🔴ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ🔴

ಗುತ್ತಿಗಾರು : ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ನಡೆಯಿತು. ಮೇ.19 ರಂದು ಗ್ರಾಮ ಪಂಚಾಯತ್ ಸದಸ್ಯರಾದ ಮಾಯಿಲಪ್ಪ ಕೊಂಬೊಟ್ಟು ಈ ಬೇಸಿಗೆ ಶಿಬಿರವನ್ನು ಉದ್ಘಾಟಿಸಿದರು. ಬೇಸಿಗೆ ಶಿಬಿರದ ಎರಡನೇ ದಿನ ಸ.ಹಿ.ಪ್ರಾ ಶಾಲೆ ವಳಲಂಬೆ...

ಮೇ.31- ಜೂ.1: ಕುಕ್ಕೇಟಿ ತರವಾಡು ಮನೆ ಗೃಹಪ್ರವೇಶ. ಶ್ರೀ ವಿಷ್ಣುಮೂರ್ತಿ, ಧರ್ಮದೈವ, ನಾಗದೇವರು, ಮುನಿಸ್ವಾಮಿ, ಉಪದೈವಗಳ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ

ಸುಳ್ಯ ತಾಲೂಕಿನ ಪ್ರತಿಷ್ಠಿತ ಮನೆತನಗಳಲ್ಲಿ ಒಂದಾದ ಕುಕ್ಕೇಟಿ ತರವಾಡಿನಲ್ಲಿ ನೂತನವಾಗಿ ನಿರ್ಮಿಸಲಾದ ತರವಾಡು ಮನೆಯ ಗೃಹಪ್ರವೇಶ ಮತ್ತು ಶ್ರೀ ವಿಷ್ಣುಮೂರ್ತಿ, ಧರ್ಮದೈವ, ನಾಗದೇವರು, ಮುನಿಸ್ವಾಮಿ ಹಾಗೂ ಉಪದೈವಗಳ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಮೇ. 31 ಮತ್ತು ಜೂ.1ರಂದು ವಿವಿಧ ತಾಂತ್ರಿಕ ಹಾಗೂ ವೈದಿಕ ವಿಧಿ ವಿಧಾನಗಳೊಂದಿಗೆ ಜರಗಲಿದೆ. ಬ್ರಹ್ಮಶ್ರೀ ವೇ. ಮೂ. ಕುಂಟಾರು ವಾಸುದೇವ...
Ad Widget

💐ಕಿರಿಯ ಪ್ರಾಥಮಿಕ ಶಾಲೆ ಸೇವಾಜೆ ಬೆಳ್ಳಿಹಬ್ಬ ಕಾರ್ಯಕ್ರಮ ಉದ್ಘಾಟನೆ💐

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇವಾಜೆಯು 13-06-1998ರಲ್ಲಿ ಸ್ಥಾಪನೆಗೊಂಡು ಪ್ರಸ್ತುತ 25 ವರ್ಷ ಪೂರೈಸಿದ ಸವಿನೆನಪಿಗಾಗಿ ಈ ದಿನ ಬೆಳ್ಳಿ ಹಬ್ಬ ಸಂಭ್ರಮ ನಡೆಯುತ್ತಿದ್ದು ಇದರ ಅಂಗವಾಗಿ ಪೂರ್ವಾಹ್ನ 9.45. ಕ್ಕೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶ್ರೀಧರ ಗೌಡ.ಕೆ ಅಧ್ಯಕ್ಷರು ಸುಳ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇವರು ನೆರವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು...

💐ಯೋಗಾಸನದಲ್ಲಿ ಅಂತಾರಾಷ್ಟ್ರೀಯ ಯೋಗ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಮಾಡಿದ ಸುಳ್ಯದ ವಿದ್ಯಾರ್ಥಿಗಳು💐

