- Thursday
- August 27th, 2026
ದ.ಕ.ಜಿಲ್ಲೆಯಲ್ಲಿ ಸುರಿಯುತ್ತಿರುವ ಸತತ ಮಳೆಯ ಹಿನ್ನೆಲೆ ಮತ್ತು ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಶಾಲಾ ಕಾಲೇಜುಗಳಿಗೆ ರಜೆಗಳನ್ನು ಘೋಷಿಸುವ ಅಧಿಕಾರವನ್ನು ಆಯಾ ತಾಲೂಕಿನ ತಹಶೀಲ್ದಾರ್ ಗೆ ನೀಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಫ್ ಮುಹಿಲನ್ ತಿಳಿಸಿದ್ದಾರೆ.ಆಯಾ ಕ್ಷೇತ್ರದ ಶಿಕ್ಷಣಾಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು, ಕಾಲೇಜಿನ ಪ್ರಾಂಶುಪಾಲರಿಂದ ವರದಿ ತಯಾರಿಸಿ ತಹಶೀಲ್ದಾರರಿಗೆ ಸಲ್ಲಿಸಬೇಕು. ತಹಶೀಲ್ದಾರರು ಪ್ರತಿದಿನ ಬೆಳಗ್ಗೆ 6...
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ, ಉಪಾಧ್ಯಕ್ಷರಾಗಿ ಅಶೋಕ್ ಪೆರುಮುಂಡ ಆಯ್ಕೆಯಾಗಿದ್ದಾರೆ.ನಾಗೇಶ್ ಕುಂದಲ್ಪಾಡಿ ಹೆಸರನ್ನು ಕಿರಣ್ ಬಂಗಾರಕೋಡಿ ಸೂಚಿಸಿ, ಜಯರಾಮ ನಿಡ್ಯಮಲೆ ಅನುಮೋದಿಸಿದರು.ಅಶೋಕ ಪೆರುಮುಂಡರವರ ಹೆಸರನ್ನು ಶೇಷಪ್ಪ ಎನ್.ವಿ. ಸೂಚಿಸಿ, ಹೊನ್ನಪ್ಪ ಅಮೆಚೂರು ಅನುಮೋದಿಸಿದರು.ಜೂ.25 ರಂದು ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ 13 ಸ್ಥಾನಗಳನ್ನು ಗೆದ್ದುಕೊಂಡಿದ್ದರು.
ಸುಳ್ಯ ತಾಲೂಕಿನಾದ್ಯಂತ ಇಂದು ಭಾರಿ ಮಳೆ ಸುರಿಯುತ್ತಿದ್ದು ಹಲವೆಡೆ ಹಾನಿ ಸಂಭವಿಸಿದೆ. ಭಾರಿ ಮಳೆಗೆ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಮನೆ ಮೇಲೆ ಮರ ಉರುಳಿಬಿದ್ದು ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ. ದೊಡ್ಡೇರಿ ಬಳಿಯ ಬೂಡುಮಕ್ಕಿ ಸುಧಾಮರ ಹಳೆ ಮನೆಯಲ್ಲಿ ಅವರ ಸಹೋದರಿ ವಾಸ್ತವ್ಯವಿದ್ದು, ಮನೆಯ ಮೇಲೆ ಮರ ಬಿದ್ದು ಹಾನಿಸಂಭವಿಸಿದೆ ಎಂದು ತಿಳಿದು ಬಂದಿದೆ. ಹಾನಿಯಾದ...
ಐವರ್ನಾಡು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಪ್ರಾಕೃತಿಕ ವಿಕೋಪದ ಗ್ರಾಮ ಮಟ್ಟದ ಮುಂಜಾಗೃತ ಸಮಿತಿ ಸಭೆ ಜು.3 ರಂದು ಗ್ರಾಮ ವಿಕಾಸ ಸಭಾಭವನದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 2023-24 ನೇ ಸಾಲಿನ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದ ಗ್ರಾಮ ಮಟ್ಟದ ಮುಂಜಾಗೃತ ಸಮಿತಿ ಸಭೆ ನಡೆಯಿತು.
