- Tuesday
- August 25th, 2026
ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದವರಿಗೆ ದಂಡ ವಿಧಿಸಿ ವಿಲೇವಾರಿ ಮಾಡಿಸಿದ ಗ್ರಾಮ ಪಂಚಾಯತ್ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ಫೆ.15 ರಂದು ತ್ಯಾಜ್ಯ ಎಸೆದ ಸುಳ್ಯದ ನಿವಾಸಿಗಳಿಗೆ ರೂ 6000.00 ದಂಡ ವಿಧಿಸಿದ ಘಟನೆ ನಡೆದಿದೆ.ಫೆ 15 ರಂದು ಬೇಂಗಮಲೆ ಪರಿಸರದಲ್ಲಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಎಸೆದು ಹೋಗಿದ್ದಾರೆ ಎಂಬ ಮಾಹಿತಿ ಪಡೆದ ಪಂಚಾಯತ್...
ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶಿವರಾತ್ರಿಯ ದಿನ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿದ್ದು, ಇದರ ಪರಿಣಾಮ ದೂರದೂರಿಗೆ ಹೋಗುವ ಭಕ್ತರಿಗೆ ಬಸ್ಸಿನ ವ್ಯವಸ್ಥೆಯಲ್ಲಿ ಸಮಸ್ಯೆಯಾಗಿತ್ತು. ಇದರಿಂದಾಗಿ ಕೆಲಕಾಲ ಪ್ರಯಾಣಿಕರು ಪ್ರತಿಭಟನೆಗೆ ಇಳಿಯುವ ಪ್ರಸಂಗವೂ ನಡೆಯಿತು. ಇದನ್ನು ಮನಗಂಡ ಸುಬ್ರಹ್ಮಣ್ಯದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕುಮಾರ್ ಅವರು ಪೋನ್ ಕರೆಯ ಮೂಲಕ ಸಾರಿಗೆ ಸಚಿವರಾದ ಶ್ರೀರಾಮುಲು ಅವರನ್ನು ಸಂಪರ್ಕಿಸಿ ಅವ್ಯವಸ್ಥೆಯ...
ಕೇನ್ಯ ಗ್ರಾಮದ ಕಾಯಂಬಾಡಿ ನಾಗಬ್ರಹ್ಮ ಮುಗೇರ್ಕಳ ದೈವಸ್ಥಾನ ದ ವಠಾರದಲ್ಲಿ ಫೆ.19ರಂದು 65 ಕೆ ಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ನಿವೃತ್ತ ತಹಶೀಲ್ದಾರ್ ಶ್ರೀ ತಮ್ಮಯ್ಯ ಗೌಡ ಗೆಜ್ಜೆ ಉದ್ಘಾಟಿಸಿದರು. ಕಣ್ಕಲ್ ಶಾಲಾ ಮಕ್ಕಳು ಪ್ರಾರ್ಥನೆ ಮಾಡಿದರು.ಮುಖ್ಯ ಅತಿಥಿಗಳಾಗಿ ಶ್ರೀ ಸತ್ಯನಾರಾಯಣ ಭಟ್ ಕಾಯಂಬಾಡಿ, ಶ್ರೀ ರಾಜೀವ್ ಗೌಡ ಕಣ್ಕಲ್, ಶ್ರೀಮತಿ ಕುಸುಮ...
ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ನೇತೃತ್ವದಲ್ಲಿ ಕೆ.ವಿ.ಜಿ. ಡೆಂಟಲ್ ಕಾಲೇಜ್ ಮತ್ತು ಆಸ್ಪತ್ರೆ, ಸುಳ್ಯ, ದ.ಕ. ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಇವರ ಸಹಯೋಗದಲ್ಲಿ ಫೆ.21ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಇದರ ವಠಾರದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು. ಶಿಬಿರವನ್ನು ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷರಾದ...
ಮಹಾಶಿವರಾತ್ರಿ ಪ್ರಯುಕ್ತ ಭಕ್ತಿಗೀತೆ ಗಾನ ವೈಭವ ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಭಕ್ತಿಗೀತೆ ಗಾನ ವೈಭವ ಕಾರ್ಯಕ್ರಮವು ನೆರವೇರಿತು.ಖ್ಯಾತ ಕೃಷಿಕರಾದ ಸಿ ಕೆ ನವೀನ್ ಚಾತುಬಾಯಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು . ಸಭಾಧ್ಯಕ್ಷತೆಯನ್ನು ವಾಷ್ಠರ್ ಫೈವ್ ಸ್ಟಾರ್...
