- Saturday
- June 27th, 2026
ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯಲ್ಲಿ ಅ.04ರಂದು ಆಯುಧಪೂಜೆ ಕಾರ್ಯಕ್ರಮ ನಡೆಯಿತು. ಆಯುಧಪೂಜೆಯ ಅಂಗವಾಗಿ ಪೂರ್ವಾಹ್ನ ಗಣಹೋಮ ನೆರವೇರಿತು. ಈ ಸಂದರ್ಭದಲ್ಲಿ ಸ್ವರ್ಣ ಬೈಕ್ ಪೋಯಿಂಟ್ ಸಂಸ್ಥೆಯ ಮಾಲಕರಾದ ಗಗನ್ ನಾಲ್ಗುತ್ತು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬೆಳ್ಳಾರೆ ಗ್ರಾಮದ ತಂಬಿನಮಕ್ಕಿ ಬಳಿ ನಿನ್ನೆ ತಡ ರಾತ್ರಿ ಎರಡು ಬೈಕ್ ಗಳ ನಡುವೆ ಪರಸ್ಪರ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟ ಧಾರುಣ ಘಟನೆ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ನಾರಾಯಣ ಎಂದು ತಿಳಿದು ಬಂದಿದೆ. ಘಟನೆಯಿಂದ ಸುಜಿತ್ ಎಂಬುವರಿಗೆ ಗಾಯಾಳಾಗಿದ್ದು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಜಾಲ್ಸೂರಿನ ಸಫಿಕ್ ಕಾಂಪ್ಲೆಕ್ಸ್‌ನಲ್ಲಿ ಜನನಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಅ. 3 ರಂದು ಶುಭಾರಂಭಗೊಂಡಿತು. ವಿಶ್ವೇಶ್ವರ ಪುರೋಹಿತ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮನೆಯವರು, ಊರಿನವರು ಉಪಸ್ಥಿತರಿದ್ದರು. ನಮ್ಮಲ್ಲಿ ಪೈಬರ್ ಡೋರ್, ಪ್ಲಸ್ ಡೋರ್, ಫೈವುಡ್ ಡೋರ್, ಮರದ ಡೋರ್, ಡಿಜಿಟಲ್ ಡೋರ್ ಹಾಗೂ ಎಲ್ಲಾ ತರದ ಅಲ್ಯೂಮಿನಿಯಂ ಕೆಲಸಗಳನ್ನು ಮಾಡಿಕೊಡುತ್ತೇವೆ ಎಂದು ಮ್ಹಾ.ಮನೋಜ್ ಅವರು ತಿಳಿಸಿದ್ದಾರೆ.
ಬೆಳ್ಳಾರೆ ಅಮ್ಮ ಮೋಟಾರ್ ವರ್ಕ್ಸ್ ಸ್ಥಳಾಂತರಗೊಂಡು ಮಣಿಕ್ಕಾರ ಕಾಂಪ್ಲೆಕ್ಸ್ ಹಿಂದುಗಡೆ ಅ.4 ರಂದು ಆಯುಧಪೂಜೆಯೊಂದಿಗೆ ಶುಭಾರಂಭಗೊಳ್ಳಲಿದೆ. ಈ ಶುಭಾರಂಭಕ್ಕೆ ತಾವೆಲ್ಲರೂ ಬಂದು ದೇವರ ಪ್ರಸಾದ ಸ್ವೀಕರಿಸುವಂತೆ ಮಾಲೀಕರಾದ ದಾಮೋದರ ಪಾಲೆಪ್ಪಾಡಿ, ನವೀನ ಕುಮಾರ್, ರಾಮಕುಮೋರ್ ತಿಳಿಸಿದ್ದಾರೆ.
ಶ್ರೀ ರಾಮ ಭಜನಾ ಮಂಡಳಿ ಮಡಪ್ಪಾಡಿ ಮತ್ತು ಯುವಕ ಮಂಡಲ ( ರಿ.) ಮಡಪ್ಪಾಡಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಸಾರ್ವಜನಿಕ ಆಯುಧ ದುರ್ಗಾ ಪೂಜೆ ಮತ್ತು ವಾಹನ ಪೂಜೆ ಅ.2 ರಂದು ಮಡಪ್ಪಾಡಿ ಯುವಕ ಮಂಡಲ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು, ಯುವಕ ಮಂಡಲ ಅಧ್ಯಕ್ಷರು ಮತ್ತು...
