ಮಗ ಶ್ರೇಯಸ್ಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಜೇಸಿ ಲಿಂಗಪ್ಪ ಬೆಳ್ಳಾರೆಯವರಿಗೆ ಕಲಾರತ್ನ ಪ್ರಶಸ್ತಿ

ಬೆಳ್ಳಾರೆ ಜೇಸಿಯ ಪೂರ್ವಾಧ್ಯಕ್ಷರಾದ ಲಿಂಗಪ್ಪಬೆಳ್ಳಾರೆಯವರು ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಕಲಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅ.16 ರಂದು ಜೇಸಿಐ ಬೆಳಣ್ ನಲ್ಲಿ ನಡೆಯುವ ವ್ಯವಹಾರ ಸಮ್ಮೇಳನದಲ್ಲಿ ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಕಲಾರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಇವರು ಜೇಸೀ ವಲಯ ತರಬೇತುದಾರರಾಗಿ ಹಲವಾರು ತರಬೇತಿಗಳನ್ನು ನೀಡಿರುತ್ತಾರೆ.ನಾಯಕತ್ವ ಗುರಿ ನಿರ್ಧಾರ, ಮಾನವೀಯ ಸಂಬಂಧಗಳು ಮೊದಲಾದ ಅನೇಕ ತರಬೇತಿ ನೀಡಿರುತ್ತಾರೆ.ಹವ್ಯಾಸಿ ಯಕ್ಷಗಾನ...
Ad Widget

ಸುಳ್ಯ : ಶಬ್ದದೊಂದಿಗೆ ಕಂಪಿಸಿದ ಭೂಮಿ

ತಾಲೂಕಿನ ಮರ್ಕಂಜದ ಭಾಗದಲ್ಲಿ ಇಂದು ಮುಂಜಾನೆ 5.30ರ ವೇಳೆಗೆ ಭಾರೀ ಶಬ್ದದೊಂದಿಗೆ ಭೂ ಕಂಪನದ ಅನುಭವವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮರ್ಕಂಜ ಭಾಗದ ಕೆಲವು ಕಡೆ ಹಾಗೂ ನೆಲ್ಲೂರು ಕೆಮ್ರಾಜೆ, ದೇವಚಳ್ಳ ಗ್ರಾಮದ ಕೆಲವು ಕಡೆಗಳಲ್ಲಿ ಈ ಅನುಭವವಾಗಿದ್ದು, ಭಾರೀ ಶಬ್ದ ಉಂಟಾಗಿ ಕೆಲ ಸಮಯ ಕಂಪನವಾದ ಅನುಭವವಾಗಿದೆ ಎಂದು ತಿಳಿದು ಬಂದಿದೆ.

ಕಳಂಜ: ಸುನಂದಾ ಪಟ್ಟೆ ನಿಧನ

ಕಳಂಜ ಗ್ರಾಮದ ಪಟ್ಟೆ ಶಿವಪ್ಪ ಪೂಜಾರಿಯವರ ಪತ್ನಿ ಶ್ರೀಮತಿ ಸುನಂದಾ ಪಟ್ಟೆಯವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪತಿ ಶಿವಪ್ಪ ಪೂಜಾರಿ, ಪುತ್ರರಾದ ಭಾಸ್ಕರ, ಸದಾನಂದ, ಪ್ರಶಾಂತ್ ಹಾಗೂ ಪುತ್ರಿಯರಾದ ಅರುಣಾ ಪೈಚಾರು, ಉಮಾವತಿ ಮಾಡಾವು ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನೆಲ್ಲೂರು ಕೆಮ್ರಾಜೆ : ನಿವೃತ್ತ ಬಿಲ್ ಕಲೆಕ್ಟರ್ ನಾರಾಯಣ ನಾಯ್ಕರಿಗೆ ಬೀಳ್ಕೋಡುಗೆ

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ನ ನಿವೃತ್ತ ಬಿಲ್ ಕಲೆಕ್ಟರ್ ನಾರಾಯಣ ನಾಯ್ಕ ಮುಂಡೋಕಜೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಅ.7 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಶೀಲಾವತಿ ಬೊಳ್ಳಾಜೆ ವಹಿಸಿದ್ದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರುಗಳಾದ ದಿವಾಕರ ನಾಯಕ್, ಶುಭಕರ ನಾಯಕ್, ರಾಧಾ ಕಿಲಾರ್ಕಜೆ, ಮಾಜಿ ಉಪಾಧ್ಯಕ್ಷರು, ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ ಸಂಘದ...