ಯೋಗಾಸನದಲ್ಲಿ ಅಂತಾರಾಷ್ಟ್ರೀಯ ಯೋಗ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಮಾಡಿದ ಸುಳ್ಯದ ನಿರಂತರ ಯೋಗ ಕೇಂದ್ರದ ವಿದ್ಯಾರ್ಥಿಗಳು.ಗೀತಾ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ಆಯೋಜಿಸಿದ್ದ ಒಂದು ನಿಮಿಷದಲ್ಲಿ ಅತೀ ಹೆಚ್ಚು ಬಾರಿ ಭುಜಂಗಾಸನ ಮತ್ತು ಪರ್ವತಾಸನ ಮಾಡುವುದರಲ್ಲಿ ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ ನಲ್ಲಿ ನಿರಂತರ ಯೋಗ ಕೇಂದ್ರ ಸುಳ್ಯದ ವಿದ್ಯಾರ್ಥಿಗಳಾದ ದಿಗಂತ್.ಎ.ಸಿ, ಸುಭಿಕ್ಷಾ ಅನೀಲ್.ಎ,...

ಆರ್ ಕೆ ನಾಯರ್ ಗೆ ರೋಟರಿ ವನ ಸಿರಿ ಪ್ರಶಸ್ತಿ ಪ್ರದಾನ

ಪರಿಸರದ ಪ್ರತಿಯೊಂದು ಜೀವಿಗೂ ಪ್ರಾಮುಖ್ಯತೆಯನ್ನು ನೀಡುವ ಜವಾಬ್ದಾರಿ ಮಾನವನಿಗೆ ಇದ್ದರೆ ಮಾತ್ರ ಪರಿಸರ ಸಂರಕ್ಷಣೆ ಮಾಡಬಹುದು. ಇದರ ಸೂಕ್ಷ್ಮತೆಯನ್ನು ಅರಿತು ಪ್ರತಿಯೊಬ್ಬರೂ ಪರಿಸರ ಸ್ನೇಹಿಯಾಗಿ ಬದುಕಬೇಕು ಎಂದು ಗ್ರೀನ್ ಹೀರೋ ಆಫ್ ಇಂಡಿಯಾ ಆರ್ ಕೆ ನಾಯರ್ ಇವರು ಕಾಡುಗಳು ಹಾಗೂ ಪರಿಸರ ಪ್ರಜ್ಞೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು ಹಾಗೂ ಪ್ರತಿ ರೋಟರಿ...

ಸುಳ್ಯ: ಅರಳು ಮಲ್ಲಿಗೆ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ

ರಾಜ್ಯ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಬಾಲಭವನ ಸಮಿತಿ ಸುಳ್ಯ, ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆ ಸುಳ್ಯ ದ.ಕ. ಸ್ವರ ಮಾಧುರ್ಯ ಬಳಗ ಪುತ್ತೂರು ದ.ಕ. ವತಿಯಿಂದ ಸುಳ್ಯ ತಾಲೂಕು ಸ್ತ್ರೀಶಕ್ತಿ ಭವನದಲ್ಲಿ ಒಂದು ವಾರ ನಡೆದ ಅರಳು ಮಲ್ಲಿಗೆ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮೇ.26ರಂದು ನಡೆಯಿತು....

ನ.ಪಂ ಕಸ ವಿಲೇವಾರಿ ಮುಕ್ತಾಯ: ಶಾರಿಖ್

ಮೇ.24ರಂದು ಸುಳ್ಯದ ನಗರ ಪಂಚಾಯತ್ ನಲ್ಲಿ ಡಿ.ಯಂ ಶಾರಿಖ್ ನವರು ಈ ಹಿಂದೆ ಲೋಕಾಯುಕ್ತಕ್ಕೆ 2019ನೇ ಇಸವಿಯಲ್ಲಿ ನೀಡಿದ ದೂರಿನ ಕುರಿತು ದ. ಕ ಜಿಲ್ಲಾ ನಗರಾಭಿವೃದ್ಧಿ ಕೋಶ ಮಂಗಳೂರು ಇದರ ಯೋಜನಾ ನಿರ್ದೇಶಕರ ಸೂಚನೆ ಮೇರೆಗೆ (ಲೋಕಾಯುಕ್ತ ಅಧಿಕಾರಿಗಳ ಸೂಚನೆ ಪ್ರಕಾರ) ಕಾರ್ಯನಿರ್ವಹಕ ಇಂಜಿನಿಯರ್ ಶ್ರೀ ಅರುಣ್ ಕುಮಾರ್ ತನಿಖೆ ನಡೆಸಿದ್ದು ಪಂಚಾಯಿತ್ ನ...

