ಹರಿಹರ ಪಲ್ಲತ್ತಡ್ಕ :- ಪ್ರೌಢಶಾಲೆಯಲ್ಲಿ ಕೋಟಿ ಕಂಠ ಗಾಯನ

ಹರಿಹರ ಪಲ್ಲತ್ತಡ್ಕ ಪ್ರೌಢಶಾಲೆಯಲ್ಲಿ ಅ.28 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಮಾತಾಡ್ ಮಾತಾಡು ಕನ್ನಡ, 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನನ್ನ ನಾಡು ನನ್ನ ಹಾಡು ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು.ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ

ನ.12: ಸುಳ್ಯ ತಾಲೂಕು ಲೈಟಿಂಗ್ಸ್, ಸೌಂಡ್ಸ್ ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಮ್ಯಾಟ್ ಕಬಡ್ಡಿ ಪಂದ್ಯಾಟ – ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯ ತಾಲೂಕು ಲೈಟಿಂಗ್ಸ್, ಸೌಂಡ್ಸ್ ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ನವೆಂಬರ್ 12 ಶನಿವಾರದಂದು ಹೊನಲು ಬೆಳಕಿನ ಆಹ್ವಾನಿತ 6 ತಂಡಗಳ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರ ಸಮ್ಮುಖದಲ್ಲಿ ಆಮಂತ್ರಣ...
Ad Widget

ಪಂಜ ವಲಯ ಮಟ್ಟದ ಕ್ರೀಡಾಕೂಟ- ಎಣ್ಮೂರು ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

ಸರಕಾರಿ ಪದವಿ ಪೂರ್ವ ಕಾಲೇಜು ಪಂಜ ಇಲ್ಲಿ ಅಕ್ಟೋಬರ್ 29 ರಂದು ನಡೆದ ಪಂಜ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ಎಣ್ಮೂರು 164 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. 17 ವರ್ಷ ಕೆಳಗಿನ ವಯೋಮಾನದ ಬಾಲಕಿಯರ ವಿಭಾಗದಲ್ಲಿ 13 ಪ್ರಥಮ, 8 ದ್ವಿತೀಯ ಹಾಗೂ 2 ತೃತೀಯ ಮತ್ತು ಬಾಲಕರ...

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸುಳ್ಯ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಗುಂಪು ಸ್ಪರ್ಧೆಯಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿಗಳಾದ 10ನೇ ತರಗತಿಯ ಯಶ್ವಿತ್ ಎಸ್. ಮತ್ತು 9ನೇ ತರಗತಿಯ ಮನ್ವಿತ್ ಎಂ.ಪಿ. ಅವರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ವಿಜ್ಞಾನ ಶಿಕ್ಷಕಿ ಸಂಧ್ಯಾಕುಮಾರಿಯವರು ಮಾರ್ಗದರ್ಶನ ನೀಡಿರುತ್ತಾರೆ.

ತಾಲೂಕು ಮಟ್ಟದ ಯುವ ಸಂಸತ್ತು ಸ್ಪರ್ಧಾ ಕಾರ್ಯಕ್ರಮ: ಎಣ್ಮೂರು ಪ್ರೌಢಶಾಲೆಯ 5 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸರಕಾರಿ ಪ್ರೌಢಶಾಲೆ ಗುತ್ತಿಗಾರು ಇಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಯುವ ಸಂಸತ್ತು ಸ್ಪರ್ಧಾ ಕಾರ್ಯಕ್ರಮ ಅ.28ರಂದು ನಡೆಯಿತು. ತಾಲೂಕಿನ ವಿವಿಧ ಶಾಲೆಗಳ 7 ತಂಡಗಳು ಭಾಗವಹಿಸಿದ್ದವು. ಬಾಲ್ಯದಿಂದಲೇ ವಿದ್ಯಾರ್ಥಿಗಳಲ್ಲಿ ಸಂವಿಧಾನದ ಬಗ್ಗೆ ಗೌರವ ಭಾವನೆ ಮೂಡಿಸುವ ಮತ್ತು ಉತ್ತಮ ಸಂಸದೀಯ ಪಟುಗಳನ್ನಾಗಿ ಮಾಡುವ ಬಗ್ಗೆ ಅರಿವು ಮೂಡಿಸಲಾಯಿತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಣ್ಮೂರು ಪ್ರೌಢಶಾಲೆಯ ಫಾತಿಮತ್ ಅಮಿರಾ,...

ಕೊಲ್ಲಮೊಗ್ರು ಗ್ರಾಮ ಪಂಚಾಯತು ವಿಶೇಷ ಸಭೆ

ಕೊಲ್ಲಮೊಗ್ರು ಗ್ರಾಮ ಪಂಚಾಯತು ಸಭಾಂಗಣದಲ್ಲಿ, ಕೊಲ್ಲಮೊಗ್ರು ಗ್ರಾಮ ಪಂಚಾಯತು ವ್ಯಾಪ್ತಿಯ ಕೊಲ್ಲಮೊಗ್ರು ಗ್ರಾಮದಲ್ಲಿ ಪ್ರಾರಂಭವಾಗಿರುವ ಮಧ್ಯ ಮಾರಾಟ ಕೇಂದ್ರದ ಬಗ್ಗೆ, ಚರ್ಚಿಸಲು ವಿಶೇಷ ಸಭೆಯನ್ನು ಅ.25 ರಂದು ಗ್ರಾಮ ಪಂಚಾಯತು ಅಧ್ಯಕ್ಷರಾದ ಉದಯ ಕೊಪ್ಪಡ್ಕ ನೇತೃತ್ವದಲ್ಲಿ ನಡೆಸಲಾಯಿತು. ಗ್ರಾಮ ಪಂಚಾಯತು ಸದರಿ ಮದ್ಯ ಮಾರಾಟ ಕೇಂದ್ರ ನಡೆಸಲು ಯಾವುದೇ ಪರವಾನಿಗೆ ಅಥವಾ ನಿರಾಕ್ಷೇಪಣಾ ಪತ್ರ ನೀಡಿಲ್ಲ...