ಸುಳ್ಯ ಬೆಳ್ಳಾರೆ ರಸ್ತೆಯಲ್ಲಿ ಐವರ್ನಾಡು ಹಾಗೂ ದರ್ಖಾಸ್ತು ರಸ್ತೆ ಬದಿಯ ಚರಂಡಿಗಳು ಮುಚ್ಚಿ ಹೋದ ಪರಿಣಾಮವಾಗಿ ಹಲವಾರು ಕಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಇದರಿಂದ ವಾಹನ ಸವಾರರು ಕಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಹರಿಸಿ ತಕ್ಷಣ ಸಮಸ್ಯೆ ನಿವಾರಿಸಬೇಕು ಎಂದು ನಾಗರಿಕರು ಹಾಗೂ ವಾಹವ ಸವಾರರು ಆಗ್ರಹಿಸಿದ್ದಾರೆ.
ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮರ್ವತ್ತಡ್ಕ ಎಂಬಲ್ಲಿ ತ್ಯಾಜ್ಯ ಎಸೆದ ದರ್ಖಾಸ್ತು ನಿವಾಸಿ ತ್ಯಾಗರಾಜು ಎಂಬವರಿಗೆ ರೂ 5000.00 ದಂಡ ವಿಧಿಸಿದ ಘಟನೆ ಜು.3 ರಂದು ನಡೆದಿದೆ. ಜು.2ರಂದು ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ನಡೆಯುವ ಮಾಸಿಕ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಮರ್ವತ್ತಡ್ಕದಲ್ಲಿ ಎಸೆದಿದ್ದ ತ್ಯಾಜ್ಯ ತುಂಬಿದ್ದ ಬ್ಯಾಗ್ ಪರಿಶೀಲಿಸಿ ಎಸೆದವರನ್ನು ಪತ್ತೆಹಚ್ಚಿ ಪಂಚಾಯತ್...
ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರ ಕಡೂರು ಇವರು ನಡೆಸಿದ ಮುಕ್ತ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯದ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಯೋಗಪಟುಗಳಿಗೆ ಹಲವು ಪ್ರಶಸ್ತಿ ಲಭಿಸಿದೆ. 8 ರಿಂದ 12ನೇ ವಯೋಮಾನದ ಬಾಲಕರ ವಿಭಾಗದಲ್ಲಿ ತನುಷ್ ಕೆ ಆರ್ ದ್ವಿತೀಯ ಸ್ಥಾನ, ತನುಷ್ ಮೋಂಟಡ್ಕ ತೃತೀಯ ಸ್ಥಾನ, 5 ರಿಂದ 7ನೇ ವಯೋಮಾನದ ಬಾಲಕರ...
ಸುರಕ್ಷಾ ದಂತ ಚಿಕಿತ್ಸಾ ಲಯದ 27 ನೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ದಿನಾಂಕ 3 ಜುಲೈ2023 ರಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಜರುಗಿತು.ಸುಮಾರು 55 ಮಂದಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ನಿವ್ರತ್ತ ಬ್ಯಾಂಕ್ ಉದ್ಯೋಗಿ ಶ್ರೀ ವಾಸುದೇವ ಹೊಳ್ಳ ಅವರಿಗೆ ಹಲಸಿನಹಣ್ಣಿನ ಗಿಡವನ್ನು ಡಾ ಮುರಲಿ ಮೋಹನ್ ಚೂಂತಾರು ಅವರು...
ಸುರಕ್ಷಾ ದಂತ ಚಿಕಿತ್ಸಾಲಯದ 27 ನೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜು.3 ರಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಜರುಗಿತು. ಸುಮಾರು 55 ಮಂದಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ನಿವೃತ್ತ ಬ್ಯಾಂಕ್ ಉದ್ಯೋಗಿ ವಾಸುದೇವ ಹೊಳ್ಳ ಅವರಿಗೆ ಹಲಸಿನಹಣ್ಣಿನ ಗಿಡವನ್ನು ಡಾ ಮುರಲಿ ಮೋಹನ್ ಚೂಂತಾರು ಅವರು ನೀಡುವುದರ ಮೂಲಕ ವನಮಹೋತ್ಸವ...
Loading posts...
All posts loaded
No more posts