ತುಳುನಾಡಿನ ವಿಶಿಷ್ಟ ಪರ್ವ ದಿನ ಪತ್ತನಾಜೆ

ಅನಾದಿ ಕಾಲದಿಂದಲೇ ತುಳುನಾಡಿನ ಜನ ತಮಗೆ ತಾವೇ ವಿಧಿಸಿಕೊಂಡು ಬಂದ ಧಾರ್ಮಿಕ, ಸಾಮಾಜಿಕ ಆಚರಣೆಗಳ ಗಡುವೇ ಈ ಪತ್ತನಾಜೆ. ತುಳುನಾಡಿನಲ್ಲಿ ಹಬ್ಬದ ಋತುವಿನ ಕೊನೆಯ ಒಂದು ದಿನದ ಆಚರಣೆ ಇದಾಗಿದೆ. ಇದು ಒಂದು ನಿಗದಿತ ದಿನದ ಆಚರಣೆಯಾಗಿದ್ದು, ತುಳುವಿನಲ್ಲಿ ಪಗ್ಗು, ಬೇಸ, ಕಾರ್ತಿಲ್, ಆಟಿ, ಸೋಣ, ನಿರ್ನಾಲ್, ಬೊಂತೆಲ್ ಜಾರ್ದೆ, ಪೆರಾರ್ದೆ, ಪೊನ್ನಿ, ಮಾಯಿ, ಸುಗ್ಗಿ...

ಸುಳ್ಯ: ಪ್ರಾಕೃತಿಕ ವಿಕೋಪ – ಮುಂಜಾಗ್ರತಾ ಸಭೆ ಟಾಸ್ಕ್ ಫೋರ್ಸ್ ರಚಿಸಲು ಸೂಚನೆ

ಮಳೆಗಾಲ ಆರಂಭಗೊಳ್ಳುತ್ತಿದ್ದು, ಇದರಿಂದ ಉಂಟಾಗುವ‌ ಪ್ರಾಕೃತಿಕ ವಿಕೋಪದ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಬುಧವಾರ ಸುಳ್ಯ ತಹಶೀಲ್ದಾರ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳ ಸಭೆಯು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ವೇದಿಕೆಯಲ್ಲಿತಾಲೂಕು ಪಂಚಾಯತ್ ಇ.ಒ. ಭವಾನಿಶಂಕರ್ ಉಪಸ್ಥಿತರಿದ್ದರು.ಪ್ರಾಕೃತಿಕ ವಿಕೋಪ ಸಂಭವಿಸಿದರೆ ತಕ್ಷಣ ಕ್ರಮ ಕೈಗೊಳ್ಳಲು ಗ್ರಾಮ ಲೆಕ್ಕಾಧಿಕಾರಿಗಳು...

ತೋಟಕ್ಕೆ ಹೋಗಿದ್ದ ಮಹಿಳೆ ಕುಸಿದು ಬಿದ್ದು ಮೃತ್ಯು

ಸುಳ್ಯ: ಅಜ್ಜಾವರ ಗ್ರಾಮದ ಮಾರ್ಗ ಮನೆ ರಾಮಚಂದ್ರ ಎಂಬವರ ಪತ್ನಿ ಅನಿತಾ (40)ಎಂಬವರು ತಮ್ಮ ತೋಟಕ್ಕೆ ಹೋಗಿದ್ದಾಗ ಅಲ್ಲಿ ಕುಸಿದು ಬಿದ್ದು‌ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ. ರಾಮಚಂದ್ರರು ಬೆಳಗ್ಗೆ ಸುಳ್ಯಕ್ಕೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಅವರು ಮಧ್ಯಾಹ್ನ ಮನೆಗೆ ಹೋದಾಗ ಪತ್ನಿ ಮನೆಯಲ್ಲಿ ಕಾಣಿಸಲಿಲ್ಲ. ತೋಟಕ್ಕೆ ಹೋಗಿರಬಹುದೆಂದು ಅವರನ್ನು ಹುಡುಕಿಕೊಂಡು ತೋಟಕ್ಕೆ ಹೋದಾಗ...
Loading posts...

All posts loaded

No more posts

error: Content is protected !!