ಬೆಳ್ಳಾರೆ ಸಮೀಪದ ಪಂಜಿಗಾರಿನಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣ ಅಟೋ ವರ್ಕ್ಸ್ ನಲ್ಲಿ ಅ.03ರಂದು ಆಯುಧಪೂಜೆ ಕಾರ್ಯಕ್ರಮ ನಡೆಯಿತು. ಆಯುಧಪೂಜೆಯ ಅಂಗವಾಗಿ ಪೂರ್ವಾಹ್ನ ಗಣಹೋಮ ನೆರವೇರಿತು. ಈ ಸಂದರ್ಭದಲ್ಲಿ ಸ್ವರ್ಣ ಅಟೋ ವರ್ಕ್ಸ್ ನ ಮಾಲಕರಾದ ವಸಂತ ಕುಮಾರ್ ನಾಲ್ಗುತ್ತು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಂದ ಪ್ರಾರ್ಥನೆ, ಭಾಷಣ ನಡೆಯಿತು. ಬಳಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಉಮೇಶ್ವರಿ ನೆಲ್ಲಿಪುಣಿ, ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್ ಪಾರೆಪ್ಪಾಡಿ, ಸಹ ಶಿಕ್ಷಕ ಕುಶಾಲಪ್ಪ ತುಂಬತ್ತಾಜೆ ಸಂದರ್ಭೋಚಿತವಾಗಿ...
ಚೊಕ್ಕಾಡಿ ಪ್ರೌಢಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆ ಕುಕ್ಕುಜಡ್ಕದಲ್ಲಿ ಅಕ್ಟೋಬರ್ 2ರಂದು ಗಾಂಧೀ ಜಯಂತಿಯನ್ನು ಆಚರಿಸಲಾಯಿತು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸಂಕೀರ್ಣ ಚೊಕ್ಕಾಡಿಯವರು ಹಾಗೂ ಆಂಗ್ಲಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯಿನಿ ಚೈತ್ರಾ ಅವರು ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು. ಅನಂತರ ಗಾಂಧೀಜಿಯವರ ಮೆಚ್ಚಿನ ಗೀತೆಗಳನ್ನು ಹಾಡಲಾಯಿತು. ಶಿಕ್ಷಕರಾದ ಹರಿಪ್ರಸಾದ್ ಅವರು ಸ್ವಚ್ಛತೆ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು....
ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವಾರ್ಷಿಕ ಮಹಾ ಸಭಾ ಕಾರ್ಯಕ್ರಮವು ಸೆ.18 ರಂದು ದ್ವಾರಕಾ ಸಭಾ ಭವನದಲ್ಲಿ ನಡೆಯಿತು.ಸಂಘದ ಮಹಾ ಸಭೆಯ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಮಹಾಲಿಂಗನ್ ಬಾಜಿರ್ತೊಟ್ಟಿ, ಶಂಕರ ಪಾಟಾಳಿ ಪರಿವಾರಕಾನ ಅವರು ಮುಖ್ಯ ಅತಿಥಿಗಳಾಗಿದ್ದರು. ವಾರ್ಷಿಕ ಲೆಕ್ಕ ಪತ್ರವನ್ನು ಸಂಘದ ಖಜಾಂಜಿ...
ಐವರ್ನಾಡಿನ ಕೃಪಾ ಮಡ್ತಿಲ ಕಾಂಪ್ಲೆಕ್ಸ್ ನಲ್ಲಿ ಗುರುರಾಜ್ ನಿಡುಬೆಯವರ ಮಾಲಕತ್ವದ ಕೃಷಿ ಯಂತ್ರೋಪಕರಣಗಳ ಮಳಿಗೆ ಪಂಚಶ್ರೀ ಆಗ್ರೋಟೆಕ್ ಅ.02 ರಂದು ಶುಭಾರಂಭಗೊಂಡಿತು. ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್ .ಮನ್ಮಥ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಅಚ್ಚುತ ಗೌಡ ಕುದುಂಗು, ಜೆ.ಟಿ.ವೆಂಕಪ್ಪ ಗೌಡ ಜಬಳೆ,ಕಟ್ಟಡದ ಮಾಲಕರಾದ ಸತೀಶ...
Loading posts...
All posts loaded
No more posts