ಗುತ್ತಿಗಾರು : ಪೋಲಿಸ್ ಇಲಾಖಾ ಪರೀಕ್ಷೆಯ ಬಗ್ಗೆ ತರಬೇತಿ ಕಾರ್ಯಕ್ರಮ – ನಿರೀಕ್ಷೆಗೂ ಮೀರಿ ಆಗಮಿಸಿದ ಯುವಕ ಯುವತಿಯರು

ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪೊಲೀಸ್ ಇಲಾಖಾ ಪರೀಕ್ಷೆಯ ಬಗ್ಗೆ ತರಬೇತಿ ಕಾರ್ಯಕ್ರಮ ಇಂದು ನಡೆಯಿತು. ಮಾಹಿತಿ ಕಾರ್ಯಾಗಾರವನ್ನು ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರು ನಡೆಸಿಕೊಟ್ಟರು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಪಂಚಾಯತ್ ಪಿ. ಡಿ. ಓ. ಧನಪತಿ ನಿವೃತ್ತ ದೈ. ಶಿ....

ಅಡ್ಕಾರು ಶ್ರೀ ಕಾರ್ತಿಕೇಯ ಯುವ ಸೇವಾ ಸಮಿತಿಯ ವತಿಯಿಂದ 4ನೇ ವರ್ಷದ ಶಾರದಾಂಬ ಉತ್ಸವ

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಕಾರ್ತಿಕೇಯ ಯುವ ಸೇವಾ ಸಮಿತಿಯ ವತಿಯಿಂದ 4ನೇ ವರ್ಷದ ಶಾರದಾಂಬ ಉತ್ಸವವು ಅ.5ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ಜರುಗಿತು. ಬೆಳಿಗ್ಗೆ ಗಣಪತಿ ಹವನ, ಸಾಮೂಹಿಕ ಪ್ರಾರ್ಥನೆ, ಧ್ವಜಾರೋಹಣ, ಶ್ರೀ ಶಾರದಾಂಬ ದೇವಿಯ ವಿಗ್ರಹ ಪ್ರತಿಷ್ಠೆ, ನಡೆಯಿತು. .ಬಳಿಕ ಬಾಲ ಸರಸ್ವತಿ ಹೋಮ, ಅಕ್ಷರಾಭ್ಯಾಸ, ಸಾಮೂಹಿಕ...

ಅ.9: ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮ‌

ಸುಳ್ಯ ನಾಡ ಹಬ್ಬಗಳ ದಿನಾಚರಣಾ ಸಮಿತಿ,ತಾಲೂಕು ಆಡಳಿತ ಇದರ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವು ಅ.9ರಂದು ಬೆಳಗ್ಗೆ 10:30 ಕ್ಕೆ ಸುಳ್ಯ ತಾಲೂಕು ಪಂಚಾಯತ್ " ಸಾಮರ್ಥ್ಯ ಸೌಧದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀನುಗಾರಿಕೆ, ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ವಹಿಸಲಿದ್ದಾರೆ. ಉದ್ಘಾಟನೆಯನ್ನು ಸುಳ್ಯ ನಗರ...

ನಿಧನ : ಚನಿಯಪ್ಪ ನಾಯ್ಕ ಪನ್ನೆ

ಕಲ್ಮಕಾರು ಗ್ರಾಮದ ಚನಿಯಪ್ಪ ನಾಯ್ಕ ಪನ್ನೆ ಅವರು ಅಕ್ಟೋಬರ್ 06 ರಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಕುಟುಂಬಸ್ಥರು ಹಾಗೂ ಬಂಧು ಮಿತ್ರರುಗಳನ್ನು ಅಗಲಿದ್ದಾರೆ.

ಹಾಸನದ ಮತ್ಸ್ಯ ದರ್ಶನಿಗೆ ಭೇಟಿ ನೀಡಿ ಲೆಕ್ಕಪತ್ರ ಪರಿಶೀಲಿಸಿದ ನಿಗಮ ಅಧ್ಯಕ್ಷ ಎ.ವಿ.ತೀರ್ಥರಾಮ

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧೀನಲ್ಲಿರುವ ಹಾಸನದ ಮತ್ಸ್ಯ ದರ್ಶನಿಗೆ ಕೆ.ಎಫ್.ಡಿ.ಸಿ. ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ ರವರು ಹಠತ್ತಾಗಿ ಭೇಟಿದರು. ಕಛೇರಿಯ ಲೆಕ್ಕಪತ್ರಗಳ ಪರಿಶೀಲನೆ ನಡೆಸಿದರು.
Loading posts...

All posts loaded

No more posts

error: Content is protected !!