ನಂದಗೋಕುಲ(ರಿ.) ಟ್ರಸ್ಟ್ ವತಿಯಿಂದ ಬಡ ಕುಟುಂಬಕ್ಕೆ ಧನಸಹಾಯ

ನಂದಗೋಕುಲ(ರಿ.) ಟ್ರಸ್ಟ್ ವತಿಯಿಂದ ಪುತ್ತೂರು ತಾಲೂಕಿನ ಪಂಜಿಗುಡ್ಡೆಯಲ್ಲಿ ತೀರಾ ಬಡತನ ಹಾಗೂ ಅನೇಕ ವರ್ಷದಿಂದ ಆರೋಗ್ಯ ಸಮಸ್ಯೆ ಇರುವ ಕುಶಾಲಪ್ಪ ರವರ ಕುಟುಂಬದವರಿಗೆ 25000 ರೂ.ಗಳ ಧನಸಹಾಯ ಮಾಡಲಾಯಿತು. ಈ ಸಂದರ್ಭ ಬನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಗೀತಾ, ಸದಸ್ಯರಾದ ರಮಣಿ ಗಾಣಿಗ ಹಾಗೂ ನಂದಗೋಕುಲ ಟ್ರಸ್ಟ್ ಸಂಘದ ಅಧ್ಯಕ್ಷರಾದ ಕಾರ್ತಿಕ್, ಕಾರ್ಯದರ್ಶಿಯರಾದ ಲಿಖಿತಾ...

ಸುಬ್ರಹ್ಮಣ್ಯ: ನಮ್ಮ ಬಿ.ಎ ಬಳಗದ ಆರನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮ – ಯುವ ತೇಜಸ್ಸು ಟ್ರಸ್ಟ್ ಗೆ ಧನಸಹಾಯ ಹಸ್ತಾಂತರ

ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯದ 2015-2016ನೇ ಸಾಲಿನ ಹಿರಿಯ ವಿದ್ಯಾರ್ಥಿವೃಂದ 'ನಮ್ಮ ಬಿ.ಎ ಬಳಗ' ಇದರ 6ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಅ.23ರಂದು ನಮ್ಮ ಬಿ.ಎ. ಬಳಗದ ಸದಸ್ಯೆ ಗಾಯತ್ರಿ ಕೈಕಂಬ ರವರ ಮನೆಯಲ್ಲಿ ನಡೆಯಿತು. ಗೆಳೆಯರೆಲ್ಲರ ಒಟ್ಟುಗೂಡುವಿಕೆಯೊಂದಿಗೆ ಪ್ರತಿ ವರ್ಷದಂತೆ ಹರಟೆ ತಮಾಷೆಗಳೊಂದಿಗೆ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನದ ನಡೆದ ಸಭಾ ಕಾರ್ಯಕ್ರಮದಲ್ಲಿ...

ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಅ.25 ರಂದು ಕುಕ್ಕೆ ಕ್ಷೇತ್ರದಲ್ಲಿ ಯಾವುದೇ ಸೇವೆಯಿಲ್ಲ

ಅಕ್ಟೋಬರ್ 25ರಂದು ಸೂರ್ಯಗ್ರಹಣ ಇರುವುದರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ ದಿನ ಯಾವುದೇ ಸೇವೆಗಳು, ಭೋಜನ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಅಕ್ಟೋಬರ್ 26ರಂದು ದೇವರ ನಿತ್ಯದ ಪೂಜಾ ಸಮಯಗಳಲ್ಲಿ ವ್ಯತ್ಯಯವಾಗುವುದರಿಂದ ಬೆಳಗ್ಗೆ 9ರಿಂದ ಭಕ್ತರಿಗೆ ದೇವರ ದರ್ಶನ, ಸೇವೆಗಳು ಆರಂಭಗೊಳ್ಳಲಿವೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಸುಬ್ರಹ್ಮಣ್ಯ :- ಭಾರತೀಯ ಮಜ್ದೂರ್ ಸಂಘದ ಸುಬ್ರಹ್ಮಣ್ಯ ವಲಯದ ಗ್ರಾಮ ಸಮಿತಿ ರಚನೆ

ಭಾರತೀಯ ಮಜ್ದೂರ್ ಸಂಘ ಕಡಬ ತಾಲೂಕು, ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾಮಗಾರಿ ಮಜ್ದೂರ್ ಸಂಘ ಸುಬ್ರಹ್ಮಣ್ಯ ವಲಯದ ಗ್ರಾಮ ಸಮಿತಿಯನ್ನು ಅ.16 ರಂದು ರಚನೆ ಮಾಡಲಾಯಿತು. ನೂತನ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಗಿರೀಶ್ ಆಚಾರ್ಯ ಪೈಲಾಜೆ, ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಮಾನಾಡು ದೇವರಗದ್ದೆ, ಉಪಾಧ್ಯಕ್ಷರಾಗಿ ಬೆಳ್ಯಪ್ಪ ಆಚಾರ್ಯ ಐನೆಕಿದು, ಕೋಶಾಧಿಕಾರಿಯಾಗಿ ಗಿರೀಶ್ ಆಚಾರ್ಯ...
Loading posts...

All posts loaded

No more posts

error: Content is protected !!