ರಾಜ್ಯ ಮಟ್ಟದ "ಸಮಾಜ ಸೇವಾ ಭೂಷಣ ಪ್ರಶಸ್ತಿ"ಗೆ ಶೈಲೇಶ್ ಅಂಬೆಕಲ್ಲು ಆಯ್ಕೆ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಆರ್ಲಪದವು ಗಡಿನಾಡ ಶ್ರೇಯೋಭಿವೃದ್ಧಿ ಸೇವಾ ಟ್ರಸ್ಟ್ ಶೈಲೇಶ್ ಅಂಬೆಕಲ್ಲು ಅವರನ್ನು ರಾಜ್ಯಮಟ್ಟದ "ಸಮಾಜ ಸೇವಾ ಭೂಷಣ ಪ್ರಶಸ್ತಿ"ಗೆ ಆಯ್ಕೆ ಮಾಡಿದೆ. ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಇವರು ಯುವಜನ ಸೇವೆ, ಧಾರ್ಮಿಕ, ಸಹಕಾರಿ ಕ್ಷೇತ್ರಗಳಲ್ಲಿ...
ಎಲಿಮಲೆ : ಸಾಮಾಜಿಕ ಪಿಡುಗಿನ ಬಗ್ಗೆ ಜನಜಾಗೃತಿ, ಬೀದಿ ನಾಟಕ ಪ್ರದರ್ಶನಗ್ರಾಮ ಪಂಚಾಯತ್ ದೇವಚಳ್ಳ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರು, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಎಲಿಮಲೆ ಇದರ ಜಂಟಿ ಆಶ್ರಯದಲ್ಲಿ ಸಾಮಾಜಿಕ ಪಿಡುಗು ಎಂಬ ಕಾರ್ಯಕ್ರಮದ ಯೋಜನೆ ಅಡಿಯಲ್ಲಿ ಲಿಂಗ ಆಧರಿತ ದೌರ್ಜನ್ಯ ಎಂಬ ಕಿರು ಬೀದಿ ನಾಟಕ ಪ್ರದರ್ಶನವು ಫೆ 20 ರಂದು...
ಬೆಳ್ಳಾರೆ : ಫೆ.23 ಸುಳ್ಯ ರೈತ ಉತ್ಪಾದಕ ಕಂಪನಿಯ ಬೆಳ್ಳಾರೆ ಶಾಖೆಯ ಕಛೇರಿ ಉದ್ಘಾಟನಾ ಸಮಾರಂಭ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ, ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಅಟಲ್ ಇನ್ಕ್ಯೂಬೆಷನ್ ಸೆಂಟರ್ ನಿಟ್ಟೆ ಇವುಗಳ ಸಹಕಾರದಲ್ಲಿ ಆರಂಭಗೊಂಡ ಸುಳ್ಯ ರೈತ ಉತ್ಪಾದಕ ಕಂಪನಿ(ನಿ.) ಇದರ ಬೆಳ್ಳಾರೆ ಶಾಖೆಯ ಉದ್ಘಾಟನಾ...
ಫೆ.21 ಮಂಗಳವಾರ ದಂದು ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಪೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಕೇರ್ಪಳ, ಶ್ರೀರಾಂಪೇಟೆ, ಜಬಳೆ, ಡಿಪೋ, ಸಂಪಾಜೆ, ಕೊಲ್ಚಾರ್, ಕಾವು, ಅಜ್ಜಾವರ, ಕೇನ್ಯ, ಅರಂತೋಡು, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10.00 ರಿಂದ ಸಾಯಂಕಾಲ 6.00 ರ...
ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ ಫೆ.22 ರವರೆಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ನಡೆಯಲಿದ್ದು, ಫೆ.20 ರಂದು ಹಸಿರುವಾಣಿ ಸಮರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು, ಅಭಿವೃದ್ಧಿ ಸಮಿತಿಯವರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)
Loading posts...
All posts loaded
No more posts
